12/03/2026
ಅವಳೊಬ್ಬಳು ಗರುಡಕಣ್ಣಿನ ಹುಡುಗಿ. ಯಾವ ಹುಡುಗನನ್ನೇ ನೋಡಿದರೂ “ಇವರು ನನ್ನ ಮಟ್ಟಕ್ಕಿಲ್ಲ, not worth” ಎಂದು ತನ್ನೊಳಗೇ ಹೇಳಿಕೊಂಡು ಮತ್ತೆ ಅವರ ಕಡೆ ತಿರುಗಿ ಕೂಡ ನೋಡುವುದಿಲ್ಲ. ಅಷ್ಟೊಂದು ಚಾಣಾಕ್ಷಳು.
ಆದರೆ ಅವನ ವಿಷಯದಲ್ಲಿ ಹಾಗಾಗಲಿಲ್ಲ. ಯಾಕೆಂದರೆ ಅವನು ಬಾಜಿಗರ್ — ತನ್ನದೇ ಆದ ಚಾತುರ್ಯ, ಆಕರ್ಷಣೆಯಿರುವ ದುಬಾರಿ ಮನುಷ್ಯ.
ಅವನು ಎದುರು ಬಂದರೆ ಅವಳ ನಡೆಯುವ ವೇಗವೂ ಕಡಿಮೆಯಾಗುತ್ತಿತ್ತು; ಕಾಲುಗಳಲ್ಲಿದ್ದ ಶಕ್ತಿಯೇ ನಿಧಾನವಾಗಿ ನಿಶ್ಚಲವಾಗುತ್ತಿದ್ದಂತೆ.
ತಾನೇ ಅರಿಯದೇ, ಅಪ್ರಯತ್ನವಾಗಿ ಅವನಿಗಾಗಿ ಬದಲಾಗುವ ಅಭಿಲಾಷೆ ಅವಳೊಳಗೆ ಮೊಳೆಯತೊಡಗಿತ್ತು..... ✍🏻
ಪದ ಸಂಗ್ರಹ:-ಅಕ್ಷರ ಮಾಂತ್ರಿಕ ರವಿ ಬೆಳೆಗೆರೆ...
(ನನ್ನ ಬರಹವು ನನ್ನ ಚಿಂತನೆ ಮತ್ತು ಕಲೆಯನ್ನು ವ್ಯಕ್ತಪಡಿಸಲು ಮಾತ್ರ.
ಅದರಲ್ಲಿರುವ ಭಾವನೆಗಳನ್ನು ಅನರ್ಥವಾಗಿ ಅರ್ಥೈಸಿಕೊಳ್ಳುವುದು ಅದು ಓದುಗರ ತಿಳುವಳಿಕೆಯ ಮೇಲೆ ಅವಲಂಬಿತ.
ಕವಿತೆ ಮತ್ತು ಸಾಹಿತ್ಯವೆಂದರೆ ಭಾವನೆಗಳ ಅಭಿವ್ಯಕ್ತಿ — ಅದನ್ನು ತಪ್ಪಾಗಿ ಗ್ರಹಿಸುವ ಬದಲು ಅದರ ಅರ್ಥ ಮತ್ತು ಕಲೆಯನ್ನು ಮನದಟ್ಟು ಮಾಡಿಕೊಂಡು ಓದಿದರೆ ಅದರ ಸೌಂದರ್ಯ ಸ್ಪಷ್ಟವಾಗುತ್ತದೆ.)
20/12/2025
ಅವನು ನನಗೆ ಮಾಡಿದ ಅನ್ಯಾಯದ ವಿರುದ್ಧ
ನಾಗರಿಕ ಅಸಹಕಾರ ಚಳುವಳಿಯೊಂದನ್ನು ಆಯೋಜಿಸುವುದು ಅನಿವಾರ್ಯವಾಗಿದೆ.
ಯಾಕೆಂದರೆ,
ಜನ್ಮಸಿದ್ಧ ಹಕ್ಕಾಗಿ, ಪೀಳಿಗೆಯಿಂದ ಪೀಳಿಗೆಗೆ
ನನ್ನ ಕುಟುಂಬದಿಂದ ಬಳುವಳಿಯಾಗಿ ಬಂದ
ನನ್ನ ನಗು ಎಂಬ ಅಮೂಲ್ಯ ಸಂಪತ್ತನ್ನು
ಅವನು ಸಂಪೂರ್ಣವಾಗಿ ಕಸಿದುಕೊಂಡಿದ್ದಾನೆ.
ಅವನ ಆಡಳಿತದ ನಯವಾದ ಮುಖವಾಡ —
ಅವನ ನಸು ನಗು
ಜನರನ್ನು ಮರುಳು ಮಾಡುವ ಪ್ರಚಾರ ತಂತ್ರವಾಗಿಬಿಟ್ಟಿದೆ.
“ನಿನ್ನ ನಗು ಹೆಚ್ಚು ಆಕರ್ಷಕವಾಗಿದೆ,
ನೀ ನಗಬೇಡ —
ಹಾಗಾದರೆ ನನ್ನ ಜನಬೆಂಬಲ ಕುಸಿದುಬಿಡುತ್ತದೆ”
ಎಂಬ ಅಘೋಷಿತ ಆದೇಶವನ್ನು
ಅವನು ಜಾರಿಗೆ ತಂದಿದ್ದಾನೆ.
ಈ ಅನ್ಯಾಯದ ವಿರುದ್ಧ
ಚಳಿಗಾಲದ ಅಧಿವೇಶನದಲ್ಲಿ ಧರಣಿ ನಡೆಸಲು
ಸಕಲ ಸಿದ್ಧತೆಗಳು ನಡೆದಿದ್ದವು.
ನ್ಯಾಯದ ಹಾದಿಯಲ್ಲಿ ನನ್ನ ಜೊತೆಗೆ ಬಂದ
ನೆಟ್ಟಿಗರು, ಬೆಂಬಲಿಗರು, ಹೋರಾಟಗಾರರು —
ಎಲ್ಲರೂ ಕೊನೆಯ ಕ್ಷಣದಲ್ಲಿ
ಅವನ ನಸು ನಗು ಎಂಬ ರಾಜಕೀಯ ಮಂತ್ರಕ್ಕೆ
ಮನಸೋತು,
ಅವನ ಹಾದಿಯನ್ನೇ ಹಿಡಿದು ಹೊರಟುಬಿಟ್ಟರು.
ಹೌದೂ ಅವನು ಮಮತೆಯಿಲ್ಲದ ಮಾಟಗಾರ...
ನಸು ನಕ್ಕು ನನ್ನ ಮನ ಹೊಕ್ಕವನು,
ಎಂದೆಂದಿಗೂ ಕರಗದ ಬಹುಪಾಲು ಆಸ್ತಿಯನ್ನು ನನಗೆ ನಗುವಿನ ಮೂಲಕ ಬಳುವಳಿಯಾಗಿ ಕೊಡಬಹುದೆಂಬ ನಂಬಿಕೆಲಿ...ನಿಮ್ಮ ✍🏻....
ಅನುಮಾನಿಸದಿರಿ ಆ ನಗುವಿನ ರಾಜಕುಮಾರ ಯಾರೆಂದು.... (ಭಾವಚಿತ್ರಕ್ಕೆ ಒಂದಿಷ್ಟು ಭಾವನೆ ಕೊಟ್ಟೆ)
29/10/2025
ಹೆಣ್ಣಿಗೆ ಸುಳ್ಳಿನ ಅಗತ್ಯ ತುಂಬಾ ಇದೆ.
ನಾನು ಎಲ್ಲರನ್ನು ಪ್ರೀತಿಸುವೆ ಎಂದು ಹೇಳುವ ಮಾನವೀಯ ಮೌಲ್ಯಕ್ಕಿಂತ,
ನಿನ್ನನ್ನೇ ಮಾತ್ರ ಪ್ರೀತಿಸುವೆ ಗೌರವಿಸುವೆ, ಆರಾಧಿಸುವೆ,ಅಭಿಮಾನಿಸುವೆ, ಎಂದು ಹೇಳುವ ಸುಂದರ ಸುಳ್ಳುಗಳು ಹೆಣ್ಣಿನ ಮಾನಸಿಕ ಆರೋಗ್ಯಕ್ಕೆ ಪ್ರಮುಖ ಕಾರಣವಾಗುತ್ತವೆ.
ಹೌದೂ ಹೆಣ್ಣು ನೆನಸಿಕೊಂಡು ಅಳುವುದಕ್ಕಿಂತ ಮುನಿಸಿಕೊಂಡು ಅಳುವುದೇ ಜಾಸ್ತಿ.....
ಹೆಣ್ಣು ಮಹಾಮಾರಿ ಎನ್ನುವ ಗಂಡಸರು,
ಹೆಣ್ಣು ಮಹಾಮಾತೆ ಎನ್ನುವುದು ಮರೆಯದಿರಿ.
(ಪೂರ್ಣ ವಿವರ ಪುಸ್ತಕದಲ್ಲಿ) ✍🏻
26/10/2025
ಅವಳು ಅವನಿಗೆ ಹೂವು ಕೇಳಿದ್ದಳು.
ತನ್ನ ಮುಡಿಗೆ ಮುಡಿಯಲು.
ಅವನೊಬ್ಬ ಸಮಾಜ ಸೇವಕ ಆದುದರಿಂದ,
ಹೂವಿನ ಅಂಗಡಿಯನ್ನೇ ಇಟ್ಟುಕೊಟ್ಟ.
ಯಾವುದೇ ಬ್ಯುಸಿನೆಸ್ ಆದ್ರೂ ಬಹಳ ದಿನ ನಡೆಯೋಲ್ಲ ಅಲ್ವಾ.
ಪಾಪ ಅವಳೀಗ ಹೂವಿನ ಅಂಗಡಿ ಬಿಟ್ಟು,
ರಸ್ತೆ ಬದಿ ಕೂತು ಹೂ ಮಾರುತ್ತಿರುವಳು😊