ABVP Karnataka

ABVP Karnataka

Share

Official facebook Page of ABVP KARNATAKA. Akhil Bharatiya Vidyarthi Parishad(ABVP), is an All-India student organization working in the field of education.

Founded in 1948 and formally registered on July 9, 1949; 61 years ago (1949-07-09), ABVP is the largest student organization in the world. ABVP drew its inspiration from the Rashtriya Swayamsevak Sangh. Today ABVP is the largest student organization in India. During the International Youth Year 1985, ABVP took the initiative of launching the World Organization of Students and Youth (WOSY), the fir

28/05/2026

"ಶಿಕ್ಷಣದ ಜೊತೆಗೆ ದೇಶದ ಜವಾಬ್ದಾರಿ"

ನಮ್ಮ ಶಿಕ್ಷಣ ಮತ್ತು ಸಾಮರ್ಥ್ಯ ಕೇವಲ ನಮಗಾಗಿ ಅಲ್ಲ, ಅದು ದೇಶದ ಪ್ರಗತಿಗಾಗಿ ಬಳಕೆಯಾಗಬೇಕು. ಪ್ರತಿಯೊಬ್ಬ ಯುವಕನೂ ರಾಷ್ಟ್ರ ಚಿಂತನೆಯೊಂದಿಗೆ ಕೆಲಸ ಮಾಡಿದಾಗ ಮಾತ್ರ ಭಾರತವು ವಿಶ್ವಗುರುವಾಗಲು ಸಾಧ್ಯ.
— ಡಾ. ವೀರೇಂದ್ರ ಸಿಂಗ್ ಸೋಲಂಕಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ,

Photos from ABVP Karnataka's post 14/05/2026

ನೀಟ್ ಯುಜಿ (NEET UG) 2026ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿಜಯಪುರ ವತಿಯಿಂದ ಅಂಬೇಡ್ಕರ್ ವೃತ್ತದಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯ ನೇತೃತ್ವವನ್ನು ಎಬಿವಿಪಿ ಕೇಂದ್ರಿಯ ಕಾರ್ಯಸಮಿತಿ ಸದಸ್ಯರಾದ ಶ್ರೀ ಸಚಿನ ಕುಳಗೇರಿ ಅವರು ವಹಿಸಿದ್ದರು.

ದೋಷಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು, ನಿಷ್ಪಕ್ಷಪಾತ ಉನ್ನತ ಮಟ್ಟದ ತನಿಖೆ ನಡೆಯಬೇಕು ಮತ್ತು ಸಂತ್ರಸ್ತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಎಬಿವಿಪಿ ಈ ಸಂದರ್ಭದಲ್ಲಿ ಒತ್ತಾಯಿಸಿತು.

INEET UG 2026 paper leak, the Akhil Bharatiya Vidyarthi Parishad (ABVP),Vijayapur Unit , Karnataka North Province, organized a massive protest against the National Testing Agency (NTA) at Ambedkar Chowk . The demonstration was led by ABVP Central Working Committee member Shri Sachin Kulageri

The ABVP demanded strict action against the culprits, an impartial high-level investigation, and justice for the affected students.

12/05/2026

ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ, ಮೇ 3 ರಂದು ನಡೆದಿದ್ದ ನೀಟ್ ಯುಜಿ 2026 (NEET UG 2026) ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಕೇಂದ್ರ ಸರ್ಕಾರವು ಈ ಪ್ರಕರಣದ ಬಗ್ಗೆ ಸಿಬಿಐ (CBI) ತನಿಖೆಗೆ ಆದೇಶಿಸಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮರು ಪರೀಕ್ಷೆ ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ದೃಢಪಡಿಸಿದೆ.

ರಾಜಸ್ಥಾನ ಸೇರಿದಂತೆ ವಿವಿಧೆಡೆ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳು ನಡೆದ ಆರೋಪ.

07/05/2026

ಪಾಕಿಸ್ತಾನದ ಗಡಿಯೊಳಗೆ ನುಗ್ಗಿ, ಉಗ್ರರ ಎದೆಯನ್ನು ಸೀಳಿ, ಭಾರತದ ಪರಾಕ್ರಮದ ಪತಾಕೆ ಹಾರಿಸಿದ ಆ ಐತಿಹಾಸಿಕ ಮುಂಜಾನೆಗೆ ಇಂದು ಒಂದು ವರ್ಷ!"

06/05/2026

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ABVP) ಪೂರ್ಣಾವಧಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದ ಶ್ರೀ ಜಗದೀಶ್‌ ಹಿರೇಮನಿ ಅವರು ಅಕಾಲಿಕವಾಗಿ ನಿಧನರಾದ ಸುದ್ದಿ ತಿಳಿದು ಅತ್ಯಂತ ಆಘಾತವಾಗಿದೆ.

ಸರಳ ವ್ಯಕ್ತಿತ್ವ ಹಾಗೂ ಸಂಘಟನಾ ಚತುರರಾಗಿದ್ದ ಅವರು, ವಿದ್ಯಾರ್ಥಿ ದೆಸೆಯಿಂದಲೂ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ನಮ್ಮನ್ನಗಲಿರುವುದು ಕೇವಲ ಅವರ ಕುಟುಂಬಕ್ಕೆ ಮಾತ್ರವಲ್ಲದೆ, ಸಂಘಟನೆಗೆ ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

02/05/2026

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ರಾಜಮಟ್ಟದ ಕಾರ್ಯಗಾರದ ಪೋಸ್ಟರ್ ಬಿಡುಗಡೆಯನ್ನು ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ನಾಗಲಿಂಗಂ ನೆರವೇರಿಸಿದರು. ಈ ಸಂದರ್ಭದಲ್ಲಿ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿಯಾದ ಗಂಗಾಧರ್ ಹಂಜಗಿ ಹಾಗೂ ಪ್ರಾಂತ ಕಾರ್ಯದರ್ಶಿಯಾದ ಗೋಪಿ ರಂಗಸ್ವಾಮಿಯವರು ಉಪಸ್ಥಿತರಿದ್ದರು.

Photos from ABVP Karnataka's post 30/04/2026

ಚಿಕ್ಕಬಳ್ಳಾಪುರ ನಗರದಲ್ಲಿ ಇತ್ತೀಚೆಗೆ KSRTC ಬಸ್ ಚಾಲಕನ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿನಿಯ ಕಾಲಿನ ಮೇಲೆ ಬಸ್ ಹರಿದು ಸಂಭವಿಸಿದ ದುರ್ಘಟನೆಯನ್ನು ಖಂಡಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿಕ್ಕಬಳ್ಳಾಪುರ ಜಿಲ್ಲೆ ವತಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ಪ್ರತಿಭಟನೆಯಲ್ಲಿ ABVP ರಾಜ್ಯ ಕಾರ್ಯದರ್ಶಿಗಳಾದ ಗೋಪಿ ರಂಗಸ್ವಾಮಿ ಅವರು ಉಪಸ್ಥಿತರಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳ ಬೇಜವಾಬ್ದಾರಿತನದಿಂದಾಗಿ ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ಬರುತ್ತಿರುವುದು ಸಹಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Photos from ABVP Karnataka's post 25/04/2026

ಬೆಂಗಳೂರು ವಿದ್ಯಾರ್ಥಿ ಸಂಸ್ಕೃತಿ ಚಳವಳಿಯ (BVSC) ಸ್ಪರ್ಧೆಯನ್ನು ಆಯೋಜಿಸಲಾಗಿದೆ. ನಮ್ಮ ಸಂಸ್ಕೃತಿಯ ಸೊಗಡನ್ನು ಸಂಗೀತದ ಮೂಲಕ ಆನಂದಿಸುವ ಸಮಯ ಇದೀಗ ಬಂದಿದೆ.

ಬಹುಮಾನದ ವಿವರಗಳು:
ಪ್ರಥಮ ಬಹುಮಾನ: ₹5,000
ದ್ವಿತೀಯ ಬಹುಮಾನ: ₹3,000
ತೃತೀಯ ಬಹುಮಾನ: ₹2,000
ಕಾರ್ಯಕ್ರಮದ ವಿವರಗಳು:

ದಿನಾಂಕ: ಏಪ್ರಿಲ್ 28, 2026
ಸ್ಥಳ: ಯುವಪಥ ವಿವೇಕ ಸಭಾಂಗಣ, ಜಯನಗರ
ನಮ್ಮ ಸಂಸ್ಕೃತಿಯ ಹೆಮ್ಮೆಯ ಸಂಭ್ರಮದಲ್ಲಿ ಪಾಲ್ಗೊಂಡು ಸಂಗೀತದ ಮಾಂತ್ರಿಕ ಲೋಕವನ್ನು ಆನಂದಿಸಲು ಬನ್ನಿ!

21/04/2026

ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕರು ಶ್ರೀ ಶಂಕರಾಚಾರ್ಯಾರ ಜಯಂತಿಯ ಹಾರ್ದಿಕ ಶುಭಾಶಯಗಳು
ABVP Karnataka South

21/04/2026

ಜನಸೇವೆಗಾಗಿ ಸಮರ್ಪಿಸಿಕೊಂಡಿರುವ ಸರ್ವ ಅಧಿಕಾರಿ ವರ್ಗಕ್ಕೆ ನಾಗರಿಕ ಸೇವಾ ದಿನದ ಹಾರ್ದಿಕ ಶುಭಾಶಯಗಳು
ABVP Karnataka South

Want your business to be the top-listed Government Service in Bangalore?

Click here to claim your Sponsored Listing.

Location

Telephone

Address


'YUVASHAKTI' #55, 1st Main Road, Sheshadripuram
Bangalore
560020