SUCI Communist Karnataka

Directions Website

SUCI Communist Karnataka This page is managed by SUCI-Communist Karnataka.

07/10/2026

ನಾಳೆ ಅಕ್ಟೋಬರ್ 8 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಜನಾಂದೋಲನ-ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ!
SIR ರದ್ದಾಗಲಿ!
No SIR!

ವಿದ್ಯಾರ್ಥಿ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದ ರಾಜ್ಯ ಮಟ್ಟದ ಶಿಬಿರ ರಾಯಚೂರು: ಅಕ್ಟೋಬರ್ 2, 3 ಮತ್ತು 4 ರಂದು ಮೂರು ದಿನಗಳ ರಾಜ್ಯ ಮಟ್ಟದ...
06/10/2026

ವಿದ್ಯಾರ್ಥಿ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದ ರಾಜ್ಯ ಮಟ್ಟದ ಶಿಬಿರ

ರಾಯಚೂರು: ಅಕ್ಟೋಬರ್ 2, 3 ಮತ್ತು 4 ರಂದು ಮೂರು ದಿನಗಳ ರಾಜ್ಯ ಮಟ್ಟದ ವಿದ್ಯಾರ್ಥಿ ಕಾರ್ಯಕರ್ತರ ಶಿಬಿರವನ್ನು ಎಐಡಿಎಸ್ಓ ಸಂಘಟನೆಯು ಏರ್ಪಡಿಸಿತ್ತು.
ಭಾರತ ನವೋದಯದ ಮಹಾನ್ ಸುಧಾರಕ ಮಹಾತ್ಮ ಜ್ಯೋತಿಬಾ ಫುಲೆಯವರ 200ನೇ ಜನ್ಮ ವಾರ್ಷಿಕಕ್ಕೆ ಈ ಶಿಬಿರವನ್ನು ಸಮರ್ಪಿಸಲಾಗಿತ್ತು.

ಈ ಶಿಬಿರದಲ್ಲಿ ದೇಶದ ಶೈಕ್ಷಣಿಕ ಸಮಸ್ಯೆಗಳ ಕುರಿತು, ವಿದ್ಯಾರ್ಥಿ ಚಳವಳಿಯ ಕುರಿತು ವಿಚಾರ ಗೋಷ್ಠಿಗಳನ್ನು ಮತ್ತು ಇವುಗಳಿಗೆ ಸಂಬಂಧಿಸಿದಂತೆ ಗುಂಪು ಚರ್ಚೆಗಳನ್ನು ಕೂಡ ವ್ಯವಸ್ಥೆ ಮಾಡಲಾಗಿತ್ತು.

ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳ ಕುರಿತು, ಸಂಘಟನೆ ಕಟ್ಟುವಾಗ ಬರುವ ಸವಾಲುಗಳ ಬಗ್ಗೆ ನಾಯಕರು ಮಾತನಾಡಿದರು. ಸಾಮಾಜಿಕ ಕಳಕಳಿಯ ಸಿನಿಮಾ ಪ್ರದರ್ಶನ ಮತ್ತು ಸಂವಾದ ಕೂಡ ಶಿಬಿರದ ಭಾಗವಾಗಿತ್ತು. ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವೈಚಾರಿಕ ಚರ್ಚೆಗಳ ಮೂಲಕ ವಿದ್ಯಾರ್ಥಿ ಕಾರ್ಯಕರ್ತರ ವ್ಯಕ್ತಿತ್ವ ವಿಕಸನಕ್ಕೆ ಈ ಶಿಬಿರವು ಸ್ಫೂರ್ತಿಯಾಗಿದೆ.

ಈ ಶಿಬಿರವನ್ನು ಎಐಡಿಎಸ್ಓ ರಾಜ್ಯ ಅಧ್ಯಕ್ಷರಾದ ಕಾ. ಅಶ್ವಿನಿ ಕೆಎಸ್, ರಾಜ್ಯ ಕಾರ್ಯದರ್ಶಿಗಳಾದ ಕಾ. ಅಜಯ್ ಕಾಮತ್, ಎಐಡಿಎಸ್ಓ ತಮಿಳುನಾಡು ರಾಜ್ಯ ಕಾರ್ಯದರ್ಶಿ ಕಾ. ಸುಗುಬಾಲ, ರಾಜ್ಯ ಖಜಾಂಚಿ ಕಾ. ಸುಭಾಷ್, ಎಐಡಿಎಸ್ಓ ಮಾಜಿ ಅಖಿಲ ಭಾರತ ಅಧ್ಯಕ್ಷರಾದ ಕಾ. ರಾಜಶೇಖರ್ ಮೊದಲಾದವರು ನಡೆಸಿಕೊಟ್ಟರು.
ಎಸ್‌ಯುಸಿಐ(ಸಿ) ಪಕ್ಷದ ಪಾಲಿಟ್‌ಬ್ಯೂರೋ ಸದಸ್ಯರಾದ ಕಾ. ಕೆ.ರಾಧಾಕೃಷ್ಣ ಮತ್ತು ರಾಜ್ಯ ಕಾರ್ಯದರ್ಶಿಗಳಾದ ಕಾ. ಕೆ.ಉಮಾ ಅವರು ಶಿಬಿರದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ರಾಜ್ಯದ ಬಹುತೇಕ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ಹೊಸ ಉತ್ಸಾಹದೊಂದಿಗೆ ಮುಂದಿನ ಹೋರಾಟಗಳಿಗೆ ಸಜ್ಜಾಗಿ ತೆರಳಿದ್ದಾರೆ.




**PRESS RELEASE****Stop SIR in Karnataka – Conduct an Impartial Probe into the Misuse of Form 7: SUCI(C)****Statement is...
03/10/2026

**PRESS RELEASE**
**Stop SIR in Karnataka – Conduct an Impartial Probe into the Misuse of Form 7: SUCI(C)**

**Statement issued by Smt. K. Uma, State Secretary**

It is a deeply alarming development that conspiracies to delete eligible voters in the state using the unscientific and undemocratic SIR process have been reported in the media.
Under Form 7—which provides a provision to remove ineligible and doubtful voters—eligible voters, particularly from minority and Dalit communities, are being targeted across several districts in the state. Newspapers, backed by evidence, have reported that the BJP has submitted thousands of pre-filled Form 7 applications containing printed voter details without proper disclosure even to the applicants themselves.
This lends credence to the allegation that the BJP and the Election Commission are acting in tandem. In this context, the SUCI(C) demands that the SIR process in the state be suspended immediately, a thorough probe be conducted into the submitted Form 7 applications, and strict legal action be taken against those responsible.

**Issued by:**

B. Ravi
State Office Secretary
03.10.2026




ಪತ್ರಿಕಾ ಹೇಳಿಕೆ ಕರ್ನಾಟಕದಲ್ಲಿ ಎಸ್‌ಐಆರ್ ನಿಲ್ಲಿಸಿ - ಫಾರ್ಮ್ 7ರ ದುರುಪಯೋಗದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ - ಎಸ್‌ಯುಸಿಐ(ಸಿ)ರಾಜ್ಯ ಕ...
03/10/2026

ಪತ್ರಿಕಾ ಹೇಳಿಕೆ

ಕರ್ನಾಟಕದಲ್ಲಿ ಎಸ್‌ಐಆರ್ ನಿಲ್ಲಿಸಿ - ಫಾರ್ಮ್ 7ರ ದುರುಪಯೋಗದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ - ಎಸ್‌ಯುಸಿಐ(ಸಿ)

ರಾಜ್ಯ ಕಾರ್ಯದರ್ಶಿ ಕಾ. ಕೆ ಉಮಾ ಅವರು ನೀಡಿರುವ ಹೇಳಿಕೆ

ಅವೈಜ್ಞಾನಿಕ ಮತ್ತು ಅಪ್ರಜಾತಾಂತ್ರಿಕ ಎಸ್ಐಆರ್ ಪ್ರಕ್ರಿಯೆಯನ್ನು ಬಳಸಿಕೊಂಡು ಅರ್ಹ ಮತದಾರರನ್ನು ಅಳಿಸಿ ಹಾಕುವ ಪಿತೂರಿ ರಾಜ್ಯದಲ್ಲಿ ನಡೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿದ್ದು ಇದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ.
ಅನರ್ಹ ಮತ್ತು ಸಂಶಯಾಸ್ಪದ ಮತದಾರರನ್ನು ತೆಗೆದುಹಾಕಲು ಅವಕಾಶ ನೀಡುವ ಫಾರ್ಮ್ 7ರ ಮೂಲಕ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ, ಅರ್ಹ ಮತದಾರರನ್ನು, ಅದರಲ್ಲೂ ಮುಖ್ಯವಾಗಿ ಅಲ್ಪಸಂಖ್ಯಾತರು ಮತ್ತು ದಲಿತ ಸಮುದಾಯಗಳ ಮತದಾರರನ್ನು ಗುರಿಯಾಗಿಸಲಾಗಿದೆ. ಮತದಾರರ ಮುದ್ರಿತ ವಿವರಗಳುಳ್ಳ ಫಾರ್ಮ್ 7ನ್ನು, ಸಾವಿರಾರು ಸಂಖ್ಯೆಯಲ್ಲಿ, ಅರ್ಜಿದಾರರಿಗೂ ಸರಿಯಾದ ಮಾಹಿತಿ ನೀಡದೆ ಬಿಜೆಪಿಯು ಸಲ್ಲಿಸಿದೆ ಎಂದು ಸಾಕ್ಷ್ಯಾಧಾರಗಳ ಸಹಿತ ಪತ್ರಿಕೆಗಳು ವರದಿ ಮಾಡಿವೆ.
ಬಿಜೆಪಿ ಮತ್ತು ಚುನಾವಣಾ ಆಯೋಗ ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತಿವೆ ಎಂಬ ಆರೋಪಕ್ಕೆ ಇದು ಸಮರ್ಥನೆ ನೀಡುವಂತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಸ್‌ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ಅಮಾನತ್ತಿನಲ್ಲಿಡಬೇಕು, ಸಲ್ಲಿಕೆಯಾದ ಫಾರ್ಮ್ 7ರ ಕುರಿತು ತನಿಖೆಯಾಗಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್‌ಯುಸಿಐ (ಸಿ) ಆಗ್ರಹಿಸುತ್ತದೆ.

ಸುದ್ದಿ ಇವರಿಂದ

ಬಿ. ರವಿ
ರಾಜ್ಯ ಕಚೇರಿ ಕಾರ್ಯದರ್ಶಿ
03.10.2026




ಮುಖ್ಯ ಚುನಾವಣಾ ಆಯುಕ್ತ ಶ್ರೀ ಗ್ಯಾನೇಶ್ ಕುಮಾರ್ ಅವರನ್ನು ವಜಾಗೊಳಿಸಲು ಎಸ್‌ಯುಸಿಐ(ಸಿ) ಒತ್ತಾಯಎಸ್ ಯು ಸಿ ಐ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಕ...
24/09/2026

ಮುಖ್ಯ ಚುನಾವಣಾ ಆಯುಕ್ತ ಶ್ರೀ ಗ್ಯಾನೇಶ್ ಕುಮಾರ್ ಅವರನ್ನು ವಜಾಗೊಳಿಸಲು ಎಸ್‌ಯುಸಿಐ(ಸಿ) ಒತ್ತಾಯ

ಎಸ್ ಯು ಸಿ ಐ (ಕಮ್ಯುನಿಸ್ಟ್) ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಕಾಮ್ರೇಡ್ ಕೆ.ಉಮಾ ಅವರು ನೀಡಿರುವ ಹೇಳಿಕೆ:

"ಎಸ್‌ಐಆರ್‌ (SIR) ಕುರಿತು ಸೆಪ್ಟೆಂಬರ್ 23, 2026 ರಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ದಿನಪತ್ರಿಕೆ ಮಾಡಿರುವ ಸ್ಫೋಟಕ ವರದಿಗಳು, ಒಟ್ಟಾರೆಯಾಗಿ ಸಾರ್ವಜನಿಕರಲ್ಲಿ ಮತ್ತು ಮುಖ್ಯವಾಗಿ ಜನತಾಂತ್ರಿಕ ಮನೋಭಾವದ ಜನರಲ್ಲಿ ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಹಾಗೂ ಪ್ರಾಮಾಣಿಕತೆಯ ಬಗ್ಗೆ ತೀವ್ರ ಸಂಶಯಗಳನ್ನು ಮೂಡಿಸಿವೆ. ಮೂವರು ಚುನಾವಣಾ ಆಯುಕ್ತರಲ್ಲಿ ಇಬ್ಬರು ಎಸ್‌ಐಆರ್‌ನ ವಿವಿಧ ಅಂಶಗಳ ಕುರಿತು ತಮ್ಮ ಆಕ್ಷೇಪಣೆಗಳನ್ನು ದಾಖಲಿಸಿದ್ದಾರೆ ಎಂಬುದು ಇದರಿಂದ ನಿಸ್ಸಂದೇಹವಾಗಿ ಸ್ಪಷ್ಟವಾಗಿದೆ. ಆದರೆ ಪ್ರಸ್ತುತ ಇರುವ ಕಾನೂನನ್ನು ಉಲ್ಲಂಘಿಸಿ, ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಗ್ಯಾನೇಶ್ ಕುಮಾರ್ ಅವರು ಆಡಳಿತಾರೂಢ ಬಿಜೆಪಿಗೆ ಅನುಕೂಲವಾಗುವಂತೆ ಮತ್ತು ವಿವಿಧ ರಾಜ್ಯಗಳಲ್ಲಿ ಅದರ ಚುನಾವಣಾ ಗೆಲುವನ್ನು ಖಚಿತಪಡಿಸಲು ಏಕಪಕ್ಷೀಯವಾಗಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದು ನಮ್ಮ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಫ್ಯಾಸಿಸ್ಟ್ ಮಾದರಿಯ ದಾಳಿಯಾಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಈ ಹಿನ್ನೆಲೆಯಲ್ಲಿ, ನಾವು ಈ ಕೆಳಗಿನವುಗಳನ್ನು ಆಗ್ರಹಿಸುತ್ತೇವೆ:
1) ಮುಖ್ಯ ಚುನಾವಣಾ ಆಯುಕ್ತರಾದ ಗ್ಯಾನೇಶ್ ಕುಮಾರ್ ಅವರನ್ನು ತಕ್ಷಣವೇ ವಜಾಗೊಳಿಸಬೇಕು.
2) ಎಸ್‌ಐಆರ್ (SIR) ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು.
3) ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ 13 ಕೋಟಿ ಮತದಾರರನ್ನು ಮತ್ತೆ ಸೇರ್ಪಡೆಗೊಳಿಸಬೇಕು."

ಸುದ್ದಿ ಇವರಿಂದ

ಬಿ.ರವಿ
ರಾಜ್ಯ ಕಚೇರಿ ಕಾರ್ಯದರ್ಶಿಗಳು ಎಸ್‌ಯುಸಿಐ (ಸಿ)
25.09.2026

13/09/2026



09/09/2026

ಚೀನಾ ಕ್ರಾಂತಿಯ ಶಿಲ್ಪಿ ಮಾವೋ ಝೆಡಾಂಗ್ ಅವರ 50 ನೇ ವರ್ಷದ ಸ್ಮರಣೆಯ ಸಂದರ್ಭದಲ್ಲಿ
ಸಂದರ್ಶನ
ಕಾ. ಕೆ.ರಾಧಾಕೃಷ್ಣ (ಕೇಂದ್ರ ಪಾಲಿಟ್‌ಬ್ಯೂರೋ ಸದಸ್ಯರು, ಎಸ್‌ಯುಸಿಐ(ಸಿ))
ಸಂದರ್ಶನಕಾರರು -
ಬಿ.ರವಿ
'ಕಾರ್ಮಿಕ ದೃಷ್ಟಿಕೋನ' ಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯರು

27/08/2026

https://www.facebook.com/share/v/1GM4hjEscj/?mibextid=wwXIfr

ಕರ್ನಾಟಕದಲ್ಲಿ ಲಕ್ಷಾಂತರ ಪಿಂಚಣಿದಾರರಿಗೆ ಕಳೆದ 3 ರಿಂದ 5 ತಿಂಗಳಿಂದ ಮೂಲಭೂತ ಸಾಮಾಜಿಕ ಭದ್ರತಾ ಪಿಂಚಣಿ ಸಿಗದೆ ವಂಚಿತರಾಗಿದ್ದಾರೆ.

ಇದನ್ನು ಖಂಡಿಸಿ ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ನೇತೃತ್ವದಲ್ಲಿ ನೂರಾರು ವೃದ್ಧರು, ವಿಧವೆಯರು ಹಾಗೂ ವಿಕಲಚೇತನರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಪ್ರತಿಭಟನೆ ನಡೆಸಿದರು*l

_Janapatha-The Progressive Path_
_Follow-Share -Like_

Address

#31, 3rd Cross, Malleswaram
Bangalore
560003

Alerts

Be the first to know and let us send you an email when SUCI Communist Karnataka posts news and promotions. Your email address will not be used for any other purpose, and you can unsubscribe at any time.

Shortcuts

Share