Dr. Ashwath Narayan

Dr. Ashwath Narayan

Share

ಡಾ. ಸಿ. ಎನ್. ಅಶ್ವಥ್ ನಾರಾಯಣ್
ಶಾಸಕರು- ಮಲ್ಲೇಶ್ವರ , ಮಾಜಿ ಉಪ-ಮುಖ್ಯಮಂತ್ರಿ, ಕರ್ನಾಟಕ ಸರ್ಕಾರ
MLA, Malleshwara | Ex- DyCM , GoK

03/06/2026

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶ್ರೀ DK Shivakumar ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಜನರ ಆಶೋತ್ತರಗಳಿಗೆ ತಕ್ಕಂತೆ ಉತ್ತಮ ಆಡಳಿತ ನೀಡುತ್ತಾ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಹಾಗೂ ಜನಕಲ್ಯಾಣದ ದಿಸೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಲಿ ಎಂದು ಹಾರೈಸುತ್ತೇನೆ.

Photos from Dr. Ashwath Narayan's post 31/05/2026

ಇಂದು ಮಲ್ಲೇಶ್ವರದಲ್ಲಿ ಆಯೋಜಿಸಲಾದ 2.5 ಕಿ.ಮೀ. “ವಾಕ್ ವಿತ್ ರಾಮಾನುಜ - 2026” ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಯದುಗಿರಿ ಯತಿರಾಜ ಜೀಯರ್ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಭಾಗವಹಿಸಿದೆ.

ಭಕ್ತಿ, ಸಂಸ್ಕೃತಿ, ಆರೋಗ್ಯಕರ ಜೀವನಶೈಲಿ ಹಾಗೂ ಸಮಾಜದಲ್ಲಿ ಸೌಹಾರ್ದತೆಯ ಸಂದೇಶವನ್ನು ಸಾರುವ ಇಂತಹ ಕಾರ್ಯಕ್ರಮಗಳು ನಮ್ಮ ಸನಾತನ ಧರ್ಮದ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸುವುದರ ಜೊತೆ ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡುತ್ತವೆ.

31/05/2026

🏆 ಎರಡನೇ ಬಾರಿ ಸತತ ಐಪಿಎಲ್ ಚಾಂಪಿಯನ್!

Royal Challengers Bengaluru ಮತ್ತೊಮ್ಮೆ ಇತಿಹಾಸ ನಿರ್ಮಿಸಿದೆ. ಸತತ ಎರಡನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ತನ್ನ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಮೊದಲ ಪಂದ್ಯದಿಂದಲೇ ಎದುರಾಳಿಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿ, ತನ್ನ ಅದ್ಭುತ ಪ್ರದರ್ಶನದ ಮೂಲಕ ಈ ಸೀಸನ್‌ನ ಮೇಲೆ ಸಂಪೂರ್ಣ ಮುದ್ರೆ ಒತ್ತಿದೆ.

“ಆಡೋಕೆ ಬಂದಿಲ್ಲ…ಆಳ್ತೀವಿ!” ಎಂಬ ಹೊಸ ಘೋಷಣೆಗೆ ತಕ್ಕಂತೆ, ಇಡೀ ಟೂರ್ನಿಯನ್ನೇ ತನ್ನದಾಗಿಸಿಕೊಂಡ ಚಾಂಪಿಯನ್ಸ್.

ಈ ಸಲ ಮಾತ್ರವಲ್ಲ, ಮತ್ತೆ ಮತ್ತೆ ಕಪ್ ನಮ್ದೇ! 🏆💛♥️

———————————

🏆 Back-to-Back IPL Champions!

RCB has once again scripted history by lifting the IPL trophy for the second consecutive season, reaffirming its dominance on the grandest stage.

From the very first match, the team displayed exceptional consistency, determination, and control, leaving a lasting mark throughout the tournament with outstanding performances.

Living up to the spirit of “We didn’t come just to play… we came to conquer!”, the champions made this season truly their own.

Not just this year—the cup is ours again and again! 🏆❤️💛


31/05/2026

Bengaluru’s love for RCB is an emotion that unites millions of hearts. ❤️🏏

Happy to visit the magnificent 20-foot RCB mural at Orion Mall, a wonderful initiative by Unboxing Bengaluru. The artwork beautifully reflects the passion, resilience, and spirit that make RCB an integral part of Bengaluru’s identity.

Wishing RCB continued success and many more glorious moments ahead.
Prathi Sala Cup Namde
Always RCB!

Royal Challengers Bengaluru
#ನಮ್ಮRCB

Photos from Dr. Ashwath Narayan's post 31/05/2026

ಯಶವಂತಪುರದ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ನಡೆದ ಶ್ರೀ ಅಯ್ಯಪ್ಪ ಸ್ವಾಮಿ ಪ್ರತಿಷ್ಠಾಪನೆ, ದೇವಸ್ಥಾನದ ನವೀಕರಣ ಕಲಶ ಮಹೋತ್ಸವ ಹಾಗೂ ಧಾರ್ಮಿಕ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ಆಶೀರ್ವಾದ ಪಡೆಯಲಾಯಿತು.

ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆ ಎಲ್ಲರ ಮೇಲೂ ಸದಾ ಇರಲಿ ಹಾಗೂ ನಾಡಿಗೆ ಸುಖ, ಶಾಂತಿ, ಸಮೃದ್ಧಿ ಮತ್ತು ಸೌಹಾರ್ದತೆ ಲಭಿಸಲಿ ಎಂದು ಪ್ರಾರ್ಥಿಸಿದೆ.

Photos from Dr. Ashwath Narayan's post 30/05/2026

Historic Moment for Karnataka Basketball! 🏆🏀
Huge congratulations to Team Karnataka on clinching the 76th Junior National Basketball Championshiptitle with a spectacular 83-75 victory over Haryana in the finals at Puducherry!

This is a monumental milestone which marks Karnataka's Junior Men’s National title in 46 years, a feat last achieved back in 1980.

Full credit goes to this phenomenal group of young athletes for their true grit, discipline, and fighting spirit to bring the trophy home.

A special congratulations to the team’s Head Coach Sachin Belvadi and his Assistant Umashankar, for guiding this team to ultimate victory with their key player Adithya Shenoy for earning the well-deserved (MVP) of the tournament award!

Karnataka continues to shine bright on the national sporting stage. Wishing our young champions endless success as they continue to rise! 🌟


Photos from Dr. Ashwath Narayan's post 30/05/2026

ಇಂದು ಮಲ್ಲೇಶ್ವರದಲ್ಲಿ ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ವತಿಯಿಂದ ಆಯೋಜಿಸಲಾದ ಸುವರ್ಣ ಶಿಕ್ಷಣ ಮೇಳ ಹಾಗೂ ಬೃಹತ್ ಎಜುಕೇಶನ್ ಎಕ್ಸ್‌ಪೋವನ್ನು ಮಾಜಿ ಸಚಿವರಾದ ಡಾ ಎಂ ಸಿ ಸುಧಾಕರ್ ಅವರೊಂದಿಗೆ ಉದ್ಘಾಟಿಸಲಾಯಿತು.

ವಿದ್ಯಾರ್ಥಿಗಳ ಭವಿಷ್ಯಕ್ಕೆ ದಿಕ್ಕು ತೋರಿಸುವ ಮಹತ್ವದ ವೇದಿಕೆಯಾಗಿದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ತಕ್ಕ ಶಿಕ್ಷಣ ಹಾಗೂ ವೃತ್ತಿ ಆಯ್ಕೆಗಳ ಬಗ್ಗೆ ತಜ್ಞರಿಂದ ಮಾರ್ಗದರ್ಶನ ಪಡೆಯಲು ಈ ಮೇಳ ಅತ್ಯುತ್ತಮ ವೇದಿಕೆಯಾಗಿದೆ.

Kannada Prabha

30/05/2026

Live : ಪತ್ರಿಕಾಗೋಷ್ಠಿ

ಸ್ಥಳ : ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನ

29/05/2026

ಕನ್ನಡ ಚಿತ್ರರಂಗದ ಅಪರೂಪದ ವ್ಯಕ್ತಿತ್ವ, ಜನಮಾನಸದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ರೆಬೆಲ್ ಸ್ಟಾರ್ ಶ್ರೀ ಅಂಬರೀಶ್ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು.

ನೇರ ನುಡಿ, ಸ್ನೇಹಪರ ಸ್ವಭಾವ ಹಾಗೂ ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದ ಅವರ ಮಾನವೀಯ ಗುಣಗಳು ಅವರನ್ನು ಲಕ್ಷಾಂತರ ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿಸಿವೆ. ಕಲಾವಿದನಾಗಿ, ಜನನಾಯಕನಾಗಿ ಹಾಗೂ ಕನ್ನಡದ ಹೆಮ್ಮೆಯ ಪುತ್ರನಾಗಿ ಅವರು ಸಲ್ಲಿಸಿದ ಸೇವೆ ಮತ್ತು ಕೊಡುಗೆಗಳು ಸದಾ ಸ್ಮರಣೀಯ.

Want your business to be the top-listed Government Service in BANGLORE?

Click here to claim your Sponsored Listing.

Location

Address


Banglore
560003