DYFI Karnataka

DYFI Karnataka

Share

Democratic Youth Federation of India (DYFI) is a youth organization in India. DYFI is a forward looking and progressive youth organization .

DYFI was formed in Ludhiana on 3rd November 1980. Prior to formation, the leaders of KSYF of Kerala, Socialist Valibar organisation of Tamil Nadu, Nav Jawan Sabha of Punjab, DYF of West Bengal etc assembled in Delhi and gave shape to a Preparatory Committee. This committee conducted a conference in Ludhiana from 1st to 3rd November for the formation of DYFI. The constitution and programme of the n

05/06/2026
01/06/2026

ಶಾಲಾ ಪ್ರಾರಂಭ ದಿನದ ಶುಭಾಶಯಗಳು

01/05/2026

ಮೇ 1

ಶೋಷಣಾರಹಿತ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗೋಣ.

ಜಗದ ಶ್ರಮಿಕರಿಗೆಲ್ಲ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಕ್ರಾಂತಿಕಾರಿ ಶುಭಾಶಯಗಳು

ಡಿವೈಎಫ್ಐ ಕರ್ನಾಟಕ

Photos from DYFI Karnataka's post 28/04/2026

ಬಳ್ಳಾರಿ ಜಿಲ್ಲೆಯ ಕುಡುತಿನಿ ಪ್ರದೇಶದ 900 ಎಕರೆ ಕೃಷಿ ಯೋಗ್ಯ ಭೂಮಿಯನ್ನು ಖಾಸಗಿ ಕಂಪೆನಿಯಾದ ಜಿಂದಾಲ್ ಗೆ ಕೊಟ್ಟಿರುವುದನ್ನು ವಿರೋಧಿಸಿ ಪ್ರತಿಭಟಿಸಿದ 300ಕ್ಕೂ ಅಧಿಕ ಭೂ ಸಂತ್ರಸ್ತ ರೈತರನ್ನು ನಿನ್ನೆ ಬಂಧಿಸಿರುವ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಸರ್ವಾದಿಕಾರಿ ಧೋರಣೆಯ ನೀತಿಯನ್ನು ಖಂಡಿಸಿ ಮತ್ತು ಭೂ ಸಂತ್ರಸ್ತರಿಗೆ ಭೂಮಿಯನ್ನು ಮರಳಿಸಲು ಒತ್ತಾಯಿಸಿ ಡಿವೈಎಫ್ಐ ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಇಂದು ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾನ್ಯ ಮುಖ್ಯಮಂತಿಗಳಿಗೆ ಮನವಿ ಸಲ್ಲಿಸಲಾಯಿತು.

Photos from DYFI Karnataka's post 28/04/2026

(ಪ್ರಕಟಣೆಗಾಗಿ)

ದಿನಾಂಕ: 28.04.2026

ಸರಕಾರಿ ಮೆಡಿಕಲ್ ಕಾಲೇಜಿಗಾಗಿ ಶಾಂತಿಯುತವಾಗಿ ಪ್ರತಭಟನೆ ನಡೆಸಿದ ಡಿವೈಎಫ್ಐ ಮುಖಂಡರನ್ನು ಬಂಧಿಸಿದ ಪೋಲಿಸರು: ಡಿವೈಎಫ್ಐ ಖಂಡನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಶೀಘ್ರವೇ ಸ್ಥಾಪಿಸಲು ಒತ್ತಾಯಿಸಿ ಹಾಗೂ ಸರಕಾರಿ ಆಷ್ಪತ್ರೆಗಳ ಪರವಾಗಿ ಮಂಗಳೂರಿನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಡಿವೈಎಫ್ಐ ಸಂಘಟನೆ ನೇತೃತ್ವದಲ್ಲಿ ಯುವಜನರು ಹಾಗೂ ಸಮಾನ ಮನಸ್ಕ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರನ್ನು ರಾಜ್ಯ ಸರಕಾರ ಪೋಲಿಸರ ಮೂಲಕ ಬಂಧಿಸಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

ಸರಕಾರಿ ಆಸ್ಪತ್ರೆಗಳನ್ನು ಖಾಸಗೀ ಆಸ್ಪತ್ರೆಗೆ ವಹಿಸಿಕೊಟ್ಟಿರುವ ಕರಾರು ಒಪ್ಪಂದ ರದ್ದುಗೊಳಿಸಲು, ವೆನ್ಲಾಕನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಿ, ಖಾಸಗೀಕರಣದ ಪಿಪಿಪಿ ಮಾದರಿ ಕೈಬಿಡಲು, ಜಯದೇವ-ಕಿದ್ವಾಯಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲೂ ಸ್ಥಾಪಿಸಲು, ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರತೀ ತಾಲೂಕಿಗೂ ಸಾರ್ವಜನಿಕ ತಾಲೂಕು ಆಸ್ಪತ್ರೆ ಸ್ಥಾಪಿಸುವಂತೆ ಪ್ರಜಾಸತ್ತಾತ್ಮಕ ನೆಲೆಯಲ್ಲಿ ಆಗ್ರಹಿಸಿ ಉಸ್ತುವಾರಿ ಮಂತ್ರಿಗಳ ಕಛೇರಿ ಚಲೋ ನಡೆಸುತ್ತಿದ್ದವರನ್ನು ರಾಜ್ಯ ಸರಕಾರ ಬಂಧಿಸಿರುವುದು ನಾಚಿಕೆಗೇಡು.

ಸಮಾಜವಾದಿ ಹಿನ್ನೆಲೆಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಏನಾದರೂ ಜನಬದ್ಧತೆ ಮತ್ತು ಜನಪರ ಕಾಳಜಿ ಇದ್ದರೆ ಕೂಡಲೇ ಡಿವೈಎಫ್ಐ ಸಂಘಟನೆ ಎತ್ತಿರುವ ಬೇಡಿಕೆಗಳನ್ನು ಈಡೇರಿಸಬೇಕು. ಜನಪರವಾಗಿ ಧ್ವನಿ ಎತ್ತಿದವರನ್ನೇ ಪೋಲಿಸರ ಮೂಲಕ ಬಂಧನ ಮಾಡಿ ಧ್ವನಿ ಹತ್ತಿಕ್ಕುವ ರಾಜ್ಯ ಸರಕಾರದ ನೀತಿಗೆ ಡಿವೈಎಫ್ಐ ಸಂಘಟನೆ ಮಣಿಯುವುದಿಲ್ಲ. ರಾಜ್ಯ ಸರಕಾರ ಖಾಸಗೀ ಆಷ್ಪತ್ರೆಗಳ ಲಾಭಿಗೆ ಮಣಿದು ಸರಕಾರಿ ಆಷ್ಪತ್ರೆಗಳನ್ನು ಬಲಹೀನಗೊಳಿಸುತ್ತಿರುವುದು ನಾಡಿನ ಜನತೆಗೆ ಬಗೆಯುತ್ತಿರುವ ದ್ರೋಹವಾಗಿದೆ. ಆರೋಗ್ಯ ಸೌಲಭ್ಯ ಕೇಳಿದವರನ್ನು ಪೋಲಿಸರನ್ನು ಬಿಟ್ಟು ಬಂಧಿಸಲು ಮುಂದಾಗುತ್ತಿರುವ ಸರಕಾರದ ನಡೆಯನ್ನು ರಾಜ್ಯದ ಜನತೆ ಸಹಿಸುವುದಿಲ್ಲ.

ರಾಜ್ಯ ಸರಕಾರ ಡಿವೈಎಫ್ಐ ಸಂಘಟನೆ ಎತ್ತಿರುವ ಜನರಿಗೆ ಆರೋಗ್ಯ ಅನುಕೂಲ ಕಲ್ಪಿಸುವ ಈ ಪ್ರಮುಖ ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಹಾಗೂ ಬಂಧಿಸಿದ ಡಿವೈಎಫ್ಐ ಮುಖಂಡರನ್ನು ಬೇಷರತ್ ಆಗಿ ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ತೀವ್ರತರೆನಾದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಡಿವೈಎಫ್ಐ ರಾಜ್ಯ ಸಮಿತಿಯು ಎಚ್ಚರಿಸುತ್ತದೆ.

ವಂದನೆಗಳೊಂದಿಗೆ,

ಲವಿತ್ರ ವಸ್ತ್ರದ ಬಸವರಾಜ ಪೂಜಾರ
ಅಧ್ಯಕ್ಷರು ಕಾರ್ಯದರ್ಶಿ

28/04/2026

ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು, ಜಯದೇವ , ಕಿದ್ವಾಯಿ ಆಸ್ಪತ್ರೆ, ಪ್ರತೀ ತಾಲೂಕಿಗೆ ಸಮುದಾಯ ಆಸ್ಪತ್ರೆ ಕೇಳಿದಕ್ಕೆ DYFI ಕಾರ್ಯಕರ್ತರ ಬಂಧನ

#ಮಂಗಳೂರು

Photos from DYFI Karnataka's post 28/04/2026

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಶೀಘ್ರವೇ ಸ್ಥಾಪಿಸಲು ಒತ್ತಾಯಿಸಿ ಹಾಗೂ ಸರಕಾರಿ ಆಷ್ಪತ್ರೆಗಳ ಪರವಾಗಿ ಶಾಂತಿಯುತ ಹೋರಾಟ ಮಾಡುತ್ತಿದ್ದ ಡಿವೈಎಫ್ಐ ಸಂಘಟನೆಯ ನಾಯಕರು ಹಾಗೂ ಕಾರ್ಯಕರ್ತರನ್ನು ಬಂಧಿಸಿದ ರಾಜ್ಯ ಸರಕಾರಕ್ಕೆ ಧಿಕ್ಕಾರ!

ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಏನು ನಡೆಯುತ್ತಿದೆ ನಿಮ್ಮ ಆಡಳಿತಾವಧಿಯಲ್ಲಿ? ಖಾಸಗೀ ಆಷ್ಪತ್ರೆಗಳ ಲಾಭಿಗೆ ಮಣಿದಿರುವ ನೀವು, ಸರಕಾರಿ ಆಷ್ಪತ್ರೆ ಆರೋಗ್ಯ ಸೌಲಭ್ಯ ಕೇಳಿದವರನ್ನು ಪೋಲಿಸರನ್ನು ಬಿಟ್ಟು ಬಂಧಿಸಲು ಮುಂದಾಗುತ್ತಿರುವ ನಿಮ್ಮ ಆಡಳಿತ ನೀತಿಯನ್ನು ಜನತೆ ಸಹಿಸುವುದಿಲ್ಲ.

ರಾಜ್ಯ ಸರಕಾರ ಡಿವೈಎಫ್ಐ ಸಂಘಟನೆ ಎತ್ತಿರುವ ಜನರಿಗೆ ಆರೋಗ್ಯ ಅನುಕೂಲ ಕಲ್ಪಿಸುವ ಬೇಡಿಕೆಗಳನ್ನು ಕೂಡಲೇ ಈಡೇರಿಸಲೇಬೇಕು ಹಾಗೂ ಬಂಧಿಸಿದ ಡಿವೈಎಫ್ಐ ಮುಖಂಡರನ್ನು ಬೇಷರತ್ ಆಗಿ ಬಿಡುಗಡೆ ಮಾಡಬೇಕು.

~ ಬಸವರಾಜ ಪೂಜಾರ.
DYFI ರಾಜ್ಯ ಕಾರ್ಯದರ್ಶಿ

09/04/2026

ವಿದ್ಯಾರ್ಥಿಯಾಗಿದ್ದಾಗಲೇ ಭೂ ಮಾಲೀಕರ ವಿರುದ್ಧದ ಹೋರಾಟದಲ್ಲಿ ಆ್ಯಸಿಡ್ ಧಾಳಿಗೆ ಒಳಗಾಗಿ ಬದುಕುಳಿದಿದ್ದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಣಿ ಗ್ರಾಮದ ಕಾಂ.ವೆಂಕಟೇಶ ಕೋಣಿ (74) ರವರು ಕರಾವಳಿ ಕೃಷಿ ಕೂಲಿಕಾರರ ಒಂದು ದಿಟ್ಟ ಧ್ವನಿ.

ಕಳೆದ ಎರಡು ವರ್ಷಗಳಿಂದ ತೀವ್ರ ಸ್ವರೂಪದ ಅನಾರೋಗ್ಯದಿಂದ ಬಳಲುತ್ತಿದ್ದು ಇಂದು ನಮ್ಮನ್ನು ಅಗಲಿದ್ದಾರೆ. ಈ ಮೂಲಕ ಒಬ್ಬ ಹಿರಿಯ ಕಮ್ಯುನಿಸ್ಟ್ ನಾಯಕರು ಹಾಗೂ ಕೃಷಿ ಕೂಲಿಕಾರರ ಬಹಳ ದೊಡ್ಡ ಗಟ್ಟಿ ಧ್ವನಿಯನ್ನು ವಿಶೇಷವಾಗಿ ಕರಾವಳಿ ಹಾಗೂ ಕರ್ನಾಟಕ ರಾಜ್ಯ ಕಳೆದುಕೊಂಡಂತಾಗಿದೆ.

ಕಾಂ. ವೆಂಕಟೇಶ ಕೋಣಿ ರವರ ಇಚ್ಛೆಯಂತೆ ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದೇಹ ದಾನ ಮಾಡಲಾಗುತ್ತಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಸಮಿತಿಯ ಕೆಂಪು ವಂದನೆಗಳು 🌹✊😥

23/03/2026

ಮಾರ್ಚ್ 23 ಭಗತ್ ಸಿಂಗ್, ರಾಜ್ ಗುರು, ಸುಖದೇವ್ ಹುತಾತ್ಮ ದಿನ

14/02/2026

ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು

Want your business to be the top-listed Government Service in Bangalore?

Click here to claim your Sponsored Listing.

Location

Address


No: 12, 2nd Floor, 18th Cross, Sampangiramanagara
Bangalore
560027