17/10/2025
ಇಂದು ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಕೆಪಿಸಿಸಿ ಪದವೀಧರರ ವಿಭಾಗದ ರಾಜ್ಯಾಧ್ಯಕ್ಷರಾದ A. N. Nataraj Gowda / ಎ ಎನ್ ನಟರಾಜ್ ಗೌಡ ರವರು ಮಾನ್ಯ Byrathi Suresh ಬೆಂಗಳೂರು ನಗರ ಅಭಿರುದ್ದಿ ಸಚಿವರವನ್ನು ಭೇಟಿ ಮಾಡಿ ಕಂಪೋಸ್ಟ್ ಅಭಿವೃದ್ಧಿ ನಿಗಮ ಮಂಡಳಿಯ ಕುರಿತು ಚರ್ಚಿಸಲಾಯಿತ್ತು.
ಮಧುಸೂಧನ್ B K ರಾಜ್ಯ ಪ್ರಧಾನ ಕಾರ್ಯದರ್ಶಿ
ಕರ್ನಾಟಕ ಪ್ರಾದೇಶ ಕಾಂಗ್ರೆಸ್ ಕಮಿಟಿ ಪದವೀಧರ ವಿಭಾಗ &
Social Media Incharge.
14/10/2025
⭐ಜನರ ಹಿತಕ್ಕಾಗಿ ಹೋರಾಡುವ ನಾಯಕರ ಧ್ವನಿ ಎಂದಿಗೂ ಮೌನವಾಗುವುದಿಲ್ಲ.
ಪ್ರಿಯಾಂಕ್ ಖರ್ಗೆ ಅವರ ನಿಲುವು ಸ್ಪಷ್ಟ —
ಭಾರತದ ಏಕತೆ, ಸಂವಿಧಾನದ ಮೌಲ್ಯಗಳ ವಿರುದ್ಧ ನಿಂತಿರುವ ಸಂವಿಧಾನ ವಿರೋಧಿ ಸಂಘಟನೆಗಳಾದ RSS ಮತ್ತು BJP ಗಳ ನಿಜಸ್ವರೂಪವನ್ನು ಜನತೆಗೆ ತೋರಿಸುವ ಹೋರಾಟ ಇದು...!
🔶ಇದು ರಾಜಕೀಯವಲ್ಲ, ಇದು ಸಂವಿಧಾನದ ರಕ್ಷಣೆಯ ಹೋರಾಟ.
RSS ನಿಷೇಧದ ಬೇಡಿಕೆ — ದೇಶವನ್ನು ವಿಭಜನೆಯಿಂದ ಉಳಿಸುವ ಅಗತ್ಯ ಕ್ರಮ.
Priyank Kharge We Stand with Priyank Kharage sir ✊✊
14/10/2025
ಇಂದು ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಕೆಪಿಸಿಸಿ ಪದವೀಧರರ ವಿಭಾಗದ ರಾಜ್ಯಾಧ್ಯಕ್ಷರಾದ A N Nataraj Gowda ರವರು ಮಾನ್ಯ ಕೆಪಿಸಿಸಿ ಅಧ್ಯಕ್ಷರು ಹಾಗು ರಾಜ್ಯದ ಉಪಮುಖ್ಯಮಂತ್ರಿಗಳಾದ DK Shivakumar ರವನ್ನು ಭೇಟಿ ಮಾಡಿ ನಿಗಮ ಮಂಡಳಿಯ ಕುರಿತು ಚರ್ಚಿಸಲಾಯಿತ್ತು.
ಮಧುಸೂಧನ್ B K ರಾಜ್ಯ ಪ್ರಧಾನ ಕಾರ್ಯದರ್ಶಿ
ಕರ್ನಾಟಕ ಪ್ರಾದೇಶ ಕಾಂಗ್ರೆಸ್ ಕಮಿಟಿ ಪದವೀಧರ ವಿಭಾಗ &
Social Media Incharge.
13/10/2025
ಕಂಪೋಸ್ಟ್ ಅಭಿರುದ್ಧಿ ನಿಗಮದ ಅಧ್ಯಕ್ಷರು ಹಾಗು ಕರ್ನಾಟಕ ಪ್ರಾದೇಶ ಕಾಂಗ್ರೆಸ್ ಕಮಿಟಿ ಪದವೀಧರ ವಿಭಾಗ ರಾಜ್ಯಧ್ಯಕ್ಷರಾದ A. N. Nataraj Gowda / ಎ ಎನ್ ನಟರಾಜ್ ಗೌಡ ರವರು ಬಿಎಂಟಿಸಿ ಅಧ್ಯಕ್ಷರಾಗಿ ಆಯ್ಕೆ ಯಾಗಿರುವ ಹಿರಿಯ ಕಾಂಗ್ರೆಸ್ ನಾಯಕರಾದ ಶ್ರೀಯುತ ಆರಾಧ್ಯ ಮತ್ತು ಉಪಾಧ್ಯಕ್ಷರಾದ ಶ್ರೀ ನಿಕೇತ್ ರಾಜ್ ರವರನ್ನು ಅಭಿನಂದಿಸಲಾಯಿ.💐💐
ಮಧುಸೂಧನ್ B K ರಾಜ್ಯ ಪ್ರಾಧಾನ ಕಾರ್ಯದರ್ಶಿ
ಕರ್ನಾಟಕ ಪ್ರಾದೇಶ ಕಾಂಗ್ರೆಸ್ ಕಮಿಟಿ ಪದವೀಧರ ವಿಭಾಗ &
Social Media Incharge.
09/10/2025
ಇಂದು ಕರ್ನಾಟಕ ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಶ್ರೀ ಎ.ಎನ್. ನಟರಾಜ್ ಗೌಡ ಅವರು ಅಧಿಕಾರ ಸ್ವೀಕರಿಸಿದರು 🌿 ಅವರು ಕಾಂಗ್ರೆಸ್ ಪಕ್ಷದ ಬಲಿಷ್ಠ ನಾಯಕರಾಗಿದ್ದು, ಕೆಪಿಸಿಸಿ ಪದವೀಧರ ವಿಭಾಗದ ರಾಜ್ಯಾಧ್ಯಕ್ಷರಾಗಿ ಪಕ್ಷದ ತಳಮಟ್ಟದ ಕಾರ್ಯಕರ್ತರ ಧ್ವನಿಯಾಗಿದ್ದಾರೆ.
ಅವರ ರಾಜಕೀಯ ಪಯಣ ಸದಾ ಜನಸೇವೆಯ ದಾರಿಯಲ್ಲೇ ಸಾಗಿದ್ದು, ಶ್ರಮ, ನಂಬಿಕೆ ಮತ್ತು ಸರಳತೆ ಅವರ ಜೀವನದ ಮೂಲ ಆಧಾರಗಳಾಗಿವೆ.
ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಅವರು, ಪರಿಸರ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ ಮತ್ತು ಹಸಿರು ರಾಜ್ಯದ ಕನಸನ್ನು ನನಸಾಗಿಸಲು ಹೊಸ ಚೈತನ್ಯ ನೀಡುವರು ಎಂಬ ವಿಶ್ವಾಸವಿದೆ.
ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಪದವೀಧರ ವಿಭಾಗದ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು 🙏🌿🇮🇳
ನಿಮ್ಮ ನಾಯಕತ್ವದಲ್ಲಿ ರಾಜ್ಯದ ಹಸಿರು ಅಭಿವೃದ್ಧಿಗೆ ಹೊಸ ಉತ್ಸಾಹ ಸಿಗಲಿ ಎಂಬುದು ನಮ್ಮೆಲ್ಲರ ಹಾರೈಕೆ.
09/10/2025
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಮಾನ್ಯ Dinesh Gundu Rao ರವರ ಹುಟ್ಟುಹಬ್ಬದ ಅಂಗವಾಗಿ ಇಂದು ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗು ಕರ್ನಾಟಕ ಪ್ರಾದೇಶ ಕಾಂಗ್ರೆಸ್ ಕಮಿಟಿ ಪದವೀಧರರ ವಿಭಾಗದ ರಾಜ್ಯಧ್ಯಕ್ಷರಾದ A N Nataraj Gowda ರವರು ಭೇಟಿ ಮಾಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಧುಸೂದನ್ ಭದ್ರಾವತಿ ರವರು, ಇಮ್ರಾನ್ ಖಾನ್ ರವರು, ಮಧುಸೂಧನ್ ಬಿ. ಕೆ, ದೇವಿಕಾ ರವರು, ಮನ್ಸೂರ್ ರವರು ಹಾಗೂ ಬೆಂಗಳೂರು ಪಶ್ಚಿಮ ವಿಭಾಗದ ಕಾರ್ಯದರ್ಶಿಗಳು ಹಾಜರಿದ್ದರು.
ಮಧುಸೂಧನ್ B K
ರಾಜ್ಯ ಪ್ರಾಧಾನ ಕಾರ್ಯದರ್ಶಿ
ಕರ್ನಾಟಕ ಪ್ರಾದೇಶ ಕಾಂಗ್ರೆಸ್ ಕಮಿಟಿ ಪದವೀಧರ ವಿಭಾಗ &
Social Media Incharge.
08/10/2025
🔥ಎ. ಎನ್. ನಟರಾಜ್ ಗೌಡರಿಗೆ ರಾಜ್ಯ ಸರ್ಕಾರದಿಂದ ಗೌರವಾನ್ವಿತ ಹುದ್ದೆ✌️✌️💐💐😍
🔶ಕರ್ನಾಟಕ ರಾಜ್ಯ ಕಾಂಫೋಸ್ಟ್ ಅಭಿವೃದ್ಧಿ ನಿಗಮ, ಬೆಂಗಳೂರು ಇದರ ಅಧ್ಯಕ್ಷರಾಗಿ ಎ. ಎನ್. ನಟರಾಜ್ ಗೌಡರನ್ನು ನೇಮಿಸಿರುವುದಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ Siddaramaiah ಹಾಗು ಉಪಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರಾದ ಮಾನ್ಯ DK Shivakumar ರವರಿಗೆ ಹೃತ್ಪೂರ್ವಕ ಧನ್ಯವಾದಗಳು.
ಎ. ಎನ್. ನಟರಾಜ್ ಗೌಡರವರು ಕಳೆದ 20ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಅನೇಕ ಟೆಲಿವಿಷನ್ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಪಕ್ಷದ ಸಿದ್ಧಾಂತ, ನಿಲುವು ಮತ್ತು ರಾಷ್ಟ್ರದ ಪ್ರಗತಿಯ ಕುರಿತು ಸ್ಪಷ್ಟವಾದ ವಿಶ್ಲೇಷಣೆ ನೀಡುತ್ತಾ, ಪಕ್ಷದ ನಿಜವಾದ ಧ್ವನಿಯಾಗಿ ಜನಮನ ಗೆದ್ದಿದ್ದಾರೆ.
ಅವರ ಸಂಘಟನೆ ಶಕ್ತಿ, ವಾಕ್ಚಾತುರ್ಯ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಕಾಂಗ್ರೆಸ್ ತತ್ವಗಳ ಪ್ರಚಾರ ಮಾಡುವ ಸಾಮರ್ಥ್ಯವು ರಾಜ್ಯದ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರೇರಣೆಯಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಕೆಪಿಸಿಸಿ ಅಧ್ಯಕ್ಷರ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಡಿಜಿಟಲ್ ಮಾಧ್ಯಮದ ಮೂಲಕ ಯಶಸ್ವಿಯಾಗಿ ಆಯೋಜಿಸಿದ ಅವರ ನಾಯಕತ್ವ, ಪಕ್ಷದ ಡಿಜಿಟಲ್ ಶಕ್ತಿಯನ್ನು ಬಲಪಡಿಸಿದ ಮಹತ್ತರ ಹೆಜ್ಜೆಯಾಗಿತ್ತು.
ಮಾನ್ಯ Siddaramaiah ಹಾಗು DK Shivakumar ರವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ನಿಷ್ಠೆ, ಪ್ರಾಮಾಣಿಕತೆ ಮತ್ತು ಕಾರ್ಯನಿಷ್ಠೆಗೆ ನೀಡಿರುವ ಈ ಮಾನ್ಯತೆ.ಪಕ್ಷದ ಕಾರ್ಯಕರ್ತರ ತ್ಯಾಗ ಮತ್ತು ಶ್ರಮಕ್ಕೆ ದೊರೆತ ಗೌರವವಾಗಿದೆ.
ಎ. ಎನ್. ನಟರಾಜ್ ಗೌಡರ ಹೊಸ ಹುದ್ದೆ ಕಾಂಗ್ರೆಸ್‌ನ ಅಭಿವೃದ್ಧಿ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸುವಲ್ಲಿ ಸಹಾಯಕವಾಗುತ್ತದೆ ಎಂಬ ವಿಶ್ವಾಸ ನಮ್ಮದು.
A. N. Nataraj Gowda / ಎ ಎನ್ ನಟರಾಜ್ ಗೌಡ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು 💐💐 ಮತ್ತು ಅವರ ಮುಂದಿನ ಕಾರ್ಯಯಾತ್ರೆ ಯಶಸ್ವಿಯಾಗಲಿ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪದವೀಧರರ ವಿಭಾಗದ ಪರವಾಗಿ ಹಾರೈಸುತ್ತೇವೆ.
ಇಂತಿ
— ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪದವೀಧರ ವಿಭಾಗ.
07/10/2025
💥ಭಾರತ ಸಂವಿಧಾನದ ಮೇಲೆ ಮನುವಾದದ ಭಯೋತ್ಪಾದನೆಯ ದಾಳಿ💥
🔵ನೆನ್ನೆ ನಡೆದ ಘಟನೆಯಿಂದ ದೇಶದ ನ್ಯಾಯ ಮಂದಿರವೇ ನಡುಗಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ನಡೆದ ಶೂ ದಾಳಿ ದೇಶದ ಪ್ರಜಾತಂತ್ರದ ಇತಿಹಾಸದ ಪುಟದಲ್ಲಿ ಕಪ್ಪು ಅಧ್ಯಾಯವಾಗಿ ಉಳಿಯಲಿದೆ.
ಇದು ಕೇವಲ ನ್ಯಾಯಾಧೀಶರ ಮೇಲಿನ ಕೃತ್ಯವಲ್ಲ.
ಇದು ನ್ಯಾಯದ ತತ್ವದ ಮೇಲೆನ ದಾಳಿ, ಸಂವಿಧಾನದ ಮೌಲ್ಯಗಳ ಮೇಲೆನ ದಾಳಿ, ಅಂಬೇಡ್ಕರ್ ಕನಸಿನ ಭಾರತದ ಮೇಲೆನ ದಾಳಿ.
🔴ಮನುವಾದಿ ಚಿಂತನೆ ಎಷ್ಟು ಅಪಾಯಕಾರಿ ಎಂಬುದು ಇಂದಿನ ಘಟನೆ ಮತ್ತೆ ಸಾಬೀತಾಗಿದೆ.
ಸಮಾನತೆ, ನ್ಯಾಯ ಮತ್ತು ಮಾನವೀಯತೆ ಇವರಿಗೆ ಕಂಟಕ.
ಅವರ ಕನಸು — ಮನುಸ್ಮೃತಿಯ ಆಧಾರದ ಆಡಳಿತ,
ಅಲ್ಲಿ ಶೋಷಿತರು ಶೋಷಿತರಾಗಿಯೇ ಉಳಿಯಬೇಕು.
🔻ಆದರೆ ಮನುವಾದಿಗಳಿಗೆ ತಿಳಿದಿರಲಿ ಈ ದೇಶ ಬಾಬಾ ಸಾಹೇಬ್ರೆ ಕನಸಿನ ಭಾರತ, ಮೂಲ ನಿವಾಸಿಗಳ ಭಾರತ, ತಳ ಸಮುದಾಯಗಳ ಭಾರತ, ಮೂಲ ದ್ರಾವಿಡರ ಭಾರತ,
💥ಮೂಲ ನಿವಾಸಗಳ ಕಾಡುತಿರುವ ಪ್ರಶ್ನೆ ಏನೆಂದರೆ
• ನ್ಯಾಯಮೂರ್ತಿಗಳ ಮೇಲೆ ಶೂ ಎಸೆದವರ ಧೈರ್ಯಕ್ಕೆ ಬಲ ನೀಡಿದವರು ಯಾರು?
• ಈ ಅಸಹಿಷ್ಣು ಮನೋಭಾವಕ್ಕೆ ರಾಜಕೀಯ ಆಶ್ರಯ ನೀಡುತ್ತಿರುವವರು ಯಾರು?
•ಕೇಂದ್ರ ಸರ್ಕಾರವು ಮೌನವಾಗಿರುವುದು ಏಕೆ?
ನಮ್ಮ ಈ ಎಲ್ಲಾ ಪ್ರಶ್ನೆಗಳಿಗೆ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿಜೀ ಈ ಘಟನೆಯ ಕುರಿತು ಉತ್ತರ ಕೊಡಬೇಕು!
🇮🇳ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಸಂವಿಧಾನದ ರಕ್ಷಣೆಯೆಂಬ ಪವಿತ್ರ ಕರ್ತವ್ಯ ಹೊಂದಿದ್ದಾರೆ.
ಹಾಗಾದರೆ —
"ನ್ಯಾಯಾಂಗದ ಮೇಲೆ ದಾಳಿ ನಡೆದಾಗ ಅವರು ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಅಥವ ವಿಡಿಯೋ ಮಾಡುವ ಮೂಲಕ ಕಂಡಿಸುತವೇ ಎಂದರೆ ಸಾಲದು. ಅವರ ಇಂತಹ ಹೇಳಿಕೆಗಳು ಗಾಳಿಯಲ್ಲಿ ತೆಲಿಸುವ ನುಡಿಗಳು ಅಷ್ಟೆ. ಈ ಹೇಳಿಕೆಗಳು ಇನ್ನು ಹೆಚ್ಚು ಹೆಚ್ಚು ಮನುವಾದಿಗಳಿಗೆ ಪ್ರೋತ್ಸಾಹವಾಗುತ್ತಿದೆ.
ಪ್ರಧಾನಿಯವರ ಸಂದೇಶಗಳು ಕೇವಲ ಸಂದೇಶವಾಗಿ ಉಳಿದು ಬಿಟ್ಟಿದೆ.
ಅವರು ಯಾವ ಬದಿಯಲ್ಲಿದ್ದಾರೆ ಎನ್ನುವುದನ್ನು ದೇಶದ ಜನತೆ ಈಗ ತಿಳಿಯಬೇಕಿದೆ".
⚖️ನ್ಯಾಯವನ್ನು ನಂದಿಸಲು ಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ನಾವು ಅಂದರೆ ಮೂಲ ನಿವಾಸಿಗಳು ಮತ್ತು ನಮ್ಮ ಸರ್ಕಾರ ಎದ್ದೆ ತಟ್ಟಿ ನಿಲ್ಲುತೇವೆ.
📜 ಅಂಬೇಡ್ಕರ್ರವರು ಬರೆದ ಸಂವಿಧಾನ ನಮ್ಮ ಈ ದೇಶದ ಆತ್ಮ — ಅದನ್ನು ನಾಶಮಾಡಲು ಯಾರಿಗೂ ಎಂದಿಗು ಸಾಧ್ಯವಿಲ್ಲ.
🔶ಬಾಬಾಸಾಹೇಬರು ಹೇಳುತ್ತಾರೆ
“ಹೆಚ್ಚು ಶಿಕ್ಷಣ ಪಡೆಯಿರಿ, ಸಂಘಟಿತರಾಗಿರಿ, ಹೋರಾಡಿ.”
ಈ ಮಾತುಗಳ ಅರ್ಥ ಇಂದು ಇನ್ನಷ್ಟು ಪ್ರಸ್ತುತವಾಗಿದೆ.
ಮನುವಾದಿಗಳು ಅಸಹನೆ, ದ್ವೇಷ ಮತ್ತು ವರ್ಗಭೇದದ ಮೂಲಕ ಸಮಾಜವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ;
ಆದರೆ ಸಂವಿಧಾನವು ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಬಾಂಧವ್ಯ ಎಂಬ ಮೌಲ್ಯಗಳೆ ನಮಗೆ ಸ್ಫೂರ್ತಿ".
ಸಂವಿಧಾನವನ್ನು ನಾಶಮಾಡಲು ಯತ್ನಿಸುವ ಪ್ರತಿಯೊಬ್ಬರೂ ಈ ದೇಶದ ಪ್ರಜಾಪ್ರಭುತ್ವದ ಶತ್ರುಗಳು.
ನ್ಯಾಯಮೂರ್ತಿಯ ಮೇಲೆ ನಡೆದ ಈ ದಾಳಿ, ನ್ಯಾಯಾಂಗದ ಮೇಲೆ ದಾಳಿ ಅಲ್ಲ — ಇದು ಸಂವಿಧಾನದ ಕಮಾನದ ಮೇಲೆ ಕಲ್ಲು ಎಸೆಯುವ ಕೃತ್ಯ.
ನಾವು ಮೌನವಾಗಿದ್ದರೆ ನಾಳೆ ಈ ಶೂಗಳು ಸಂವಿಧಾನದ ಪ್ರತಿಯೊಂದು ವಿಧಾನದ ಮೇಲೆ ಎಸೆಯಲ್ಪಡುತ್ತವೆ.
ಆದ್ದರಿಂದ
⚖️ ನಾವು ಸಂವಿಧಾನದ ಪರ ನಿಲ್ಲಬೇಕು.
🗣️ ಮನುವಾದದ ಕತ್ತಲೆಯ ವಿರುದ್ಧ ಧ್ವನಿ ಎತ್ತಬೇಕು.
ನ್ಯಾಯ, ಸಮಾನತೆ ಮತ್ತು ಪ್ರಜಾತಂತ್ರದ ಮೌಲ್ಯಗಳನ್ನು ಕಾಪಾಡಬೇಕು.
ಇಂತಿ:-
ಮಧುಸೂದನ್ B K
ಕರ್ನಾಟಕ ಪ್ರಾದೇಶ ಕಾಂಗ್ರೆಸ್ ಕಮಿಟಿ ಪದವೀಧರರ
ವಿಭಾಗದ ರಾಜ್ಯ ಪ್ರದಾನ ಕಾರ್ಯದರ್ಶಿ ಹಾಗು ಸಾಮಾಜಿಕ ಜಾಲತಾಣ ಉಸ್ತುವಾರಿಗಳು
ಜೈ ಭೀಮ್ ✊, ಜೈ ಸಂವಿಧಾನ್✊
07/10/2025
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರಾದ ಶ್ರೀ M. B. Patil ರವರ ಹುಟ್ಟು ಹಬ್ಬದ ಅಂಗವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಪದವೀಧರರ ವಿಭಾಗದ ರಾಜ್ಯಧಕ್ಷರಾದ A. N. Nataraj Gowda / ಎ ಎನ್ ನಟರಾಜ್ ಗೌಡ ರವರು ಭೇಟಿಯಾಗಿ ಶುಭ ಕೋರಿದರು.