07/10/2026
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಎನ್.ಡಿ.ಎ ಮೈತ್ರಿಕೂಟದ ಅಭ್ಯರ್ಥಿ ಶ್ರೀ ಎ.ಪಿ. ರಂಗನಾಥ್ Ranganatha AP ಅವರ ಪರವಾಗಿ ಚುನಾವಣಾ ಪ್ರಚಾರವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸುವುದು ಹಾಗೂ ಸಂಘಟನಾತ್ಮಕ ಕಾರ್ಯತಂತ್ರಗಳನ್ನು ಸಿದ್ಧಪಡಿಸುವ ಉದ್ದೇಶದಿಂದ, ರಾಜ್ಯ ಸಾಮಾಜಿಕ ಜಾಲತಾಣ ವಿಭಾಗ ಹಾಗೂ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ವಿಭಾಗದ ಜೆಡಿಎಸ್ ಸಾಮಾಜಿಕ ಜಾಲತಾಣ ಪದಾಧಿಕಾರಿಗಳ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ರಾಜ್ಯಾಧ್ಯಕ್ಷರಾದ ಶ್ರೀ ಚಂದನ್ ಎಚ್.ಎಸ್. (ಚಂದನ್ ಧೊರೆ), ಕಾರ್ಯಾಧ್ಯಕ್ಷರು ವಿಜಯ್ ದೇವೇಗೌಡ, ರಾಜ್ಯ ಹಿರಿಯ ಉಪಾಧ್ಯಕ್ಷರು ಪುನೀತ್ ಗೌಡ , ಫಣಿರಾಜ್ ಹಾಗು ರಾಜ್ಯ ಎಲ್ಲಾ ಪದಾಧಿಕಾರಿಗಳು, ಬೆಂಗಳೂರು ನಗರ GBA ಲೀಗಲ್ ಸೆಲ್ ಅಧ್ಯಕ್ಷರಾದ ಶ್ರೀ ಪ್ರದೀಪ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯಲ್ಲಿ ಕ್ಷೇತ್ರವಾರು ಸಾಮಾಜಿಕ ಜಾಲತಾಣ ಪ್ರಚಾರ, ಸಂಘಟನಾ ಬಲವರ್ಧನೆ, ಕಾರ್ಯಕರ್ತರ ಜವಾಬ್ದಾರಿಗಳ ಹಂಚಿಕೆ ಹಾಗೂ ಚುನಾವಣಾ ಕಾರ್ಯತಂತ್ರಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ಬಿಜೆಪಿ–ಜೆಡಿಎಸ್ ಎನ್‌ಡಿಎ ಮೈತ್ರಿಕೂಟದ ಒಗ್ಗಟ್ಟಿನ ಸಂಘಟನಾ ಶಕ್ತಿಯೊಂದಿಗೆ, ಶಿಕ್ಷಕರ ಧ್ವನಿಯಾಗಿ ಸದಾ ನಿಲ್ಲುವ ಶ್ರೀ ಎ.ಪಿ. ರಂಗನಾಥ್ ಅವರ ಗೆಲುವಿಗಾಗಿ ಒಗ್ಗಟ್ಟಾಗಿ, ಸಂಘಟಿತವಾಗಿ ಹಾಗೂ ಪರಿಣಾಮಕಾರಿಯಾಗಿ ಶ್ರಮಿಸುವ ಸಂಕಲ್ಪ ಮಾಡಲಾಯಿತು.
💪 ಒಗ್ಗಟ್ಟಿನ ಸಂಘಟನೆ – ಗೆಲುವಿನ ಸಂಕಲ್ಪ
🤝 ಎನ್‌ಡಿಎ ಮೈತ್ರಿಕೂಟ – ರಂಗನಾಥ್ ಅವರ ಗೆಲುವು