Citizens for Democracy

Citizens for Democracy

Share

Citizens for democracy - An IT Sector Initiative CFD members have been discussing the general elections 2014.

Citizens for democracy
CFD is a group of conscientious senior IT/ Technology professionals (typically at CxO level). For the stability of Indian society, overall growth of the country, internal and external security issues, inclusive and equitable growth of economy- a strong, stable and development oriented government is a basic requirement. We firmly believe, if a stable and strong government

22/04/2019

In memory of his brother late *Sri.B.N.Vijayakumar* Ex-MLA, Jayanagar, Bengaluru, his brother B.N.Murthy is conducting a contest:

India is celebrating Democracy and here is a chance to win attractive cash prizes as part of the election festivity!

Do you read newspapers and magazines?
If your answer is yes, then collect your favourite cartoons related to 2019 National elections and send them to

[email protected]

The rules of the competition are:-

1. Cartoons need to be from only Kannada or English magazines and newspapers.
2. The newspaper/magazine has to be dated between 10th March 2019 to 31st May 2019.
3. Last date to receive the entries is 31st May 2019.
4. All cartoons should include
(a) Name of the magazine/newspaper,
(b) Date of publication
(c) Name along with valid email address and phone number of the sender
5. The cartoon clipping must be accompanied by a write-up of maximum 50 words explaining the reason for choosing the particular piece.
6. Only one entry per person will be permitted
7. The judges decision will be final.
8. Cash prizes worth Rs 20,000 to be won!!

~ Dr. Barani Dixith

21/04/2019

ಅನನ್ಯ ಸಂಸದ ಅನಂತಕುಮಾರ ಹೆಗಡೆ - ೬

ತತ್ವಜ್ಞಾನದ ಬೇರು, ತಂತ್ರಜ್ಞಾನದ ಚಿಗುರು

ಆಧುನಿಕ ಬದುಕಿನ ಸಂಕಟವಿರುವುದು ತತ್ವಜ್ಞಾನ ಹಾಗೂ ತಂತ್ರಜ್ಞಾನದ ನಡುವಿನ ಅಂತರದಲ್ಲಿ. ತತ್ವಜ್ಞಾನ ಬಲ್ಲವರಿಗೆ ತಂತ್ರಜ್ಞಾನದ ಆಳ ಗೊತ್ತಿಲ್ಲ, ತಂತ್ರಜ್ಞಾನ ಬಲ್ಲವರಿಗೆ ತತ್ವಜ್ಞಾನದ ಅರಿವಿಲ್ಲ ಎನ್ನುವ ಸ್ಥಿತಿ ಇದೆ. ಬದುಕಿನ ಅನುಕೂಲಗಳನ್ನು ತಂತ್ರಜ್ಞಾನ ಸೃಷ್ಟಿಸುತ್ತದೆ, ಬದುಕಿನ ನೆಮ್ಮದಿಯನ್ನು ತತ್ವಜ್ಞಾನ ತೋರಿಸುತ್ತದೆ. ಬದುಕಿನ ಮಿತಿಗಳ ಅರಿವಿಲ್ಲದಿದ್ದರೆ ಅಪರಿಮಿತವಾದ ಅನುಕೂಲಗಳೂ ನೆಮ್ಮದಿಯನ್ನು ನೀಡುವುದಿಲ್ಲ. ತತ್ವಜ್ಞಾನದ ತಿಳಿವಳಿಕೆ ಎಷ್ಟೇ ಇದ್ದರೂ ಅನುಕೂಲಗಳಿಲ್ಲದಿದ್ದರೆ ಬದುಕಿನಲ್ಲಿ ಸುಖವಿರುವುದಿಲ್ಲ. ಬದುಕಿನ ಸುಖವನ್ನೂ ಬಾಳಿನ ನೆಮ್ಮದಿಯನ್ನೂ ಒಟ್ಟಿಗೇ ಅನುಭವಿಸಲು, ತತ್ವಜ್ಞಾನ ತಂತ್ರಜ್ಞಾನಗಳೆರಡೂ ನಮಗೆ ಬೇಕು.
ಶ್ರೀ ಅನಂತಕುಮಾರ ಹೆಗಡೆಯವರು ತತ್ವಜ್ಞಾನ ತಂತ್ರಜ್ಞಾನಗಳೆರಡನ್ನೂ ಜೋಡಿಸಿಕೊಂಡವರು. ಭಾರತೀಯ ತತ್ವಜ್ಞಾನದ ಕುರಿತು ಅಧ್ಯಯನ ಮಾಡಿದಂತೆಯೇ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡುವಷ್ಟು ಅಧ್ಯಯನ ಮಾಡಿದ್ದಾರೆ. ಇಂದು ವೇಗದಲ್ಲಿ ವಿಕಾಸವಾಗುತ್ತಿರುವ ನ್ಯಾನೋ ತಂತ್ರಜ್ಞಾನ ಹಾಗೂ ಕೃತ್ರಿಮ ಬುದ್ಧಿಮತ್ತೆ (Artificial Intelligence), ಇವೆರಡರ ವಿಷಯದಲ್ಲಿಯೂ ಸಾಕಷ್ಟು ಅಧ್ಯಯನ ಮಾಡಿರುವ ಅನಂತಕುಮಾರ ಹೆಗಡೆಯವರು ಹೊಸ ತಂತ್ರಜ್ಞಾನದ ಬಳಕೆಯ ವಿಧಾನವನ್ನು ಬಹಳ ಬೇಗ ಕಲಿಯಬಲ್ಲರು. ದೇಶದ ಅನೇಕ ವಿಜ್ಞಾನಿಗಳು, ತಂತ್ರಜ್ಞಾನಿಗಳ ಸಂಗಡ ಸಂವಾದ ಮಾಡುವಷ್ಟು ವಿಷಯ ಜ್ಞಾನವನ್ನೂ ಸ್ನೇಹವನ್ನೂ ಗಳಿಸಿದ್ದಾರೆ. ಉದಾಹರಣೆಗೆ: ಡಾ. ಕಟ್ಟೇಶ ಕಟ್ಟಿ ಅಂತಾರಾಷ್ಟಿçÃಯ ಮಾನ್ಯತೆ ಪಡೆದ ವಿಜ್ಞಾನಿ. ಅವರು ಮಾಡಿದ ವಿಜ್ಞಾನದ ಶೋಧಕ್ಕಾಗಿ ನೊಬೆಲ್ ಪ್ರಶಸ್ತಿಗೆ ಅವರ ಹೆಸರು ಸೂಚಿತವಾಗಿತ್ತು, ಅಂತಹ ಸಾಧಕರವರು. ಡಾ. ಕಟ್ಟೇಶ ಕಟ್ಟಿಯವರಿಗೆ ಆಯುರ್ವೇದವನ್ನಾಧರಿಸಿದ ಔಷಧ ಶೋಧಕ್ಕೆ ಅನಂತಕುಮಾರ ಹೆಗಡೆಯವರು ಒತ್ತಾಸೆ ನೀಡಿದವರು. ಕ್ಯಾನ್ಸರ್ ಕಾಯಿಲೆಗೆ ನ್ಯಾನೋ ತಂತ್ರಜ್ಞಾನ ಆಧಾರಿತ ಆಯುರ್ವೇದದ ಔಷಧವೊಂದನ್ನು ಡಾ. ಕಟ್ಟೇಶ ಕಟ್ಟಿ ಕಂಡುಹಿಡಿದಿದ್ದಾರೆ. ಅದು ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿದೆ. ಆ ಪ್ರಕ್ರಿಯೆಯಲ್ಲಿ ಅನಂತಕುಮಾರ ಹೆಗಡೆಯವರ ಪಾತ್ರವೂ ಮಹತ್ವದ್ದಾಗಿದೆ. ಮೂಲಭೂತ ಸಂಶೋಧನೆಗಳು, ಪರ್ಯಾಯ ಚಿಂತನೆಗಳ ಮಾರ್ಗದಲ್ಲಿ ಹೆಗಡೆಯವರು ಅನೇಕರ ಒಡನಾಟವನ್ನು ಮಾಡಿದ್ದಾರೆ. ದೇಶ ವಿದೇಶಗಳಲ್ಲಿ ತಿರುಗಿ ಹೊಸ ಶೋಧಗಳ ಅನುಕೂಲಗಳನ್ನು ನೋಡಿ ತಿಳಿದಿದ್ದಾರೆ.
ಕರ್ನಾಟಕದ ರಾಜಕಾರಣಿಗಳಲ್ಲಿ ಹೆಗಡೆಯವರಷ್ಟು ತಂತ್ರಜ್ಞಾನವನ್ನು ಅಭ್ಯಾಸ ಮಾಡಿದವರು ವಿರಳ. ಅಭ್ಯಾಸ ಮಾಡಿದ, ಕಂಡು ತಿಳಿದ ಸಂಗತಿಗಳನ್ನು ಕ್ಷೇತ್ರದ ಜನರಿಗೆ ಪರಿಚಯಿಸಿ ಅವರಿಗೆ ಅನುಕೂಲ ಮಾಡಿಕೊಡದಿದ್ದರೆ ಅವರಿಗೆ ಸಮಾಧಾನವಿರುವುದಿಲ್ಲ. ನೀರಾವರಿಯನ್ನು ಮೊಬೈಲ್ ಮೂಲಕ ನಿಯಂತ್ರಿಸುವ, ನಿರ್ವಹಿಸುವ ಮೊಬಿಟೆಕ್ ತಂತ್ರಜ್ಞಾನವನ್ನು ತಮಿಳುನಾಡಿನಲ್ಲಿ ನೋಡಿದ ಹೆಗಡೆಯವರು ಅದನ್ನು ಕ್ಷೇತ್ರಕ್ಕೆ ಪರಿಚಯಿಸಿದರು. ಬಾನಿಯಲ್ಲಿ ಎಷ್ಟು ನೀರಿದೆ, ಎಷ್ಟು ಹೊಲ/ತೋಟಕ್ಕೆ ನೀರು ಹಾಯಿಸಬಹುದು ಎನ್ನುವುದನ್ನು ತಿಳಿಸುವ, ಸಮಯಕ್ಕೆ ತಕ್ಕಂತೆ ಗಿoಟve ನ್ನು ತನ್ನಿಂದ ತಾನೇ ಬದಲಾಯಿಸಿಕೊಳ್ಳಬಹುದಾದ, ಬೇರೊಂದು ಕೆಲಸದ ಜೊತೆಯೂ ಕೃಷಿ ನೀರಾವರಿಯನ್ನು ಸಮರ್ಥವಾಗಿ ನಿರ್ವಹಿಸಬಹುದಾದ ಮೊಬಿಟೆಕ್ ತಂತ್ರಜ್ಞಾನವನ್ನು ಕ್ಷೇತ್ರದ ಜನತೆಗೆ ಪರಿಚಯಿಸಿದ್ದಾರೆ. ಅಷ್ಟೇ ಅಲ್ಲ, ಎಲ್ಲರಿಗಿಂತ ಮೊದಲು ತಮ್ಮ ತೋಟದಲ್ಲಿಯೇ ಪ್ರಯೋಗ ಮಾಡಿ ಅನುಭವ ಪಡೆದು, ಆ ಅನುಭವದ ಆಧಾರದಲ್ಲಿಯೇ ಸಾರ್ವಜನಿಕರಿಗೆ ಈ ತಂತ್ರಜ್ಞಾನವನ್ನು ತಿಳಿಹೇಳುತ್ತಿರುವುದು ನಿಜಕ್ಕೂ ಅಪರೂಪ ಮತ್ತು ಶ್ಲಾಘನೀಯ ಸಂಗತಿ. ಶಿರಸಿ ತಾಲೂಕು ಮುಂಡ್ಗೆÃರಿಯ ಶ್ರೀ ಜಿ.ವಿ.ಹೆಗಡೆಯವರ ತೋಟದಲ್ಲಿಯೂ ಮೊಬಿಟೆಕ್ ತಂತ್ರಜ್ಞಾನದ ಕೆಲಸವನ್ನು ನೋಡಬಹುದು. ಅನಂತಕುಮಾರ ಹೆಗಡೆ ನೇತೃತ್ವದ ಕದಂಬ ಫೌಂಡೇಶನ್, ಅನೇಕರಿಗೆ ಈ ತಂತ್ರಜ್ಞಾನವನ್ನು ಪರಿಚಯಿಸಿದೆ.
ರಾಸಾಯನಿಕ ಕೃಷಿಗೆ ಸಾವಯವ ಪರ್ಯಾಯವೊಂದರ ಹುಡುಕಾಟದಲ್ಲಿ ಅನೇಕ ಪ್ರಯೋಗಗಳು ನಡೆದಿವೆ. ಅಂತಹದರಲ್ಲಿ ಹೆಗಡೆಯವರ ಕಣ್ಣಿಗೆ ಬಿದ್ದ ಉತ್ಕೃಷ್ಟ ತಂತ್ರಜ್ಞಾನವೆಂದರೆ ಸೂಕ್ಷಾö್ಮಣುಜೀವಿ ತಂತ್ರಜ್ಞಾನ (Micribial Technology). ಅತ್ಯಂತ ಕಡಿಮೆ ಪ್ರಮಾಣದ ಜೀವ ರಸಾಯನಗಳನ್ನು ಬಳಸಿ ಸಸ್ಯಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದು ಈ ತಂತ್ರಜ್ಞಾನದ ಕಾರ್ಯವಿಧಾನ. ೧೫೦೦ ಕೇ.ಜಿ. ಕೊಟ್ಟಿಗೆ ಗೊಬ್ಬರ ಬಳಸುವಲ್ಲಿ ೬೦ ಕೇ.ಜಿ. ಸೂಕ್ಷಾö್ಮಣುಜೀವಿ ಉತ್ಪನ್ನ ಬಳಸಿದರೆ ಸಾಕಾಗುತ್ತದೆ. ಅಮೇರಿಕೆಯಲ್ಲಿ ಶೋಧವಾದ ಈ ತಂತ್ರಜ್ಞಾನವನ್ನು ಕ್ಷೇತ್ರಕ್ಕೆ ಪರಿಚಯಿಸಿದ್ದಾರೆ. ಶಿಲೀಂಧ್ರ ರೋಗದ ಸೋಂಕಿನಿಂದ ಬಳಲುತ್ತಿದ್ದ ವೆನಿಲ್ಲಾ, ಕಾಳುಮೆಣಸು ಮುಂತಾದ ಬೆಳೆಗಳಿಗೆ ಸೂಕ್ಷಾö್ಮಣುಜೀವಿ ತಂತ್ರಜ್ಞಾನದಿಂದ ಕಾಯಕಲ್ಪ ಮಾಡಿದ್ದಾರೆ. ಕಳೆದ ಐದು ವರ್ಷಗಳಿಂದ ನಡೆದ ಪ್ರಯೋಗ ಯಶಸ್ವಿಯಾಗುತ್ತಿದೆ. ಭತ್ತ, ಹೂವು, ತೆಂಗು ಮುಂತಾದ ಬೆಳೆಗಳಲ್ಲಿಯೂ ಈ ತಂತ್ರಜ್ಞಾನದ ಪ್ರಯೋಗ ನಡೆದಿದೆ ಅಷ್ಟೇ ಅಲ್ಲ, ದೇಶದ ಅನೇಕ ರಾಜ್ಯಗಳಲ್ಲಿ ಇದು ಒಂದು ಆಂದೋಲನವಾಗಿ ಬೆಳೆಯುತ್ತಿದೆ. ಹೀಗೆ ಹೊಸದನ್ನು ತಿಳಿಯುವ, ತಿಳಿದದ್ದರ ಪ್ರಯೋಜನ ಪಡೆಯುವ ನಿರಂತರ ಹಂಬಲದಿಂದಲೇ ಹೆಗಡೆಯವರು ರಾಜಕಾರಣದಲ್ಲಿ ವಿಶಿಷ್ಟರೆನಿಸುತ್ತಾರೆ.
ವೈಜ್ಞಾನಿಕ ಮನೋಭಾವನೆಂದರೆ ಶ್ರದ್ಧೆಯನ್ನು ಅಲ್ಲಗಳೆಯುವುದು, ಧಾರ್ಮಿಕತೆಯೆಂದರೆ ತರ್ಕವನ್ನು ತ್ಯಜಿಸುವುದು ಎನ್ನುವ ಸಾಮಾನ್ಯ ಪ್ರಮೇಯವನ್ನು ತಿರಸ್ಕರಿಸಿ, ಪರಂಪರೆಯ ಪರಿಷ್ಕಾರದಲ್ಲಿ, ಪುನರುತ್ಥಾನದಲ್ಲಿ ಸುಸ್ಥಿರ ಭವಿಷ್ಯವನ್ನು ಕಾಣುವವರು ಹೆಗಡೆಯವರು. ಋಷಿ ವಾಕ್ಯದೊಡನೆ ವಿಜ್ಞಾನವನ್ನು ಮೇಳೈಸುವ, ಆ ಮೂಲಕ ಪರಿಸರ ಸ್ನೇಹಿ ಪ್ರಗತಿಯತ್ತ ಸಾಗುವ ಅನಂತಕುಮಾರ ಹೆಗಡೆಯವರ ನಿತ್ಯ ಹುಡುಕಾಟ, ನಿರಂತರ ಕಲಿಕೆ ಅವರನ್ನು ಅನನ್ಯರೆನ್ನುವಂತೆ ಮಾಡುತ್ತದ್ದಲ್ಲವೆ?

Kulkarni.18

20/04/2019

ಅನನ್ಯ ಸಂಸದ ಅನಂತಕುಮಾರ ಹೆಗಡೆ - ೫

ಸಹಕಾರಿ ಕ್ಷೇತ್ರಕ್ಕೆಕಾಯಕಲ್ಪ

ಉತ್ತರ ಕನ್ನಡ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಮೊದಲಿನಿಂದಲೂ ಸಾಧನೆ ಮಾಡಿದ ಜಿಲ್ಲೆ. ಇಲ್ಲಿನ ಸಹಕಾರಿ ಸಂಸ್ಥೆಗಳು ಹೆಚ್ಚು ಸುಸ್ಥಿರವಾಗಿ ಕಾರ್ಯ ನಿರ್ವಹಿಸುತ್ತ ಬಂದಿವೆ. ಸಹಕಾರಿ ಕ್ಷೇತ್ರದ ಹೆಚ್ಚುಗಾರಿಕೆ ಇರುವುದು ಪ್ರತಿ ಸದಸ್ಯನ ಪಾಲ್ಗೊಳ್ಳುವಿಕೆಯಲ್ಲಿ ಮತ್ತು ಸಾಮೂಹಿಕ ಹೊಣೆಗಾರಿಕೆಯಲ್ಲಿ. ಆದರೆ ಮುಖ್ಯ ಸಮಸ್ಯೆ ಇರುವುದು ಹಣಕಾಸಿನ ವ್ಯವಹಾರದ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವಲ್ಲಿ. ಕಾನೂನಿನ ಬಲೆಯನ್ನು ಅಲ್ಪ ಸ್ವಲ್ಪ ಎಳೆದು ಜಗ್ಗಿ ವಿಶ್ವಾಸದ ವ್ಯವಹಾರದಲ್ಲಿ ಸದಸ್ಯರ ಅನುಕೂಲಕ್ಕೆ ಹೊಂದುವುದು ಅದರ ಅಗತ್ಯ ಮತ್ತು ಅನಿವಾರ್ಯತೆ. ಈಗ ಕಂಪ್ಯೂಟರ್ ಬಂದ ಮೇಲೆ ಮಾರ್ಚ್ ನಂತರ ಎಪ್ರಿಲ್ ಬರುತ್ತಿದೆ. ಮೊದಲಾದರೆ ಎಪ್ರಿಲ್ ಕೊನೆಯವರೆಗೂ ಮಾರ್ಚ್ ತಿಂಗಳೇ ಮುಂದುವರೆಯುತ್ತಿತ್ತು!
ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿಯೂ ಏಕತಾನತೆ ಕಾಡುತ್ತಿದ್ದಾಗ ಅದಕ್ಕೆ ಹೊಸತನದ ಸ್ಪರ್ಶ ನೀಡಿದವರು ಶ್ರೀ ಅನಂತಕುಮಾರ ಹೆಗಡೆಯವರು. ೨೦೦೫ರಲ್ಲಿ ಕದಂಬ ಸೌಹಾರ್ದ ಸಹಕಾರಿಯನ್ನು ಆರಂಭಿಸಿದರು. ನಮ್ಮ ಹಳ್ಳಿಯಿಂದ ಬರುವ ಎಲ್ಲ ಪದಾರ್ಥಗಳಿಗೂ ಯೋಗ್ಯ ಮಾರುಕಟ್ಟೆ ಕಲ್ಪಿಸುವ ಅವರ ಆಲೋಚನೆಯಿಂದಲೇ ಕದಂಬ ಸೌಹಾರ್ದ ಸಹಕಾರಿ ಚಲನಶೀಲ ಮಾರುಕಟ್ಟೆಯಾಯಿತು, ಜನಸಾಮಾನ್ಯರ ನೆಚ್ಚಿನ ಸಹಕಾರಿಯಾಯಿತು. ಇಂದು ಶಿರಸಿ ಸಿದ್ದಾಪುರ ಯಲ್ಲಾಪುರ ಮುಂಡಗೋಡ ತಾಲೂಕಿನ ರೈತ ಹೆಣ್ಣುಮಕ್ಕಳನ್ನು ಆರ್ಥಿಕವಾಗಿ ಸಶಕ್ತಗೊಳಿಸಿರುವುದು ಕದಂಬ ಮಾರ್ಕೆಟಿಂಗ್ ಎಂದರೆ ಅತಿಶಯೋಕ್ತಿಯಲ್ಲ. ಮುರುಗಲು, ಕೋಕೊ, ಜಾಯಿಕಾಯಿ, ಲವಂಗ, ಸೂಜಿಮೆಣಸು, ಜೇನುತುಪ್ಪ, ಅಂಟುವಾಳ ಹೀಗೆ ಎಲ್ಲ ರೀತಿಯ ಉಪ ಉತ್ಪನ್ನಗಳಿಗೆ ಗೌರವದ ಮಾರುಕಟ್ಟೆ ಪ್ರಾಪ್ತವಾದದ್ದರಿಂದ ಕೃಷಿಕರಿಗೆ ಮಹದುಪಕಾರವಾಗಿದೆ. ಮುಂದೆ ಅನಂತಕುಮಾರ ಹೆಗಡೆಯವರು ಆ ಸಂಸ್ಥೆಯಿಂದ ಹಿಂದೆ ಸರಿದುಕೊಂಡರಾದರೂ ಅವರು ಹಾಕಿ ಕೊಟ್ಟ ಹಾದಿಯಲ್ಲಿಯೇ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಮುಂದುವರೆದಿದೆ.
ಸಹಕಾರಿ ಹಣಕಾಸಿನ ಕುರಿತು ವಿಶೇಷ ಆಸಕ್ತಿಯಿಂದ ಅಧ್ಯಯನ ಮಾಡಿರುವ ಅನಂತಕುಮಾರ ಹೆಗಡೆಯವರು ಮತ್ತೊಮ್ಮೆ ಸಹಕಾರಿ ಕ್ಷೇತ್ರದಲ್ಲಿ ನೇತೃತ್ವ ವಹಿಸಿದ್ದಾರೆ. ೨೦೧೫ರಲ್ಲಿ ಕದಂಬ ಸೌಹಾರ್ದ ಸಹಕಾರಿ (ನಿ) ಸಂಸ್ಥೆಯನ್ನು ಆರಂಭಿಸಿದ್ದಾರೆ. ಸಹಕಾರಿ ಕ್ಷೇತ್ರದ ಸೇವೆಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿ, ವ್ಯವಹಾರದ ಪಾರದರ್ಶಕತೆಯನ್ನು ಖಾತ್ರಿ ಪಡಿಸುವಲ್ಲಿ ಆಧುನಿಕ ತಂತ್ರಜ್ಞಾನದ ಸಹಾಯ ಪಡೆದಿರುವುದು ಗಮನಾರ್ಹವಾದ ಸಂಗತಿ. ದೊಡ್ಡ ಬ್ಯಾಂಕುಗಳಿಗೆ ಮಾತ್ರ ಸೀಮಿತವಾಗಿದ್ದ ಬ್ಯಾಂಕಿಂಗ್ ಸೌಲಭ್ಯಗಳು ಮೊತ್ತ ಮೊದಲಬಾರಿಗೆ ಸಹಕಾರಿ ಕ್ಷೇತ್ರದಲ್ಲಿ ಲಭ್ಯವಾಗಿದ್ದೇ ಶಿರಸಿಯ ಕದಂಬ ಸೌಹಾರ್ದ ಸಹಕಾರಿಯಲ್ಲಿ. ತುರ್ತು ಸಂದಾಯ ವ್ಯವಸ್ಥೆ (IMPS), NEFT, Payment Banking , Mobile Banking, e-Banking ಎಲ್ಲ ಸೌಲಭ್ಯಗಳನ್ನೂ ನೀಡಲಾಗಿದೆ. ಸಣ್ಣದಾದ ಸಹಕಾರಿ ಬ್ಯಾಂಕೊಂದು ಈ ರೀತಿಯ ಸೇವೆಗಳನ್ನು ನೀಡುತ್ತಿರುವುದು ದೇಶದಲ್ಲಿಯೇ ಪ್ರಥಮವಾಗಿದೆ. ಈ ಹೊಸತನ, ಈ ಸಾಹಸ, ಇದೆಲ್ಲ ಅನಂತಕುಮಾರ ಹೆಗಡೆಯವರಿಗೇ ಮೀಸಲು.
ಸಹಕಾರಿ ಕ್ಷೇತ್ರದ ಕ್ಷಮತೆಯನ್ನೂ ಯೋಗ್ಯತೆಯನ್ನೂ ಬೆಳೆಸುವಲ್ಲಿ ಮೊದಲಿಂದಲೂ ಶ್ರಮಿಸುತ್ತ ಬಂದಿರುವವÀರು ಅನಂತಕುಮಾರ ಹೆಗಡೆಯವರು. ಕೇಂದ್ರ ಸರಕಾರದ ಯೋಜನೆಗಳನ್ನು ಜಾರಿ ಮಾಡುವಾಗ ಹಣಕಾಸಿನ ವ್ಯವಹಾರವನ್ನು ರಾಷ್ಟಿç ಕೃತ ಬ್ಯಾಂಕುಗಳ ಮೂಲಕವೇ ಮಾಡಬೇಕಾಗಿತ್ತು. ಸಹಕಾರಿ ಬ್ಯಾಂಕುಗಳಿಗೆ, ಪ್ರಾಥಮಿಕ ಸಹಕಾರಿ ಬ್ಯಾಂಕುಗಳಿಗೆ ಆ ಅವಕಾಶವನ್ನು ತಂದುಕೊಟ್ಟವರು ಅನಂತಕುಮಾರ ಹೆಗಡೆಯವರು. ಉತ್ತರ ಕನ್ನಡ ಜಿಲ್ಲೆಯಲ್ಲಿ National Horticulture Board ಸಹಕಾರದಲ್ಲಿ ಅನುಷ್ಠಾನಗೊಂಡ ಯೋಜನೆಗಳು ಈ ಪ್ರಾಥಮಿಕ ಸಹಕಾರಿ ಬ್ಯಾಂಕುಗಳ ಮೂಲಕವೇ ನಿರ್ವಹಿಸಲ್ಪಟ್ಟಿವೆ.
ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡುವ ಮೂಲಕ ಜನರಿಗೆ ಆರ್ಥಿಕ ಸಾಕ್ಷರತೆಯ ಹೊಸ ಲೋಕವನ್ನು ಪರಿಚಯಿಸಿದ ಹಿರಿಮೆ ಹೆಗಡೆಯವರಿಗೆ ಸಲ್ಲುತ್ತದೆ. ಜಿಲ್ಲೆಯ ಸಹಕಾರಿ ಕ್ಷೇತ್ರದ ವಿಶ್ವಾಸಾರ್ಹತೆಯನ್ನು ವೃದ್ಧಿಸಿದ, ಪಾರದರ್ಶಕತೆಯನ್ನು ಹೆಚ್ಚಿಸಿದ ಹೆಗಡೆಯವರ ಪರಿಶ್ರಮ ಅನನ್ಯವಲ್ಲವೆ?

- .kulkarni.18

18/04/2019

ಅನನ್ಯ ಸಂಸದ ಅನಂತಕುಮಾರ ಹೆಗಡೆ - ೪

ಸಮಾಜಕಾರಣದಿಂದ ರಾಜಕಾರಣಕ್ಕೆ

ನಾವು ಸಮಾಜಕಾರಣದಿಂದ ದೂರ ಸರಿದು ಬಹಳ ದಿನಗಳಾದವು. ಉತ್ತರ ಕನ್ನಡದಲ್ಲಿ ಕೇವಲ ರಾಜಕಾರಣ ಮಾಡಿದವರು ಜನರ ನೆನಪಿನಿಂದ ಸಹಜವಾಗಿಯೇ ದೂರವಾಗಿದ್ದಾರೆ. ಡಾ. ದಿನಕರ ದೇಸಾಯಿಯವರು ಅವರ ಶಿಕ್ಷಣ ಸಂಸ್ಥೆಗಳಿಂದಾಗಿ, ಅವರ ಕಾವ್ಯದಿಂದಾಗಿ ನಿತ್ಯ ನೆನಪಾಗುತ್ತಾರೆ. ದಿ. ಶ್ರೀಪಾದ ಹೆಗಡೆ ಕಡವೆಯವರು ಟಿ.ಎಸ್.ಎಸ್ ಮೂಲಕ ಯಾವತ್ತೂ ನಮ್ಮ ಸ್ಮರಣೆಯ ಭಾಗವಾಗಿದ್ದಾರೆ. ಉಳಿದವರನ್ನೆಲ್ಲ ಅವರವರ ಜಯಂತಿ ಪುಣ್ಯತಿಥಿಯಂದು ಯಾರಾದರೂ ನಮಗೆ ನೆನಪು ಮಾಡಿಸುತ್ತಾರೆ. ಹೀಗೇಕೆ ಎಂದರೆ, ರಾಜಕಾರಣದಲ್ಲಿ ಅದೆಷ್ಟೇ ದೊಡ್ಡ ವ್ಯಕ್ತಿಯಾದರೂ ಕೇವಲ ರಾಜಕಾರಣವನ್ನೇ ಮಾಡಿಕೊಂಡಿದ್ದರೆ ಅವರು ರಾಜಕಾರಣದಿಂದ ಸರಿದ ನಂತರ ಅವರ ಪ್ರಸ್ತುತತೆ ಕಳೆದುಹೋಗುತ್ತದೆ.
ಶ್ರೀ ಅನಂತಕುಮಾರ ಹೆಗಡೆಯವರು ರಾಜಕಾರಣದ ಜೊತೆಯಲ್ಲಿ ಸಮಾಜಕಾರಣವನ್ನು ಬೆಳೆಸಿಕೊಂಡು ಬಂದವರು. ಸಾರ್ವಜನಿಕ ಕ್ಷೇತ್ರಕ್ಕೆ ಬಂದಿದ್ದೆ ರಾಷ್ಟೀಯ ಜಾಗೃತಿ ಅಭಿಯಾನದ ಭಾಗವಾಗಿ. ರಾಷ್ಟೀಯ ಸ್ವಯಂಸೇವಕ ಸಂಘ, ಹಿಂದು ಜಾಗರಣ ವೇದಿಕೆ ಮುಂತಾದ ಸ್ವಾರ್ಥರಹಿತ ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರಾಗಿ. ಹಿಂದು ಸಮಾಜದ ಸಂಘಟನೆ ಮತ್ತು ಸಾಮರಸ್ಯಕ್ಕಾಗಿ ನಡೆಯುವ ಕಾರ್ಯ ನಿರಂತರವಾದದ್ದು. ಅವುಗಳ ಪ್ರಸ್ತುತತೆಯೂ ನಿರಂತರ. ಈ ವಿಷಯದಲ್ಲಿ ಅನಂತಕುಮಾರ ಹೆಗಡೆಯವರ ಕಾಳಜಿ ಮತ್ತು ನಿಷ್ಠೆ ನಿತ್ಯ ಜಾಗೃತವಾದದ್ದು. ಉದಾಹರಣೆಗೆ; ಸಿದ್ದರಾಮಯ್ಯನವರ ಸರಕಾರ ಟಿಪ್ಪುವಿನ ಜಯಂತಿ ಆಚರಣೆಗೆ ಮುಂದಾದಾಗ, ತಾರ್ಕಿಕವಾಗಿ ಅದನ್ನು ಪ್ರಶ್ನಿಸಿದವರು, ಸಕಾರಣವಾಗಿ ಅದನ್ನು ವಿರೋಧಿಸಿದವರು ಅನಂತಕುಮಾರ ಹೆಗಡೆಯವರು. ನಂತರದಲ್ಲಿ ಉಳಿದವರೂ ಅನೇಕರು ಅವರನ್ನು ಅನುಸರಿಸಿದರು. ಜನನಾಯಕನೊಬ್ಬ ಧೈರ್ಯವಾಗಿ ಇತಿಹಾಸದ ಸತ್ಯವನ್ನು ಹೇಳಬಹುದು ಎಂಬುದನ್ನು ತೋರಿಸಿಕೊಟ್ಟವರು ಹೆಗಡೆಯವರು. ರಾಷ್ಟೀಯ ಜಾಗೃತಿಯಲ್ಲಿ ಹೆಗಡೆಯವರು ಸಮಾಜಕ್ಕೆ ನಿತ್ಯ ಪ್ರಸ್ತುತರು. ರಾಜಕಾರಣದ ಲಾಭ-ನಷ್ಟಗಳನ್ನು ಮೀರಿ ರಾಷ್ಟçಕಾರಣದಲ್ಲಿ ಸಮಾಜದೊಂದಿಗೆ, ಸತ್ಯದೊಂದಿಗೆ ನಿಲ್ಲುತ್ತಾರೆ.
೧೯೯೯ರ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ ಹೆಗಡೆಯವರು ಗೆಲ್ಲಲಿಲ್ಲ. ಆ ಸೋಲನ್ನು ಅವರು ಸ್ವೀಕರಿಸಿದ ರೀತಿ ಬಹಳ ಮಹತ್ವದ್ದು. ಸಿಕ್ಕ ಅವಕಾಶದಲ್ಲಿ ‘ಕದಂಬ ಚಾರಿಟೇಬಲ್ ಫೌಂಡೇಶನ್’ ಆರಂಭಿಸಿದರು. ಜನಸಾಮಾನ್ಯರ ಆರೋಗ್ಯ ಹಾಗೂ ಶಿಕ್ಷಣದ ಕಾಳಜಿಗೆ ಮುಂದಾದರು. ಆರೋಗ್ಯ ಜಾಗೃತಿ ಅಭಿಯಾನವನ್ನೇ ಅರಂಭಿಸಿದರು. ಸಾವಿರಾರು ಸ್ವಸಹಾಯ ಸಂಘಗಳ ರಚನೆಗೆ ಕಾರಣರಾದರು. ಸಮಾಜದ ಹಿಂದುಳಿದ ಬಂಧುಗಳ ಸಂಗಡ ನೇರ ಸಂಪರ್ಕ ಸಾಧಿಸಿದರು. ಕದಂಬ ಸ್ವಸಹಾಯ ಸಂಘಗಳ ಆಂದೋಲನ ಆರ್ಥಿಕ ಸಾಕ್ಷರತೆಯ ಸಂಗಡ ಹೊಸ ಸಾಮಾಜಿಕ ಜಾಗೃತಿಯನ್ನು ಹುಟ್ಟುಹಾಕಿತು. ಅಕ್ಷರದ ಮುಖ ನೋಡದ ಊರುಗಳಲ್ಲಿ ಅಂಗನವಾಡಿಗಳನ್ನು ಆರಂಭಿಸಿದರು. ಅಲ್ಲಿಯೂ ಹೇರಿಕೆಯ ಶಿಕ್ಷಣದ ಬದಲು ನಲಿಯುವ ಸಂಸ್ಕಾರವನ್ನೇ ನೀಡಬೇಕೆಂಬ ಆಶಯವನ್ನು ಅನುಷ್ಠಾನಗೊಳಿಸಿದರು. ಅಂಗನವಾಡಿಯ ಶಿಕ್ಷಕಿಯರನ್ನು ಟೀಚರ್ ಅನ್ನದೆ ಮಾತಾಜಿ ಎಂದು ಕರೆಯುವಲ್ಲಿಯೇ ಸಂಸ್ಕಾರಕ್ಕೆ ಅಡಿಪಾಯ ಹಾಕಿದರು. ಅಂಗನವಾಡಿಗೆ ಬೇಕಾಗಿ ಅಪ್ಪಟ ಭಾರತೀಯ ಪಠ್ಯವನ್ನೂ ಸಿದ್ಧಪಡಿಸಿದ್ದರು.
ಆರೋಗ್ಯ ಜಾಗೃತಿ ಆಂದೋಲನದಲ್ಲಿಯೂ ಉದ್ದೇಶಿತ ಜನ ಹಿಂದುಳಿದವರೂ ಮತ್ತು ಉಪೇಕ್ಷಿತ ಬಂಧುಗಳೇ. ಆರೋಗ್ಯದ ದಿನಚರಿ ಹೇಗೆ, ಮಾಡುವ ಕೆಲಸದಲ್ಲಿ ಆರೋಗ್ಯಕರ ವಿಧಾನಗಳು ಯಾವವು, ರೋಗ ಬರದಂತೆ ವಹಿಸಬೇಕಾದ ಎಚ್ಚರಿಕೆಗಳು, ಪರಂಪರೆಯಿಂದ ಬಂದ ಆರೋಗ್ಯಕರ ಜೀವನ ವಿಧಾನಗಳ ಬಗ್ಗೆ ತಿಳಿವಳಿಕೆ, ಹೀಗೆ ಮೂಲಭೂತ ವಿಚಾರಗಳೇ ಆರೋಗ್ಯ ಆಂದೋಲನದ ಮುಖ್ಯ ಸಂಗತಿಗಳಾಗಿದ್ದವು. ಈ ಅಭಿಯಾನಗಳ ಯೋಜನೆಯಲ್ಲಿ, ಅನುಷ್ಠಾನದಲ್ಲಿ ಅನಂತಕುಮಾರ ಹೆಗಡೆಯವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸಮಾಜದ ಎಲ್ಲರಲ್ಲಿ ಆರೋಗ್ಯ ಜಾಗೃತಿ, ಅಕ್ಷರ ಜಾಗೃತಿ ಮೂಡಿಸುವ ಮೂಲಕ ಸಮಾಜಕಾರಣದ ಮತ್ತೊಂದು ಮಜಲಿನಲ್ಲಿ ಪ್ರಸ್ತುತರಾಗಿದ್ದಾರೆ.
ನಮ್ಮ ಬದುಕಿನ ಮೌಲ್ಯಗಳ ನೆಲೆ ಕುಟುಂಬ. ಆ ಕುಟುಂಬಗಳಿಗೆ ನೆಲೆಯಾದದ್ದು ಮನೆ. ವ್ಯವಸ್ಥಿತವಾದ ಮನೆ, ಸ್ವಚ್ಛವಾದ ಪರಿಸರಗಳು ಸುಂದರವಾದ ಸಮಾಜದ ಅಡಿಪಾಯಗಳು. ಭೂರಹಿತ ಕೂಲಿ ಕಾರ್ಮಿಕರು ಪುಟ್ಟದಾದ ಸುಂದರವಾದ ಮನೆಗಳನ್ನು ಕಟ್ಟಿಕೊಳ್ಳಲು ಬೇಕಾದ ಯೋಜನೆ ರೂಪಿಸಿದರು. ಬ್ಯಾಂಕಿನ ಸಹಾಯ ಒದಗಿಸಿಕೊಟ್ಟರು. ಆ ಮನೆಗಳಿಗೆ ‘ಕುಟೀರ’ ಎಂದು ನಾಮಕರಣ ಮಾಡಿದರು. ಕೂಲಿ ಕಾರ್ಮಿಕರು ನಿಗದಿತ ಮೊತ್ತಕ್ಕೆ ಹೊಂದಿ, ತಮ್ಮ ಮನೆಗಳನ್ನು ತಾವೇ ವಿನ್ಯಾಸಗೊಳಿಸಿಕೊಳ್ಳುವ, ಸ್ವಂತ ಶ್ರಮದಿಂದ ನಿರ್ಮಿಸಿಕೊಳ್ಳುವ ಅವಕಾಶ ಒದಗಿಸಿದರು. ಹಾಗೆ ನಿರ್ಮಾಣವಾದ ಮನೆಗಳ ಸಂಖ್ಯೆ ೧೮೪೦ರಷ್ಟು. ಇಲ್ಲಿ ಮನೆಯಷ್ಟೇ ಮುಖ್ಯವಾದದ್ದು ಅದನ್ನು ನಿರ್ಮಿಸುವಲ್ಲಿ ನೀಡಿದ ಸ್ವಾತಂತ್ರö್ಯ. ತಾವೇ ಕಟ್ಟಿಕೊಂಡ ತಮ್ಮದೇ ಮನೆ ಎಂಬ ಹೆಮ್ಮೆಯನ್ನೂ, ವಿಶ್ವಾಸವನ್ನೂ ಮೂಡಿಸಿದ್ದು ಗಮನೀಯ ಸಂಗತಿ. ಅಂತೆಯೇ ಸಹಾಯ ಧನ ಸಿಕ್ಕರೂ ಪೂರ್ಣ ಪುಕ್ಕಟೆಯಾಗಿ ಸಿಕ್ಕಿಲ್ಲ ಎನ್ನುವುದು ಅಭಿಮಾನವನ್ನೂ ಉಳಿಸಿದೆ.
ಹೀಗೆ ಸೋಲಿನ ಅವಧಿಯಲ್ಲಿಯೂ ಸಮಾಜದ ಮೂಲಭೂತ ಸಂಗತಿಗಳತ್ತ ಲಕ್ಷö್ಯವಹಿಸಿ ದುಡಿಯುವುದಕ್ಕೆ ರಾಜಕಾರಣವನ್ನು ಮೀರಿದ ಸಾಮಾಜಿಕ ಪ್ರೀತಿ ಬೇಕು, ಸೇವೆಯ ಬದ್ಧತೆ ಬೇಕು. ಸಾಮಾನ್ಯರೊಡನೆ ಸಾಮಾನ್ಯನಾಗಿ ಬೆರೆಯುವ ಸರಳತೆಯೂ ಬೇಕು. ರಾಜಕಾರಣವೆಂದರೆ ಸಾರ್ವಜನಿಕರನ್ನು ಮರುಳುಗೊಳಿಸುವ ಉದ್ಯಮವೇ ಆಗಿರುವಾಗ ಅನಂತಕುಮಾರ ಹೆಗಡೆಯವರು ವಿಭಿನ್ನ, ಅನನ್ಯ ಅನ್ನಿಸುವುದಿಲ್ಲವೆ?

kulkarni.18

15/04/2019

ಅನನ್ಯ ಸಂಸದ ಅನಂತಕುಮಾರ ಹೆಗಡೆ ೩

ನಿಸ್ಸಿಮ ಚಿಂತನೆ, ನಿಪುಣ ಅಭಿವ್ಯಕ್ತಿ
ಭಾರತದ ಸಂಸತ್ತು ಅಸೀಮ ಪಾಂಡಿತ್ಯದ, ಅಪಾರ ಚಿಂತನೆಯ ಅನೇಕ ದಿಗ್ಗಜರನ್ನು ಕಂಡಿದೆ. ಲೋಕಸಭೆಯಲ್ಲಿ ನಡೆಯುವ ಚರ್ಚೆಯಲ್ಲಿ ಭಾಗವಹಿಸುವಾಗ ವಿಷಯ ಜ್ಞಾನ ಭಾಷಾ ಜ್ಞಾನಗಳೆರಡೂ ಅತ್ಯವಶ್ಯ. ಯಾವುದೋ ಒಂದು ಪ್ರಶ್ನೆ ಕೇಳಿ ಉತ್ತರ ಪಡೆಯುವುದು ಸುಲಭ. ಆದರೆ, ಕಾನೂನಿನ ಕುರಿತ, ಯೋಜನೆಗಳನ್ನು ಕುರಿತ ಚರ್ಚೆಯಲ್ಲಿ ಪಾಲ್ಗೊಳ್ಳಬೇಕೆಂದರೆ ಅಧಿಕೃತ ಅಧ್ಯಯನ, ನಿಶಿತ ಚಿಂತನೆಗಳು ಅಗತ್ಯ. ಅಲ್ಲದೆ, ಅಭಿವ್ಯಕ್ತಿ ನೈಪುಣ್ಯ ಬಹು ಮುಖ್ಯ.
ಅನಂತಕುಮಾರ ಹೆಗಡೆಯವರು ೨೫ ಬಾರಿ ಲೋಕಸಭೆಯ ಚರ್ಚೆಯಲ್ಲಿ ಸಮರ್ಥವಾಗಿ ಪಾಲ್ಗೊಂಡಿದ್ದಾರೆ. ೮ ಬಾರಿ ಕಾಯಿದೆ ಸಂಬಂಧದ ಪ್ರಸ್ತಾವನೆ ಮಾಡಿದ್ದಾರೆ. ೮೩೪ ಪ್ರಶ್ನೆಗಳನ್ನು ಕೇಳಿದ್ದಾರೆ. ಹಲವಾರು ಸದನ ಸಮಿತಿಗಳಲ್ಲಿ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ೧೯೯೮ರ ಜೂನ್ ೫ರಂದು ನಡೆದ ರಾಷ್ಟ್ರೀಯ ವಸತಿ ನೀತಿಯ ಕುರಿತ ಚರ್ಚೆಯಲ್ಲಿ ಮೊದಲ ಸಲ ಪಾಲ್ಗೊಂಡಾಗಲೇ ಹೊಸ ಆಲೋಚನೆಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಭೂರಹಿತ ಬಡ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆ ರೂಪಿಸುವಾಗ ಬರುವ ಸಮಸ್ಯೆಗಳ ಕುರಿತು ಸದನದ ಗಮನ ಸೆಳೆದ ರೀತಿ ಮುಖ್ಯವಾದದ್ದು. ಗ್ರಾಮೀಣ ಪ್ರದೇಶದಲ್ಲಿ ಇರುವ ಭೂಮಿಯಲ್ಲಿ ಖಾಸಗಿ ಒಡೆತನದ ಭೂಮಿಯನ್ನು ಬಿಟ್ಟರೆ ಹೆಚ್ಚಿನದೆಲ್ಲ ಸಂರಕ್ಷಿತ ಅರಣ್ಯ ಭೂಮಿಯೇ. ಆದ್ದರಿಂದ ಭೂ ಬ್ಯಾಂಕ್ ನಿರ್ಮಾಣದ ಅಗತ್ಯವನ್ನು ಪ್ರತಿಪಾದಿಸಿದ್ದರು. ಸರಕಾರ ನೀಡಿದ ಮನೆಯನ್ನು ಬಡವರು ಮಾರಿಕೊಳ್ಳದಂತೆ ಕಾನೂನು ರೂಪಿಸುವಂತೆಯೂ ಒತ್ತಾಯಿಸಿದ್ದರು. ಇಂತಹ ಮೂಲಭೂತ ವಿಚಾರಗಳನ್ನು ಮಂಡಿಸಿ ಮೊದಲ ಚರ್ಚೆಯಲ್ಲಿಯೇ ಸದನದ ಮೆಚ್ಚುಗೆಗೆ ಪಾತ್ರರಾಗಿದ್ದರು.
ಲೋಕ ಸಭೆಯ ಚರ್ಚೆಯಲ್ಲಿ ಅರ್ಥಪೂರ್ಣವಾಗಿ ಪಾಲ್ಗೊಳ್ಳಬೇಕೆಂದರೆ ಹಿಂದಿ ಭಾಷೆಯ ಜ್ಞಾನ ಬೇಕು. ಅನಂತಕುಮಾರ ಹೆಗಡೆಯವರು ಹಿಂದಿಯನ್ನು ಮಾತೃ ಭಾಷೆಯಂತೆ ಮಾತಾಡಬಲ್ಲರು. ಕನ್ನಡ ಹಿಂದಿ ಇಂಗ್ಲಿಷ್ ಭಾಷೆಗಳನ್ನು ಚೆನ್ನಾಗಿ ಬಲ್ಲ ಅನಂತಕುಮಾರ ಹೆಗಡೆಯವರಿಗೆ ಭಾಷೆ ಸಮಸ್ಯೆಯಲ್ಲ, ಸಂಪತ್ತು. ಅಂತೆಯೇ ಮಾತಾಡುವ ಶೈಲಿ ಕೂಡ ಆಕರ್ಷಕ. ಆಳವಾದ ಚಿಂತನೆಯನ್ನು ಸರಳವಾದ ಭಾಷೆಯಲ್ಲಿ ಪರಿಣಾಮಕಾರಿಯಾಗಿ ಸಂವಹನ ಮಾಡಬಲ್ಲ ಅದ್ಭುತ ಸಾಮರ್ಥ್ಯ ಹೆಗಡೆಯವರಿಗಿದೆ. ಹಾಗಾಗಿಯೇ ಹೆಗಡೆಯವರು ಇಡೀ ದೇಶಕ್ಕೆ ಪರಿಚಿತರು. ಗಂಭೀರವಾದ ಸ್ವರ ಭಾರ, ನಿರರ್ಗಳವಾಗಿ ಹರಿಯುವ ಮಾತಿನ ಧಾರೆ, ಹರಿತವಾದ ಶಬ್ದಗಳ ಬಳಕೆಗಳಿಂದ ಕೇಳುಗರ ಭಾವವನ್ನು ಬಡಿದೆಬ್ಬಿಸುತ್ತಾರೆ, ವಿಚಾರವನ್ನು ಪ್ರಚೋದಿಸುತ್ತಾರೆ. ಇಂತಹ ವಕ್ತಾರರು ಸಿಗುವುದು ಅಪರೂಪ. ಇದು ಕ್ಷೇತ್ರದ ಭಾಗ್ಯ ಎಂದರೆ ಅತಿಶಯೋಕ್ತಿಯಲ್ಲ. ಏಕೆಂದರೆ, ಈ ಹಿಂದೆ ಉತ್ತರ ಕನ್ನಡ ಕ್ಷೇತ್ರವನ್ನು ಲೋಕಸಭೆಯಲ್ಲಿ ಪ್ರತಿನಿಧಿಸಿದ ಒಂದಿಬ್ಬರಿಗೆ ಸರಿಯಾದ ಕನ್ನಡದಲ್ಲಿ ಮಾತಾಡಲು, ಬರೆಯಲು ಬರುತ್ತಿರಲಿಲ್ಲ ಎನ್ನುವುದೂ ನಿಜವೇ!
ಅನಂತಕುಮಾರ ಹೆಗಡೆಯವರ ಆಲೋಚನಾ ಕ್ರಮವನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು; ಅವರು ಬಹಳ ಆಳವಾಗಿ ಚಿಂತಿಸುತ್ತಾರೆ, ಸೀಮಾತೀತವಾಗಿ ಕಲ್ಪನೆಗಳನ್ನು ಹರಿಬಿಟ್ಟು ಹೊಸ ಪರಿಕಲ್ಪನೆಗಳನ್ನು ಸಮಾಜದ ಮುಂದಿಡುತ್ತಾರೆ ಎನ್ನುವುದು. ತನ್ನ ಸುತ್ತಲಿನ ಸಮಾಜದ ಎಲ್ಲ ಸಮಸ್ಯೆ, ಸಾಧ್ಯತೆಗಳ ಕುರಿತು ಅಧ್ಯಯನ ಮಾಡಿದ್ದಾರೆ, ಹೊಸ ಆಲೋಚನೆಗಳನ್ನೂ ಮಾಡಿದ್ದಾರೆ. ಅವರು ಯಾರ ಸಂಪರ್ಕಕ್ಕೆ ಸಿಗುವುದೇ ಇಲ್ಲ ಎಂದು ಹೇಳುತ್ತಾರೋ ಅವರೆಲ್ಲರ ಸಮಸ್ಯೆಗಳ ಬಗ್ಗೆ ಸರಿಯಾದ ಮಾಹಿತಿ ಮತ್ತು ಪರಿಹಾರದ ಸಾಧ್ಯತೆಗಳು ಹೆಗಡೆಯವರ ಬಳಿ ಇರುತ್ತವೆ. ಅಂದರೆ, ಇರುವ ಸಮಯವನ್ನು ಕ್ರಮವತ್ತಾದ ಅಧ್ಯಯನ ಮತ್ತು ಯೋಜನೆಗಳ ಸಂಯೋಜನೆಗೇ ವಿನಿಯೋಗಿಸುತ್ತಾರೆ. ಯಾವ ಸಾರ್ಥಕತೆಯೂ ಇಲ್ಲದ ಹರಟೆಯಲ್ಲಿ, ಉದ್ದೇಶವಿಲ್ಲದ ಭೇಟಿಗಳಲ್ಲಿ ಹೊತ್ತನ್ನು ಹಾಳುಮಾಡುವುದಿಲ್ಲ. ಸಂಸತ್ತಿನ ಲೈಬ್ರರಿಯಲ್ಲಿ ಕೇಳಿದರೆ ಅವರ ಅಧ್ಯಯನದ ಪರಿ ತಿಳಿಯುತ್ತದೆ. ಬಹಳ ಸಮಯ ಲೈಬ್ರರಿಯಲ್ಲಿ ಕಳೆಯುತ್ತಾರೆ. ಎಲ್ಲ ವಿಷಯಗಳ ಕುರಿತು ಮೂಲ ಮಾಹಿತಿಯನ್ನರಸಿ ತಿಳಿಯುವ ತಾಳ್ಮೆ ಶ್ರದ್ಧೆಗಳೆರಡೂ ಇವೆ. ರಾಜಕಾರಣಿಗಳಲ್ಲಿ ಕೆಲವರು ಮಾತ್ರ ಓದುವ ಆಸಕ್ತಿ ಉಳಿಸಿಕೊಂಡಿದ್ದಾರೆ.
ವಿಷಯ ಜ್ಞಾನ, ಭಾಷಾ ಪರಿಣತಿ, ಭಾವಾಭಿವ್ಯಕ್ತಿ ಎಲ್ಲದರಲ್ಲೂ ನೈಪುಣ್ಯವನ್ನು ಸಾಧಿಸುವುದು ಸಣ್ಣ ಸಂಗತಿಯಲ್ಲ. ಅಲ್ಲದೇ, ಸತ್ಯವನ್ನು ಹೇಳುವಲ್ಲಿ ಯಾವ ಅಂಜಿಕೆಯೂ ಇಲ್ಲ ಎನ್ನುವ ಧೈರ್ಯ ಅನನ್ಯವಾದುದಲ್ಲವೆ?

- .kulkarni.18

13/04/2019

ಅನನ್ಯ ಸಂಸದ ಅನಂತಕುಮಾರ ಹೆಗಡೆ- ೨

ಸಜ್ಜನಿಕೆ ಎಂದರೆ ಸತ್ವಹೀನತೆಯಲ್ಲ

ಸಾರ್ವಜನಿಕ ಬದುಕಿನಲ್ಲಿರುವವರು ಅನ್ಯಾಯದ ವಿರುದ್ಧ ಪ್ರತಿಭಟಿಸುವಾಗ ಭಜನೆ ಮಾಡಬೇಕೆ ವಿನಃ ಬಲವನ್ನು ತೋರಿಸಬಾರದೆಂಬ ಅಲಿಖಿತ ಒಪ್ಪಂದಕ್ಕೆ ಬಂದಂತಿದೆ ನಮ್ಮ ಬದುಕು. ರಾಜಕಾರಣಿಯೊಬ್ಬ ಭ್ರಷ್ಟನಾದರೆ, ಚರಿತ್ರಹೀನನಾದರೆ ಚಿಂತೆ ಮಾಡದ ಮಾಧ್ಯಮಗಳು, ಅಭಿವ್ಯಕ್ತಿಯ ಆತುರಗಾರರು, ನೇತಾರನೊಬ್ಬ ಸಜ್ಜನ ಶಕ್ತಿಯ ಜಾಗೃತಿಗಾಗಿ ಹೇಳಿದ ಒಂದು ಮಾತನ್ನು ವಿಪರೀತವೆಂದೇ ಭಾವಿಸುತ್ತಾರೆ. ಖಾಸಗಿಯಾಗಿ ಸತ್ಯವೆಂದು ಒಪ್ಪಿಕೊಳ್ಳುವ ಸಂಗತಿಯನ್ನೆ ಸಾರ್ವಜನಿಕವಾಗಿ ಹೇಳಿದರೆ ಗಾಬರಿಗೊಳ್ಳುತ್ತಾರೆ. ಪುಕ್ಕಲುತನವೇ ಸಜ್ಜನಿಕೆಯ ಲಕ್ಷಣವಾಗುವುದು ಒಂದು ಸಮಾಜದ ಹತಾಶೆಯ ಮತ್ತು ಅವನತಿಯ ಲಕ್ಷಣ.

ಅನಂತಕುಮಾರ ಹೆಗಡೆಯವರು ‘ಇಸ್ಲಾಂ ಇರುವವರೆಗೆ ಭಯೋತ್ಪಾದನೆಯೂ ಇರುತ್ತದೆ’ ಎಂದು ಹೇಳಿದ್ದರು. ಅದೊಂದು ಅಪರಾಧ ಎನ್ನುವಂತೆ ಎಲ್ಲ ಮಾಧ್ಯಮಗಳೂ ಬಿಂಬಿಸಿದವು. ಇಸ್ಲಾಂ ಇಲ್ಲದಿದ್ದರೆ ಭಯೋತ್ಪಾದನೆ ಇರುತ್ತಿತ್ತೆ? ಎಂದು ಯಾರೂ ಪ್ರಶ್ನಿಸಲಿಲ್ಲ! ಅನಂತಕುಮಾರ ಹೆಗಡೆಯವರು ಒಂದು ಮಾತನ್ನು ಹೇಳುವಾಗ ಅದರ ಕುರಿತು ಅಭ್ಯಾಸ ಮಾಡಿರುತ್ತಾರೆ. ಅವರ ಹೆಚ್ಚಿನ ಮಾತುಗಳು ಅವರ ಅನುಭವದ ಅಭಿವ್ಯಕ್ತಿಯೇ ಆಗಿವೆ.

೧೯೯೦ರ ದಶಕದಲ್ಲಿಯೇ ಕರ್ನಾಟಕದ ಕರಾವಳಿಯಲ್ಲಿ ಭಯೋತ್ಪಾದನೆಯ ಬೀಜ ಬಿತ್ತಲ್ಪಟ್ಟಿತು. ಅದರ ಕೇಂದ್ರ ಭಟ್ಕಳವೇ ಆಗಿತ್ತು. ಭಟ್ಕಳದ ಸಾಮಾನ್ಯ ಹಿಂದುಗಳು ಸ್ವಾಭಿಮಾನದಿಂದ ತಲೆಯೆತ್ತಿ ಬದುಕುವುದಕ್ಕೆ ಹೋರಾಟವನ್ನೆ ಮಾಡಬೇಕಾಯಿತು. ಆ ಹೋರಾಟದ ನೇತೃತ್ವ ವಹಿಸಿದ್ದವರು ಅನಂತಕುಮಾರ ಹೆಗಡೆಯವರು. ಆಗಲೇ ಭಟ್ಕಳದಲ್ಲಿ ಆರಂಭವಾಗಿರುವ ಮುಸ್ಲಿಂ ಭಯೋತ್ಪಾದನೆಯ ಬಗ್ಗೆ ಎಚ್ಚರಿಕೆ ನೀಡಿದ್ದರು. ಯಾರೂ ಗಮನಿಸಲಿಲ್ಲ. ೧೯೯೬ರಲ್ಲಿ ಡಾ. ಚಿತ್ತರಂಜನ್ ಅವರ ಹತ್ಯೆಯಾಯಿತು. ಆ ಹತ್ಯೆಗೆ ಅತ್ಯಾಧುನಿಕ ಶಸ್ತ್ರ ಬಳಸಲಾಗಿದೆ ಎಂದು NIA ತನ್ನ ವರದಿಯಲ್ಲಿ ಹೇಳಿತು. ಆಗಲೂ ಅನಂತಕುಮಾರ ಹೆಗಡೆಯವರ ಮಾತನ್ನು ಸರಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಮುಂದೆ ಸಂಭವಿಸಿದ ಅನೇಕ ಸರಣಿ ಬಾಂಬ್ ಸ್ಫೋಟಗಳಲ್ಲಿ ಮುಖ್ಯ ಯೋಜಕರಾಗಿದ್ದವರು ರಿಯಾಝ್ ಭಟ್ಕಳ್, ಯಾಸಿನ್ ಭಟ್ಕಳ್, ಇಕ್ಬಾಲ್ ಭಟ್ಕಳ್ ಎಂಬ ಸುದ್ದಿ ಬಂತು, ಅಂತಾರಾಷ್ಟೀಯ ಭಯೋತ್ಪಾದನೆಯ ಕೇಂದ್ರ ಭಟ್ಕಳವೇ ಎಂದು ತಿಳಿಯಿತು. ಉತ್ತರ ಕನ್ನಡದ ಕಾಡುಗಳಲ್ಲಿ ಯಾಸಿನ್ ಭಟ್ಕಳ್ ಬಂದೂಕಿನ ತರಬೇತಿ ನೀಡುತ್ತಿದ್ದ. ಸ್ಫೋಟಕಗಳನ್ನು ಸಿದ್ಧ ಮಾಡುವುದನ್ನು ಕಲಿಸುತ್ತಿದ್ದ ಎಂದೆಲ್ಲ ವಿವರಗಳು ಪ್ರಕಟವಾದಾಗ, ಹೌದೇ!? ಎಂದು ಹುಬ್ಬೇರಿಸಿದವರು ಕೆಲವೇ ದಿನಗಳಲ್ಲಿ ಮತ್ತದನ್ನು ಮರೆತೇ ಬಿಟ್ಟರು. ಆದರೆ ಅನಂತಕುಮಾರ ಹೆಗಡೆಯವರು ಜಿಲ್ಲೆಯ ಜನಕ್ಕೆ ನೆನಪು ಮಾಡುತ್ತಲೇ ಬಂದಿದ್ದಾರೆ. ಅಗತ್ಯ ಬಿದ್ದಾಗಲೆಲ್ಲ ಸಮಾಜಕ್ಕೆ ಮುಂದಾಳತ್ವ ನೀಡಿ ಹೋರಾಡುತ್ತಲೇ ಬಂದಿದ್ದಾರೆ. ಅನಂತಕುಮಾರ ಹೆಗಡೆಯವರು ಸಕ್ರಿಯರಾಗಿ ಇದ್ದಾರೆ ಎನ್ನುವ ಕಾರಣದಿಂದಲೇ ಉತ್ತರ ಕನ್ನಡ ಶಾಂತವಾಗಿದೆ. ಅದಿಲ್ಲವಾದರೆ ಮತಾಂಧರ ಅಟ್ಟಹಾಸಕ್ಕೆ ತಡೆಯೇ ಇರುತ್ತಿರಲಿಲ್ಲ. ಹಿಂದು ಹೆಣ್ಣುಮಕ್ಕಳು ಸುರಕ್ಷತವಾಗಿ ಓಡಾಡುತ್ತಿರಲಿಲ್ಲ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವೆ? ಇದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ, ಹೇಳುವುದಕ್ಕೆ ಅನೇಕರಿಗೆ ಅಂಜಿಕೆ, ಕೆಲವರಿಗೆ ಸೆಕ್ಯೂಲರ್ ಸೋಗಲಾಡಿತನ.

“ಭಯೋತ್ಪಾದಕರೆಲ್ಲ ಮುಸ್ಲಿಮರೇ ಆದರೂ ಎಲ್ಲ ಮುಸ್ಲಿಮರೂ ಭಯೋತ್ಪಾದಕರಲ್ಲ” ಎನ್ನುವ ಮಾತು ಬಹಳ ಪ್ರಚಲಿತವಿದೆ. ಅದನ್ನು ಅಲ್ಲಗಳೆಯಲಾಗದು. ಆದರೆ, ನಾವು ಗಮನಿಸಬೇಕಾದ ಇನ್ನೊಂದು ಮುಖ್ಯವಾದ ಸಂಗತಿಯಿದೆ, ಅದನ್ನು ಮಾಧ್ಯಮಗಳು ಹೇಳುವುದಿಲ್ಲ. ಅದೆಂದರೆ ಭಯೋತ್ಪಾದನೆಗೆ ಕೈಯಲ್ಲಿ ಗನ್ ಹಿಡಿದವರು ಮಾತ್ರ ಕಾರಣರಲ್ಲ. ಅವರಿಗೆ ಆಶ್ರಯ ಕೊಡುವವರು, ಮಾಹಿತಿ ನೀಡುವವರು, ಧನಸಹಾಯ ಮಾಡುವವರು, ಅವರಿಗಾಗಿ ಪ್ರಾರ್ಥಿಸುವವರು ಎಲ್ಲರೂ ಹೊಣೆಗಾರರು. “ಒಬ್ಬ ಸೈನಿಕ ರಣರಂಗದಲ್ಲಿ ಯುದ್ಧ ಮಾಡುತ್ತಿದ್ದರೆ ೪೦ ಜನ ಸಾಮಾಜಿಕರು ಅವನಿಗಾಗಿ ದುಡಿಯುತ್ತಿರುತ್ತಾರೆ” ಎಂದು ಜನರಲ್ ಕಾರ್ಯಪ್ಪ ಹೇಳಿದ್ದರು. ಒಬ್ಬ ಭಯೋತ್ಪಾದಕ ಗನ್ ಹಿಡಿದು ದಾಳಿಮಾಡುವಾಗ ಅದೆಷ್ಟು ನಿರ್ದಯಿ ಸಾರ್ವಜನಿಕರ ಸಹಾಯ ಬೇಕಾಗಬಹುದು?! ಆದರೆ ಕಾನೂನು ಕೈಯಲ್ಲಿ ಗನ್ ಹಿಡಿದವನನ್ನು ಬಿಟ್ಟು ಮತ್ತೊಬ್ಬನನ್ನು ಹಿಡಿಯಲಾರದು. ಇಂತಹ ಸಂದರ್ಭದಲ್ಲಿ ಸತ್ಯವನ್ನು ಹೇಳಿ ಸಾರ್ವಜನಿಕರನ್ನು ಎಚ್ಚರಿಸುವ ಹೊಣೆ ನಿಜವಾದ ನಾಯಕನದ್ದಾಗಿರುತ್ತದೆ. ಆ ಹೊಣೆಗಾರಿಕೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಿರುವವರು ಅನಂತಕುಮಾರ ಹೆಗಡೆಯವರು. ಈ ವಿಷಯದಲ್ಲಿ ಅವರ ಅನುಭವ, ಅಧ್ಯಯನ ಎರಡೂ ದೊಡ್ಡದೇ.

ತನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ಸಿದ್ಧತೆಯನ್ನು ಮೊದಲಾಗಿ ಗುರುತಿಸಿ ಹೇಳಿದವರು, ಮತಾಂಧರ ಕಿರುಕುಳದ ವಿರುದ್ಧ ಜನಜಾಗೃತಿ ಮೂಡಿಸಿದವರು, ಜೀವ ಭಯವನ್ನೂ ಮೀರಿ ಜನರಿಗೆ ನಾಯಕತ್ವ ನೀಡಿದವರು ಅನಂತಕುಮಾರ ಹೆಗಡೆಯವರು. ಇಂತಹ ಇನ್ನೊಂದು ಉದಾಹರಣೆ ನಮಗೆ ಕಾಣಿಸುತ್ತಿಲ್ಲ. ಇವರು ಅನನ್ಯರಲ್ಲವೆ?

- Rs Kulkarni

05/04/2019
05/04/2019
04/04/2019
04/04/2019
Want your business to be the top-listed Government Service in Bangalore?

Click here to claim your Sponsored Listing.

Location

Website

Address


4, 1st N Block, Rajaji Nagar
Bangalore
560010