ಕಾರ್ಮಿಕರ ಕ್ರಾಂತಿ

ಕಾರ್ಮಿಕರ ಕ್ರಾಂತಿ

Share

ನೈಜ್ಯ ಸುದ್ದಿ ಕಾರ್ಮಿಕರ ಕ್ರಾಂತಿ ನ್ಯೂಸ್

17/04/2026

ಆಟೋ ಚಾಲಕ ಡೋಂಗ್ರಿಸಾಬ್ ಎಂಬಾತನ ಮೋಸದ ಕಾಮದಾಟಕ್ಕೆ ಸಿಲುಕಿ, ಇಂದು ಆಕೆ ನೇಣುಗಂಬಕ್ಕೆ ಶರಣಾಗುವ ಮೂಲಕ ಹೆತ್ತವರ ಕಣ್ಣಲ್ಲಿ ಎಂದೂ ಆರದ ಕಣ್ಣೀರು ಉಳಿಸಿ ಹೋಗಿದ್ದಾಳೆ......

ಬಾಗಲಕೋಟೆಯ ನವನಗರದ ಭೂಮಿಕಾ ತಿಪ್ಪಣ್ಣವರ್ ಪ್ರಕರಣ ಒಂದು ಲವ್ ಜಿಹಾದ್ ಪ್ರಕರಣಗಳಿಗೆ ಸಾಕ್ಷಿ.
ಆಟೋ ಚಾಲಕ ಡೋಂಗ್ರಿಸಾಬ್ ಎಂಬಾತನ ಮೋಸದ ಕಾಮದಾಟಕ್ಕೆ ಸಿಲುಕಿ, ಇಂದು ಆಕೆ ನೇಣುಗಂಬಕ್ಕೆ ಶರಣಾಗುವ ಮೂಲಕ ಹೆತ್ತವರ ಕಣ್ಣಲ್ಲಿ ಎಂದೂ ಆರದ ಕಣ್ಣೀರು ಉಳಿಸಿ ಹೋಗಿದ್ದಾಳೆ.
ಪರಿಚಯವೇ ಪ್ರಾಣಕ್ಕೆ ಮುಳುವಾಯಿತೇ?
ಪೋಷಕರು ಈ ಸಂಬಂಧವನ್ನು ವಿರೋಧಿಸಿ ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದರೂ, ಈ 'ಅಟೋ ಡ್ರೈವರ್' ನೀಡುತ್ತಿದ್ದ ಕಿರುಕುಳ ಹಾಗೂ ಒತ್ತಡ ಆಕೆಯನ್ನು ಮಾನಸಿಕವಾಗಿ ಜರ್ಜರಿತಗೊಳಿಸಿತ್ತು ಎಂಬುದು ಈಗ ಸ್ಪಷ್ಟವಾಗುತ್ತಿದೆ.
ಸಮಾಜದಲ್ಲಿ ಇಂತಹ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದರೂ, ಇತಿಹಾಸದ ಪಾಠಗಳನ್ನು ಮರೆತು ಮತ್ತೆ ಅದೇ ಹಳ್ಳಕ್ಕೆ ಬೀಳುತ್ತಿರುವ ಯುವತಿಯರ ನಡೆ ನಿಜಕ್ಕೂ ಆತಂಕಕಾರಿ.
ಹಾದಿ ತಪ್ಪಿಸುವ ಹಾದರದ ಮಾತುಗಳಿಗೆ ಮರುಳಾಗಿ, ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಗಾಳಿಗೆ ತೂರಿ, ಅನ್ಯಕೋಮಿನ ವ್ಯಕ್ತಿಗಳ ಬಲೆಯಲ್ಲಿ ಸಿಲುಕುವವರು ಅಂತಿಮವಾಗಿ ಇಂತಹ ದುರಂತಕ್ಕೇ ಸಾಕ್ಷಿಯಾಗುತ್ತಾರೆ. ಪ್ರೀತಿ ಎಂಬ ಹೆಸರಿನಲ್ಲಿ ನಡೆಯುವ ಇಂತಹ 'ಧರ್ಮ ಮತಾಂತರ'ದ ಕಸರತ್ತುಗಳು ಜೀವವನ್ನು ಬಲಿ ಪಡೆಯುವವರೆಗೂ ನಿಲ್ಲುವುದಿಲ್ಲ ಎಂಬುದು ಈಗಲಾದರೂ ಯುವ ಸಮಾಜಕ್ಕೆ ಅರ್ಥವಾಗಬೇಕಿದೆ."
ಹಿಂದೂ ಸಮಾಜ ಆಕ್ರೋಶ
ಇದನ್ನು ಕೇವಲ ಆತ್ಮಹತ್ಯೆ ಎಂದು ನೋಡಲು ಹಿಂದೂ ಸಮಾಜ ತಯಾರಿಲ್ಲ. ಇದೊಂದು ಸ್ಪಷ್ಟ 'ಲವ್ ಜಿಹಾದ್' ಪ್ರಕರಣವಾಗಿದ್ದು, ಭೂಮಿಕಾಳನ್ನು ಮಾನಸಿಕವಾಗಿ ಮತ್ತು ಧಾರ್ಮಿಕವಾಗಿ ದಮನ ಮಾಡಲಾಗಿತ್ತು ಎಂಬುದು ಹಿಂದೂ ಸಮಾಜದ ಗಂಭೀರ ಆರೋಪ. ನವನಗರ ಪೊಲೀಸರು ಈ ನಿಟ್ಟಿನಲ್ಲಿ ಕೂಲಂಕಷ ತನಿಖೆ ನಡೆಸಿ, ಡೋಂಗ್ರಿಸಾಬ್‌ನ ಅಸಲಿ ಮುಖವನ್ನು ಬಯಲು ಮಾಡಬೇಕಿದೆ.
ಒಟ್ಟಿನಲ್ಲಿ, ಬಾಗಲಕೋಟೆಯ ಈ ಘಟನೆ ಹೆಣ್ಣು ಮಕ್ಕಳನ್ನು ಹೆತ್ತವರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಕಣ್ಣೆದುರಿಗೇ ಅಪಾಯವಿದ್ದರೂ ಅದನ್ನು ಗುರುತಿಸಲಾಗದ ಬೇಜವಾಬ್ದಾರಿತನ ಅಥವಾ ಹಠಮಾರಿ ಧೋರಣೆ ಬಲಿಯಾಗುತ್ತಿರುವುದು ಮಾತ್ರ ನಮ್ಮ ನಾಡಿನ ಹೆಣ್ಣುಮಕ್ಕಳು ಎಂಬುದು ಕಹಿ ಸತ್ಯ

17/04/2026

ಐವತ್ತು ವರ್ಷದ ಹಿಂದೆ ಪ್ರಯಾಸದ ಹಾದಿ ಮತ್ತು ಸಮಾಜದ ಅಸಮಾನತೆ ಆಚರಣೆಯಲ್ಲಿದ್ದ ಮಾರ್ಗ ಈಗ ಎಲ್ಲದೂ ಬದಲಾಗಿದೆ ಸುರಂಗ ಮಾರ್ಗದ ನಿರ್ಮಾಣದ ಯೋಜನೆವರೆಗೆ ಬದಲಾಗಿದೆ.

ಶಿವಮೊಗ್ಗ ಜಿಲ್ಲೆಯ ಮೂರು ಘಾಟಿಗಳಲ್ಲಿ ಒಂದು.

ಇನ್ನೆರೆಡು ಹುಲಿಕಲ್ ಘಾಟಿ ಮತ್ತು ಕೊಲ್ಲೂರು ಘಾಟಿ.

ಎಪ್ಪತ್ತರ ದಶಕದಲ್ಲಿ ಆಗುಂಬೆ ಘಾಟಿ ಪ್ರಯಾಣದ ನನ್ನ ಅನುಭವ.

ಆಗುಂಬೆ ಘಾಟಿಯಲ್ಲಿ ಪ್ರಯಾಣಿಸುವ ಪ್ರತಿಷ್ಟಿತರಿಗೆ, ಜಾತಿ ಅಂತಸ್ತು ಇದ್ದವರಿಗೆ ಮತ್ತು ಅಲ್ಲಿನ ಸಾರಿಗೆ ನಿಭಾಯಿಸುವ ಏಜೆಂಟರ ಮರ್ಜಿಯವರಿಗೆ ಪ್ರಥಮ ಪ್ರಾಶಸ್ತ್ಯ ಇತ್ತು.

ಆಗಿನ ಆಗುಂಬೆ ಘಾಟಿಯಲ್ಲಿ ಸಂಚರಿಸುವ ಏಜೆಂಟರು ಗ್ರಾಹಕ ಸ್ನೇಹಿ ಆಗಿರಲಿಲ್ಲವಾಗಿದ್ದ ಕಾಲವದು.

ಶ್ರಮಜೀವಿಗಳನ್ನ ಅವರು ದರಿಸುವ ಉಡುಗೆಯಿಂದಲೇ ಗುರುತಿಸಿ ವಯಸ್ಸಿನ ಹಿರಿತನಕ್ಕೂ ಬೆಲೆ ನೀಡದ ಏಕ ವಚನ ಬಳಕೆ, ಅವಮಾನ ಮಾಡುವುದು ಮತ್ತು ಗೇಲಿ ಮಾಡುವುದು ಅಲ್ಲಿ ಸಹಜ ಆಗಿತ್ತು.

ಆಗುಂಬೆ ಘಾಟಿ ಪ್ರಯಾಣ ಒಂದು ಕೆಟ್ಟ ಅನುಭವ ಆಗಿರುತ್ತಿತ್ತು ಕೂಲಿ ಕಾರ್ಮಿಕರಿಗೆ.

ಐವತ್ತು ವರ್ಷದಲ್ಲಿ ಸಂಪೂರ್ಣ ಬದಲಾಗಿದೆ ಕಾಲ.

ಇದನ್ನು ಈಗ ಓದಿದವರಿಗೆ ನಂಬಲು ಕೂಡ ಸಾಧ್ಯವಿಲ್ಲ.

ರಾಷ್ಟ್ರ ಪ್ರಶಸ್ತಿ ವಿಜೇತ ಚೋಮನದುಡಿ ಚಿತ್ರದಲ್ಲಿ ಆ ಕಾಲದ ಆಗುಂಬೆ ಘಾಟಿಯ ಆಗಿನ ಕಾಲದ ಬಸ್ ಪ್ರಯಾಣದ ದೃಶ್ಯವಿದೆ.

1968-69 ರಲ್ಲಿ ನಮ್ಮ ಊರಿಂದ ನನ್ನ ತಂದೆ ತಾಯಿ ಜೊತೆ ಬಿದನೂರು ನಗರದ ದೇವಗಂಗೆಯ ನನ್ನ ದೊಡ್ಡಮ್ಮನ ಮನೆಗೆ ಹೋಗಿ ಮರುದಿನ ಬೆಳಿಗ್ಗೆ ದೋಣಿಯಲ್ಲಿ ಶರಾವತಿ ನದಿ ಹಿನ್ನೀರು ದಾಟಿ ವಾಪಾಸು ನಗರ ಬಸ್ ನಿಲ್ದಾಣಕ್ಕೆ ತಲುಪಿದೆವು.

ಅಲ್ಲಿಂದ ಬಸ್ಸಿನಲ್ಲಿ ತೀರ್ಥಳ್ಳಿ ತಲುಪಿ ಅಲ್ಲಿಂದ ಇನ್ನೊಂದು ಬಸ್ಸಿನಲ್ಲಿ ಆಗುಂಬೆ ತಲುಪಿದ್ದೆವು.

ಆಗುಂಬೆ ಘಾಟಿ ಪ್ರಯಾಣಕ್ಕೆ ಮೀಸಲಿಟ್ಟ ವಿಶೇಷ ವಿನ್ಯಾಸದ ಬಸ್ಸು ಅಲ್ಲ ವ್ಯಾನು ಅಲ್ಲ ಎಂಬಂತ ಆ ಕಾಲದ ವಾಹನದಲ್ಲಿ ಆಗುಂಬೆ ಘಾಟಿ ಇಳಿದು ಧರ್ಮಸ್ಥಳ ಹೋಗಿದ್ದು ನೆನಪು ಆಗ ನನ್ನ ವಯಸ್ಸು 4 ಮತ್ತು 5 ರ ಮಧ್ಯದ್ದು.

ಆಗ ಶಿವಮೊಗ್ಗ ಜಿಲ್ಲೆಯವರು ಧರ್ಮಸ್ಥಳ ಸುಬ್ರಮಣ್ಯ ಹೋಗಲು ಈ ಮಾರ್ಗವನ್ನೆ ಅವಲಂಬಿಸಿದ್ದರು.

ಆಗುಂಬೆ ಮೇಲೆ ಮತ್ತು ಕೆಳಗಿನ ಸೋಮೇಶ್ವರದಲ್ಲಿ ಕೊಂಕಣಿ ಮತ್ತು ತುಳು ಮಾತಾಡುವ ಗೌಡ ಸಾರಸ್ವತ ಬಸ್ ಏಜೆಂಟರದ್ದೇ ಮಾನಾಪಲ್ಲಿ ಆಗಿತ್ತು.

ಚಾರ್ ಕೋಲ್ ಇಂಜಿನ್ ಕಾಲ ಮುಗಿದು ಪೆಟ್ರೋಲ್ ಡಿಸೇಲ್ ಇಂಜಿನ್ ಪ್ರಾರಂಭವಾಗಿತ್ತು ಆಗಿನ CKMS (ಸೆಂಟ್ರಲ್ ಕನಾ೯ಟಕ ಮೋಟಾರ್ ಸರ್ವಿಸ್) ಬಸ್ಸಿನ ಪೋಟೋ ಲಗತ್ತಿಸಿದೆ ಇಂತಹ ಬಸ್ಸುಗಳು ಆಗುಂಬೆ ಘಾಟಿಯ ಮೇಲಿಂದ ಪ್ರಯಾಣಿಕರನ್ನು ಘಾಟಿ ಕೆಳಗಿನ ಸೋಮೇಶ್ವರದಲ್ಲಿ ಇಳಿಸಿ ಅಲ್ಲಿಂದ ಘಟ್ಟ ಹತ್ತುವವರನ್ನ ಆಗುಂಬೆಗೆ ತಂದು ಬಿಡುವ ಕೆಲಸ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾಡುತ್ತಿದ್ದವು.

ಮೊದಲೇ ಏಜೆಂಟರಿಂದ ಟಿಕೆಟ್ ಖರೀದಿಸಿ ಪ್ರಯಾಣದ ಸರತಿಗೆ ಕಾಯಬೇಕಾಗಿತ್ತು, ಆಗಿನ ಬಸ್ ಏಜೆಂಟರ ವರ್ತನೆ ಗ್ರಾಹಕ ಸ್ನೇಹಿ ಆಗಿರಲಿಲ್ಲ, ಒರಟು ಮಾತು ಮತ್ತು ಅವರ ದುಷ್ಟತನದ ನಡತೆ ಮುಗ್ದ ಪ್ರಯಾಣಿಕರಿಗೆ ಹಿಂಸೆ ಮತ್ತು ಅವಮಾನಗೊಳಿಸುತ್ತಿದ್ದರೂ ಅನಿವಾರ್ಯವಾಗಿ ಅವರು ಈ ಮಾರ್ಗದಲ್ಲಿ ಪ್ರಯಾಣಿಸಲು ಈ ಅವಮಾನ ಅನುಭವಿಸಲೇ ಬೇಕಾಗಿತ್ತು.

ಅರ್ದ ದಿನ ಕೆಲವೊಮ್ಮೆ ಒಂದು ದಿನ ಪೂರ್ತಿ ಆಗುಂಬೆ ಘಾಟಿ ಇಳಿಯಲು ಮತ್ತು ಹತ್ತಲು ಪ್ರಯಾಣಿಕರು ಕಾಯಲೇ ಬೇಕಾಗಿತ್ತು.

ಆ ದಿನಗಳಲ್ಲಿ ಘಟ್ಟ ಹತ್ತುವವರು ಇಳಿಯುವವರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು ಆದರೆ ಅವರನ್ನು ಸಾಗಾಣಿಕೆ ಮಾಡುವ ಬಸ್ಸುಗಳ ಸಂಖ್ಯೆ ಕಡಿಮೆ ಮತ್ತು ಏಕ ಮುಖ ಸಂಚಾರ ಒಂದು ಬಸ್ಸು ಆಗುಂಬೆಯಿಂದ ಘಾಟಿ ಇಳಿದ ಮೇಲೆ ಅಲ್ಲಿನ ಬಸ್ಸು ಆಗುಂಬೆ ಘಾಟಿ ಏರಬೇಕು ಆಗಿನ ರಸ್ತೆ ಅಷ್ಟು ಸಣ್ಣದು ಆಗಿತ್ತು ಆದ್ದರಿಂದ ಹೆಚ್ಚು ಸಮಯ ಬೇಕಾಗಿತ್ತು.

#ಚೋಮನ_ದುಡಿ ಸಿನಿಮಾದಲ್ಲಿ ಚೋಮನ ಮಕ್ಕಳು ಆಗುಂಬೆ ಘಾಟಿಯ ಇಂತಹ ಬಸ್ಸಿನಲ್ಲಿ ಹತ್ತುವ ದೃಶ್ಯವು ಇದೆ, ಕೂಲಿ ಕಾರ್ಮಿಕರ ಜೊತೆ ಇತರ ಪ್ರಯಾಣಿಕರು ಪ್ರಯಾಣಿಸಲು ಇಷ್ಟ ಪಡದ ಕಾಲ ಅಂದಿನದ್ದು.

ಇದರ ಮಧ್ಯದಲ್ಲಿ ಪ್ರತಿಷ್ಟಿತರಿಗೆ - ಏಜೆಂಟರ ಮರ್ಜಿಗೆ ಸರತಿಗಾಗಿ ಕಾಯುವವರನ್ನ ಕಡೆಗಾಣಿಸಲಾಗುತ್ತಿತ್ತು, ಅಲ್ಲಿ ಮೇಲ್ಜಾತಿ ಮತ್ತು ಕೆಳಜಾತಿಗಳ ತಾರತಮ್ಯ ಇತ್ತು, ಶ್ರೀಮಂತರು ಮತ್ತು ಬಡವರೆಂಬ ಅಂತಸ್ತುಗಳೂ ಆಗುಂಬೆ ಘಾಟಿ ಪ್ರಯಾಣದಲ್ಲಿ ಸೇರಿತ್ತು.

ಪ್ರಯಾಣಿಕರು ತಮ್ಮ ತಮ್ಮ ಲಗೇಜುಗಳ ಜೊತೆ ತಮ್ಮ ಕುಟುಂಬದ ಜೊತೆ ಆಗುಂಬೆ ಪ್ರಯಾಣ ಪ್ರಯಾಸದ ಜಂಜಾಟದ ಪ್ರಯಾಣ ಆಗಿರುತ್ತಿತ್ತು.

ಈಗ ಆದುನಿಕ ವಾಹನಗಳು ಮತ್ತು ವಿಸ್ತಾರವಾದ ಆಗುಂಬೆ ಘಾಟಿಯಲ್ಲಿ ಕೇವಲ 10 ನಿಮಿಷದಲ್ಲಿ ಆಗುಂಬೆ ಘಾಟಿ ಪ್ರಯಾಣ ಮುಗಿಯುತ್ತದೆ.

ಇನ್ನೂ ಸರಾಗದ ಆಗುಂಬೆ ಘಾಟಿ ಪ್ರಯಾಣಕ್ಕೆ ಸುರಂಗ ಮಾರ್ಗ ಆಗಲಿದೆ ಎಂಬ ಸುದ್ದಿ ಇದೆ.

ಕೇವಲ 50 ವರ್ಷದಲ್ಲಿ ಎಷ್ಟೆಲ್ಲ ಬದಲಾವಣೆ.

17/04/2026

ಮಹಡಿಯಿಂದ ಜಾರಿಬೀಳುತ್ತಿದ್ದ ಮಗುವನ್ನು ಕ್ಷಣದಲ್ಲೇ ಕಾಪಾಡಿದ ಈ ದೃಶ್ಯ ನೋಡುವವರ ಮನಸ್ಸನ್ನೇ ಕದಲಿಸುತ್ತದೆ.....



17/04/2026

ಗಂಡು ಮಗುವಿನ ಆಸೆ ಇಟ್ಟುಕೊಂಡಿರುವ ಸಮಾಜದಲ್ಲಿ, ಈ ಘಟನೆ ನಮ್ಮ ಕಣ್ಣು ತೆರೆಸುವಂತಿದೆ…

ತಂದೆಯ ಕೊನೆಯ ಕ್ಷಣದಲ್ಲಿ ಗಂಡು ಮಕ್ಕಳು ದೂರ ಉಳಿದಾಗ, ಇಬ್ಬರು ಪುತ್ರಿಯರು ಮಗನ ಸ್ಥಾನದಲ್ಲಿ ನಿಂತು ತಮ್ಮ ಕರ್ತವ್ಯವನ್ನು ನಿಭಾಯಿಸಿದ ಕ್ಷಣ — ನಿಜವಾಗಿಯೂ ಮನಸ್ಸು ಮುಟ್ಟುತ್ತದೆ

ಹೆಣ್ಣುಮಕ್ಕಳು ಕೇವಲ ಮನೆಯ ಅಲಂಕಾರವಲ್ಲ…
ಅವರು ಕುಟುಂಬದ ಶಕ್ತಿ
ಕಷ್ಟದ ಸಮಯದ ಬೆಂಬಲ
ನಿಜವಾದ ಹೆಮ್ಮೆ

👉 ಹೆಣ್ಣುಮಕ್ಕಳ ಮೌಲ್ಯವನ್ನು ಗೌರವಿಸೋಣ
👉 ಲಿಂಗಭೇದಕ್ಕೆ ತೆರೆ ಹಾಕೋಣ

ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ನಲ್ಲಿ ಹಂಚಿಕೊಳ್ಳಿ 🙌

17/04/2026

*ಮಂತ್ರಾಲಯ ರಸ್ತೆ ಅಪಘಾತ ದುರಂತ: ಶೆಟ್ಟಿಗೇರಿಗೆ ಬಂದ ಆರು ಮೃತದೇಹಗಳು, ಎಂಟು ಮಂದಿ ಸಾವು*

ಹಾಸನ: ಮಂತ್ರಾಲಯದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಎಂಟು ಮಂದಿಯ ಪೈಕಿ ಆರು ಮಂದಿಯ ಮೃತದೇಹಗಳು ಇಂದು ಬೆಳಿಗ್ಗೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಶೆಟ್ಟಿಗೇರಿ ಗ್ರಾಮಕ್ಕೆ ಆಗಮಿಸಿವೆ. ದುಃಖದ ವಾತಾವರಣದಲ್ಲಿ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಕಣ್ಣೀರಿನಿಂದ ಅಂತಿಮ ದರ್ಶನ ಪಡೆದರು.

ರಾಘವೇಂದ್ರ ಸ್ವಾಮಿ ದರ್ಶನಕ್ಕಾಗಿ ಗೂಡ್ಸ್ ಆಟೋದಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದ 21 ಮಂದಿ ಈ ದುರ್ಘಟನೆಯಲ್ಲಿ ಸಿಲುಕಿದ್ದರು. ಈ ವೇಳೆ ಸಂಭವಿಸಿದ ಅಪಘಾತದಲ್ಲಿ ಒಟ್ಟು ಎಂಟು ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಮೃತರನ್ನು ಕುಮಾರ್ (51), ಸುನಿಲ್ (27), ಲೋಲಾಕ್ಷಿ (38), ವೀಣಾ (25), ನಿಶಿತ (3) ಹಾಗೂ ಜಯಮ್ಮ ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಸ್ವಗ್ರಾಮಕ್ಕೆ ತರಲಾಗಿದೆ.

ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಬೇಲೂರು ಶಾಸಕ ಹೆಚ್.ಕೆ. ಸುರೇಶ್ ಮೃತರಿಗೆ ಅಂತಿಮ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದರು. “ಈ ದುರ್ಘಟನೆ ಅತ್ಯಂತ ನೋವು ತಂದಿದ್ದು, ನೊಂದ ಕುಟುಂಬಗಳ ಜೊತೆ ನಾನು ಇದ್ದೇನೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುವುದು. ಸರ್ಕಾರದ ಗಮನ ಸೆಳೆದು ಮೃತ ಕುಟುಂಬಗಳಿಗೆ ಆರ್ಥಿಕ ಸಹಾಯ ಒದಗಿಸಲಾಗುವುದು” ಎಂದು ಭರವಸೆ ನೀಡಿದರು.

17/04/2026

ಚಾಲಕರು ಇಂತಹ ಹೋಟೆಲ್ ಗಳಲ್ಲಿ ಊಟ ತಿನೋಕು ಮುಂಚೆ ಎಚ್ಚರ.. ಈ ಘಟನೆ ಜಯದೇವ ಹಾಸ್ಪಿಟಲ್
ಬಳಿ ಇರುವ ಹೋಟೆಲ್ ಅಲ್ಲಿ ನೆಡದಿದೆ

17/04/2026

ಈಗಾಗಲೇ ವೈದ್ಯಕೀಯ ಸಿಬ್ಬಂದಿ ಕೊರತೆ ಇರುವಾಗ, ಜನಗಣತಿ ಕಾರ್ಯಕ್ಕಾಗಿ ವೈದ್ಯರು, ಸ್ಕ್ಯಾನಿಂಗ್ ಟೆಕ್ನಿಷಿಯನ್, ಎಕ್ಸ್‌ರೇ ಟೆಕ್ನಿಷಿಯನ್ ಸೇರಿದಂತೆ ಪ್ರಮುಖ ಸಿಬ್ಬಂದಿಯನ್ನು ಬಳಸುತ್ತಿರುವುದು ರೋಗಿಗಳಿಗೆ ದೊಡ್ಡ ಸಂಕಷ್ಟ ತಂದೊಡ್ಡಿದೆ.

ಜನಗಣತಿ ಕಾರ್ಯಕ್ಕೆ ಆಸ್ಪತ್ರೆ ಸಿಬ್ಬಂದಿ ಬಳಕೆ : ರೋಗಿಗಳ ತೀವ್ರ ಪರದಾಟ

ಆನೇಕಲ್ : ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ವೈದ್ಯಕೀಯ ಸಿಬ್ಬಂದಿ ಕೊರತೆ ಇರುವಾಗ, ಜನಗಣತಿ ಕಾರ್ಯಕ್ಕಾಗಿ ವೈದ್ಯರು, ಸ್ಕ್ಯಾನಿಂಗ್ ಟೆಕ್ನಿಷಿಯನ್, ಎಕ್ಸ್‌ರೇ ಟೆಕ್ನಿಷಿಯನ್ ಸೇರಿದಂತೆ ಪ್ರಮುಖ ಸಿಬ್ಬಂದಿಯನ್ನು ಬಳಸುತ್ತಿರುವುದು ರೋಗಿಗಳಿಗೆ ದೊಡ್ಡ ಸಂಕಷ್ಟ ತಂದೊಡ್ಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಈ ಸಮಸ್ಯೆ ತೀವ್ರ ರೂಪ ತಾಳಿದೆ.

ಬೆಳಗ್ಗೆ 8 ಗಂಟೆಯಿಂದಲೇ ಚಿಕಿತ್ಸೆಗಾಗಿ ಬಂದ ರೋಗಿಗಳು, ವಿಶೇಷವಾಗಿ ಮಹಿಳೆಯರು, ಪುಟ್ಟ ಮಕ್ಕಳು ಮತ್ತು ವೃದ್ಧರು ತೀವ್ರ ಪರದಾಟಕ್ಕೊಳಗಾಗಿದ್ದಾರೆ. ಆಸ್ಪತ್ರೆಯ ಹೊರ ರೋಗಿ (OPD) ಮತ್ತು ಒಳ ರೋಗಿ (IPD) ವಿಭಾಗಗಳು ನೆಪಕ್ಕೆ ಮಾತ್ರ ತೆರೆದಿವೆ ಎಂಬ ಆರೋಪಗಳಿವೆ. ಸ್ಕ್ಯಾನಿಂಗ್, ಎಕ್ಸ್‌ರೇ ಮತ್ತು ಇತರ ಪ್ರಮುಖ ವೈದ್ಯಕೀಯ ಸೇವೆಗಳು ಸಂಪೂರ್ಣವಾಗಿ ಬಂದ್ ಆಗಿವೆ.

#ರೋಗಿಗಳ_ಆಕ್ರೋಶ :

ರೋಗಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಾ, 'ಜನಗಣತಿಗೆ ಸಿಬ್ಬಂದಿಯನ್ನು ಕಳುಹಿಸಿ ನಮ್ಮ ಪ್ರಾಣಕ್ಕೆ ಗಂಡಾಂತರ ಉಂಟುಮಾಡುತ್ತಿದ್ದಾರೆಯೇ?' ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನಡೆಗೆ ರೋಗಿಗಳು ತೀವ್ರ ಆಕ್ರೋಶ ಹೊರಹಾಕಿದ್ದಾರೆ. 'ಜಿಲ್ಲಾಧಿಕಾರಿಗೆ ಸಾರ್ವಜನಿಕರ ಪ್ರಾಣಕ್ಕಿಂತ ಜನಗಣತಿ ಮುಖ್ಯವಾಯಿತೇ?' ಎಂಬ ಪ್ರಶ್ನೆಗಳು ಎದ್ದಿವೆ.

ಆಸ್ಪತ್ರೆಗೆ ಬಂದ ರೋಗಿಗಳು 'ಬೀಗ ಹಾಕಿ ಮನೆಗೆ ಹೋಗಿ' ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿಕಿತ್ಸೆ ಸಿಗದೆ ಅನೇಕರು ನಿರಾಶೆಯಿಂದ ಮರಳುತ್ತಿದ್ದಾರೆ.

#ಏನಿದು_ಸಮಸ್ಯೆ?

ಜನಗಣತಿ ಕಾರ್ಯಕ್ಕಾಗಿ ವೈದ್ಯರು ಮತ್ತು ತಾಂತ್ರಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಇದರಿಂದಾಗಿ ಆಸ್ಪತ್ರೆಯಲ್ಲಿ ಸಾಮಾನ್ಯ ಚಿಕಿತ್ಸೆ, ಡಯಾಗ್ನೋಸ್ಟಿಕ್ ಸೇವೆಗಳು (ಸ್ಕ್ಯಾನಿಂಗ್, ಎಕ್ಸ್‌ರೇ) ಸ್ಥಗಿತಗೊಂಡಿವೆ.
ಆಸ್ಪತ್ರೆಯಲ್ಲಿ ಸಿಬ್ಬಂದಿ ಇಲ್ಲದಿದ್ದರೂ 'ನೆಪಕ್ಕೆ' OPD ಮತ್ತು IPD ತೆರೆದಿರುವುದಾಗಿ ಆರೋಪ.
ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಸ್ಥಿತಿ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಎತ್ತಿದೆ. ಈಗಾಗಲೇ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಆಸ್ಪತ್ರೆಗಳಿಂದಲೇ ಜನಗಣತಿ ಕಾರ್ಯಕ್ಕೆ ಸಿಬ್ಬಂದಿಯನ್ನು ಕಳುಹಿಸುವುದು ಸರಿಯೇ ಎಂಬ ವಿವಾದ ಉಂಟಾಗಿದೆ.

17/04/2026

ಗಿಲ್ಲಿ ಒಪ್ಪಿಕೊಂಡರೆ, ಆತನನ್ನು ನಾನು ಮದುವೆ ಆಗೋಕೆ ರೆಡಿ ಎಂದ ಯಶಸ್ವಿನಿ, ಇವತ್ತು ಗಿಲ್ಲಿ ಜವಾಬ್ದಾರಿಯುತ ಮನುಷ್ಯನಾಗಿದ್ದಾನೆ, ಹಾಗಾಗಿ ಆತನನ್ನು ಕಣ್ಣುಮುಚ್ಚಿ ಮದುವೆಯಾಗೋಕೆ ನಾನು‌ ರೆಡಿ, ಇಂತಹ ಅಪ್ಪಟ ಟ್ಯಾಲೆಂಟ್‌ ಇರುವ ಗಿಲ್ಲಿನ ಮದುವೆ ಆಗಲ್ಲ ಅಂತ ಯಾರು ಹೇಳಲ್ಲ ಎಂದ ಯಶಸ್ವಿನಿ

17/04/2026

ನನ್ನ ಜೀವ ಇರುವ ತನಕ RCB ಯಲ್ಲಿ ಇರುತ್ತೇನೆ

ನನಗೆ ಎಲ್ಲೂ ಸಿಗದ ಪ್ರೀತಿ ಮತ್ತು ವಿಶ್ವಾಸ RCB ತಂಡದಲ್ಲಿ ಸಿಕ್ಕಿದೆ. RCB ಅಭಿಮಾನಿಗಳ ಪ್ರೀತಿಯ ಋಣದಲ್ಲಿ ಇರುವ ನಾನು ಯಾವತ್ತೂ RCB ತಂಡವನ್ನು ಬಿಟ್ಟು ಹೋಗಲ್ಲ ಎಂದು ಹೇಳಿದ್ದಾರೆ Tim ಡೇವಿಡ್

17/04/2026

ಹಣದ ಆಸೆ ತೋರಿಸಿ ಬಲೆಗೆ ಹಾಕೋಕೆ ನೋಡಿದ್ದ ಡೈರೆಕ್ಟರ್ ಮುಖಕ್ಕೆ ಮಂಗಳಾರತಿ ಮಾಡಿ ಬಂದಿದ್ದರಂತೆ ನಮ್ರತಾ ಗೌಡ, ನಾನು ಕಷ್ಟಪಟ್ಟು ಈ ಮಟ್ಟಿಗೆ ಬೆಳೆದು ನಿಂತಿದ್ದೇನೆ, ಹಣಕ್ಕಾಗಿ ಇಂತಹ ಕೆಳಮಟ್ಟದ ಕೆಲಸ ಮಾಡುವವಳು ನಾನಲ್ಲ, ನನ್ನ ಕೈಯಲ್ಲಿ ಕೋಟಿ ರೂಪಾಯಿ ಆಗದಿದ್ದರು ಪರವಾಗಿಲ್ಲ, ಆದರೆ ಇಂತಹ ಕೆಲಸಕ್ಕೆ ಓಕೆ ಅನ್ನುವವಳು ನಾನಲ್ಲ, ನನ್ನ ಜೊತೆ ಇದೆಲ್ಲಾ ಇಟ್ಕೋಬೇಡ ಎಂದು ಮುಖಕೆ ಮಂಗಳಾರತಿ ಮಾಡಿ ಬಂದಿದ್ದರು ನಮ್ರತಾ ಗೌಡ.

ನಟಿ ನಮ್ರತಾ ಗೌಡ ಅವರು ಸಖತ್‌ ಸ್ಟೈಲಿಶ್ ಜೊತೆಗೆ ಪ್ರತಿ ಕ್ಷಣವನ್ನೂ ಎಂಜಾಯ್‌ ಮಾಡುವ ವ್ಯಕ್ತಿತ್ವದವರು. ಪ್ರತಿ ವರ್ಷ ಏಪ್ರಿಲ್‌ 14ರ ದಿನವನ್ನ ಅವರ ಅಭಿಮಾನಿಗಳು ಸಡಗರದಿಂದ ವೆಲ್‌ಕಮ್‌ ಮಾಡುತ್ತಾರೆ. ಆ ದಿನ ನಮ್ರತಾ ಅವರ ಹುಟ್ಟುಹಬ್ಬ. ಈ ಬಾರಿ ಕೂಡ ಮೊನ್ನೆ (ಏ.14) ನಟಿಗೆ ಸಖತ್‌ ಸಂಭ್ರಮದ ರಾತ್ರಿಯಾಗಿತ್ತು. ಕ್ಲೋಸ್ ಫ್ರೆಂಡ್ಸ್‌ ಜೊತೆಗೆ ಅದ್ದೂರಿಯಾಗಿ ಬರ್ತ್‌ ಡೇ ಪಾರ್ಟಿ ಮಾಡಿದ್ದಾರೆ.

ನಟಿ ನಮ್ರತಾ ಗೌಡ ಅವರು ಲೈಫ್‌ ಅನ್ನು ಬಹಳ ಲಕ್ಷುರಿಯಾಗಿ ಆನಂದಿಸಲು ಇಷ್ಟಪಡುವ ಚೆಲುವೆ. 32ರ ವಸಂತಕ್ಕೆ ಕಾಲಿಟ್ಟ ನಟಿ, ಅದ್ದೂರಿಯಾಗಿಯೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ರೆಸಾರ್ಟ್‌ ಒಂದರ ಆವರಣದಲ್ಲಿ ಬರ್ತ್‌ ಡೇ ಪಾರ್ಟಿ ಜರುಗಿದ್ದು, ಆತ್ಮೀಯರು ಭಾಗಿಯಾಗಿ ಶುಭ ಕೋರಿದ್ದಾರೆ.

ನಮ್ರತಾ ಗೌಡ ಅವರು ಚಿಕ್ಕವಯಸ್ಸಿಂದ ಕಷ್ಟಪಟ್ಟು ಬದುಕು ಕಂಡುಕೊಂಡವರು. ಒಬ್ಬಳೇ ಮಗಳು ಆಗಿರುವ ನಮ್ರತಾ ಅವರು ಅಪ್ಪ-ಅಮ್ಮನಿಗೋಸ್ಕರ ಮನೆ ಕಟ್ಟಿಸಿ

17/04/2026

ಐಪಿಎಲ್ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟ್ ನಲ್ಲಿ ಮಾರಾಟ .. ಮಾಡುವಾಗ ಸಿಸಿಬಿ (CCB) ಪೊಲೀಸರ ಬಲೆಗೆ..

ಚಿನ್ನಸ್ವಾಮಿ ಕ್ರೀಡಾಂಗಣದ ಕ್ಯಾಂಟೀನ್ ನೌಕರನ ಬಳಿ 100 ಐಪಿಎಲ್ ಟಿಕೆಟ್ ಪತ್ತೆ..

ಕ್ಯಾಂಟೀನ್ ನೌಕರ 100ಕ್ಕೂ ಹೆಚ್ಚು ಐಪಿಎಲ್ ಟಿಕೆಟ್‌ಗಳನ್ನು ಬ್ಲಾಕ್ ಮಾರ್ಕೆಟ್ ನಲ್ಲಿ ಮಾರಾಟ ..

ಮಾರಾಟ ಮಾಡುವಾಗ ಸಿಸಿಬಿ (CCB) ಪೊಲೀಸರ ಬಲೆಗೆ..

ಚಂದ್ರಶೇಖರ್ ಬಂಧಿತ ಆರೋಪೊಯಾಗಿದ್ದು, ಶ್ರೀ ಲಕ್ಷ್ಮಿ ಕ್ಯಾಂಟೀನ್‌ ನಲ್ಲಿ ಕೆಲಸ ಮಾಡುತ್ತಿದ್ದ..

ಈತ ಒಂದೊಂದು ಟಿಕೆಟ್ ನ್ನು ಸುಮಾ ರು 15 ಸಾವಿರ ದಿಂದ ₹19 ಸಾವಿರದವರೆಗಿನ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ..

ಮಾರ್ಚ್ 28 ರಂದು ನಡೆದ ಆರ್‌ಸಿಬಿ (RCB) ಮತ್ತು ಕೆಕೆಆರ್ (KKR) ಪಂದ್ಯ..

ಆರ್ಸಿಬಿ(RCB) ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧದ ಪಂದ್ಯಗಳ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದಾನೆ.‌

ಕೆಎಸ್‌ಸಿಎ ಸದಸ್ಯ ಗಣೇಶ್ ಪರೀಕ್ಷಿತ್ ಎಂಬುವವರು ಈ ಟಿಕೆಟ್‌ಗಳನ್ನು ನೀಡಿದ್ದ ಎಂದು ಹೇಳಿರೋ ಆರೋಪಿ..

ಟಿಕೆಟ್ ಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವಂತೆ ಸೂಚಿಸಿದ್ದರು ಎಂದು ಆರೋಪಿ ಬಾಯಿಬಿಟ್ಟಿದ್ದಾನೆ..

ಸದ್ಯ ಗಣೇಶ್ ಪರೀಕ್ಷಿತ್ ತಲೆಮರೆ ಸಿಕೊಂಡಿದ್ದು, ಪೊಲೀಸರಿಂದ ಹುಡುಕಾಟ..

​ಟಿಕೆಟ್ ಮಾರಾಟಕ್ಕೆ ಸಹಕರಿಸಿದ ಆರೋಪದ ಮೇಲೆ..‌

ಕೆಲವು ಖಾಸಗಿ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧವೂ ಸಿಸಿಬಿ ಎಫ್‌ಐಆರ್ ದಾಖಲಿಸಿದೆ..

​ಸಿಸಿಬಿ ಡಿಸಿಪಿ ಶ್ರೀಹರಿಬಾಬು ನೇತೃತ್ವದಲ್ಲಿ ವಿಚಾರಣೆ..

17/04/2026

ಸಾಮಾನ್ಯವಾಗಿ ಮದುವೆ(Marriage) ಅಂದಮೇಲೆ ವರ ಕುದುರೆ ಏರಿ ಬರುತ್ತಾನೆ, ಮದುವೆಯ ನಂತರ ವಧು ಕಣ್ಣೀರಿಡುತ್ತಾ ತನ್ನ ತಂದೆ-ತಾಯಿಯನ್ನು ಬಿಟ್ಟು ಗಂಡನ ಮನೆಗೆ ಹೋಗುತ್ತಾಳೆ. ಆದರೆ ಸುಲ್ಪಾಗಾ ಗ್ರಾಮದಲ್ಲಿ ನಡೆದ ಈ ಮದುವೆಯಲ್ಲಿ ಎಲ್ಲವೂ ಉಲ್ಟಾ, ಇಲ್ಲಿ ವಧುವೇ ದಿಬ್ಬಣದೊಂದಿಗೆ ವರನ ಮನೆಗೆ ಬಂದಿದ್ದಾಳೆ, ಮದುವೆಯ ನಂತರ ವರನೇ ಅಳುತ್ತಾ ತನ್ನ ಅತ್ತೆಯ ಮನೆಗೆ (ವಧುವಿನ ಮನೆಗೆ) ಪ್ರವೇಶ ಮಾಡಿದ್ದಾನೆ
ಅಳಿಯನಲ್ಲ, ಮಗ ಬೇಕು: ತಂದೆಯ ಛಲ
ವಧು ದೇವಮುನಿ ಎಕ್ಕಾ ಅವರ ತಂದೆ ಮೋಹನ್ ಎಕ್ಕಾ ಅವರು ವೃತ್ತಿಯಲ್ಲಿ ಒಬ್ಬ ಸಾಮಾನ್ಯ ರೈತ. ಅವರಿಗೆ ನಾಲ್ಕು ಜನ ಹೆಣ್ಣು ಮಕ್ಕಳು, ಆದರೆ ಮಗನಿಲ್ಲ. ನನ್ನ ಕಾಲಾನಂತರ ನನ್ನ ಹೆಣ್ಣು ಮಕ್ಕಳ ಗತಿಯೇನು? ನನ್ನ ಕೃಷಿಯನ್ನು ಯಾರು ನೋಡಿಕೊಳ್ಳುತ್ತಾರೆ?” ಎಂಬ ಚಿಂತೆ ಅವರನ್ನು ಕಾಡುತ್ತಿತ್ತು. ಆಗ ಅವರು ಒಂದು ದಿಟ್ಟ ನಿರ್ಧಾರ ಮಾಡಿದರು. ತನ್ನ ಅಳಿಯನನ್ನು ಅಳಿಯನಂತೆ ನೋಡುವ ಬದಲು, ಮಗನಂತೆ ಮನೆಗೆ ಬರಮಾಡಿಕೊಳ್ಳಲು ನಿರ್ಧರಿಸಿದರು.

ವರ ಬಿಲಾಸಸ್ ಬರ್ವಾ ಅವರ ಕುಟುಂಬ ಕೂಡ ಈ ಮಾತಿಗೆ ಒಪ್ಪಿಗೆ ನೀಡಿತು. ಸಂಪ್ರದಾಯದ ಹಾದಿಯನ್ನೇ ಬದಲಿಸಿದ ಈ ವಿವಾಹಕ್ಕೆ ‘ಮಾಸಿ’ ಪದ್ಧತಿಯಂತೆ ಮದುವೆ ನಡೆಯಿತು.

‘ಕನ್ಯಾದಾನ’ ಇಲ್ಲ, ಇಲ್ಲಿ ನಡೆದದ್ದು ವರ್ದಾನ
ಈ ಮದುವೆಯ ಅತ್ಯಂತ ಸುಂದರ ಕ್ಷಣವೆಂದರೆ ಇಲ್ಲಿ ಕನ್ಯಾದಾನ ನಡೆಯಲಿಲ್ಲ. ಬದಲಾಗಿ, ವರನ ಪೋಷಕರು ತಮ್ಮ ಮಗನನ್ನು ವಧುವಿನ ಕುಟುಂಬಕ್ಕೆ ಹಸ್ತಾಂತರಿಸುವ ವರ್ದಾನ ಸಮಾರಂಭ ನಡೆಯಿತು. ಅಂದರೆ, ಮಗನನ್ನು ವಧುವಿನ ಮನೆಗೆ ದಾನವಾಗಿ ನೀಡಲಾಯಿತು.

ವಿವಾಹದ ವಿಧಿವಿಧಾನ ಮುಗಿದು ಬಿಲಾಸಸ್ ತನ್ನ ಮನೆಯನ್ನು ಬಿಟ್ಟು ಹೆಂಡತಿಯ ಮನೆಗೆ ಹೊರಡುವಾಗ, ಸಾಮಾನ್ಯವಾಗಿ ಹೆಣ್ಣು ಮಕ್ಕಳು ಪಡುವ ನೋವು ಆತನ ಕಣ್ಣಾಲಿಗಳಲ್ಲಿ ಕಂಡಿತು. ಇಡೀ ಗ್ರಾಮಸ್ಥರು ವರನ ಕಣ್ಣೀರು ಕಂಡು ಭಾವುಕರಾದರು.

ವರದಕ್ಷಿಣೆ ಮುಕ್ತ, ಸರಳ ವಿವಾಹ
ಈ ವಿವಾಹದಲ್ಲಿ ವರದಕ್ಷಿಣೆಯ ಹಾವಳಿ ಇರಲಿಲ್ಲ. ವಧುವಿನ ಕಡೆಯವರೇ ಮೆರವಣಿಗೆಯನ್ನು ವರನ ಮನೆಗೆ ಕರೆತಂದಿದ್ದರು. ಮದುವೆಯಲ್ಲಿ ಭಾಗವಹಿಸಿದ್ದ ಅತಿಥಿಗಳು, ಒಬ್ಬ ಹುಡುಗಿ ಮೆರವಣಿಗೆ ತಂದಿರುವುದನ್ನು ನಾವೇ ಮೊದಲ ಬಾರಿ ನೋಡುತ್ತಿರುವುದು ಎಂದು ಅಚ್ಚರಿ ವ್ಯಕ್ತಪಡಿಸಿದರು. ವರನ ಕಡೆಯವರು ಕೂಡ ಈ ಹೊಸ ಬದಲಾವಣೆಯನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದರು.

ಸಮಾಜಕ್ಕೆ ಹೊಸ ದಿಕ್ಸೂಚಿ
ಗ್ರಾಮಸ್ಥರಾದ ಸಾಧು ರಾಮ್ ಮತ್ತು ಮಹೇಶ್ ತಿರ್ಕಿ ಹೇಳುವಂತೆ, ಈ ಮದುವೆಯು ಕೇವಲ ಒಂದು ಕುಟುಂಬದ ನಿರ್ಧಾರವಲ್ಲ, ಇದು ಇಡೀ ಸಮಾಜಕ್ಕೆ ಒಂದು ಪಾಠ. ಗಂಡು ಮಕ್ಕಳಿಲ್ಲದ ತಂದೆ-ತಾಯಿಯರಿಗೆ ಈ ಮದುವೆ ಒಂದು ಭರವಸೆ ನೀಡಿದೆ. ಹೆಣ್ಣು ಮಕ್ಕಳು ಕೂಡ ಹೆತ್ತವರನ್ನು ಮಗನಂತೆ ಸಾಕಿ ಸಲಹಬಲ್ಲರು ಎಂಬ ಸತ್ಯ ಇಲ್ಲಿ ಸಾಬೀತಾಗಿದೆ.

ಪ್ರೀತಿ ಮತ್ತು ಸಮಾನತೆ ಇದ್ದರೆ ಸಂಪ್ರದಾಯಗಳು ಕೂಡ ಬದಲಾಗಬಲ್ಲವು ಎಂಬುದಕ್ಕೆ ಸುಲ್ಪಾಗಾ ಗ್ರಾಮದ ಈ ವಿವಾಹವೇ ಸಾಕ್ಷಿ. ಇಂದು ಆ ರೈತ ಮೋಹನ್ ಎಕ್ಕಾ ಅವರಿಗೆ ಅಳಿಯ ಸಿಕ್ಕಿಲ್ಲ, ಬದಲಿಗೆ ಅವರ ಕೃಷಿ ಮತ್ತು ಕುಟುಂಬವನ್ನು ಕಾಪಾಡಲು ಒಬ್ಬ ಮಗ ಸಿಕ್ಕಿದ್ದಾನೆ.

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


Bangalore