28/05/2026
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ತ್ಯಾಗ, ಬಲಿದಾನ ಹಾಗೂ ಶ್ರದ್ಧೆಯ ಸಂಕೇತವಾದ ಪವಿತ್ರ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಈದ್ ನಿಮ್ಮ ಜೀವನದಲ್ಲಿ ಹೊಸ ಭರವಸೆಗಳನ್ನು ಮೂಡಿಸಲಿ.
ಈದ್ ಮುಬಾರಕ್!
Official Account of the Department of Women and Child Development, Government of Karnataka.
28/05/2026
ನಾಡಿನ ಸಮಸ್ತ ಮುಸ್ಲಿಂ ಬಾಂಧವರಿಗೆ ತ್ಯಾಗ, ಬಲಿದಾನ ಹಾಗೂ ಶ್ರದ್ಧೆಯ ಸಂಕೇತವಾದ ಪವಿತ್ರ ಬಕ್ರೀದ್ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಈದ್ ನಿಮ್ಮ ಜೀವನದಲ್ಲಿ ಹೊಸ ಭರವಸೆಗಳನ್ನು ಮೂಡಿಸಲಿ.
ಈದ್ ಮುಬಾರಕ್!
ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ರಾಜ್ಯಾದ್ಯಂತ 10,000 ಅಂಗನವಾಡಿಗಳಲ್ಲಿ 2026-27ನೇ ಸಾಲಿನ ಎಲ್.ಕೆ.ಜಿ ಹಾಗೂ ಯು.ಕೆ.ಜಿ ಮಾದರಿ ಮಾಂಟೆಸ್ಸರಿ ಶಿಕ್ಷಣದ ದಾಖಲಾತಿಗಳು ಆರಂಭಗೊಂಡಿವೆ.
ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಗಳಲ್ಲಿ ಕಲಿಕೆ, ಸ್ಮಾರ್ಟ್ ಟಿವಿ, ಮತ್ತು ನುರಿತ ಶಿಕ್ಷಕರ ಸೌಲಭ್ಯದೊಂದಿಗೆ ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕೆ ಇಂದೇ ಭದ್ರ ಬುನಾದಿ ಹಾಕಿ.
• ಕೂಡಲೇ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಗಳನ್ನು ಸಂಪರ್ಕಿಸಿ, ಪ್ರವೇಶಾತಿ ಪಡೆದುಕೊಳ್ಳಿ.
ರಾಜ್ಯದ ಜನರ ಆಶೀರ್ವಾದದೊಂದಿಗೆ ನಾವು ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸಿರುವ ಈ ಸಾರ್ಥಕ ಸಂದರ್ಭದಲ್ಲಿ ನಮ್ಮ ಸರ್ಕಾರದ ಎಲ್ಲಾ ಸಾಧನೆಗಳ ಶ್ರೇಯವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಪಿಸುತ್ತಿದ್ದೇವೆ.
ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಪ್ರತಿ ಮಾತಿಗೂ ಬದ್ಧರಾಗಿ ನಡೆಯುವ ಮೂಲಕ ನುಡಿದಂತೆ ನಡೆದ ಹೆಮ್ಮೆ ನಮಗಿದೆ. 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಪ್ರತಿ ಮನೆಗೂ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ.
ನಾಡಿನ ಪ್ರತಿಯೊಬ್ಬ ಮಹಿಳೆಯೂ ಕೂಡ ಆರ್ಥಿಕ ಸಂಕಷ್ಟಗಳಿಂದ ಹೊರಬಂದು ಸುಖ ಸಂತೋಷದಿಂದ ಜೀವನ ಸಾಗಿಸುವಂತಾಗಬೇಕು ಎಂಬ ಉದ್ದೇಶವನ್ನು ಗೃಹಲಕ್ಷ್ಮಿ ಯೋಜನೆಯು ಈಡೇರಿಸುತ್ತಿದೆ.
ಸುಮಾರು 1.24 ಕೋಟಿ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು ₹2,000 ಧನಸಹಾಯ ವರ್ಗಾವಣೆ ಮಾಡಲಾಗುತ್ತಿದ್ದು, ಈ ಯೋಜನೆಗಾಗಿ ಈವರೆಗೆ ₹74,216 ಕೋಟಿ ವ್ಯಯಿಸಲಾಗಿದೆ.
21/05/2026
ಭಾರತ ರತ್ನ, ಆಧುನಿಕ ಭಾರತದ ನಿರ್ಮಾತೃ, ಮಾಜಿ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆಯಂದು ಗೌರವ-ಪೂರ್ವಕ ನಮನಗಳು. ಕೋಟ್ಯಾಂತರ ಜನರಿಗೆ ಸ್ಪೂರ್ತಿಯಾಗಿದ್ದ ರಾಜೀವ್ ಗಾಂಧಿಯವರ ಮಾರ್ಗದರ್ಶನ, ದಾರಿದೀಪಗಳು ಸದಾಕಾಲವೂ ಅವಿಸ್ಮರಣೀಯ.
20/05/2026
ಇಂದು ಬೆಂಗಳೂರಿನ ವಿಧಾನಸೌಧದ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಾನ್ಯ ಸಚಿವರಾದ ಶ್ರೀಮತಿ ಲಕ್ಷ್ಮಿ ಆರ್ ಹೆಬ್ಬಾಳ್ಕರ್ ಅವರು ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಇಲಾಖೆಯ ಕಾರ್ಯದರ್ಶಿಗಳಾದ ಡಾ. ಶಾಮ್ಲಾ ಇಕ್ಬಾಲ್, ಐಸಿಡಿಎಸ್ ನಿರ್ದೇಶಕರಾದ ಮಹೇಶ್ ಬಾಬು, ಜಂಟಿ ನಿರ್ದೇಶಕರಾದ (ಐ.ಸಿ.ಡಿ.ಎಸ್) ನಿಶ್ಚಲ್ ಬಿ.ಹೆಚ್, ಮಕ್ಕಳ ರಕ್ಷಣಾ ನಿರ್ದೇಶನಾಲಯ ಇಲಾಖೆಯ ಕಾರ್ಯದರ್ಶಿಗಳಾದ ಶ್ರೀಮತಿ ಇಂದಿರಮ್ಮ, ಆಪ್ತ ಕಾರ್ಯದರ್ಶಿಗಳಾದ ಎಸ್.ಎಚ್ ವಿಶ್ವನಾಥ್ ಹಾಗೂ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Today at the Vidhana Soudha, the Hon’ble Minister for Women and Child Development, Smt. Lakshmi R. Hebbalkar, chaired a high-level review meeting with departmental officials to accelerate progress and strengthen impactful development initiatives.
The meeting was attended by Department Secretary Dr. Shyamala Iqbal, ICDS Director Shri Mahesh Babu, Joint Director (ICDS) Shri Nishchal B.H., Secretary of the Directorate of Child Protection Smt. Indiramma, the Minister’s Private Secretary Shri S.H. Vishwanath, along with other senior officials, collectively discussed strategic planning, effective implementation, and future-focused development priorities.
20/05/2026
ರಾಜ್ಯ ಸರ್ಕಾರದ ಯಶಸ್ವಿ 3 ವರ್ಷಗಳ ಸಾರ್ಥಕ ಸೇವೆಯ ಸಮರ್ಪಣೆಯ ಸಮಾವೇಶದ ಸಂದರ್ಭದಲ್ಲಿ, ನಮ್ಮ ಇಲಾಖೆಯ ವತಿಯಿಂದ ತುಮಕೂರು ಜಿಲ್ಲೆಯ 600 ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಅಧಿಕೃತ ಆದೇಶ ಪತ್ರಗಳನ್ನು ವಿತರಿಸಲಾಯಿತು.
ಗ್ರಾಮೀಣ ಮತ್ತು ನಗರಾಭಿವೃದ್ಧಿಯ ತಳಮಟ್ಟದಲ್ಲಿ ಮಕ್ಕಳ ಪೋಷಣೆ ಹಾಗೂ ಮಹಿಳೆಯರ ಸಬಲೀಕರಣಕ್ಕಾಗಿ ಹಗಲಿರುಳು ಶ್ರಮಿಸುವ ನಮ್ಮ ಅಂಗನವಾಡಿ ಸಿಬ್ಬಂದಿಯ ಬಲವರ್ಧನೆಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ. ಈ ಮಹತ್ತರ ಹೆಜ್ಜೆಯು ಇಲಾಖೆಯ ಇತಿಹಾಸದಲ್ಲೇ ಒಂದು ದೊಡ್ಡ ದಾಖಲೆಯಾಗಿ ಹೊರಹೊಮ್ಮಿರುವುದು ನಮ್ಮೆಲ್ಲರಿಗೂ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.
ನೂತನವಾಗಿ ಆದೇಶ ಪತ್ರ ಸ್ವೀಕರಿಸಿದ ಎಲ್ಲಾ ಆತ್ಮೀಯ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಹೃದಯಪೂರ್ವಕ ಅಭಿನಂದನೆಗಳು.
19/05/2026
ತುಮಕೂರು ಜಿಲ್ಲೆಯಲ್ಲಿ ಒಂದೇ ದಿನ 600 ಮಂದಿಗೆ ಅಂಗನವಾಡಿ ನೇಮಕಾತಿ ; ಸಾಧನಾ ಸಮಾವೇಶದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ತುಮಕೂರು ಜಿಲ್ಲೆ ಒಂದರಲ್ಲೇ 600 ಮಂದಿ ಅಂಗನವಾಡಿ ಕಾರ್ಯಕರ್ತರಿಗೆ ಮತ್ತು ಸಹಾಯಕರಿಗೆ ಒಂದೇ ದಿನ ನೇಮಕಾತಿ ಪತ್ರವನ್ನು ಕೊಡಲಾಗಿದ್ದು ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಟ್ಟಿಗೆ ದಾಖಲೆ ಎನ್ನುವಂತಹ ಸಾಧನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ತುಮಕೂರಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆದ ರಾಜ್ಯ ಸರ್ಕಾರದ 3ನೇ ವರ್ಷದ ಸಾಧನಾ ಸಮಾವೇಶ ಮತ್ತು 1.52 ಲಕ್ಷ ಮಂದಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು. ಇದಲ್ಲದೆ, ಇದೇ ವೇದಿಕೆಯ ಮೂಲಕ 106 ವಿವಿಧ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಮಾಡುತ್ತಿದ್ದೇವೆ ಎಂದು ಹೇಳಿದ ಸಚಿವರು, ಇವತ್ತು ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹ ಜ್ಯೋತಿ, ಗೃಹಲಕ್ಷ್ಮಿ ಇವೆಲ್ಲವನ್ನೂ ಮಹಿಳೆಯನ್ನು ಕೇಂದ್ರವಾಗಿಟ್ಟು ಮಾಡಿರುವಂಥ ಯೋಜನೆಗಳು. ಇವೆಲ್ಲವೂ ಅತ್ಯಂತ ಯಶಸ್ವೀ ಯೋಜನೆಗಳಾಗಿ ಜನರ ಮನಸ್ಸು ತಟ್ಟಿದೆ. ಆದರೆ ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವ ಬಿಜೆಪಿಯವರು, ಉತ್ತರ ಭಾರತದ ರಾಜ್ಯಗಳಲ್ಲಿ ಇದೇ ಕರ್ನಾಟಕದ ಮಾಡೆಲನ್ನು ಕಾಪಿ ಮಾಡಿಕೊಂಡು ಯೋಜನೆಗಳನ್ನು ರೂಪಿಸಿ ಚುನಾವಣೆ ಗೆಲ್ಲುತ್ತಿದ್ದಾರೆ. ಆದರೆ ಇಲ್ಲಿ ಮಾತ್ರ ತೋರಿಕೆಗಾಗಿ, ವಿರೋಧಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಾರೆ.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ 60 ಸಾವಿರ ಕೋಟಿಯಷ್ಟು ಹಣ ಬಳಸುತ್ತಿದ್ದೇವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ವರ್ಷಕ್ಕೆ 28 ಸಾವಿರ ಕೋಟಿ ಹಣ ಖರ್ಚು ಮಾಡುತ್ತಿದ್ದೇವೆ. ಇದರಿಂದ ಮಹಿಳೆಯರ ಆರ್ಥಿಕ ಶಕ್ತಿವಂತರಾಗಿದ್ದಾರೆ. ಗೃಹಲಕ್ಷ್ಮಿ ಕಾರಣದಿಂದ ನಮ್ಮ ಜೀವನ ಬದಲಾಗಿದೆ ಎಂದು ಹೇಳುತ್ತಿದ್ದಾರೆ. ಇದರಿಂದ ನಮಗೂ ಹೆಮ್ಮೆಯಾಗುತ್ತಿದೆ ಎಂದರು.
ಸಮಾರಂಭದಲ್ಲಿ ತುಮಕೂರು ಜಿಲ್ಲೆಯಲ್ಲಿ ಭೂರಹಿತ 1.52 ಲಕ್ಷ ಕುಟುಂಬಗಳಿಗೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಯಾಗಿ ಭೂ ಗ್ಯಾರಂಟಿ ಸಲುವಾಗಿ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಕೆಎಚ್ ಮುನಿಯಪ್ಪ, ಎಂಬಿ ಪಾಟೀಲ್, ಡಾ.ಜಿ. ಪರಮೇಶ್ವರ್, ಜಮೀರ್ ಅಹ್ಮದ್, ಕೃಷ್ಣ ಭೈರೇಗೌಡ, ಎಚ್.ಸಿ ಮಹದೇವಪ್ಪ, ಬೈರತಿ ಸುರೇಶ್, ಎಚ್.ಕೆ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
|
ಉಡುಪಿಯಲ್ಲಿ ವಿಶೇಷ ಮಕ್ಕಳಿಗಾಗಿ ನಿರ್ಮಾಣಗೊಳ್ಳಲಿರುವ ‘ಸಾಮರ್ಥ್ಯವನ ಪಾರ್ಕ್’ ನೀಲನಕ್ಷೆಯ ವಿಡಿಯೋ
19/05/2026
ತುಮಕೂರು ಪ್ರವಾಸದ ಮಾರ್ಗ ಮಧ್ಯದಲ್ಲಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಸಿದ್ರಾಮಣ್ಣ ಹಾಗೂ ಅನೇಕ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು.
| | | |
08/05/2026
08 ಮೇ 2026 ರ ಪತ್ರಿಕಾ ವರದಿಗಳು.
| Monday | 10:30am - 6pm |
| Tuesday | 10:30am - 6pm |
| Wednesday | 10:30am - 6pm |
| Thursday | 10:30am - 6pm |
| Friday | 10:30am - 6pm |
| Saturday | 10:30am - 6pm |