13/12/2024
ಸರ್ಕಾರದ ಬೆಂಬಲದೊಂದಿಗೆ ನಿಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಅವಕಾಶ.!
ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ 2024-25 ನೇ ಸಾಲಿಗೆ ಸ್ವಯಂ-ಉದ್ಯೋಗ ನೇರ ಸಾಲ (ಕುರಿ ಸಾಕಾಣಿಕೆ) ಮತ್ತು ಸ್ವಾವಲಂಬಿ ಸಾರಥಿ ಫುಡ್ ಕಾರ್ಟ್ ಯೋಜನೆಗಳಿಗೆ ಅರ್ಜಿ ಸಲ್ಲಿಸಿ.
ಕೊನೆಯ ದಿನಾಂಕ: 29.12.2024
ಹೆಚ್ಚಿನ ವಿವರಗಳಿಗಾಗಿ 24/7 ಸಹಾಯವಾಣಿಯನ್ನು ಸಂಪರ್ಕಿಸಿ: 9482300400
Chief Minister of Karnataka
ಸಮಾಜ ಕಲ್ಯಾಣ ಇಲಾಖೆ Social Welfare Department
DR HC Mahadevappa
Sampath Raj
26/11/2024
ಎಲ್ಲರಿಗೂ ಸಂವಿಧಾನ ದಿನದ ಶುಭಾಶಯಗಳು!
ನಮ್ಮ ಭಾರತೀಯ ಸಂವಿಧಾನವು 1.5 ಬಿಲಿಯನ್ ಭಾರತೀಯರ ಏಕತೆಯ ಸಂಕೇತವಾಗಿದೆ. ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ಹಾದಿಯಲ್ಲಿ ನಾವು ಒಗ್ಗಟ್ಟಿನಿಂದ ನಡೆಯೋಣ, ಇದೇ ನಮ್ಮ ನಿಗಮದ ಆಶಯವು ಕೂಡ.
11/09/2024
2024-25 ನೇ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು 10-10- 2024ರವರೆಗು ನಿಗದಿಪಡಿಸಲಾಗಿದೆ.
09/09/2024
ಸೆಪ್ಟೆಂಬರ್ 15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್ ನಿಂದ ಚಾಮರಾಜನಗರದ ವರೆಗೆ ಬೆಳ್ಳಿಗೆ 9.30ಕ್ಕೆ ಮಾನವ ಸರಪಳಿಯನ್ನು ನಿರ್ಮಿಸಲಾಗುತ್ತಿದೆ.
'ಬನ್ನಿ ಎಲ್ಲರೂ ಕೈ ಜೋಡಿಸೋಣ
ಪ್ರಜಾಪ್ರಭುತ್ವದ ಆಶಯವನ್ನು ಎತ್ತಿ ಹಿಡಿಯೋಣ'..!
ಹೆಚ್ಚಿನ ಮಾಹಿತಿಗಾಗಿ: Democracydaykarnataka.in ಭೇಟಿ ನೀಡಿ.
ಸಮಾಜ ಕಲ್ಯಾಣ ಇಲಾಖೆ Social Welfare Department
Chief Minister of Karnataka
DR HC Mahadevappa
20/07/2024
ದಿ. 20.07.2024 ರಂದು ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ಕ್ಷೇತ್ರದ, ಡಾ ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯ 2019-20 ಮತ್ತು 2020-21 ಸಾಲಿನ ಫಲಾನುಭವಿಗಳಿಗೆ ಮಾನ್ಯ ವಿಧಾನ ಸಭೆ ಶಾಸಕರು ಪಂಪ್ ಸೆಟ್ ವಿತರಿಸಿದರು. ಈ ಸಂದರ್ಭದಲ್ಲಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.
Chief Minister of Karnataka
DR HC Mahadevappa
ಸಮಾಜ ಕಲ್ಯಾಣ ಇಲಾಖೆ Social Welfare Department
09/07/2024
ದಿ.08.07.2024 ರಂದು ತುಮಕೂರು ಜಿಲ್ಲೆ, ತುರುವೇಕೆರೆ ಕ್ಷೇತ್ರದ, ಡಾ ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಮಾನ್ಯ ವಿಧಾನ ಸಭಾ ಶಾಸಕರಾದ ಶ್ರೀ ಎಂ.ಟಿ ಕೃಷ್ಣಪ್ಪ ರವರು ಪಂಪ್ ಸೆಟ್ ವಿತರಿಸಿ ನಿಗಮದ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಿಗಮದ ತಾಲ್ಲೂಕು ಅಭಿವೃದ್ಧಿ ಅಧಿಕಾರಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
01/07/2024
ಇಂದು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದ,
ಡಾ ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ 2021-22 ಮತ್ತು 22-23 ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿದ ಫಲಾನುಭವಿಗಳಿಗೆ ಇಂದು ಮಾನ್ಯ ಲೋಕಸಭಾ ಸಂಸದರಾದ ಶ್ರೀ BY ರಾಘವೇಂದ್ರ ರವರ ಸಮ್ಮುಖದಲ್ಲಿ ಪಂಪ್ ಸೆಟ್ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಭೋವಿ ನಿಗಮದ ಅಧ್ಯಕ್ಷರಾದ ಶ್ರೀ ರವಿ ಕುಮಾರ್ ರವರು ಮತ್ತು ನಿಗಮದ ಶಿವಮೊಗ್ಗ ಜಿಲ್ಲಾ ವ್ಯವಸ್ಥಾಪಕರು ಮತ್ತು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Chief Minister of Karnataka
DR HC Mahadevappa
Sampath Raj
ಸಮಾಜ ಕಲ್ಯಾಣ ಇಲಾಖೆ Social Welfare Department
29/06/2024
ಇಂದು ದಿ. 29.06.2024 ರಂದು ಡಾ ಬಿ. ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಪ್ರಗತಿ ಪರಿಶೀಲನಾ ಸಭೆಯನ್ನು ನಿಗಮದ ಮಾನ್ಯ ಅಧ್ಯಕ್ಷರಾದ ಶ್ರೀ ಆರ್. ಸಂಪತ್ ರಾಜ್ ರವರು ನಡೆಸಿದರು. ಈ ಸಂದರ್ಭದಲ್ಲಿ ಸೌಲಭ್ಯಗಳ ಹಂಚಿಕೆ, ಯೋಜನೆಗಳ ಪ್ರಗತಿ ಮತ್ತು ಇತರೆ ಆಡಳಿತಾತ್ಮಕ ವಿಷಯಗಳ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ವ್ಯವಸ್ಥಾಪಕರುಗಳು ಭಾಗವಹಿಸಿದ್ದರು.
Chief Minister of Karnataka
DR HC Mahadevappa
Sampath Raj
ಸಮಾಜ ಕಲ್ಯಾಣ ಇಲಾಖೆ Social Welfare Department
20/06/2024
ಸಮಾಜ ಕಲ್ಯಾಣ ಇಲಾಖೆಯ ಕ್ರೈಸ್ ವಸತಿ ಶಾಲೆಗಳಲ್ಲಿ 50% ಸೀಟುಗಳನ್ನು ಈ ಕೆಳಗೆ ತಿಳಿಯಪಡಿಸಿರುವ ವರ್ಗದ ಮಕ್ಕಳಿಗೆ ಮೀಸಲಾಗಿ ಇಡಲಾಗಿದ್ದು ಅವರು ಇಲಾಖೆಯ ಈ ಕೆಳಗಿನ ವೆಬ್ ಸೈಟ್ ಲಿಂಕ್ ಮೂಲಕ ನೇರವಾಗಿ ಯಾವುದೇ ಪರೀಕ್ಷೆ ಇಲ್ಲದೇ ಪ್ರವೇಶ ಪಡೆದುಕೊಳ್ಳಬಹುದಾಗಿದೆ :
ಪ್ರವೇಶಾತಿ ಲಿಂಕ್ :
https://cetonline.karnataka.gov.in/kreis24d
30/11/2023
ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಡಿಸೆಂಬರ್ 15ರ ವರೆಗೆ ವಿಸ್ತರಿಸಲಾಗಿದೆ.
01/11/2023
ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ 2023-24 ನೇ ಸಾಲಿನ ವಿವಿಧ ಯೋಜನೆಗಳಿಗೆ ಅರ್ಜಿಗಳ ಆಹ್ವಾನಿಸಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ಕಲ್ಯಾಣ ಮಿತ್ರ 24*7 ಸಹಾಯ ವಾಣಿ 9482300400 ಕರೆ ಮಾಡಬಹುದು.