ತಾಯಿಯ ಗರ್ಭದ ಒಳಗಿನ ಆ ಒಂದು ಜೀವ ರೂಪುಗೊಳ್ಳುವ ಅದ್ಭುತವನ್ನು ಅಂದಿನ ಕಾಲದಲ್ಲೇ ಶರಣರು ಪಕ್ಕಾ ಸೈಂಟಿಫಿಕ್ ಆಗಿ ಹೇಳಿದ್ದು ಹೇಗೆ?
ಇದನ್ನೇ ವಿವರಿಸುವ ಶರಣ ಬಾಲಸಂಗಯ್ಯನವರ ವಚನದ ವಿಶ್ಲೇಷಣೆ ನಿಮಗಾಗಿ.
ತಪ್ಪದೆ ವೀಕ್ಷಿಸಿ,
ಶರಣು ಶರಣಾರ್ಥಿಗಳು. 🙏
Basava Samithi
Contact information, map and directions, contact form, opening hours, services, ratings, photos, videos and announcements from Basava Samithi, Library, Basava Bhavan, Sri Basaveswara Circle, Bangalore.
Basava Samithi was established in the year 1964 by Dr. BD Jatti, Former Vice-President of India with the Sole Objective of Propagating the Humanitarian and Universal Values of VishwaGuru Sri Basavanna and other Shivasharanas throughout the World.
ತನ್ನ ವಿನೋದಕ್ಕೆ ತಾನೆ ಸೃಜಿಸಿದ ಸಕಲ ಜಗತ್ತ.
ತನ್ನ ವಿನೋದಕ್ಕೆ ತಾನೆ ಸುತ್ತಿದನದಕ್ಕೆ ಸಕಲ ಪ್ರಪಂಚನು.
ತನ್ನ ವಿನೋದಕ್ಕೆ ತಾನೆ ತಿರುಗಿಸಿದನನಂತ ಭವದುಃಖಂಗಳಲ್ಲಿ.
ಇಂತೆನ್ನ ಚೆನ್ನಮಲ್ಲಿಕಾರ್ಜುನನೆಂಬ ಪರಶಿವನು
ತನ್ನ ಜಗದ್ವಿಲಾಸ ಸಾಕಾದ ಮತ್ತೆ ತಾನೆ ಪರಿವನದರ ಮಾಯಾಪಾಶವನು.
~ ವೀರ ವಿರಾಗಿಣಿ ಅಕ್ಕಮಹಾದೇವಿ ತಾಯಿಯವರು 🙏
ಕೇವಲ ತನ್ನ ಖುಷಿಗಾಗಿ ಜಗತ್ತನ್ನು ಸೃಷ್ಟಿಸಿ, ಸಂಸಾರದ ಬಲೆಬೀಸಿ, ಕಷ್ಟ-ಸುಖದ ಸುಳಿಯಲ್ಲಿ ನಮ್ಮನ್ನು ಸಿಲುಕಿಸಿ ನಾಟಕ ನೋಡುತ್ತಿದ್ದಾನೆ ಆ ಪರಶಿವ.
ಹೀಗಿದ್ದಾಗ ನಮ್ಮ ಪ್ರಯತ್ನದಿಂದಲೇ ಇದರಿಂದ ಪಾರಾಗುತ್ತೇವೆ ಎನ್ನುವುದು ಶುದ್ಧ ಭ್ರಮೆ; ಉರುಳು ಬಿಗಿದವನೇ ಅದನ್ನು ಬಿಡಿಸಬೇಕಲ್ಲವೇ?
ಆತನಿಗೆ ತನ್ನ ಜಗನ್ನಾಟಕ "ಸಾಕು" ಎನಿಸಿದ ಗಳಿಗೆಯಲ್ಲಿ, ಅವನೇ ಬಂದು ಮಾಯಾಪಾಶ ಕತ್ತರಿಸಿ ನಮ್ಮನ್ನು ತನ್ನೊಳಗೆ ವಿಲೀನವಾಗಿಸಿಕೊಳ್ಳುತ್ತಾನೆ.
ಅಲ್ಲಿಯವರೆಗೆ ಅಹಂಕಾರ ಕಳಚಿ, ನಿರಾಳವಾಗಿ ಆ ಚೆನ್ನಮಲ್ಲಿಕಾರ್ಜುನನಿಗೆ ಸಂಪೂರ್ಣ ಶರಣಾಗುವುದೊಂದೇ ನಾವು ಮಾಡಬೇಕಾದದ್ದು!
~ Basava Samithi
ಬಸವಕಲ್ಯಾಣದ ಹತ್ತಿರವಿರುವ 'ಬೆಟ್ಟಬಲ ಕುಂದ' ಗ್ರಾಮದ ಭವ್ಯ ಇತಿಹಾಸ ನಿಮಗೊತ್ತಾ? 🤔
ಕಲ್ಯಾಣ ಕ್ರಾಂತಿಯ ನಂತರ ಶರಣರನ್ನು ಸಲಹಿ, ಇತಿಹಾಸವನ್ನು ಕಾಯ್ದ ಈ ಬೆಟ್ಟಗಳ ಒಡಲಲ್ಲಿ ಅಡಗಿರುವ ಗವಿಗಳು ಮತ್ತು 'ಗಣಮೇಳ ಮೈದಾನ'ದ ವಿವರಗಳನ್ನು ಈ ಸಂಚಿಕೆಯಲ್ಲಿ ತಿಳಿಯಿರಿ. ✨
ತಪ್ಪದೇ ವೀಕ್ಷಿಸಿ!🎥👇
ಇದು ಬಸವ ಸಮಿತಿಯ ಪ್ರಸ್ತುತಿ 🙏
ಕಲಬುರಗಿ ಬಸವ ಸಮಿತಿ
ಲಿಂ. ಶಿವಶಂಕರೆಪ್ಪ ಭೀಮಳ್ಳಿ ಸ್ಮರಣಾರ್ಥ ಅರಿವಿನ ಮನೆ 902 ನೆಯ ಕಾರ್ಯಕ್ರಮ
ದಿನಾಂಕ : 31-05-2026 ರಂದು ರವಿವಾರ ಸಂಜೆ 6.00 ಗಂಟೆಗೆ
ಅನುಭಾವ : ಡಾ. ವಿವೇಕಾನಂದ ಸಜ್ಜನ
ವಿಷಯ : ವಚನ ಸಾಹಿತ್ಯದಲ್ಲಿ ಸಾಮಾಜಿಕ ಆಯಾಮಗಳು
ದತ್ತಿ ದಾಸೋಹಿಗಳು : ಶ್ರೀ ಬಸವರಾಜ ಭೀಮಳ್ಳಿ ಹಾಗೂ ಪರಿವಾರದವರು
ಶರಣು ಶರಣಾರ್ಥಿಗಳು
31/05/2026
🙏 ಭಾವಪೂರ್ಣ ಶ್ರದ್ಧಾಂಜಲಿ 🙏
ಡಾ. ಶ್ರೀ ಮುತ್ತಯ್ಯ ಎಂ. ಕೋಗನೂರಮಠ
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದ ದಿಗ್ಗಜರು ಹಾಗೂ ನಮ್ಮ 'ಬಸವ ಸಮಿತಿ ಡಿಜಿಟಲ್ ಗ್ರಂಥಾಲಯ'ದ ಸ್ಥಾಪನೆಯಲ್ಲಿ ನಮಗೆ ನಿರಂತರ ಮಾರ್ಗದರ್ಶನ ನೀಡುತ್ತಿದ್ದ ಹಿರಿಯ ಚೇತನ ಡಾ. ಮುತ್ತಯ್ಯ ಎಂ. ಕೋಗನೂರಮಠ ಅವರ ಅಗಲಿಕೆ ತುಂಬಲಾರದ ನಷ್ಟ.
ಶ್ರೀಯುತರಿಗೆ ಸೃಷ್ಟಿಕರ್ತ ಪರಮಾತ್ಮನು ಲಿಂಗೈಕ್ಯವನ್ನು ಕರುಣಿಸಲಿ.
ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇವೆ.
“ಎಮ್ಮವರಿಗೆ ಸಾವಿಲ್ಲ, ಎಮ್ಮವರು ಸಾವನರಿಯರು,
ಸಾವೆಂಬುದು ಸಯವಲ್ಲ.
ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ
ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ!”
ಡಾ. ಶ್ರೀ ಅರವಿಂದ ಜತ್ತಿ (ಅಧ್ಯಕ್ಷರು), ಪದಾಧಿಕಾರಿಗಳು ಮತ್ತು ಸಮಸ್ತ ಸದಸ್ಯರು,
- ಬಸವ ಸಮಿತಿ
ನಾಮ ನಾಮ ಎಂದು ನೀನು ನಾಮಕ್ಕೆ ಬಳಲುವೆ.
ನಾಮವಾದ ಸೀಮೆಯ ಒಳಗೆ ಇಪ್ಪುದು ಹೇಳೆಲೆ ಮರುಳೆ?
ನಾಮವೂ ಇಲ್ಲ, ಸೀಮೆಯೂ ಇಲ್ಲ,
ಒಡಲೂ ಇಲ್ಲ, ನೆಳಲೂ ಇಲ್ಲ,
ನಾನೂ ಇಲ್ಲ, ನೀನೂ ಇಲ್ಲ, ಏನೂ ಇಲ್ಲ,
ಚಿಕ್ಕಯ್ಯ ಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ಎಂದುದಾಗಿ!
~ ಶರಣ ಘಟ್ಟಿವಾಳಯ್ಯನವರು
ಬಸವ ಸಮಿತಿ ಆನ್ಲೈನ್ ಅರಿವಿನ ಮನೆ
ದಿನಾಂಕ :- 30-05-2025
ವಿಷಯ : ಶೂನ್ಯ ಸಂಪಾದನೆ ಅನುಭಾವ ಮಾಲಿಕೆ 96 -ಬಸವೇಶ್ವರರ ಸಂಪಾದನೆ ಮುಂದುವರೆದದು "- ಡಾ. ಶಂಭು ಹೆಗಡಾಳ, ಪ್ರಾಧ್ಯಾಪಕರು, ಸಿ.ಎಸ್.ಐ. ಕಾಮರ್ಸ್ ಕಾಲೇಜು, ಧಾರವಾಡ
ಈ ಶರೀರ ಅಥವಾ ರೂಪ ಸಿಗುವುದಕ್ಕೂ ಮುನ್ನ ತಾಯಿಯ ಗರ್ಭದಲ್ಲಿ ನಾವು ಹೇಗಿದ್ದಿರಬಹುದು ಎಂದು ಯೋಚಿಸಿದ್ದೀರಾ? 🤔👶
ಶರಣ ಬಾಲಸಂಗಯ್ಯನವರ ವಚನ ಹಾಗೂ ಇಂದಿನ ಮೆಡಿಕಲ್ ಸೈನ್ಸ್ (Embryology) ಎರಡನ್ನೂ ಬೆಸೆದು, ನಮ್ಮ ಜೀವದ ಉಗಮವನ್ನು ವಿವರಿಸುವ ಕೌತುಕದ ವಿಡಿಯೋ ಇದು! ✨🧬 🕉️🔬🎥
“Let Me Explain” ~ Presented by Basava Samithi 🙏
29/05/2026
Click here to claim your Sponsored Listing.
Location
Category
Contact the business
Telephone
Website
Address
Basava Bhavan, Sri Basaveswara Circle
Bangalore
560001
Opening Hours
| Monday | 10:30am - 5:30pm |
| Tuesday | 10:30am - 5:30pm |
| Wednesday | 10:30am - 5:30pm |
| Thursday | 10:30am - 5:30pm |
| Friday | 10:30am - 5:30pm |
| Saturday | 10:30am - 5:30pm |
