KBOCWWB

KBOCWWB

Share

Karnataka Building And Other Construction Workers Welfare Board

Photos from KBOCWWB's post 02/06/2026

ಶಿರಹಟ್ಟಿಯಲ್ಲಿ ಮಾನ್ಯ ಶಾಸಕರಾದ ಶ್ರೀ DrChandru Lamani ಅವರು ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸುರಕ್ಷತಾ ಕಿಟ್ ಹಾಗೂ ಗೌಂಡಿ ಕಾರ್ಮಿಕರಿಗೆ ಕಟ್ಟಡ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಿದರು.

ಈ ವೇಳೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

#ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ

01/06/2026

ಕ್ರೇನ್‌ಗಳನ್ನು ನಿರ್ಮಾಣ ಸಾಮಗ್ರಿಗಳ ಸಾಗಿಸಲು ಮಾತ್ರವೇ ಬಳಸಿ. ಕ್ರೇನ್‌ಗಳಲ್ಲಿ ಕಾರ್ಮಿಕರು ನಿಂತು ಕಟ್ಟಡದ ಮೇಲು ಭಾಗಕ್ಕೆ ಹೋಗುವುದು ಹಾಗೂ ಕೆಳಕ್ಕೆ ಬರುವುದು ಅಪಾಯಕಾರಿ. ಈ ಬಗ್ಗೆ ಕಾರ್ಮಿಕರು ಗಮನ ಹರಿಸಿ.

#ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ

31/05/2026

ವಿಶ್ವ ತಂಬಾಕುರಹಿತ ದಿನ.
ಆರೋಗ್ಯಕ್ಕೆ ಮಾರಕವಾಗಿರುವ ತಂಬಾಕು ಬಳಕೆ ವಿರುದ್ಧ ಸಮರ ಸಾರೋಣ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸೋಣ.

30/05/2026

ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಕೆಲಸದ ವೇಳೆ ಅಪಘಾತ ಸಂಭವಿಸಿದಲ್ಲಿ ಮಂಡಳಿಯು ಅಪಘಾತ ಪರಿಹಾರವನ್ನು ನೀಡುತ್ತದೆ. ಈ ಸೌಲಭ್ಯವನ್ನು ಪಡೆಯಲು ಫಲಾನುಭವಿಯು ಅಪಘಾತಕ್ಕೀಡಾದ ದಿನದಿಂದ ಒಂದು ವರ್ಷದ ಒಳಗೆ ಅರ್ಜಿ ಸಲ್ಲಿಸಬೇಕು.

#ಶ್ರಮೇವ_ಜಯತೇ
#ಕಾರ್ಮಿಕ_ಇಲಾಖೆ

30/05/2026

ಕಟ್ಟಡ ಕಾರ್ಮಿಕರು ಧರಿಸಬೇಕಾದ ಪ್ರಮುಖ ಸುರಕ್ಷತಾ ಸಾಧನಗಳಲ್ಲಿ ಗ್ಲೌಸ್‌ ಪ್ರಮುಖವಾದುದು. ಆದರೆ ಈ ಗ್ಲೌಸ್‌ ಗುಣಮಟ್ಟದಿಂದ ಕೂಡಿದ್ದು, ಅವುಗಳನ್ನು ಸರಿಯಾದ ರೀತಿಯಲ್ಲಿ ಧರಿಸಬೇಕು. ಇಲ್ಲದೇ ಇದ್ದರೆ ಕೈನ ಚರ್ಮಕ್ಕೆ ಹಾನಿಯಾಗಬಹುದು. ಗ್ಲೌಸ್‌ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದೂ ಅತೀ ಅವಶ್ಯ.

#ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ

30/05/2026

ಕೊಠಡಿಗಳ ಕಿಟಕಿ, ಬಾಗಿಲುಗಳನ್ನು ಜೋಡಿಸುವಾಗ ಮತ್ತು ಮರದ ದಿಮ್ಮಿಗಳನ್ನು ಸಾಗಿಸಿ ಜೋಡಿಸುವಾಗ ಅಗತ್ಯ ಎಚ್ಚರಿಕೆಯನ್ನು ತಪ್ಪದೇ ವಹಿಸಿ. ಹರಿತವಾದ ಅಂಚುಗಳು ದೇಹಕ್ಕೆ ತಾಗಿದರೆ ಅಪಾಯವಾಗುತ್ತದೆ. ಇವುಗಳಲ್ಲಿ ತಯಾರಿಸಿವ ಯಂತ್ರಗಳನ್ನು ಬಳಸುವಾಗ ಮತ್ತು ಇಡುವಾಗ ಜಾಗ್ರತೆ ಇರಲಿ.

#ಶ್ರಮೇವ_ಜಯತೇ
#ಕಾರ್ಮಿಕ_ಇಲಾಖೆ

30/05/2026

ಕಟ್ಟಡಗಳ ಮುಂಭಾಗದ ಚರಂಡಿ ಸ್ವಚ್ಛಗೊಳಿಸುವಾಗ ಮತ್ತು ಕಟ್ಟುವಾಗ ಅಗತ್ಯ ಎಚ್ಚರಿಕೆಯನ್ನು ವಹಿಸಬೇಕು. ವಾಹನಗಳ ಸಂಚಾರದ ಮೇಲೆ ಗಮನ ಇಡಬೇಕು. ಕೊಳಕು ಮಣ್ಣಿನ ಕೆಲಸ ಮಾಡುವಾಗ ಮರೆಯದೇ ಗ್ಲೌಸ್‌ ಮತ್ತು ಶೂಗಳನ್ನು ಧರಿಸಿ. ಚರ್ಮದ ಉರಿತ ಮತ್ತು ಇತರೆ ಸಮಸ್ಯೆ ಕಂಡು ಬಂದರೆ ಚಿಕಿತ್ಸೆ ಪಡೆದುಕೊಳ್ಳಿ.

#ಕಾರ್ಮಿಕ_ಇಲಾಖೆ #ಶ್ರಮೇವ_ಜಯತೇ

Photos from KBOCWWB's post 29/05/2026

ಬಸವನಗುಡಿಯ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ಮಂಡಳಿಯ ವತಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸೇಫ್ಟಿ ಕಿಟ್ ಗಳನ್ನು ಮಾನ್ಯ ಶಾಸಕರಾದ ಶ್ರೀ L.A.Ravi Subramanya ಅವರು ವಿತರಿಸಿದರು.

ಈ ವೇಳೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

#ಕಾರ್ಮಿಕ_ಇಲಾಖೆ #ಶ್ರಮೇವ_ಜಯತೇ

Photos from KBOCWWB's post 29/05/2026

ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ಬೇಗೂರು ಗ್ರಾಮದಲ್ಲಿ ಮಂಡಳಿಯ ವತಿಯಿಂದ ನಿರ್ಮಿಸಲಾಗುವ ಶ್ರಮಿಕ ವಸತಿ ಶಾಲೆಗೆ ಮಾನ್ಯ ಶಾಸಕರಾದ ಶ್ರೀ Sharath Bachegowda ಅವರು ಶಂಕುಸ್ಥಾಪನೆ ಮಾಡಿದರು. ಇದೇ ವೇಳೆ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಕಿಟ್‌ ವಿತರಿಸಿದರು.

ಈ ವೇಳೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

#ಶ್ರಮೇವ_ಜಯತೇ #ಕಾರ್ಮಿಕ_ಇಲಾಖೆ

28/05/2026

ನಾಡಿನ ಸಮಸ್ತ ಜನತೆಗೆ ಈದ್ ಅಲ್ ಅದಾ (ಬಕ್ರೀದ್) ಹಬ್ಬದ ಹಾರ್ದಿಕ ಶುಭಾಶಯಗಳು.

Want your business to be the top-listed Government Service in Bangalore?

Click here to claim your Sponsored Listing.

Location

Address


Kalyana Suraksha Bhavan, Dairy Circle
Bangalore
560029

Opening Hours

Monday 10am - 5:30pm
Tuesday 10am - 5:30pm
Wednesday 10am - 5:30pm
Thursday 10am - 5:30pm
Friday 10am - 5:30pm
Saturday 10am - 5:30pm