04/10/2025
ಶ್ರೀ ಮಹಾದೇವ ಎಜುಕೇಷನ್, ಆರ್ಟ್ & ಕಲ್ಚರಲ್ ಟ್ರಸ್ಟ್ (ರಿ.), ಬಳ್ಳಾರಿ
ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ಮತ್ತು ರಾಜ್ಯಮಟ್ಟದ “ಕರ್ನಾಟಕ ಸಾಧಕ ರತ್ನ – 2024” ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಕುರಿತು
ಸಭಾ ವರದಿ – 03-10-2025 (ಶುಕ್ರವಾರ)
ನಿನ್ನೆ ನಮ್ಮ ಟ್ರಸ್ಟ್ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿಯ ಆನ್‌ಲೈನ್ ಸಭೆ ಯಶಸ್ವಿಯಾಗಿ, ಉತ್ಸಾಹಭರಿತ ವಾತಾವರಣದಲ್ಲಿ ನಡೆಯಿತು. ಕನ್ನಡ ಸಂಸ್ಕೃತಿ, ಸಾಹಿತ್ಯ ಮತ್ತು ಕಲೆಗಳ ಹಿತಚಿಂತನೆ ಹಾಗೂ ಸಾಧಕರ ಸಮ್ಮಾನಕ್ಕಾಗಿ ಎಲ್ಲ ಸದಸ್ಯರೂ ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ಹಂಚಿಕೊAಡರು.
ಸಭೆಯ ಪ್ರಮುಖ ನಿರ್ಣಯಗಳು:
ಈ ವರ್ಷದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನವನ್ನು ನವೆಂಬರ್ ತಿಂಗಳ ಕೊನೆಯಲ್ಲಿ ವೈಭವದಿಂದ ಆಯೋಜಿಸಲು ನಿರ್ಧರಿಸಲಾಯಿತು. ನಿಖರ ದಿನಾಂಕವನ್ನು ಇದೇ ತಿಂಗಳ ಕೊನೆಯ ಭಾನುವಾರ ನಡೆಯುವ ಮುಂದಿನ ಸಭೆಯಲ್ಲಿ ಅಂತಿಮಗೊಳಿಸಲಾಗುವುದು.
ಈ ಬಾರಿ ಸಮ್ಮೇಳನವು ನೂತನ ಚೈತನ್ಯ ಮತ್ತು ಸೃಜನಶೀಲ ಶಕ್ತಿಯೊಂದಿಗೆ ಸಾಂಸ್ಕೃತಿಕ ಹಬ್ಬವಾಗಿ ಮೂಡಿಬರಲಿದೆ ಎಂದು ಸಭೆಯಲ್ಲಿ ಅಭಿಪ್ರಾಯ ಪಟ್ಟರು.
ಪ್ರಶಸ್ತಿ ಅರ್ಜಿಗಳು ಮತ್ತು ಆಯ್ಕೆ ಪ್ರಕ್ರಿಯೆ:
ಆಯ್ಕೆ ಸಮಿತಿಯ ವರದಿ ಪ್ರಕಾರ, 182ಕ್ಕೂ ಹೆಚ್ಚು ಅರ್ಜಿಗಳು ಸ್ವೀಕರಿಸಲ್ಪಟ್ಟಿವೆ. ಶಿಕ್ಷಕರು, ಕವಿ-ಸಾಹಿತಿಗಳು, ರಂಗಭೂಮಿ ಕಲಾವಿದರು, ಚಿತ್ರಕಲಾವಿದರು, ಸಮಾಜಸೇವಕರು ಹಾಗೂ ಸಂಶೋಧಕರು ಮುಂತಾದ ವಿವಿಧ ಕ್ಷೇತ್ರಗಳ ಪ್ರತಿಭೆಗಳು ತಮ್ಮ ಸಾಧನೆಗಳನ್ನು ಕಳುಹಿಸಿದ್ದಾರೆ. ಅವರ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಆಯ್ಕೆಯಾದ ಪ್ರಶಸ್ತಿ ಪುರಸ್ಕೃತರ ಪಟ್ಟಿ ನವೆಂಬರ್‌ನಲ್ಲಿ ಪ್ರಕಟಿಸಲಾಗುವುದು.
🌿 ಪ್ರತಿಯೊಬ್ಬರ ಸಾಧನೆ ನಮ್ಮ ಸಮಾಜದ ಸ್ಫೂರ್ತಿ — ಟ್ರಸ್ಟ್ ಅದಕ್ಕೆ ಗೌರವ ನೀಡುವುದು ನಮ್ಮ ಕರ್ತವ್ಯ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಇತರ ಕ್ಷೇತ್ರಗಳ ಸಲ್ಲಿಕೆಗಳು:
ಕೃಷಿ, ಪರಿಸರ, ಸೈನಿಕ/ಮಾಜಿ ಸೈನಿಕ, ವಿಜ್ಞಾನ-ತಂತ್ರಜ್ಞಾನ, ಸಂಗೀತ, ನೃತ್ಯ, ಕ್ರೀಡೆ, ವೈದ್ಯಕೀಯ, ಸಂಘ-ಸAಸ್ಥೆಗಳAತಹ ಕ್ಷೇತ್ರಗಳಲ್ಲಿ ಸಲ್ಲಿಕೆಗಳು ಅಲ್ಪವಾಗಿರುವುದರಿಂದ, ಈ ವಿಭಾಗಗಳ ಸಾಧಕರ ಕುರಿತು ಮಾಹಿತಿಯನ್ನು ಸಂಗ್ರಹಿಸಲು ಸದಸ್ಯರಿಗೆ ವಿನಂತಿಸಲಾಯಿತು.
🔸 ಸಾಧನೆಯು ಯಾವ ಕ್ಷೇತ್ರದಲ್ಲಾದರೂ ಅದೇ ಕನ್ನಡದ ಕೀರ್ತಿ — ನಾವು ಅದನ್ನು ಬೆಳಗಿಸೋಣ! ಎಂದು ಸದಸ್ಯರು ತಿಳಿಸಿದರು.
ಮಾಹಿತಿ ಸಂಗ್ರಹಣೆಯ ಕೊನೆಯ ದಿನಾಂಕ:
ಇತರ ಕ್ಷೇತ್ರಗಳ ಸಾಧಕರ ಕುರಿತು ಮಾಹಿತಿಯನ್ನು ಸಂಗ್ರಹಿಸಲು 25-10-2025 ಕೊನೆಯ ದಿನಾಂಕವಾಗಿ ನಿಗದಿಪಡಿಸಲಾಯಿತು. ಸದಸ್ಯರು ತಮ್ಮ ಪ್ರದೇಶದ ಪ್ರತಿಭೆಗಳನ್ನು ಗುರುತಿಸಿ ಮಾಹಿತಿಯನ್ನು ಕಳುಹಿಸಲು ವಿನಂತಿಸಲಾಗಿದೆ.
ಸಾಂಸ್ಕೃತಿಕ ಸ್ಪರ್ಧೆಗಳು:
ಕವಿಗೋಷ್ಠಿ, ನೃತ್ಯ, ಗಾಯನ, ಚಿತ್ರಕಲೆ, ರಂಗೋಲಿ ಹಾಗೂ ಇತರ ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ ಕುರಿತು ಚರ್ಚಿಸಲಾಯಿತು. ಈ ಸ್ಪರ್ಧೆಗಳು ಅಕ್ಟೋಬರ್ ಕೊನೆಯ ಭಾನುವಾರದಿಂದ ಪ್ರಾರಂಭವಾಗಲಿವೆ. ಪ್ರಕಟಣೆ ಹಾಗೂ ಪ್ರಚಾರ ಕಾರ್ಯಗಳನ್ನು ಪ್ರಧಾನ ಕಾರ್ಯದರ್ಶಿ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಗಳು ನೋಡಿಕೊಳ್ಳಲಿದ್ದಾರೆ.
🎨 ಮಕ್ಕಳ ಸೃಜನಶೀಲತೆ ಮತ್ತು ಯುವಕರ ಕಲಾ ಕೌಶಲ್ಯಕ್ಕೆ ಈ ವೇದಿಕೆ ಹೊಸ ಪ್ರೇರಣೆ ನೀಡಲಿದೆ.
*ಇತರೆ ವಿಚಾರಗಳು:* ಇತರ ಸಂಘ ಸಂಸ್ಥೆಗಳ ಸಹಕಾರ, ಹಣಕಾಸು ನಿರ್ವಹಣೆ, ವೇದಿಕೆ ವಿನ್ಯಾಸ, ಅತಿಥಿ ಆಹ್ವಾನ ಹಾಗೂ ಕಾರ್ಯಕ್ರಮ ನಿರ್ವಹಣೆ ಕುರಿತೂ ವಿಸ್ತೃತ ಚರ್ಚೆ ನಡೆಯಿತು. ಸದಸ್ಯರಿಂದ ಬಂದ ಸಲಹೆಗಳನ್ನು ಗೌರವಪೂರ್ವಕವಾಗಿ ಪರಿಗಣಿಸಲಾಯಿತು.
ಸಭೆ ವಂದನಾರ್ಪಣೆಯೊಂದಿಗೆ ಹಾಗೂ “ಸಮ್ಮೇಳನವು ಕನ್ನಡದ ಹೆಮ್ಮೆ, ನಮ್ಮ ಒಕ್ಕೂಟದ ಚಿಹ್ನೆ” ಎಂಬ ಭಾವನೆಯಲ್ಲಿ ಸಂಪನ್ನವಾಯಿತು.
– ಕೆ. ತಿಪ್ಪೇರುದ್ರಪ್ಪ
ಪ್ರಧಾನ ಕಾರ್ಯದರ್ಶಿ
ಶ್ರೀ ಮಹಾದೇವ ಎಜುಕೇಷನ್, ಆರ್ಟ್ & ಕಲ್ಚರಲ್ ಟ್ರಸ್ಟ್ (ರಿ.), ಬಳ್ಳಾರಿ
28/07/2025
https://forms.gle/FfnuH9E4aMc214Qy7
ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ-2025
ಸ್ಮಿಯಾಕ್ ಟ್ರಸ್ಟ್ ರವರ
ಸಜೀವ ಶಿಲ್ಪಿಗಳಿಗೆ ಕೃತಜ್ಞತೆ ಸ್ವರೂಪವಾದ ರಾಜ್ಯಮಟ್ಟದ ಗೌರವ ಪ್ರಶಸ್ತಿ
ರಾಜ್ಯಮಟ್ಟದ “ಕರ್ನಾಟಕ ಸಾಧಕ ರತ್ನ” - 2025
ಈ ಪ್ರಶಸ್ತಿ ಮೌನ ಸಾಧಕರಿಗೆ ಧ್ವನಿ... ಅನಾಮಿಕ ತ್ಯಾಗಿಗಳಿಗೆ ಬೆಳಕು...
ಹೊಸ ತಲೆಮಾರಿಗೆ ಪ್ರೇರಣೆ... ಗೌರವದ ಚಿರಪರಿಚಿತ ಸಂಕೇತ...
ಸAಯೋಜಕರು
ಶ್ರೀ ಮಹಾದೇವ ಎಜುಕೇಷನ್, ಆರ್ಟ್ & ಕಲ್ಚರಲ್ ಟ್ರಸ್ಟ್(ರಿ), ಬಳ್ಳಾರಿ
ಅಖಿಲ ಕರ್ನಾಟಕ ಕನ್ನಡ ರಾಜ್ಯೋತ್ಸವ ಸಮಿತಿ, ಬಳ್ಳಾರಿ
ಸೆಪ್ಟಂಬರ 2025 | ಸ್ಥಳ: ಬಳ್ಳಾರಿ
ಪ್ರಶಸ್ತಿಗೆ ಪರಿಗಣಿಸಲಾಗುವ ಕ್ಷೇತ್ರಗಳು (25+)
ದೇಶಸೇವೆ, ಮಾಜಿ ಸೈನಿಕರು, ಕನ್ನಡ ಸೇವೆ, ಕೃಷಿ, ಶಿಕ್ಷಣ, ವೈದ್ಯಕೀಯ, ಪರಿಸರ, ಸಾಹಿತ್ಯ, ಸಂಗೀತ, ನೃತ್ಯ, ಚಿತ್ರಕಲೆ, ಕ್ರೀಡೆ, ವಿಜ್ಞಾನ-ತಂತ್ರಜ್ಞಾನ, ನ್ಯಾಯಾಂಗ, ಮಾಧ್ಯಮ, ರಂಗಭೂಮಿ, ಜಾನಪದ, ಯಕ್ಷಗಾನ, ಬಯಲಾಟ, ತೊಗಲುಬೊಂಬೆ, ಸಂಘಟನೆಗಳು, ಉದ್ಯಮ, ಪೌರಕಾರ್ಮಿಕ ಸೇವೆ, ಯೋಗ, ಧಾರ್ಮಿಕ ಸೇವೆ, ವಿಶೇಷಚೇತನರ ಸಾಧನೆ ಮತ್ತಿತರ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದವರು ಹಾಗೂ ಸಾಧನೆಯ ಪಯಣದಲ್ಲಿ ಸಾಗುತ್ತಿರುವ ಸಾಧಕರಿಗಾಗಿ ಈ ಗೌರವ.
ಅರ್ಹತೆಗಳು:
* ಸಾಧಕರಿಗೆ ತಮ್ಮ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮತ್ತು ಸೇವೆ ಇರಬೇಕು
* (ಂಛಿhievemeಟಿಣ ಔಡಿieಟಿಣeಜ Pಡಿoಜಿiಟe)
* ಕರ್ನಾಟಕದ ಯಾವುದೇ ಭಾಗದ ಸಾಧಕರು ಅರ್ಹರಿರುತ್ತಾರೆ.
* ಸಮಾಜದಲ್ಲಿ ಪ್ರಭಾವ ಬೀರುವಂತಹ ಕೆಲಸ ಮಾಡಿರಬೇಕು.
* ಕನಿಷ್ಠ 5 ವರ್ಷಗಳ ಸಾಧನೆಗೈದವರಾಗಿರಬೇಕು.
ಆಯ್ಕೆಯ ವಿಧಾನ:
* ಅರ್ಜಿಗಳನ್ನು ಆಯ್ಕೆ ಸಮಿತಿ ಪರಿಶೀಲಿಸುತ್ತದೆ.
* ಆಯ್ಕೆ ಸಮಿತಿಯ ಬಗ್ಗೆ ಗೌಪ್ಯತೆಯನ್ನು ಕಾಪಾಡಲಾಗುತ್ತದೆ.
* ಅನುಭವ ಮತ್ತು ಸಾಧನೆಗಳನ್ನು ಗುರುತಿಸಿ ಆಯ್ಕೆ ಮಾಡುತ್ತಾರೆ.
* ಆಯ್ಕೆ ಸಮಿತಿಯ ನಿರ್ಧಾರ ಅಂತಿಮ ಮತ್ತು ಬದ್ದ.
* ಯಾವುದೇ ರೀತಿಯ ಶುಲ್ಕ / ದೇಣಿಗೆಗಳನ್ನು ಸಾಧಕರಿಂದ ಸ್ವೀಕರಿಸುವುದಿಲ್ಲ.
ಪುರಸ್ಕಾರ ಪ್ರಧಾನ
* ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ನೀಡಿ ಸನ್ಮಾನಿಸಲಾಗುವುದು.
* ಅತ್ಯುತ್ತಮ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ, ಸನ್ಮಾನ.
* ನಗದು ಇರುವುದಿಲ್ಲ.
ಪುರಸ್ಕಾರಕ್ಕೆ ಅರ್ಜಿಯನ್ನು ಸಲ್ಲಿಸಬೇಕಾದ ವಿಧಾನ
* ಸ್ವಯಂ ಸಲ್ಲಿಕೆ ಅಥವಾ ನಾಮ ನಿರ್ದೇಶನ - ಗೂಗಲ್ ಫಾರ್ಮ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
* ಪ್ರಶಸ್ತಿಗೆ ಸೂಕ್ತವೆನಿಸಿದ ವ್ಯಕ್ತಿ ಅಥವಾ ಸಂಘ-ಸoಸ್ಥೆಗಳನ್ನು ಯಾರಾದರೂ ಶಿಫಾರಸ್ಸು ಮಾಡಬಹುದು.
* ನಾಮನಿರ್ದೇಶನ ಮಾಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು.
* ಪ್ರಶಸ್ತಿ ಪುರಸ್ಕಾರಗಳ ಪಟ್ಟಿ ಇದ್ದಲ್ಲಿ, ಪಿಡಿಎಫ್ ಮೂಲಕ ಸಲ್ಲಿಸಿ..
* ಆಯ್ಕೆಯಾದವರಿಗೆ ದೂರವಾಣಿ ಮುಖಾಂತರ ತಿಳಿಸಲಾಗುವುದು.
* ಆತ್ಮೀಯ ಕುಟುಂಬ ಮತ್ತು ಸ್ನೇಹಿತರೊಂದಿಗೆ ಆಗಮಿಸಿ.
* ಕಾರ್ಯಕ್ರಮದ ಬಗ್ಗೆ ಅಂತಿಮ ನಿರ್ಧಾರವು ನಮ್ಮ ಸಂಸ್ಥೆಯದ್ದಾಗಿರುತ್ತದೆ.
ಸೂಚನೆಗಳು
* ಅರ್ಜಿದಾರರು / ಶಿಫಾರಸ್ಸು ಮಾಡುತ್ತಿರುವವರು ಸವಿಸ್ತಾರವಾದ ಪರಿಚಯವನ್ನು ಭಾವಚಿತ್ರದ ಜೊತೆಗೆ ಸಲ್ಲಿಸಲು ಕೋರಲಾಗಿದೆ.
* ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
* ಬಂದAತಹ ಅರ್ಜಿಗಳ ಬಗ್ಗೆ ಗೌಪ್ಯತೆಯನ್ನು ಕಾಯ್ದುಕೊಳ್ಳಲಾಗುವುದು.
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-08-2025.
* ನಂತರ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಸಮಿತಿಯ ಪರವಾಗಿ
ಬಸವರಾಜ್ ಬಿಸಲಹಳ್ಳಿ, ಗೌರವಾಧ್ಯಕ್ಷರು - 90368 51961 / 73377 45561
ಕೆ.ತಿಪ್ಪೇರುದ್ರಪ್ಪ, ಪ್ರಧಾನ ಕಾರ್ಯದರ್ಶಿ- 98457 27189
ಸುಧೀಂದ್ರ ನಾಡಿಗಾರ್, ಕಾರ್ಯದರ್ಶಿ - 86609 07688
ಹರಿಪ್ರಸಾದ್ ಜಿ, ಖಜಾಂಚಿ - 90359 34362
docs.google.com
25/03/2024
ಆತ್ಮೀಯರೇ....
ಹುಟ್ಟು.. ಬಿಳುಪಿನ ಬಣ್ಣ ....
ಮಮತೆ.. ಹಸಿರಿನ ಬಣ್ಣ ....
ಸ್ನೇಹ.. ಹಳದಿಯ ಬಣ್ಣ. ...
ಪ್ರೀತಿ.. ಕೆಂಪಿನ ಬಣ್ಣ. ....
ಬಾಳಿನ ಭಾವನೆಗಳು..
ರಂಗುರಂಗಿನ ಕಾಮನಬಿಲ್ಲೋ ಅಣ್ಣ ....
ಹದವರಿತು ಭಾವನೆಗಳ..
ಬಣ್ಣ ಬೆರೆಸಿದರೆ..
ಬದುಕೇ ಸುಂದರ ಚಿತ್ತಾರವಣ್ಣ ...
🩷❤️🧡💛💛💚🩵💙💜
*ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ಹೋಳಿ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು...*
🍫🍫👍👍👍🍫🍫
*ಬಸವರಾಜ್ ಬಿಸಲಹಳ್ಳಿ...*
💛🧡💚❤️🩷
Wishing You and Your Family a very Bright, Colourful and Joyful Holi....
👍👍🍫🍫🍫
With Love & Best Wishes
Basavaraj Bisalahalli...