ಈ ಸಲ ಕಪ್ ನಮ್ದು – ಆರ್‌ಸಿಬಿಗೆ ದಿಗ್ವಿಜಯ
ಕನ್ನಡಿಗರ ಮನೆ-ಮನ ಗೆದ್ದ ನಮ್ಮ ಆರ್ ಸಿ…ಬಿ..
ಮೊಟ್ಟ ಮೊದಲ ಬಾರಿಗೆ #ಐಪಿಎಲ್ ಕಪ್ ಎತ್ತಿ ಹಿಡಿದಿರುವ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹಾರ್ದಿಕ ಅಭಿನಂದನೆಗಳು.
Kampli Taluk - ಕಂಪ್ಲಿ ತಾಲೂಕು
Kampli Taluk
01/11/2024
ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!!!🪔🪔🪔
12/10/2024
ತಾಯಿ ಕಾಳಿಕಾದೇವಿ ಆರ್ಶಿವಾದಗಳೊಂದಿಗೆ ದಸರಾ ಹಬ್ಬವು ತಮ್ಮ ಜೀವನದಲ್ಲಿ ಗೆಲುವು, ಆರೋಗ್ಯ, ಐಶ್ವಯ೯, ಸುಖ, ಸಮೃದ್ಧಿ, ಶಾಂತಿ ನೆಮ್ಮದಿಯನ್ನು ತರಲಿ
ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಆಯುಧ ಪೂಜಾ ಮತ್ತು ವಿಜಯದಶಮಿ ಹಬ್ಬದ ಹಾದಿ೯ಕ ಶುಭಾಶಯಗಳು.
07/09/2024
ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 💐💐
02/09/2024
ತುಂಗಭದ್ರಾ ಜಲಾಶಯ ಭರ್ತಿಯಾಗಲು ಇನ್ನೂ 1.94 ಅಡಿ ಬಾಕಿ ಇದೆ. ಜಲಾಶಯಕ್ಕೆ ಈಗ 30031 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸದ್ಯ ಜಲಾಶಯದಲ್ಲಿ 98.01 ಟಿಎಂಸಿ ಸಂಗ್ರಹವಾಗಿದೆ. ಒಟ್ಟು ಜಲಾಶಯದಲ್ಲಿ 105.788 ಟಿಎಂಸಿ ನೀರು ಸಂಗ್ರಹವಾಗಲಿದೆ. ಒಂದೇ ದಿನದಲ್ಲಿ 2 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಇನ್ನೂ 7 ಟಿಎಂಸಿ ನೀರು ಬೇಕು. ಕಿತ್ತೋಗಿದ್ದ ಗೇಟ್ ಬಂದ್ ಮಾಡಿದ ನಂತರ 27 ಟಿಎಂಸಿ ನೀರು ಸಂಗ್ರಹವಾಗಿದೆ. ಈಗ ಒಳಹರಿವು ಹೆಚ್ಚಳವಾಗಿರುವ ಹಿನ್ನಲೆ ಡ್ಯಾಂ ಭರ್ತಿಯಾಗುವ ಆಶಾಭಾವನೆ ಇದೆ.
21/08/2024
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ನಂ. 19 ನಲ್ಲಿ ಸಂಭವಿಸಿದ ಅವಘಡದ ಸಮಯದಲ್ಲಿ ಡ್ಯಾಂನಲ್ಲಿ 105 ಟಿಎಂಸಿ ನೀರಿನ ಸಂಗ್ರಹವಿತ್ತು. ಪ್ರಾರಂಭದಲ್ಲಿ 60 ಟಿಎಂಸಿ ನೀರನ್ನು ಹೊರಹಾಕಿ ದುರಸ್ತಿ ಕಾರ್ಯ ನಿರ್ವಹಿಸುವಂತೆ ಯೋಚನೆಯಾಗಿತ್ತು, ಆದರೆ ತಜ್ಞರು ಮತ್ತು ಕಾರ್ಮಿಕರ ಶ್ರಮದಿಂದ ಕೇವಲ 30 ಟಿಎಂಸಿ ನೀರನ್ನು ಹೊರಹರಿಸಿ ಸಂಪೂರ್ಣ ದುರಸ್ತಿ ಮಾಡಲಾಗಿದೆ.
ಪ್ರಸ್ತುತ, ಡ್ಯಾಂನಲ್ಲಿ 72 ಟಿಎಂಸಿ ನೀರಿದ್ದು, ಪ್ರತಿದಿನವೂ ಮೂರು ರಿಂದ ನಾಲ್ಕು ಟಿಎಂಸಿ ಒಳಹರಿವಿದೆ. ಮುಂದಿನ ವಾರದಲ್ಲಿಮಲೆನಾಡು ಪ್ರದೇಶದಲ್ಲಿ ಹೆಚ್ಚು ಮಳೆ ಬರುವ ಸಾಧ್ಯತೆ ಇದೆ, ಇದರಿಂದ ನಿಸರ್ಗದ ಕೃಪೆಯಿಂದ ಹತ್ತು ದಿನದೊಳಗೆ ತುಂಗಭದ್ರಾ ಡ್ಯಾಂ ತುಂಬುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆತಂಕ ಪಡಬೇಕಾಗಿಲ್ಲ.
ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿ ಈ ಮೊದಲ ಬಾರಿಗೆ ಈ ರೀತಿಯ ಅವಘಡ ಸಂಭವಿಸಿತ್ತು. ತಜ್ಞರ ತಂಡ ಶೀಘ್ರವಾಗಿ ದುರಸ್ತಿ ಕಾರ್ಯ ನಡೆಸಿ ನೀರಿನ ಮಟ್ಟವನ್ನು ಸುಧಾರಿಸಿದೆ. ಮೇಲ್ಮಟ್ಟದಲ್ಲಿ ಉತ್ತಮ ಮಳೆ ಬರುವುದಾದರೆ ಇನ್ನೆರಡು ವಾರದಲ್ಲಿ ಜಲಾಶಯ ಸಂಪೂರ್ಣವಾಗಿ ತುಂಬುವ ನಿರೀಕ್ಷೆಯಿದೆ ಮತ್ತು ಇದರಿಂದ ಬೆಳೆಗಳಿಗೆ ಅಗತ್ಯವಿರುವ ನೀರಿನ ಒದಗಿಸುವುದು ಖಚಿತವಾಗಿದೆ.
ಅದೆಷ್ಟೋ ಮಹನೀಯರ, ಕೆಚ್ಚೆದೆಯ ವೀರರ ಶ್ರಮದ ಫಲವೇ ಇಂದಿನ ಸ್ವಾತಂತ್ರ್ಯ. ಇವರ ತ್ಯಾಗ ಬಲಿದಾನ ಎಂದೂ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು.ನಮಗಾಗಿ ಕಷ್ಟಪಟ್ಟ ಪ್ರತಿಯೊಬ್ಬ ಸ್ವಾತಂತ್ರ್ಯ ಸೇನಾನಿಗಳಿಗೂ ನಮ್ಮ ನಮನ.
ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆ ಯ ಶುಭಾಶಯಗಳು.
AzadikaAmritMahotsav 2024
Happy 77th Independence Day🇮🇳
ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಸಂಖ್ಯೆ 19ರಲ್ಲಿ ಚೈನ್ ಲಿಂಕ್ ತುಂಡಾಗಿರುವ ( TB Dam Gate Broken) ಕಾರಣ ನದಿಗೆ ಅಪಾರ ಪ್ರಮಾಣದ ನೀರು ಹರಿಸಲಾಗುತ್ತಿದೆ. ನೀರಿನ ರಭಸಕ್ಕೆ ತುಂಡಾಗಿರುವ ಭಾಗವೂ ಕಾಣುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುಂಗಭದ್ರಾ ಜಲಾಶಯದಿಂದ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಗಂಗಾವತಿ ಮತ್ತು ಕಂಪ್ಲಿ ನಡುವಿನ ಸೇತುವೆ ಮುಳಗಡೆಯಾಗಿದೆ. ಗಂಗಾವತಿ-ಕಂಪ್ಲಿ ನಡುವಿನ ಸಂಪರ್ಕ ಕಡಿತಗೊಂಡಿದೆ. ಆನೇಗೊಂದಿಯಲ್ಲಿರುವ ಶ್ರೀಕೃಷ್ಣದೇವರಾಯ ಸಮಾದಿ ಮಂಟಪ ಜಲಾವೃತಗೊಂಡಿದೆ. ನವವೃಂದಾವನ ಗಡ್ಡೆ, ವಿರುಪಾಪುರಗಡ್ಡೆ, ಋಷಿಮುಖ ಪರ್ವತಕ್ಕೆ ಸಂಪರ್ಕ ಕಡಿತವಾಗಿದೆ. ಹೊರಹರಿವು ಹೆಚ್ಚಾದರೆ ರೈತರ ಜಮೀನಿಗೆ ನೀರು ನುಗ್ಗುವ ಸಾಧ್ಯತೆ ಇದೆ. ತುಂಗಭದ್ರಾ ನದಿ ತೀರದ ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ.
05/07/2024
ಎಲ್ಲರಿಗೂ ಮಣ್ಣೆತ್ತಿನ ಅಮವಾಸ್ಯೆಯ ಶುಭಾಶಯಗಳು.
ರೈತಪರಂಪರೆಯ ಹಬ್ಬಗಳನ್ನು ನೆನಪಿಸಿಕೊಂಡು ಆಚರಿಸೋಣ.
29/06/2024
𝗖.𝗛.𝗔.𝗠.𝗣.𝗜.𝗢.𝗡.𝗦 🏆
🇮🇳 HAVE DONE IT! 🔝👏
ICC Men's T20 World Cup 2024 🏆
Click here to claim your Sponsored Listing.
Location
Category
Website
Address
Bellary
