27/08/2022
#ಬಿಲ್ಕಿಸ್_ಬಾನೋ
ದುಡಿಯೋರ ಹೊರಾಟ (Dudiyora Horaata) Workers' Struggle and Socialism.in (English Supplement) which strives for
'Youth-Workers Unity and Socialism'.
ದುಡಿಯೋರ ಹೊರಾಟ (Dudiyora Horaata) Workers' Struggle is a periodical/publication involved in the fight against the exploitative system of Capitalism and Landlord-ism . Started in the year 1989 (May month) during the struggle of the Southern Roadways Workers (Head Loaders) of the TVS group of companies, has chugged along, in the most difficult circumstances. This publication of New Socialist Alternat
27/08/2022
#ಬಿಲ್ಕಿಸ್_ಬಾನೋ
09/03/2022
ಕರಾಳ ಕೃಷಿ ಕಾಯ್ದೆಗಳು ವಾಪಸ್ಸಾದ ನಂತರ ನಡೆಯುತ್ತಿರುವ ಪಂಚರಾಜ್ಯಗಳ ಚುನಾವಣೆ-2022
ಕೊರಾನಾದ ಒಮೈಕ್ರಾನ್ ತಳಿಯ ಆತಂಕದ ನಡುವೆಯೇ ದೇಶದಲ್ಲಿ ಪಂಚರಾಜ್ಯಗಳ ಚುನಾವಣೆ ಪ್ರಕಟಗೊಂಡಿತ್ತು. ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಮತ್ತು ಪಂಜಾಬ್ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆ ದೇಶದ ಗಮನಸೆಳೆದಿದೆ. ಅದರಲ್ಲೂ ಗಾತ್ರದಲ್ಲಿ ಅತಿದೊಡ್ಡ ರಾಜ್ಯವೆನ್ನಿಸಿರುವ ಹಾಗೂ ದೇಶದ ಆಗುಹೋಗುಗಳಿಗೆ ತಿರುವು ನೀಡಬಲ್ಲ ರಾಜ್ಯವೆಂದು ಪ್ರಖ್ಯಾತಿಗಳಿಸಿರುವ ಉತ್ತರಪ್ರದೇಶ ಚುನಾವಣೆಯ ಫಲಿತಾಂಶದ ಮೇಲೆ ಎಲ್ಲರ ಕಣ್ಣುನೆಟ್ಟಿದೆ.
ಚುನಾವಣೆಗಳು ಸಮೀಪವಿರುವಾಗಲೇ ಪ್ರಧಾನಿ ಮೋದಿ ಕರಾಳ ಕೃಷಿ ಕಾಯ್ದೆಗಳ ವಾಪಸ್ಸು ತೆಗೆದುಕೊಳ್ಳುತ್ತಿದ್ದೇನೆಂದು ಘೋಷಣೆ ಮಾಡಿದ್ದು ಅಚ್ಚರಿಯೇನಲ್ಲ. ಪಂಜಾಬ್, ಹರಿಯಾಣ, ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದ ರಾಜ್ಯಗಳಲ್ಲಿ ಕಳೆದ ಒಂದೂವರೆ ವರುಷದಿಂದಲೂ ಕೇಂದ್ರದ ಮೋದಿ ಸರ್ಕಾರದ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ರೈತಾಪಿ, ಕೃಷಿ ಕಾರ್ಮಿಕರು ನಿರಂತರ ಹೋರಾಟ ನಡೆಸಿದರು. ಚಳಿಗಾಳಿ ಎನ್ನದೇ, ಮೋದಿ ಸರ್ಕಾರದ ಬಲಪ್ರಯೋಗ ದೌರ್ಜನ್ಯಗಳಿಗೆ ಎದೆಗುಂದದೇ ಸೆಟ್ಟೆದು ನಿಂತರು. ೭೦೦ಕ್ಕೂ ಹೆಚ್ಚು ರೈತರು ಹುತಾತ್ಮರಾದರು. ಹೆಚ್ಚುತ್ತಲೇ ಇದ್ದ ರೈತರ ಆಕ್ರೋಶ ಮತ್ತು ಚುನಾವಣೆಯ ದೃಷ್ಟಿಯಿಂದ ಯಾವುದೇ ಚರ್ಚೆಯಿಲ್ಲದೇ ಮೋದಿ ಕೃಷಿ ಕಾಯ್ದೆಗಳ ವಾಪಸ್ಸು ತೆಗೆದು ಕೊಂಡರು.
ಉತ್ತರಪ್ರದೇಶ:
ಬಿಜೆಪಿ: ಚುನಾವಣೆ ಘೋಷಣೆಯಾಗುವ ಮೊದಲೇ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಮತ್ತೇ ಅಧಿಕಾರಕ್ಕೆ ಬರುತ್ತದೆಂದು ಗೋದಿ ಮಾಧ‍್ಯಮಗಳು ಉಯಿಲೆಬ್ಬಿಸಿದವು. ಆದರೆ ದಿನ ಕಳೆದಂತೆ ಮೋದಿ ಹಾಗೂ ಯೋಗಿ ಆದಿತ್ಯನಾಥ್ ರ ಬಲಪಂಥೀಯ-ಕೋಮುವಾದಿ ಬಿಜೆಪಿಗೆ ಜಯ ಅಷ್ಟು ಸುಲಭವಲ್ಲವೆಂಬ ಕುರುಹುಗಳು ಕಾಣಿಸತೊಡಗಿವೆ. ಪಶ್ಚಿಮ-ಉತ್ತರಪ್ರದೇಶದ ಭಾಗಗಳಲ್ಲಿ ಮುಡಗಟ್ಟಿರುವ ರೈತರ ಆಕ್ರೋಶ, 201೪ರ ಲೋಕಸಭಾ ಚುನಾವಣೆಯ ಕೆಲವೇ ತಿಂಗಳುಗಳಲ್ಲಿ ಸಂಘಪರಿವಾರದ ಕೋಮು ದಳ್ಳುರಿಗೆ ತುತ್ತಾಗಿದ್ದ ಮುಜಫರ್ ನಗರದ ಹಿಂದೂ-ಮುಸ್ಲೀಂ ಬಾಂಧವರು ʼರೈತ ಪಂಚಾಯತ್ʼಗಳಲ್ಲಿ ಒಂದಾಗಿದ್ದು ಕೇಸರಿ ಪಾಳಯದಲ್ಲಿ ಸ್ವಲ್ಪಮಟ್ಟಿಗೆ ನಡುಕು ಉಂಟುಮಾಡಿದೆ.
ಕೇಂದ್ರದ ಮೋದಿ ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ವಿಫಲಗೊಂಡ ಪರಿಣಾಮ ಸುಮಾರು ೪7ಲಕ್ಷ ಜನರು ಭಾರತದಲ್ಲಿ ಹಸುನೀಗಿದರು. ಅದರಲ್ಲೂ ಉತ್ತರಪ್ರದೇಶದ ಗಂಗಾ ನದಿಯ ತೀರದ ಉದ್ದಕ್ಕೂ ಕಾಣುತ್ತಿದ್ದ ಹೆಣದ ರಾಶಿಗಳು ವಿಶ್ವದ ಗಮನ ಸೆಳೆದಿತ್ತು. ಕಣ್ಣ ಮುಂದೆಯೇ ಆತ್ಮೀಯರು ಆಕ್ಸಿಜನ್ ಸಿಗದೇ ಪ್ರಾಣವನ್ನು ಕಳೆದು ಕೊಳ್ಳುತ್ತಿದ್ದ ದೃಶ್ಯಗಳು ಇಂದಿಗೂ ದುಸ್ವಪ್ನವಾಗಿ ಕಾಡುತ್ತಿದ್ದು ಬಿಜೆಪಿಯ ಯೋಗಿ ಆದಿತ್ಯನಾಥರ ಸರ್ಕಾರದ ವಿರುದ್ದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೋದಿ-ಯೋಗಿ ಸರ್ಕಾರಗಳ ಜನವಿರೋಧಿ ನೀತಿಗಳು ವಿರುದ್ದ ಜನರು ರೋಸಿ ಹೋಗಿರುವುದು ದಿಟವಾಗಿ ಕಾಣುತ್ತಿದೆ. ಬೆಲೆ ಏರಿಕೆ, ನಿರುದ್ಯೋಗ, ವಸತಿಹೀನತೆ, ರೋಗರುಜ್ಜಿನಗಳ ನಿರ್ಮೂಲನೆಯಲ್ಲಿ ವಿಫಲಗೊಂಡಿರುವ ಈ ಸರ್ಕಾರಗಳು ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತಿವೆ.
ಗೋ-ಹತ್ಯೆ ನಿಷೇಧ ನೀತಿ ಮತ್ತು ಅದರಿಂದ ಉಂಟಾಗಿರುವ ಸಮಸ್ಯೆಗಳಿಂದ ರೈತರು ರೋಸಿ ಹೋಗಿದ್ದಾರೆ. ಕಳೆದ ೫ ವರುಷಗಳಿಂದಳೂ ಬೀಡಾಡಿ ದನಗಳಿಂದ ರೈತರು ಬಹಳ ನಷ್ಟ ಅನುಭವಿಸಿದ್ದಾರೆ. ಚರ್ಮೋದ್ಯಮ ಸ್ಥಗಿತದಿಂದ ಲಕ್ಷಾಂತರ ಜನರು ಕೆಲಸಕಳೆದುಕೊಂಡು ಬೀದಿಪಾಲಾಗಿದ್ದಾರೆ. ಕೊರೊನಾ ಸಾಂಕ್ರಾಮಿಕ ಹಾಗೂ ಸರ್ಕಾರದ ನಿರ್ವಹಣೆ ವೈಫಲ್ಯಗಳಿಂದಾಗಿ ಕಳೆದ ವರ್ಷದಲ್ಲಿಯೇ ೧೮ ದಶಲಕ್ಷಕ್ಕೂ ಹೆಚ್ಚು ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ನಿರುದ್ಯೋಗವು ದೇಶದಲ್ಲಿ ೪೫ ವರ್ಷಗಳ ಗರಿಷ್ಠ ಮಟ್ಟದಲ್ಲಿದೆ.
ಕಳೆದ ಅಕ್ಟೋಬರ್ ನಲ್ಲಿ ಮೋದಿ ಸರ್ಕಾರದ ಕರಾಳ ಕೃಷಿ ಕಾಯ್ದೆಯ ರದ್ದತಿ ಹಾಗೂ ರೈತರ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆಯ((MSP) ಖಾತರಿಗಾಗಿ ಆಗ್ರಹಿಸುತ್ತಿದ್ದ ರೈತರ ಮೇಲೆ ಜೀಪು ಹರಿಸಿ ೪ ರೈತರನ್ನು ಕೊಂದ ಆಶಿಶ್ ಮಿಶ್ರಾ ಇಂದು ರಾಜಾರೋಷವಾಗಿ ತಿರುಗುತ್ತಿರುವುದು ಹಾಗೂ ಆರೋಪಿಯ ತಂದೆ ಕೇಂದ್ರ ಸಚಿವ ಅಜಯ್ ಮಿಶ್ರಾರವರ ಬೆನ್ನಿಗೆ ಮೋದಿಯವರು ನಿಂತಿರುವುದು ನಾಚಿಕೆಗೇಡಿನ ಸಂಗತಿ ಎಂದು ರೈತರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಐದು ವರುಷಗಳಲ್ಲಿ ನಿಲ್ಲದ ದಲಿತರ ಮೇಲಿನ ದೌರ್ಜನ್ಯಗಳು, ಮಹಿಳೆಯರ ಮೇಲಿನ ಅತ್ಯಾಚಾರಗಳು, ಅಲ್ಪಸಂಖ್ಯಾತರ ಮೇಲಿನ ಧಾಳಿಗಳು ಎಗ್ಗಿಲ್ಲದೇ ನಡೆಯುತ್ತಿದೆ. ಜನಸಾಮಾನ್ಯರ ಜೀವನವನ್ನು ಮಟ್ಟವನ್ನು ಅಧೋಗತಿ ಗಿಳಿಸಿದ ಮೋದಿ-ಯೋಗಿ ಸರ್ಕಾರಗಳು ಕೋಮು ದ್ವೇಷ ಹರಡಲು ನಿರಂತರವಾಗಿ ತೊಡಗಿವೆ.
ಮೋದಿ-ಯೋಗಿ ಸರ್ಕಾರ ತನ್ನೆಲ್ಲಾ ಶಕ್ತಿಗಳನ್ನು ಬಳಸಿ ನಿಜಾಂಶಗಳನ್ನು ಮರೆಮಾಚಿದರೂ ವಾಸ್ತವಾಂಶಗಳು ಬೇರೆಯೇ ಇದೆ. ಚುನಾವಣೆಯ ಘೋಷಣೆಯ ಮೊದಲು ೩೦೦ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸುತ್ತೇವೆಂದು ಬೀಗುತ್ತಿದ್ದವರು ಚುನಾವಣೆಯ ಹಂತ ಹಂತಗಳು ಮುಗಿಯುತ್ತಿದ್ದಂತೆ ಅವರ ವರಸೆಗಳು ಬದಲಾಗುತ್ತಿವೆ. ಜಯ ಅಷ್ಟು ಸುಲಭವಲ್ಲವೆಂದು ಸೂಚನೆ ಅರಿತ ಬಿಜೆಪಿ ನಾಯಕರುಗಳು ತನ್ನೆಲ್ಲಾ ಶಕ್ತಿಗಳನ್ನು ಬಳಸಿ ಅಧಿಕಾರ ದಕ್ಕಿಸಿ ಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.
ಸಮಾಜವಾದಿ ಪಕ್ಷ(ಎಸ್.ಪಿ):
ಪ್ರಮುಖ ಎದುರಾಳಿಯೆಂದೆ ಕರೆಸಿಕೊಳ್ಳುತ್ತಿರುವ ʼಸಮಾಜವಾದಿʼ ಬಿರುದಾಂಕಿತ ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷದ ಆಡಳಿತವನ್ನೂ ಉತ್ತರ ಪ್ರದೇಶದ ಜನ ಅನುಭವಿಸಿದ್ದಾರೆ. 2012-17ರ ಅವಧಿಯಲ್ಲಿ ಅಖಿಲೇಶ್ ಯಾದವ್ ರ ಆಡಳಿತ ವೈಖರಿಯನ್ನು ಜನ ನೋಡಿದ್ದಾರೆ. ಹೆಸರು ʼಸಮಾಜವಾದಿʼ ಎಂದು ಇಟ್ಟುಕೊಂಡು ಬಂಡವಾಳಿಶಾಹಿ-ಜಮೀನ್ದಾರಿ ಹಿತಾಸಕ್ತಿಗಳನ್ನು ಅಳವಡಿಸಿಕೊಂಡಿರುವ ಈ ಪಕ್ಷ ಇತರರಿಗಿಂತ ಭಿನ್ನವೇನಲ್ಲ. ಕಬ್ಬು ಬೆಳೆದ ರೈತರ ಪರ ನಿಲ್ಲದೇ ಬಾಕಿ ಹಣ ಉಳಿಸಿಕೊಂಡಿರುವ ಮಾಲೀಕರ ಬೆನ್ನಿಗೆ ನಿಂತ ಅಖೀಲೇಶ್ ರವರು ರೂ.2000 ಕೋಟಿಯಷ್ಟು ಸಾಲ ಮನ್ನಾ ಮಾಡುವುದರ ಮೂಲಕ ತಮ್ಮ ಪಕ್ಷ ʼಉಳ್ಳವರ ಪರʼ ಎಂಬುದನ್ನು ಸಾಬೀತು ಪಡಿಸಿದ್ದರು. ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿದ್ದ ಜಾತಿ ದೌರ್ಜನ್ಯಗಳು, ಮುಜಫರ್ ನಗರ ಕೋಮು ದಂಗೆಯನ್ನು ತಡೆಯುವಲ್ಲಿ ವಿಫಲಗೊಂಡ ಅಖಿಲೇಶ್ ನೇತೃತ್ವದ ಸರ್ಕಾರ ಜನಸಾಮಾನ್ಯರ ವಿಶ್ವಾಸ ಕಳೆದು ಕೊಂಡಿದ್ದು ಇತಿಹಾಸ.
ಬಹುಜನ ಸಮಾಜ ಪಕ್ಷ:
ಅವಕಾಶ ರಾಜಕಾರಣಕ್ಕೆ ಕುಖ್ಯಾತಿ ಪಡೆದಿರುವ ʼದಲಿತರ ಪಕ್ಷʼವೆಂದು ಗುರುತಿಕೊಂಡಿರುವ ಬಿಎಸ್.ಪಿ., ಚುನಾವಣೆಯಲ್ಲಿ ತಾವು ಸಂಪೂರ್ಣ ಬಹುಮತ ಪಡೆದು ಸರ್ಕಾರ ರಚಿಸುತ್ತೇವೆಂದು ಹೇಳುವ ಪರಿಸ್ಥಿತಿ ಇಲ್ಲ. ತನ್ನ ಎಡಬಿಡಂಗಿತನದ ನೀತಿಗಳಿಂದಾಗಿ ಉತ್ತರಪ್ರದೇಶದ ಜನರ ವಿಶ್ವಾಸವನ್ನು ಕಳೆದುಕೊಂಡಿದ್ದರೂ ಇನ್ನೂ ಅಲ್ಪಸ್ವಲ್ಪ ಉಳಿದಿರುವ ತನ್ನ ಮೀಸಲು ಮತಕ್ಷೇತ್ರಗಳ ಮೇಲೆ ಅವಲಂಬಿಸಿದೆ. ಅತಂತ್ರ ವಿಧಾನಸಭಾ ಫಲಿತಾಂಶ ಬಂದಲ್ಲಿ ಚುನಾವಣೋತ್ತರ ಮೈತಿಯ ಕನಸ್ಸು ಕಾಣುತ್ತಿದೆ.
ಕಾಂಗ್ರೇಸ್:
೬೦ ವರುಷ ದೇಶವನ್ನ ಆಳಿದ ಪಕ್ಷವೆಂದೇ ಗುರುತಿಕೊಂಡಿರುವ ಕಾಂಗ್ರೇಸ್ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಎಣಗಾಡುತ್ತಿದೆ. ಬಂಡವಾಳಿಗರ-ಜಮೀನ್ದಾರಿ ಹಿತಾಸಕ್ತಿಗಳನ್ನು ಕಾಪಾಡಲೆಂದೆ ಆಡಳಿತ ನಡೆಸಿದ ಪಕ್ಷ ಇಂದು ದೇಶದ್ಯಾಂತ ದುಸ್ಥಿತಿಗೆ ಇಳಿದಿದೆ. ಪ್ರಿಯಾಂಕಾ ಗಾಂಧಿ ವಾದ್ರಾರ ವರ್ಚಸ್ಸು ಕೈ ಹಿಡಿಬಹುದೆಂಬ ಭ್ರಮೆಯಲ್ಲಿರುವ ಕಾಂಗ್ರೇಸ್ ಎರಡಂಕಿಯ ಸೀಟ್ ಗಳನ್ನು ಗಳಿಸುತ್ತೇವೆಂದು ಹೇಳುವ ಪರಿಸ್ಥಿತಿಯಲ್ಲಿಲ.
ಪರ್ಯಾಯ:
ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶ ಏನೇ ಬಂದರೂ ಮಾರನೇಯ ದಿನವೇ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಆಗುವುದು ದಿಟವಾಗಿದೆ. ಈಗಾಗಲೇ ಬೆಂದು ಬೆಂಡಾಗಿರುವ ದುಡಿಯುವ ಜನರ ಮೇಲೆ ಬರೆ ಎರೆಯಲ್ಲು ಕೇಂದ್ರದ ಮೋದಿ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಟೊಂಕ ಕಟ್ಟಿ ನಿಂತಿವೆ.
ಹೆಚ್ಚುತ್ತಿರುವ ನಿರುದ್ಯೋಗ, ಉದ್ಯೋಗ ಕಡಿತ, ಬರಗೆಟ್ಟ ಕೂಲಿಗಳು, ಹೆಚ್ಚಿನ ಅವಧಿಗಳ ದುಡಿತ, ಗಗನಕ್ಕೇರುತ್ತಿರುವ ಅಗತ್ಯವಸ್ತುಗಳ ಬೆಲೆ ಏರಿಕೆಗಳ ಸಮಸ್ಯೆಗಳನ್ನು ದುಡಿಯುವ ವರ್ಗದ ಎದುರಿಸುತ್ತಿದೆ. ದುಡಿಯುವ ವರ್ಗದ ಪಕ್ಷಗಳೆಂದು ಕರೆಸಿಕೊಳ್ಳುವ ಎಡಪಕ್ಷಗಳ ನಿಷ್ಕ್ರೀಯತೆ ಮತ್ತು ನಾಯಕತ್ವ ಎಡಬಿಡಂಗಿತನದಿಂದಾಗಿ ದುಡಿಯುವ ವರ್ಗದ ಜನತೆಗೆ ಆಯ್ಕೇ ಇಲ್ಲದಂತಾಗಿದೆ. ಬಂಡವಾಳಶಾಹಿ- ಜಮೀನ್ದಾರಿ ವ್ಯವಸ್ಥೆಯ ನಿರ್ಮೂಲನೆಗಾಗಿ ನೈಜ ಸಮಾಜವಾದಿ ಪರ್ಯಾಯಕ್ಕಾಗಿ ಬೃಹತ್ ಹೊಸ ಕಾರ್ಮಿಕರ ಪಕ್ಷ ನಿರ್ಮಾಣದ ತುರ್ತು ಅವಶ್ಯವಿದೆ.
ಚಿತ್ರ ಕೃಪೆ: ಡೆಕ್ಕನ್ ಹೆರಾಲ್ಡ್
24/12/2021
ಯಾವುದೇ ಧರ್ಮವನ್ನು ಆಚರಿಸುವ ಸ್ವಾತಂತ್ರ್ಯಕ್ಕಾಗಿ.
ಮತಾಂತರ ಅಥವಾ ಧರ್ಮವನ್ನು ನಿರಾಕರಿಸುವ ಹಕ್ಕು ಬೇಕು.
ರಾಜ್ಯದ ಕೋಮುವಾದಿ ಬಿಜೆಪಿ ಸರ್ಕಾರ ಜಾರಿಗೆ ತರಲು ಹೊರಟ್ಟಿರುವ “ಮತಾಂತರ ನಿಷೇಧ ಕಾಯಿದೆ” ವಿರುದ್ದ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾ ರ್ಯಾಲಿಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ಯುವಜನತೆ, ಮಹಿಳೆಯರು, ಧಾರ್ಮಿಕ ಅಲ್ಪ ಸಂಖ್ಯಾತರು ಒಕ್ಕೊರಲಿನಿಂದ ಸಂವಿಧಾನ ವಿರೋಧಿಯಾದ ಮತಾಂತರ ನಿಷೇಧ ಕಾಯಿದೆ ವಾಪಸ್ಸಿಗೆ ಆಗ್ರಹಿಸಿದರು.
ಆರ್.ಎಸ್.ಎಸ್-ಬಿಜೆಪಿಯ ಕೋಮುವಾದಿ ಅಜೆಂಡಾಗಳು ಕಾಯಿದೆ ಕಾನೂನುಗಳಾಗುತ್ತಿದ್ದು ಧಾರ್ಮಿಕ ಅಲ್ಪ ಸಂಖ್ಯಾತರ ಹಕ್ಕುಗಳ ಮೇಲೆ ಧಾಳಿಯಿಡುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ವರುಷ ಮುಸ್ಲಿಂರನ್ನೇ ಗುರಿಯಾಗಿಸಿಕೊಂಡು CAA/NRC/NPR ಮಸೂದೆಗಳನ್ನು ಜಾರಿಗೆ ತರಲು ಹೊರಟ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರ ದೇಶಾದ್ಯಂತ ಭಾರೀ ಪ್ರತಿಭಟನೆಯನ್ನು ಎದುರಿಸಬೇಕಾಯಿತು. ಅದರ ಮುಂದುವರೆದ ಭಾಗವಾಗಿ ಮತಾಂತರ ನಿಷೇಧ ಕಾಯಿದೆ ಹೆಸರಿನಲ್ಲಿ ಕ್ರೈಸ್ತರು, ಮುಸ್ಲಿಂ ಇನ್ನಿತರ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಸಂರಕ್ಷಣೆಯ ಹೆಸರಿನಲ್ಲಿ ‘ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ-2021ʼನ್ನು ಜಾರಿ ಮಾಡುತ್ತಿರುವ ಬಿಜೆಪಿ ಸರ್ಕಾರ, ಯಾವುದೇ ಧರ್ಮವನ್ನು ಆಚರಿಸುವ ಸ್ವಾತಂತ್ರ್ಯದ ಆಯ್ಕೆಯ ಹಕ್ಕು, ಮತಾಂತರ ಅಥವಾ ಧರ್ಮಗಳನ್ನು ನಿರಾಕರಿಸುವ ಹಕ್ಕುಗಳನ್ನೇ ಮೊಟಕುಗೊಳಿಸುವ ಪಿತೂರಿ ಈ ಕಾಯಿದೆಯಲ್ಲಿ ಅಡಗಿದೆ ಎಂದು ಕಿಡಿಕಾರಿದರು. ಅಮಾನವೀಯ, ಸಂವಿಧಾನಕವಲ್ಲದ, ಅನಾಗರಿಕವಾದ ಈ ಮಸೂದೆಯನ್ನು ಈ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಸರ್ಕಾರದ ಅಧಿಕೃತ ಅಂಕಿ ಅಂಶಗಳೇ ದೇಶದಲ್ಲಿ ಬಲವಂತದ/ಒತ್ತಡದ/ಆಮಿಷದ ಮತಾಂತರಗಳೂ ನಡೆಯುತ್ತಿಲ್ಲ ಎಂದು ವರದಿ ನೀಡಿದ್ದರೂ ಸಹ, ಸಂಘ ಪರಿವಾರದ ಸುಳ್ಳು-ಅಪಪ್ರಚಾರಗಳ ಕಾರ್ಯಸೂಚಿಗಳು ಕಾನೂನುಗಳಾಗುತ್ತಿರುವ ಅಪಾಯಕಾರಿ ಬೆಳೆವಣಿಗೆಯಾಗಿದೆ ಎಂದು ತಿಳಿಸಿದರು.
ಸಾಮೂಹಿಕ ಮತಾಂತರ ನಡೆಯುತ್ತಿದೆಯೆಂದು, ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹುಯಿಲು ಎಬ್ಬಿಸಿ ಕೋಮುವಾದಿ ಶಕ್ತಿಗಳು ಇಂದು ಧಾರ್ಮಿಕ ಅಲ್ಪಸಂಖ್ಯಾತರ, ದಲಿತರ ಮೇಲೆ ಹಲ್ಲೆ-ಧಾಳಿಗಳನ್ನು ನಡೆಸುತ್ತಿರುವುದು ಖಂಡನೀಯ. ಕಳೆದ ೬ ತಿಂಗಳುಗಳಿಂದ 18 ಕಡೆ ಚರ್ಚ್ ಗಳ ಮೇಲೆ ಸಂಘ ಪರಿವಾರದ ಪುಂಡರು ಧಾಳಿ ನಡೆಸಿದ್ದಾರೆ. ಒರಿಸ್ಸಾದ ಕಂದಮಾಲ್ ಹತ್ಯಾಕಾಂಡ, ಉತ್ತರಪ್ರದೇಶದ ಮುಜಫರ್ ನಗರ ಗಲಭೆಗಳಲ್ಲಿ ನೊಂದ ಸಾವಿರಾರು ಸಂತ್ರಸ್ತರು ಇಂದಿಗೂ ಭಯದ ನೆರಳಿನಲ್ಲೇ ವಾಸಿಸುತ್ತಿದ್ದು, ಅವರಿಗೆ ನ್ಯಾಯವೂ ಮರೀಚಿಕೆಯಾಗಿರುವುದು ನಾಚಿಕೆಗೇಡು ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
New Socialist Alternative ನ ಸದಸ್ಯರು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡಿ ಕಾರ್ಮಿಕರ ಒಗ್ಗಟ್ಟಿಗೆ ಮಾರಕವಾಗಿರುವ ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸುವ ಸಲುವಾಗಿ ಬೃಹತ್ ಮಟ್ಟದಲ್ಲಿ ದುಡಿಯುವ ವರ್ಗದ ನೇತೃತ್ವದ ಹೋರಾಟದ ಅವಶ್ಯಕತೆ ಇಂದು ಅನಿವಾರ್ಯವಾಗಿದೆ ಎಂದು ತಿಳಿಸಿದರು.
#ಕರಾಳ_ಕಾಯಿದೆ #ಮತಾಂತರ_ನಿಷೇಧ_ಕಾಯಿದೆ
21/12/2021
08/11/2021
#ನೋಟುರದ್ಧತಿ #ದುರಂತ #ಮೋದಿನಾಮಿಕ್ಸ್ #ವೈಫಲ್ಯ #ಪ್ರಖ್ಯಾತದರೋಡೆದಿನ #8ನವೆಂಬರ್2016
08/11/2021
#ನೋಟುರದ್ಧತಿ #ದುರಂತ #ಮೋದಿನಾಮಿಕ್ಸ್ #ವೈಫಲ್ಯ
08/11/2021
#ನೋಟುರದ್ಧತಿ #ದುರಂತ
23/10/2021
ರೈತರ 'ಮಾಡು ಅಥವಾ ಮಡಿ'ಹೋರಾಟಕ್ಕೆ
ದೇಶಾದ್ಯಂತ ಅಭೂತಪೂರ್ವ ಬೆಂಬಲ
27, ಸೆಪ್ಟೆಂಬರ್ 2021ರಂದು ಸಂಯುಕ್ತ ಕಿಸಾನ್ ಮೋರ್ಚಾದ ʼಭಾರತ್ ಬಂದ್ʼ ಕರೆಗೆ ಒಗೊಟ್ಟು ದೇಶಾದ್ಯಂತ ಪ್ರತಿಭಟನೆ, ರ್ಯಾಲಿಗಳು ನಡೆದವು. ಬಿಜೆಪಿ/ಮೋದಿ ನೇತೃತ್ವದ ಸರ್ಕಾರದ ಕರಾಳ ಕೃಷಿ ಕಾಯ್ದೆಗಳಿಗೆ ರಾಷ್ಟ್ರಪತಿಗಳು ಒಪ್ಪಿಗೆ ಸೂಚಿಸಿದ ಇಂದಿಗೆ ವರುಷ ತುಂಬಿದನ್ನು ಖಂಡಿಸಿ ನಡೆದ ಈ ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ಕೆಲವು ನಗರಗಳಲ್ಲಿ ರಸ್ತೆ ತಡೆ, ರೈಲು ತಡೆಗಳು ಹಾಗೂ ಕೆಲವು ರಾಜ್ಯಗಳಲ್ಲಿ ಮಾರುಕಟ್ಟೆಗಳು, ಅಂಗಡಿ ಮುಂಗಟ್ಟುಗಳು, ಕಛೇರಿಗಳ ಮುಚ್ಚಿದವು.
ಕೇಂದ್ರದ ಮೋದಿ ಸರ್ಕಾರದ ಕರಾಳ ಕೃಷಿ ಕಾಯ್ದೆಗಳ ವಿರುದ್ದ ದೇಶಾದ್ಯಂತ 10 ತಿಂಗಳುಗಳಿಂದಲೂ ಪ್ರತಿಭಟನೆಗಳು ನಡೆಯುತ್ತಲೇ ಇದೆ. ದೆಹಲಿ, ಹರಿಯಾಣ, ಉತ್ತರಪ್ರದೇಶ, ಪಂಜಾಬ್ , ಮಹಾರಾಷ್ಟ್ರ ಹಾಗೂ ಇನ್ನಿತರ ರಾಜ್ಯಗಳಲ್ಲಿ ಸಾವಿರಾರು ರೈತರು ಚಳಿ, ಮಳೆ, ಗಾಳಿ, ಕೊರೊನಾ ವೈರಾಣುವನ್ನು ಲೆಕ್ಕಿಸದೇ ನಿರಂತವಾಗಿ ಕರಾಳ ಕೃಷಿ ಕಾಯ್ದೆಯ ರದ್ದತಿ ಹಾಗೂ ಕನಿಷ್ಟ ಬೆಂಬಲ ಬೆಲೆಗೆ ಕಾನೂನು ಖಾತರಿಯ ಬೇಡಿಕೆಯೊಂದಿಗೆ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. 700ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದು, ರೈತರ ಹೋರಾಟ ʼಮಾಡು ಇಲ್ಲವೇ ಮಡಿʼಯ ಹಂತಕ್ಕೆ ಬಂದು ತಲುಪಿದೆ. ಪ್ರತಿಭಟನಾನಿರತ ರೈತರ ಒಕ್ಕೂಟ ದ ಸೆಪ್ಟೆಂಬರ್ 27ರ ಭಾರತ್ ಬಂದ್ʼಗೆ ಕರೆಗೆ ಅಭೂತಪೂರ್ವ ಪ್ರತಿಕ್ರಿಯೆ ದೊರಕಿದೆ ಎಂದು ರೈತ ನಾಯಕರು ತಿಳಿಸಿದ್ದಾರೆ.
ಕೆಲವೇ ಕೆಲವು ಆಯ್ದ, ಬೆರಳೆಣಿಕೆಯ ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿಗಳನ್ನು ಕಾಪಾಡಲೆಂದೇ ಕೃಷಿ ಕಾಯ್ದೆಗಳನ್ನು ತಂದಿರುವ ಮೋದಿ ಸರ್ಕಾರ ರೈತರನ್ನು ಬೀದಿ ಪಾಲು ಮಾಡಲು ತುದಿಗಾಲಲ್ಲಿ ನಿಂತಿದೆ. ʼಕರಾಳ ಕೃಷಿ ಕಾಯಿದೆಗಳು ವಾಪಸ್ಸು ಆಗುವವರೆಗೂ ಮನೆಗೆ ವಾಪಸ್ಸುʼ ಹೋಗುವುದಿಲ್ಲ ಎಂಬ ಧೃಡ ನಿರ್ಧಾರವನ್ನು ಮಾಡಿರುವುದಾಗಿ ರೈತರ ಒಕ್ಕೂಟ ತಿಳಿಸಿದೆ.
ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ದ ಹಾಗೂ ಬಿಜೆಪಿಯ ರೈತಾಪಿ ಕೃಷಿ ಕಾರ್ಮಿಕರ ವಿರೋಧಿ ಧೋರಣೆಗಳನ್ನು ಖಂಡಿಸಿ ಸೆಪ್ಟೆಂಬರ್ 27ರಂದು ನಡೆದ ʼಭಾರತ್ ಬಂದ್ʼ ಯಶಸ್ವಿಯಾಗಿದ್ದು, ನವೆಂಬರ್ 26, 2021 ರೈತರ ಹೋರಾಟಕ್ಕೆ ವರುಷ ತುಂಬುವ ದಿನದಂದು ಭಾರತದ ದುಡಿಯುವ ವರ್ಗ ಇದೇ ರೀತಿಯ ಇನ್ನಷ್ಟು ಬೆಂಬಲ ನೀಡಿ ರೈತರ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದ್ದಾರೆ.
ʼನವ ಸಮಾಜವಾದಿ ಪರ್ಯಾಯʼ ಕೃಷಿ ಕಾರ್ಮಿಕರ ಬೇಡಿಕೆಗಳು ಈಡೇರಬೇಕೆಂದು ಮತ್ತು ಕರಾಳ ಕೃಷಿ ಕಾನೂನುಗಳು ರದ್ದಾಗಬೇಕೆಂದು ಆಗ್ರಹಿಸಿ ರೈತರ ಹೋರಾಟಕ್ಕೆ ಬೆಂಬಲವನ್ನಿತ್ತು ʼಭಾರತ್ ಬಂದ್ʼ ದಿನ ಹಾಗೂ ಪೂರ್ವಭಾವಿಯಾಗಿ ಕಾರ್ಮಿಕರ ಕೈಗಾರಿಕಾ ಪ್ರದೇಶಗಳಲ್ಲಿ, ವಸತಿ ಪ್ರದೇಶಗಳಲ್ಲಿ, ಪ್ರತಿಭಟನಾ ಮೆರವಣಿಗೆಗಳಲ್ಲಿ ಸಂಘಟನೆಯ ಸದಸ್ಯರು ಈ ಬಾರಿಯು ಕರಪತ್ರವನ್ನು ಹಂಚಿ ರೈತರ ಹೋರಾಟಕ್ಕೆ ದುಡಿಯುವ ವರ್ಗ ಬೆಂಬಲವನ್ನು ನೀಡಬೇಕೆಂದು ಕೋರಲಾಯಿತು.
26/09/2021
#ಅಖಿಲ_ಭಾರತ_ಬಂದ್ #ಸೆಪ್ಟೆಂಬರ್27
ರೈತ-ಕೃಷಿ ಕಾರ್ಮಿಕರ ಹೋರಾಟಕ್ಕೆ ಜಯವಾಗಲಿ
ಕೇಂದ್ರದ ಮೋದಿ ಸರ್ಕಾರದ ಕರಾಳ ಕೃಷಿ ಕಾಯ್ದೆಗಳ ವಿರುದ್ದ ದೇಶಾದ್ಯಂತ ನಡೆಯುತ್ತಿರುವ ರೈತರ ಪ್ರತಿಭಟನೆ 300 ದಿನಗಳನ್ನು ಪೂರೈಸಿದೆ. ದೆಹಲಿ, ಹರಿಯಾಣ, ಉತ್ತರಪ್ರದೇಶ, ಪಂಜಾಬ್ , ಮಹಾರಾಷ್ಟ್ರ ಹಾಗೂ ಇನ್ನಿತರ ರಾಜ್ಯಗಳಲ್ಲಿ ಸಾವಿರಾರು ರೈತರು ಚಳಿ, ಮಳೆ, ಗಾಳಿ, ಕೊರೊನಾ ವೈರಾಣುವನ್ನು ಲೆಕ್ಕಿಸದೇ ನಿರಂತವಾಗಿ ಕರಾಳ ಕೃಷಿ ಕಾಯ್ದೆಯ ರದ್ದತಿ ಹಾಗೂ ಕನಿಷ್ಟ ಬೆಂಬಲ ಬೆಲೆಗೆ ಕಾನೂನು ಖಾತರಿಯ ಬೇಡಿಕೆಯೊಂದಿಗೆ ಪ್ರತಿಭಟಿಸುತ್ತಲೇ ಇದ್ದಾರೆ. 600ಕ್ಕೂ ಹೆಚ್ಚು ರೈತರು ಹುತಾತ್ಮರಾಗಿದ್ದಾರೆ. ರೈತರ ಹೋರಾಟ ʼಮಾಡು ಇಲ್ಲವೇ ಮಡಿʼಯ ಹಂತಕ್ಕೆ ಬಂದು ತಲುಪಿದ್ದು, ಸೆಪ್ಟೆಂಬರ್ ೨೭ರಂದು ಭಾರತ್ ಬಂದ್ʼಗೆ ಪ್ರತಿಭಟನಾನಿರತ ರೈತರ ಒಕ್ಕೂಟ ಕರೆಯನ್ನಿತ್ತಿದೆ..
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾ ರೈತರೊಂದಿಗೆ ಇದುವರೆವಿಗೂ 12 ಸುತ್ತಿಗೂ ಹೆಚ್ಚು ಮಾತುಕತೆ ನಡೆಸಿದ್ದರೂ ರೈತರ ಬೇಡಿಕೆಗಳನ್ನು ಪೂರೈಸಲು ಒಪ್ಪದ ಮೋದಿ ಸರ್ಕಾರ ತನ್ನ ಹಠಮಾರಿ ಧೋರಣೆಯನ್ನು ಮುಂದುವರೆಸಿದೆ.
ಕೆಲವೇ ಕೆಲವು ಆಯ್ದ, ಬೆರಳೆಣಿಕೆಯ ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿಗಳನ್ನು ಕಾಪಾಡಲೆಂದೇ ಕೃಷಿ ಕಾಯ್ದೆಗಳನ್ನು ತಂದಿರುವ ಮೋದಿ ಸರ್ಕಾರ ರೈತರನ್ನು ಬೀದಿ ಪಾಲು ಮಾಡಲು ತುದಿಗಾಲಲ್ಲಿ ನಿಂತಿದೆ. ಪ್ರಾರಂಭದಿಂದಲೂ ಪ್ರತಿಭಟನೆಯನ್ನು ಹತ್ತಿಕ್ಕಲು ಜನವಿರೋಧಿ ಕ್ರಮಗಳನ್ನು ಅನುಸರಿಸುತ್ತಾ ಇರುವ ಬಿಜೆಪಿ ಸರ್ಕಾರ ಇಂದಿಗೂ ತನ್ನೆಲ್ಲಾ ಶಕ್ತಿಗಳನ್ನು ವಿನಿಯೋಗಿಸಿ ರೈತರ ಕೂಗನ್ನು ಸದೆಬಡಿಯಲು ನಿರತವಾಗಿದೆ.
ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ ಎಂದೋ, ವಿದೇಶಿ ಸಂಸ್ಥೆಗಳ ಪ್ರಾಯೋಜಿತ ಹೋರಾಟವೆಂದೋ ಸುಳ್ಳು-ಅಪಪ್ರಚಾರ ಮಾಡುತ್ತಾ, ರಸ್ತೆಯನ್ನು ಬಂದ್ ಮಾಡಿ, ಹಳ್ಳ ತೋಡಿಸುವುದು, ಜಲ ಫಿರಂಗಿ, ಅಶ್ರುವಾಯು, ಲಾಠಿ ಚಾರ್ಚ್ ಮುಂತಾದ ಬಲಪ್ರಯೋಗಗಳನ್ನು ಮುಂದುವರೆಸುತ್ತಲೇ ಇದೆ.
ಕಳೆದ ನವೆಂಬರ್ ನಿಂದ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟ ದೇಶದ ಗಮನ ಸೆಳೆದಿತ್ತು. ಜನವರಿ 12ರಂದು ಕೃಷಿ ಕಾಯ್ದೆ ಗಳಿಗೆ ಸುಪ್ರೀಂ ಕೋರ್ಟ್ ತಾತ್ಕಾಲಿಕವಾಗಿ ತಡೆ ನೀಡಿ, ತಾನೇ ರಚಿಸಿದ ಸಮಿತಿಯಲ್ಲಿ ನಾಲ್ವರೂ ಸರ್ಕಾರದ ಪರ ವಕಾಲತ್ತು ವಹಿಸಿದ ಮಹಾನುಭಾವರು ಇದದ್ದು ದೊಡ್ಡ ನಗೆಪಾಟಲಿಗೆ ಈಡಾಗಿಸಿತ್ತು.
ರೈತರ ಹೋರಾಟ-ಒಗ್ಗಟ್ಟನ್ನು ಒಡೆಯಲು ಬಿಜೆಪಿಯ ಸರ್ಕಾರ ನಾನಾ ರೀತಿಯ ಹುನ್ನಾರಗಳನ್ನು ಮಾಡುತ್ತಲೇ ಇದೆ. ಕೇಂದ್ರ ಸರ್ಕಾರದ ಒಡೆದಾಳುವ ನೀತಿಯನ್ನು ಅರಿತ ರೈತಾಪೀ ಕೃಷಿ ಕಾರ್ಮಿಕರು ಒಂದಾಗಿದ್ದಾರೆ. ಇತ್ತೀಚಿಗೆ ಉತ್ತರಪ್ರದೇಶದ ಮುಜಾಫರ್ ನಗರ ಜಿಲ್ಲೆಯಲ್ಲಿ ನಡೆದ ʼರೈತ ಮಹಾ ಪಂಚಾಯತ್ʼ ಪ್ರತಿಭಟನೆಯಲ್ಲಿ ಹಿಂದೂ-ಮುಸ್ಲಿಂ ರೈತಾಪಿ ಬಂಧುಗಳು ಒಂದಾಗಿ ಹೋರಾಟ ನಡೆಸಿರುವುದು ಆಶಾದಾಯಕ ಬೆಳವಣಿಗೆ. ಈ ನಡೆಯೇ ಬಿಜೆಪಿಯ ಮೋದಿ-ಯೋಗಿಗೆ ನಡುಕ ಹುಟ್ಟಿಸಿದೆ.
ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ದ ಹಾಗೂ ಬಿಜೆಪಿಯ ರೈತಾಪಿ ಕೃಷಿ ಕಾರ್ಮಿಕರ ವಿರೋಧಿ ಧೋರಣೆಗಳನ್ನು ಖಂಡಿಸಿ ಸೆಪ್ಟೆಂಬರ್ 27ರಂದು ನಡೆಯಲಿರುವ ʼಭಾರತ್ ಬಂದ್ʼಗೆ ಭಾರತದ ದುಡಿಯುವ ವರ್ಗ ಬೆಂಬಲ ನೀಡಿ ರೈತರ ಹೋರಾಟವನ್ನು ಯಶಸ್ವಿಗೊಳಿಸಬೇಕಿದೆ.
ನಮ್ಮ ಹೋರಾಟದ ಹಕ್ಕೋತ್ತಾಯಗಳು:
• ನೂತನ ಕರಾಳ ಕೃಷಿ ಕಾಯಿದೆಗಳು ಈ ಕೂಡಲೇ ರದ್ದಾಗಲಿ.
• ಕೃಷಿ, ಸಾರ್ವಜನಿಕ ವಲಯದ ಖಾಸಗಿಕರಣ ಈ ಕೂಡಲೇ ನಿಲ್ಲಲಿ.
• ಖಾಸಗಿಕರಣಗೊಂಡ ಕಾರ್ಖಾನೆ, ಉದ್ಯಮ ಮತ್ತು ಸೇವೆಗಳನ್ನು ಮರು-ರಾಷ್ಟ್ರೀಕರಣಗೊಳಿಸಿ.
• ಕೃಷಿ ಕ್ಷೇತ್ರದಲ್ಲಿ ಯಾವುದೇ ಪ್ರತ್ಯಕ್ಷ ಹಾಗೂ ಪರೋಕ್ಷವಾದ ಬಂಡವಾಳಿಗಳ ಪ್ರಭಾವ ನಿಲ್ಲಲಿ.
• ರೈತರ ನೈಜ ಸಹಕಾರಿ ಸಂಘಗಳ ಸ್ಥಾಪನೆಯಾಗಲಿ. ಬೆಲೆಗಳು, ಬೆಂಬಲಬೆಲೆ ಮತ್ತು ಸಬ್ಸಿಡಿಗಳ ನಿಗದಿಗೊಳಿಸುವ ಹತೋಟಿ ಸಹಕಾರಿ ಸಂಘಗಳಿಗೆ ಬೇಕು.
• ರೈತರ ಕಾರ್ಮಿಕರ ಮತ್ತು ಯುವಜನರ ಪ್ರತಿರೋಧವನ್ನು ಅಪರಾಧೀಕರಣಗೊಳಿಸುವುದು ನಿಲ್ಲಲಿ.
• ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ ದೇಶಾದ್ಯಂತ ಮರುಸ್ಥಾಪನೆಯಾಗಲಿ.
• ಕನಿಷ್ಟ ಬೆಂಬಲ ಬೆಲೆ(ಎಂಎಸ್ಪಿ) ರೈತ ಸಂಘಗಳ ಒಪ್ಪಿಗೆಯೊಂದಿಗೆ ನಿಗದಿಯಾಗಲಿ.
• ಕೃಷಿ ಸಹಾಯಧನವನ್ನು ಈ ಕೂಡಲೇ ಹೆಚ್ಚಿಸಿ.
• ಪಡಿತರ ವ್ಯವಸ್ಥೆಯ ನಾಶ ನಿಲ್ಲಲಿ.
• ದೇಶಾದ್ಯಂತ ಎಪಿಎಂಸಿ ಮಾರುಕಟ್ಟೆಗಳು ಸ್ಥಾಪನೆಯಾಗಲಿ.
• ಸಣ್ಣ ಹಿಡುವಳಿದಾರರ, ಬಡ ರೈತರ ಮತ್ತು ಭೂಹೀನ ರೈತಾಪಿಗಳ ಸಾಲ ಸಂಪೂರ್ಣ ರದ್ದಾಗಲಿ.
• ಸರ್ಕಾರಿ ಹಿಡಿತದಲ್ಲಿರುವ ವಿಶಾಲ ಭೂಪ್ರದೇಶವನ್ನು ಭೂಹೀನ ರೈತರಿಗೆ ಹಂಚಿಕೆಯಾಗಲಿ.
• ಬೇನಾಮಿ ಭೂ-ಒಡೆತನ ರದ್ದಾಗಲಿ. ಪಾಣಿ-ಪಟ್ಟಾಗಳು ಕೃಷಿಯಲ್ಲೇ ತೊಡಗಿರುವ ರೈತರ ಹೆಸರಿಗೆ ವರ್ಗಾವಣೆಯಾಗಲಿ.
07/08/2021
ದಲಿತ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳಿಗೆ ಕೊನೆ ಎಂದು?
ಉತ್ತರ ಪ್ರದೇಶದ ಹತ್ರಾಸ್ ಘಟನೆಯ ಕಹಿ ನೆನಪುಗಳು ಇನ್ನೂ ಮಾಸಿರದ ದಿನಗಳಲ್ಲಿ ನೈರುತ್ಯ ದೆಹಲಿಯ ಹಳೆಯ ನಂಗಲ್ ಗ್ರಾಮದಲ್ಲಿ ಮತ್ತೊಂದು ಅಂತಹುದೇ ಘಟನೆ ನಡೆದಿರುವುದು ನೋಡಿದರೆ ಸರ್ಕಾರಗಳು ಜೀವಂತವಾಗಿವೆಯೇ ಎಂಬ ಪ್ರಶ್ನೆ ಮೂಡುತ್ತದೆ.
ಬರೀ ಘೋಷಣೆಗಳು: 2015ರಿಂದ 2019 ರ ಅವಧಿಯಲ್ಲಿ ಒಟ್ಟು 1.76 ಲಕ್ಷ ದಲಿತ ಹೆಣ್ಣು ಮಕ್ಕಳ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಸರ್ಕಾರವೇ ಸಂಸತ್ತಿಗೆ ಮಾಹಿತಿ ನೀಡಿರುವುದನ್ನು ನೋಡಿದರೆ ಸರ್ಕಾರಗಳ ವೈಫಲ್ಯಗಳು ಕಣ್ಣಿಗೆ ರಾಚುತ್ತಿವೆ. ಈ ಅವಧಿಯಲ್ಲಿ ಪ್ರತಿ ವರ್ಷ ದಾಖಲಾದ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆ/ಯುವತಿ/ಬಾಲಕಿಯರ ಮೇಲೆ ನಡೆದ ಅತ್ಯಾಚಾರಗಳ ಸಂಖ್ಯೆಗಳು ಮತ್ತಷ್ಟು ಏರಿಕೆಯಾಗಿರುವುದು ನಾಚಿಕೆಗೇಡು.
ಬರೀ ಘೋಷಣೆಗಳಿಂದ, ಆರೋಪ-ಪ್ರತ್ಯಾರೋಪಗಳಿಂದ ದೇಶದ ಜನತೆಯನ್ನು ವಂಚಿಸುತ್ತಿರುವ ಮೋದಿ ಸರ್ಕಾರದ ವಿಫಲವಾದ ಕಾರ್ಯವೈಖರಿಗೆ ಈ ಅಂಕಿಅಂಶಗಳೇ ಕೈಗನ್ನಡಿಯಾಗಿದೆ.
ಉನ್ನಾವ್, ಕಠುವಾ, ಹಾಥರಸ್, ಬಾರನ್, ನಂಗಲ್… ನಂತಹ ಮುಗಿಯದ ವ್ಯಥೆಗಳು ಮುಂದುವರಿಯುತ್ತಿವೆ.
ದೆಹಲಿಯ ನಿರ್ಬಯ ಘಟನೆಯ ಅತ್ಯಾಚಾರಿಗಳಿಗೆ ಮರಣದಂಡನೆ ನೀಡಿದ್ದರೂ ಮಹಿಳೆಯರ ಮೇಲೆ ನಿಲ್ಲದ ಅತ್ಯಾಚಾರಗಳು ನೋಡಿದರೆ ಗಲ್ಲು ಶಿಕ್ಷೆ ಅಥವಾ ಹಿಡಮಾಡು ಅತ್ಯಾಚಾರಕ್ಕೆ ಪರಿಹಾರವಲ್ಲ ಎಂಬುದು ಸಾಬೀತಾಗಿದೆ. ದಿಢೀರ್ ತ್ಯಾಪೆ ಚಿಕಿತ್ಸೆಗಳು, ವಿಚಾರಣೆಯೇ ಇಲ್ಲದ ಎನ್ ಕೌಂಟರ್ ನಂತಹ ಅಮಾನವೀಯ ಶೀಘ್ರ ಶಿಕ್ಷೆಗಳು ಅತ್ಯಾಚಾರಗಳನ್ನು ನಿಲ್ಲಿಸದು.
ಅತ್ಯಾಚಾರ ನಗೆಚಾಟಿಕೆಯಲ್ಲ..
'ವ್ಯಂಗ್ಯ'ದ ಹೆಸರಿನಲ್ಲಿ ಲಿಂಗತಾರತಮ್ಯವನ್ನು ಊರ್ಜಿತಗೊಳಿಸುವ ಜೋಕುಗಳು, ಲಿಂಗ ಭೇದಭಾವವನ್ನು ನಿರುಪದ್ರವಿ ಎಂಬಂತೆ ಮಾಡಿಬಿಟ್ಟಿದೆ. ಅಶ್ಲೀಲ ಸಂಭಾಷಣೆ, ಪರೋಕ್ಷವಾದ ವ್ಯಂಗ್ಯಗಳು ಮತ್ತು ಅಸಹನೀಯ ನಗೆಚಾಟಿಕೆ ಇಂದಿನ ಸಮಾಜದಲ್ಲಿ ಸಾಮಾನ್ಯ ಮಹಿಳೆಯರು ಅನಿರ್ವಾಯವಾಗಿ ಸಹಿಸುವಂತೆ ಪ್ರೇರೆಪಿಸುತ್ತದೆ. ಒಂದು ವೇಳೆ ದಿಟ್ಟತೆಯಿಂದ ಪ್ರತಿಭಟಿಸಿದಲ್ಲಿ ಆಕೆಗೆ ಹಾಸ್ಯಪ್ರಜ್ಞೆಯಿಲ್ಲವೆಂಬಂತೆ ಲೇವಡಿ ಮಾಡಲಾಗುತ್ತದೆ.
ಮಹಿಳೆಯರ ಮೇಲಿನ ದೌರ್ಜನ್ಯದ ಅಪರಾಧಕ್ಕೆ ಮೂಲಕಾರಣ ಕೊಳೆತು ನಾರುತ್ತಿರುವ ಈ ಬಂಡವಾಳಶಾಹಿ ವ್ಯವಸ್ಥೆ, ಸಮಾಜವನ್ನು ಮಧ್ಯಕಾಲೀನ ಯುಗದ ಪಳೆಯುಳಿಕೆಗಳಿಂದ ಮತ್ತು ಪೀಡನೆಗಳಿಂದ ಮೇಲೆತ್ತುವಲ್ಲಿ ಈ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ. ಇದರಿಂದಾಗಿಯೇ ಮಹಿಳೆಯನ್ನು ಕೇವಲ ದೇಹ ಮಾತ್ರದಿಂದ ಗುರುತಿಸಿ ಮನೋರಂಜನೆಯ ಭೋಗದ ಸರಕಾಗಿ ನೋಡುವ, ನಡೆಸಿ ಕೊಳ್ಳುವ ಅನಿಷ್ಠ ಪ್ರವೃತ್ತಿ ಇನ್ನೂ ಜಾರಿಯಲ್ಲಿದೆ.
ಅತ್ಯಾಚಾರವನ್ನು, ಮಹಿಳೆಯ ಮೇಲಾಗುವ ಇನ್ನಿತರ ಶೋಷಣೆಗಳಿಂದ ಪ್ರತ್ಯೇಕಿಸಿ ನೋಡಲಾಗದು. ಅತ್ಯಾಚಾರ ಕೂಡ ಕೌಟುಂಬಿಕ ಹಿಂಸೆ ಮತ್ತು ಲೈಂಗಿಕ ಕಿರುಕುಳಗಳಂತೆಯೇ ಅಸಮಾನ ವರ್ಗ ತಾರತಮ್ಯವಿರುವ ಸಮಾಜದ ಕುರುಹು. ವರ್ಗ ತಾರತಮ್ಯದ ಪಿಡುಗು ಕಾಡುವ ಈ ಸಮಾಜದಲ್ಲಿ ಬಹುತೇಕ ಪುರುಷರು ಮಹಿಳೆಯರನ್ನು ಹಿಡಿತದಲ್ಲಿಟ್ಟು ಲೈಂಗಿಕ ಆಧಿಕ್ಯಮಾಡುವ ಪ್ರವೃತ್ತಿಯಲ್ಲಿ ತೊಡಗಿರುತ್ತಾರೆ. ಸಮಾಜದಲ್ಲಿರುವ ಮಹಿಳೆ ಎದುರಿಸುವ ಆರ್ಥಿಕ ಅಸಮಾನತೆ ಕೂಡ ಈ ಅನಿಷ್ಠತೆಗೆ ಕುಮ್ಮಕ್ಕು ಕೊಟ್ಟಿದೆ. ಲಿಂಗತಾರತಮ್ಯವನ್ನು ನಾವು ಪ್ರಶ್ನಿಸಿ ಧಿಕ್ಕರಿಸಲೇಬೇಕು. ಕೇವಲ ಒಂದು ಬೃಹತ್ ಸಮೂಹ ಹೋರಾಟದಿಂದ ಮಾತ್ರ ಸಹಸ್ರಾರು ಜನ ಈ ದೌರ್ಜನ್ಯಪೂರಿತ, ಲಿಂಗತಾರತಮ್ಯಗಳಿಂದ ಕೂಡಿದ ಶೋಷಣಾಯುಕ್ತ ಬಂಡವಾಳಶಾಹಿ ಸಮಾಜವನ್ನು ಪ್ರಶ್ನಿಸಲು ಸಾಧ್ಯ. ಈ ಮೂಲಕ ಬಂಡವಾಳಿ ವ್ಯವಸ್ಥೆಯನ್ನು ಬುಡಮೇಲಾಗಿಸಿ ಶೋಷಣಾರಹಿತ ಪರ್ಯಾಯ ವ್ಯವಸ್ಥೆಯೊಂದನ್ನು ನಿರ್ಮಿಸಲು ಸಾಧ್ಯ.
ಮಹಿಳೆಯರನ್ನು ನಿಕೃಷ್ಠರನ್ನಾಗಿ ನೋಡುವ, ಬಂಡವಾಳಿ ವ್ಯವಸ್ಥೆಯ ಪ್ರತಿನಿಧಿಗಳಾದ ಬಿಜೆಪಿ, ಕಾಂಗ್ರೇಸ್ ಮತ್ತು ಇನ್ನಿತರ ಬಂಡವಾಳಶಾಹಿ-ಜಮೀನ್ದಾರಿ ಪಕ್ಷಗಳ ಸಮಾಜದ ಮೇಲಿನ ರಾಜಕೀಯ ಹಿಡಿತ ಕೊನೆಯಾಗಲಿ.
| Monday | 9am - 6pm |
| Tuesday | 9am - 6pm |
| Wednesday | 9am - 6pm |
| Thursday | 9am - 6pm |
| Friday | 9am - 6pm |
| Saturday | 9am - 6pm |
| Sunday | 9am - 6pm |