31/03/2026
ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನಕ್ಕೆ ಕೇವಲ 40 ನಿಮಿಷಗಳ ಸಮಯವನ್ನು ಮೀಸಲಿಡಿ. 30 ನಿಮಿಷದ ನಡಿಗೆ ಮತ್ತು10 ನಿಮಿಷದ ವಿಶ್ರಾಂತಿಯು ಹೃದಯದ ಕಾಯಿಲೆಗಳನ್ನು ತಡೆಗಟ್ಟಲು ಸಹಕಾರಿ. ಸಮಯ ಇಲ್ಲ ಎನ್ನಬೇಡಿ, ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿ
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಯುಷ್ ಚಿಕಿತ್ಸಾಲಯ/ಆಸ್ಪತ್ರೆಗೆ ಭೇಟಿ ನೀಡಿ
30/03/2026
ದೀರ್ಘಕಾಲ ಒಂದೇ ಕಡೆ ಕುಳಿತು ಕೆಲಸ ಮಾಡುವುದು ಕುತ್ತಿಗೆ ಮತ್ತು ಬೆನ್ನು ನೋವಿಗೆ ಪ್ರಮುಖ ಕಾರಣವಾಗಬಹುದು. ನಿಮ್ಮ ಕೆಲಸದ ನಡುವೆ ಕುತ್ತಿಗೆಯನ್ನು ಆಗಾಗ ಸಡಿಲಗೊಳಿಸಿ, ಬೆನ್ನನ್ನು ನೇರವಾಗಿರಿಸಿ ಕುಳಿತುಕೊಳ್ಳಿ ಹಾಗೂ ಕುಳಿತಲ್ಲೇ ಹಗುರವಾಗಿ ಸ್ಟ್ರೆಚ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಯುಷ್ ಚಿಕಿತ್ಸಾಲಯ/ಆಸ್ಪತ್ರೆಗೆ ಭೇಟಿ ನೀಡಿ
29/03/2026
ಆರೋಗ್ಯಕರ ಜೀವನಶೈಲಿಗೆ ನಾವು ಏನು ತಿನ್ನುತ್ತೇವೆ ಎನ್ನುವುದು ಎಷ್ಟು ಮುಖ್ಯವೋ, ಹೇಗೆ ಮತ್ತು ಯಾವಾಗ ತಿನ್ನುತ್ತೇವೆ ಎನ್ನುವುದು ಅಷ್ಟೇ ಮುಖ್ಯ. ಜೀರ್ಣಕ್ರಿಯೆ ಸರಿಯಾಗಿ ಆಗಬೇಕಾದರೆ ರಾತ್ರಿಯ ಊಟ ಮಿತವಾಗಿರಲಿ. ಮಲಗುವ 3 ಗಂಟೆ ಮುನ್ನವೇ ಊಟ ಮುಗಿಸಿ ಹಾಗು ಊಟವಾದ ಮೇಲೆ ಸ್ವಲ್ಪ ದೂರ ಅಡ್ಡಾಡಿ. ಎಡಮಗ್ಗುಲಲ್ಲಿ ಮಲಗುವ ಅಭ್ಯಾಸ ಬೆಳೆಸಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಯುಷ್ ಚಿಕಿತ್ಸಾಲಯ/ಆಸ್ಪತ್ರೆಗೆ ಭೇಟಿ ನೀಡಿ
28/03/2026
ವಯಸ್ಸಾಗುತ್ತಿದ್ದಂತೆ ದೇಹದಲ್ಲಿ 'ವಾತ ದೋಷ' ಹೆಚ್ಚಾಗುವುದು ನೈಸರ್ಗಿಕ. ಇದು ಕೇವಲ ಕೀಲುನೋವು ಮಾತ್ರವಲ್ಲದೆ, ಚರ್ಮದ ಅತಿಯಾದ ಶುಷ್ಕತೆಗೂ ಕಾರಣವಾಗುತ್ತದೆ. ಇದಕ್ಕಾಗಿ ಪ್ರತಿದಿನ ರಾತ್ರಿ ಮಲಗುವ ಮುನ್ನ ಕೀಲುಗಳಿಗೆ ಎಳ್ಳೆಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಇದು ವಾತ ದೋಷವನ್ನು ಸಮತೋಲನಗೊಳಿಸುತ್ತದೆ ಹಾಗೂ ಕೀಲುಗಳ ನೋವು ಮತ್ತು ಬಿಗಿತವನ್ನು ಕಡಿಮೆ ಮಾಡುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಯುಷ್ ಚಿಕಿತ್ಸಾಲಯ/ಆಸ್ಪತ್ರೆಗೆ ಭೇಟಿ ನೀಡಿ
27/03/2026
ಯುವಜನತೆಯಲ್ಲಿ ಜೀರ್ಣಾಗ್ನಿ ಮತ್ತು ಪಿತ್ತದ ಪ್ರಭಾವ ಹೆಚ್ಚಿರುವುದರಿಂದ, ಮಧ್ಯಾಹ್ನದ ಉರಿ ಬಿಸಿಲಿಗೆ ಬೇಗನೆ ಸುಸ್ತಾಗುವುದು ಸಹಜ. ಈ ಸುಸ್ತನ್ನು ಕಡಿಮೆ ಮಾಡಿ ದೇಹವನ್ನು ತಂಪಾಗಿಸಲು ಮಜ್ಜಿಗೆ, ಎಳನೀರು, ಕೊತ್ತಂಬರಿ ನೀರನ್ನು ಕುಡಿಯಿರಿ. ಇವುಗಳು ನಿಮ್ಮ ದೇಹದ ಉಷ್ಣತೆ ಹಾಗೂ ಪಿತ್ತವನ್ನು ಶಮನಗೊಳಿಸಿ ದೇಹಕ್ಕೆ ಆರಾಮ ನೀಡುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಯುಷ್ ಚಿಕಿತ್ಸಾಲಯ/ಆಸ್ಪತ್ರೆಗೆ ಭೇಟಿ ನೀಡಿ
26/03/2026
ರಾಮನ ನಡೆ ಶಿಸ್ತಿನ ಜೀವನಕ್ಕೆ ಪ್ರೇರಣೆ. ಆಯುಷ್ ನುಡಿ ಸಮತೋಲಿತ ಆರೋಗ್ಯಕ್ಕೆ ಮಾರ್ಗದರ್ಶನ. ಆಯುಷ್ ಸಂಪ್ರದಾಯದೊಂದಿಗೆ ಸಂಭ್ರಮದ ರಾಮನವಮಿಯನ್ನು ಆಚರಿಸೋಣ. ಎಲ್ಲರಿಗೂ ಶ್ರೀ ರಾಮನವಮಿಯ ಶುಭಾಶಯಗಳು
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಯುಷ್ ಚಿಕಿತ್ಸಾಲಯ/ಆಸ್ಪತ್ರೆಗೆ ಭೇಟಿ ನೀಡಿ
24/03/2026
ಕ್ಷಯರೋಗದ ವಿರುದ್ಧದ ಹೋರಾಟದಲ್ಲಿ ರೋಗಕಾರಕ ಅಂಶಗಳನ್ನು ನಿಗ್ರಹಿಸುವುದರೊಂದಿಗೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದೂ ಅತ್ಯಾವಶ್ಯಕ. ವ್ಯಾಧಿಯನ್ನು ಗುಣಪಡಿಸುವುದರೊಂದಿಗೆ ; ರೋಗಿಯ ದೈಹಿಕ ಮತ್ತು ಮಾನಸಿಕ ಸಂಪೂರ್ಣ ಚೇತರಿಕೆಗೆ ಪೂರಕವಾದ ಆಯುಷ್ ಪದ್ಧತಿಗಳು, ಕ್ಷಯ ರೋಗ ನಿಯಂತ್ರಣಕ್ಕೆ ಸಹಕಾರಿ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಯುಷ್ ಚಿಕಿತ್ಸಾಲಯ/ಆಸ್ಪತ್ರೆಗೆ ಭೇಟಿ ನೀಡಿ
23/03/2026
ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಹವಾಮಾನ ಬದಲಾದಾಗ ಸುಲಭವಾಗಿ ಕಫ ಮತ್ತು ಶೀತಕ್ಕೆ ತುತ್ತಾಗುತ್ತಾರೆ. ವಿಶೇಷವಾಗಿ ಮುಂಜಾನೆಯ ಸಮಯದಲ್ಲಿ ಶೀತ ಗಾಳಿಯ ಪ್ರಭಾವದಿಂದ ಕಫದ ತೀವ್ರತೆ ಹೆಚ್ಚಾಗಿ, ಮಕ್ಕಳು ಉಸಿರಾಡಲು ಕಷ್ಟಪಡಬಹುದು. ಈ ಸಮಯದಲ್ಲಿ ಅವರಿಗೆ ಹೆಚ್ಚಿನ ಆರೈಕೆ ಮತ್ತು ಬೆಚ್ಚಗಿನ ವಾತಾವರಣದ ಅಗತ್ಯವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಯುಷ್ ಚಿಕಿತ್ಸಾಲಯ/ಆಸ್ಪತ್ರೆಗೆ ಭೇಟಿ ನೀಡಿ
22/03/2026
ನಮ್ಮ ದೇಹದ ಕಲ್ಮಶ ಹೋಗಲಾಡಿಸಲು ನೀರು ಅತ್ಯುತ್ತಮ ಮದ್ದು. ಪ್ರತಿ ನಿತ್ಯ ಬಿಸಿ ನೀರನ್ನು ಸೇವಿಸುವುದು ಮತ್ತು ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರನ್ನು ಬಳಸುವುದು ಆರೋಗ್ಯಕ್ಕೆ ಅತ್ಯುತ್ತಮ. ಈ ಪ್ರಕ್ರಿಯೆಯು ನಮ್ಮನ್ನು ರೋಗಮುಕ್ತರನ್ನಾಗಿ ಮಾಡುತ್ತದೆ. ಶುದ್ಧ ಜಲ, ಸಮೃದ್ಧ ಆರೋಗ್ಯ!
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಯುಷ್ ಚಿಕಿತ್ಸಾಲಯ/ಆಸ್ಪತ್ರೆಗೆ ಭೇಟಿ ನೀಡಿ
21/03/2026
Biodiversity is the backbone of the Ayush system. When we lose our forests, we lose the sacred herbs and plants that have healed us for millennia. Let's preserve our green lungs to ensure the survival of traditional medicine.
For more information, visit the nearest Government AYUSH Clinic/Hospital
21/03/2026
ರಂಜಾನ್ ಮಾಸದ ಉಪವಾಸವು ಕೇವಲ ಧಾರ್ಮಿಕ ಆಚರಣೆಯಲ್ಲ. ಉಪವಾಸವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಒಂದು ಅದ್ಭುತ ಪ್ರಕ್ರಿಯೆ. ರಂಜಾನ್ ತಿಂಗಳ ಶಿಸ್ತುಬದ್ಧ ಜೀವನಶೈಲಿಯು ಮನುಷ್ಯನನ್ನು ದೈಹಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಗಟ್ಟಿಗೊಳಿಸುತ್ತದೆ. ಸರ್ವರಿಗೂ ರಂಜಾನ್ ಹಬ್ಬದ ಶುಭಾಶಯಗಳು
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರ್ಕಾರಿ ಆಯುಷ್ ಚಿಕಿತ್ಸಾಲಯ/ಆಸ್ಪತ್ರೆಗೆ ಭೇಟಿ ನೀಡಿ