13/03/2026
ಕನ್ನಡ ನೆಲದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಇರಬೇಕು, ಯುಐಡಿಎಐ ಕಚೇರಿ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿರುವುದು ಸ್ವಾಗತಾರ್ಹ.
#ಆಧಾರ್
#ಭಾರತೀಯ_ವಿಶಿಷ್ಟ_ಗುರುತಿನ_ಪ್ರಾಧಿಕಾರ
ನುಡಿ ಕನ್ನಡ - ನಡೆ ಕನ್ನಡ - ಓದು ಕನ್ನಡ
Want to learn
ಸಂಸ್ಕೃತಿಯೊಂದಿಗೆ ಸಹಜವಾಗಿ ಮಿಳಿತವಾದ ಭಾಷೆಯನ್ನು ಸಾಂವಿಧಾನಿಕ ಚೌಕಟ್ಟಿನಲ್ಲಿ ಉಳಿಸುವ, ಬೆಳೆಸುವ ಮಹತ್ತರ ಜವಾಬ್ದಾರಿಯನ್ನು ಹೊಂದಿರುವ ಈ ಸಂಸ್ಥೆಯು ಕನ್ನಡದ ನೈತಿಕ ಶಕ್ತಿ. ಒಳನಾಡು, ಗಡಿನಾಡು, ಹೊರನಾಡುಗಳೆನ್ನದೆ ಕನ್ನಡದ ಸೊಬಗನ್ನು ಎಲ್ಲೆಡೆ ಪಸರಿಸುವ, ಕನ್ನಡದ ಪ್ರೀತಿಯನ್ನು ಎಲ್ಲೆಲ್ಲೂ ಹಂಚುವ, ಕನ್ನಡದ ಹಿತಕ್ಕೆ ಕುಂದಾದರೆ ಕೈ ಜಗ್ಗಿ ಪ್ರಶ್ನಿಸುವ ಅಧಿಕಾರ, ಅಪ್ಯಾಯತೆಗಳ ಹಕ್ಕನ್ನು ಹೊಂದಿರುವ ಕರ್ನಾಟಕ ಸರ್ಕಾರದ ಏಕೈಕ ಸಂವಿಧಾನ ಬದ್ಧ ಸಂಸ್ಥೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ
13/03/2026
ಕನ್ನಡ ನೆಲದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಇರಬೇಕು, ಯುಐಡಿಎಐ ಕಚೇರಿ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿರುವುದು ಸ್ವಾಗತಾರ್ಹ.
#ಆಧಾರ್
#ಭಾರತೀಯ_ವಿಶಿಷ್ಟ_ಗುರುತಿನ_ಪ್ರಾಧಿಕಾರ
05/03/2026
ಅಪ್ರತಿಮ ಕನ್ನಡ ಹೋರಾಟಗಾರ, ಬಹುಮುಖಿ ಪ್ರತಿಭೆ ಬಾ.ಹ. ಉಪೇಂದ್ರ ಅವರ ನಿಧನಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ.
26/02/2026
ಕಾಸರಗೋಡಿನ ಮಣ್ಣಿನಲ್ಲಿ ಕನ್ನಡದ ಕಂಪು! ಕನ್ನಡ ಅಸ್ಮಿತೆ, ಯುವಶಕ್ತಿ ಮತ್ತು ಭವಿಷ್ಯ ಎಂಬ ವಿಷಯದ ಕುರಿತು ಅರ್ಥಪೂರ್ಣ ವಿಚಾರಗೋಷ್ಠಿ ನಡೆಯಿತು. ಗಡಿಭಾಗದಲ್ಲಿ ಕನ್ನಡವನ್ನು ಉಸಿರಾಗಿಸಿಕೊಂಡಿರುವ ಯುವಶಕ್ತಿಯೇ ಭವಿಷ್ಯದ ಭರವಸೆ.
#ಗೋವಿಂದ_ಪೈ_ಸ್ಮಾರಕ_ಸರ್ಕಾರಿ_ಕಾಲೇಜು #ಮಂಜೇಶ್ವರ
25/02/2026
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ #ಗಡಿನಾಡು_ಸುಳ್ಯ_ಪರಿಸರದ_ಭಾಷಾ_ಪರಂಪರೆಯ ಕುರಿತು ಒಂದು ದಿನದ ವಿಚಾರಗೋಷ್ಠಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆಯೋಜಿಸಿದ್ದು, ಈ ಪರಿಸರದ ವಿವಿಧ ಭಾಷೆಗಳ ಕುರಿತಾದ ಅರ್ಥಪೂರ್ಣ ಚರ್ಚೆಗಳು ನಡೆದವು.
#ಕರ್ನಾಟಕಕ್ಕೊಂದು_ಸಶಕ್ತ_ಭಾಷಾನೀತಿ
21/02/2026
ಕನ್ನಡ ನಾಡಿನ ಸಮಸ್ತ ಜನತೆಗೆ ವಿಶ್ವ ಮಾತೃಭಾಷಾ ದಿನದ ಹಾರ್ದಿಕ ಶುಭಾಶಯಗಳು
#ನಮ್ಮ_ತಾಯ್ನುಡಿ_ನಮ್ಮ_ಹೆಮ್ಮೆ
#ಸಿರಿಗನ್ನಡಂ_ಗೆಲ್ಗೆ_ಸಿರಿಗನ್ನಡಂ_ಬಾಳ್ಗೆ
11/02/2026
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸ್ಥಳನಾಮಗಳ ಅಭಿಯಾನದ ಭಾಗವಾಗಿ ನಿರ್ಮಿಸಲಾಗಿರುವ ಕಿರುಚಿತ್ರ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸ್ಥಳನಾಮಗಳ ಅಭಿಯಾನದ ಭಾಗವಾಗಿ ನಿರ್ಮಿಸಲಾಗಿರುವ ಕಿರುಚಿತ್ರ Enjoy the videos and music you love, upload original content, and share it all with friends, family, and the world on YouTube.
11/02/2026
ನಾಮಫಲಕಗಳಲ್ಲಿ ಊರಿನ ಹೆಸರುಗಳನ್ನು ಸೇರಿಸುವ ಮೂಲಕ ಕನ್ನಡ ಪದಗಳನ್ನು ಉಳಿಸುವ #ಕನ್ನಡ_ಅಭಿವೃದ್ಧಿ_ಪ್ರಾಧಿಕಾರದ_ಅಭಿಯಾನದ ಭಾಗವಾಗಿ ನಿರ್ಮಿಸಲಾಗಿರುವ ಕಿರುಚಿತ್ರವನ್ನು ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರಾದ #ಶಿವರಾಜ_ಎಸ್_ತಂಗಡಗಿ ರವರು ಲೋಕಾರ್ಪಣೆಗೊಳಿಸಿದರು.
#ನಾಮಫಲಕಗಳಲ್ಲಿ_ಊರಿನ_ಹೆಸರುಗಳು
10/02/2026
ಉದ್ದೇಶ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾದ #ನಲಿ_ಕಲಿ_ಯೋಜನೆ
#ಶಿಕ್ಷಣ_ಸಚಿವರಿಗೆ ವರದಿ ಸಲ್ಲಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ
#ನಲಿ_ಕಲಿ
#ಶಾಲಾ_ಶಿಕ್ಷಣ_ಮತ್ತು_ಸಾಕ್ಷರತೆ_ಇಲಾಖೆ
#ಶಿಕ್ಷಣದಲ್ಲಿ_ಕನ್ನಡ
04/02/2026
ಚಿತ್ರದುರ್ಗ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಾನ್ಯ ಅಧ್ಯಕ್ಷರ ನೇತೃತ್ವದಲ್ಲಿ #ಕನ್ನಡ_ಅನುಷ್ಠಾನ_ಪ್ರಗತಿ_ಪರಿಶೀಲನಾ_ಸಭೆ
#ಶಿಕ್ಷಣದಲ್ಲಿ_ಕನ್ನಡ
#ಆಡಳಿತದಲ್ಲಿ_ಕನ್ನಡ
04/02/2026
ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ಮಾನ್ಯ ಅಧ್ಯಕ್ಷರ ನೇತೃತ್ವದಲ್ಲಿ #ಕನ್ನಡ_ಅನುಷ್ಠಾನ_ಪ್ರಗತಿ_ಪರಿಶೀಲನಾ_ಸಭೆ ನಡೆಸಲಾಯಿತು. ಜಿಲ್ಲಾಡಳಿತದ ಎಲ್ಲಾ ಹಂತದಲ್ಲಿಯೂ ಕನ್ನಡವನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಯಿತು.
#ಕನ್ನಡ_ಅನುಷ್ಠಾನ
#ಜಿಲ್ಲಾಧಿಕಾರಿಗಳ_ಕಚೇರಿ_ಚಿತ್ರದುರ್ಗ
03/02/2026
ಜ್ಞಾನದ ಅಂತಾರಾಷ್ಟ್ರೀಕರಣ ಇಂದಿನ ಅನಿವಾರ್ಯತೆ. ಇದರ ಫಲವಾಗಿ ದೇಸೀ ಭಾಷೆಗಳು ನಶಿಸುತ್ತಿವೆ. ಈ ಬದಲಾವಣೆಯನ್ನು ಒಪ್ಪಿಕೊಳ್ಳುತ್ತಲೇ ಕನ್ನಡವನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕಿದೆ.
#ಶಿಕ್ಷಣದಲ್ಲಿ_ಕನ್ನಡ
#ದಾವಣಗೆರೆ_ವಿಶ್ವವಿದ್ಯಾಲಯ
#ಕನ್ನಡ_ಅನುಷ್ಠಾನ_ಪ್ರಗತಿ_ಪರಿಶೀಲನಾ_ಸಭೆ
03/02/2026
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಮತ್ತು ಆಡಳಿತದ ನಡುವೆ ಭಾಷೆಯೆನ್ನುವುದು ಸೇತುವೆಯಾಗಿದೆ. ಹಾಗಾಗಿ ನಾಡಿನಲ್ಲಿ ಪ್ರಜಾಪ್ರಭುತ್ವ ಒಳಗೊಳ್ಳಬೇಕಾದರೆ ಕನ್ನಡ ಬಲಗೊಳ್ಳಬೇಕು.
#ದಾವಣಗೆರೆ_ಜಿಲ್ಲಾಧಿಕಾರಿಗಳ_ಕಚೇರಿ
#ಕನ್ನಡ_ಅನುಷ್ಠಾನ_ಪ್ರಗತಿ_ಪರಿಶೀಲನಾ_ಸಭೆ
#ಆಡಳಿತದಲ್ಲಿ_ಕನ್ನಡ