Sunil Naik

Call Directions Website Contact the organization

Sunil Naik ಧರ್ಮ ಪಾಲನೆ ನನ್ನ ಧ್ಯೇಯ,
ಜನರ ಸೇವೆ ನನ್ನ ಕರ್ತವ್ಯ...

09/10/2026

ಮಿತ್ರರಾದ ಶ್ರೀಧರ ನಾಯ್ಕ ಮುಟ್ಟಳ್ಳಿ ಇವರ ನೇತೃತ್ವದಲ್ಲಿ ಕರ್ನಾಟಕ ಕಬ್ಬಡ್ಡಿ ಪ್ರೀಮಿಯರ್ ಲೀಗ್ 2026 ರ ಫೈನಲ್ ಪಂದ್ಯದಲ್ಲಿ ಉತ್ತರ ಕನ್ನಡ ಜಿಲ್ಲೆ ಜಯಗಳಿಸಿದೆ. ಅಭಿನಂದನೆಗಳು

ಪ್ರಧಾನಿ ಮೋದಿ ಅವರ 25 ವರ್ಷಗಳ ನಿರಂತರ ಸೇವೆಯನ್ನು ಗೌರವಿಸುವ ಸಲುವಾಗಿ ಸೇವಾ ಸಂಕಲ್ಪ ಅಭಿಯಾನದಡಿ ಕಾರವಾರದಲ್ಲಿ ಹಮ್ಮಿಕೊಳ್ಳಲಾದ ಸೇವಾ ಜ್ಯೋತಿ...
07/10/2026

ಪ್ರಧಾನಿ ಮೋದಿ ಅವರ 25 ವರ್ಷಗಳ ನಿರಂತರ ಸೇವೆಯನ್ನು ಗೌರವಿಸುವ ಸಲುವಾಗಿ ಸೇವಾ ಸಂಕಲ್ಪ ಅಭಿಯಾನದಡಿ ಕಾರವಾರದಲ್ಲಿ ಹಮ್ಮಿಕೊಳ್ಳಲಾದ ಸೇವಾ ಜ್ಯೋತಿ ಯಾತ್ರೆಯಲ್ಲಿ ಪಾಲ್ಗೊಳ್ಳಲಾಯಿತು.

ವಿಶ್ವನಾಯಕ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ಥಕ ಸೇವೆಯನ್ನು ಗೌರವಿಸುವ ಸಲುವಾಗಿ ಸೇವಾ ಸಂಕಲ್ಪ ಅಭಿಯಾನದಡಿ ಇಂದು ಉತ್ತರ ಕನ್ನಡ ಜಿಲ್ಲೆ ಬಿಜೆಪಿ ವತಿಯಿಂದ ಕಾರವಾರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾದ 'ಸೇವಾ ಜ್ಯೋತಿ ಯಾತ್ರೆ' ಹಾಗೂ 'ವಿಕಸಿತ ಭಾರತ ಸಂಕಲ್ಪ ಸಭೆ'ಯಲ್ಲಿ ಪಾಲ್ಗೊಳ್ಳಲಾಯಿತು. ಇದೇ ವೇಳೆ ಪ್ರಧಾನಿ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿದ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸಲಾಯಿತು. ಬಳಿಕ ಸಾಮೂಹಿಕವಾಗಿ ವಿಕಸಿತ ಭಾರತ ಪ್ರತಿಜ್ಞೆ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್‌ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

06/10/2026

ಸುಳ್ಳಿನ ಸರಮಾಲೆ ಹೆಣೆದು ಚುನಾವಣೆ ಗೆದ್ದ ಶಾಸಕ ಮಂಕಾಳ್ ವೈದ್ಯರು ಇಂದು ಕ್ಷೇತ್ರದ ಜನರ ಸಂಕಷ್ಟಗಳಿಗೆ ಕಾರಣರಾಗಿದ್ದಾರೆ, ಆಟೋ ಚಾಲಕರಿಂದ ಹಿಡಿದು, ಅತಿಕ್ರಮಣದಾರರ, ಮೊಗೆರ ಸಮಾಜದ, ಗೊಂಡ ಸಮಾಜದ, ಟೊಂಕ ಮೀನುಗಾರರನ್ನೂ ಬಿಡದೆ ಅವರ ಹಕ್ಕುಗಳನ್ನು ಕಸಿದಿದ್ದಾರೆ. ಮಂಕಾಳ್ ವೈದ್ಯರ ಇಡಿ ಕುಟುಂಬ ತಮ್ಮ ಐಷಾರಾಮಿ ಜೀವನಕ್ಕೆ ಕ್ಷೇತ್ರದ ಜನರನ್ನು ಬಳಸಿಕೊಂಡಿದ್ದಾರೆ.

01/10/2026

ನಮ್ಮ ಮನೆ ನಮ್ಮ ಹಕ್ಕು

ಅತಿಕ್ರಮಣದಾರರನ್ನು ಪಂಚಾಯತ್ ತೆರಿಗೆ ಇಂದ ಕೈ ಬಿಡುವ ಮೂಲಕ ಮುಂದಿನ ದಿನಗಳಲ್ಲಿ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಕಾಂಗ್ರೆಸ್ ಸರ್ಕಾರದ ಹುನ್ನಾರದ ವಿರುದ್ಧ ಕೊಡಾಣಿ, ಬಳ್ಕೂರು, ಮಾಗೋಡು ಪಂಚಾಯತ್ ನಲ್ಲಿ ನೂರಾರು ಅತಿಕ್ರಮಣದಾರೊಂದಿಗೆ ಪ್ರತಿಭಟನೆ ನಡೆಸಲಾಯಿತು.

ಸರ್ಕಾರದಲ್ಲಿ ಉಪಸಭಾಪತಿಯಾಗಿರುವ ಕ್ಷೇತ್ರದ ಶಾಸಕ ಮಂಕಾಳ್ ವೈದ್ಯರು ಈ ಕುರಿತು ಒಂದು ದಿನವೂ ಪ್ರತಿಕ್ರಿಯೆ ನೀಡದಿರುವುದು ಕ್ಷೇತ್ರದ ಜನತೆಯ ದುರಾದೃಷ್ಟ. ಇಂತಹ ಸಂದರ್ಭದಲ್ಲಿ ಜನರ ಜೊತೆಗೆ ನಿಲ್ಲಬೇಕಾಗಿರುವ ಜನಪ್ರತಿನಿಧಿ ರಿಯಲೆಸ್ಟೇಟ್ ದಂಧೆಯಲ್ಲಿ ಮುಳುಗಿರುವುದು ಕ್ಷೇತ್ರದ ಜನ ಗಮನಿಸುತ್ತಿದ್ದಾರೆ.

ಕಾರ್ಯಕ್ರದಲ್ಲಿ ಹೊನ್ನಾವರ ಬಿಜೆಪಿ ಮಂಡಲದ ಅಧ್ಯಕ್ಷರಾದ ಮಂಜುನಾಥ್ ನಾಯ್ಕ್, ಮಾಜಿ ಸಚಿವರಾದ ಶ್ರೀ ಶಿವಾನಂದ ನಾಯ್ಕ, ಪಕ್ಷದ ಮುಖಂಡರು ಪದಾಧಿಕಾರಿಗಳು ಉಪಸ್ಥಿತರಿದ್ದರು

BJP Karnataka Vijayendra Yediyurappa Narendra Modi BS Yediyurappa R Ashoka

29/09/2026

"ನಮ್ಮ ಮನೆ – ನಮ್ಮ ಹಕ್ಕು"

​ಗ್ರಾಮೀಣ ಪ್ರದೇಶದ ಬಡ ಹಾಗೂ ಸಾಮಾನ್ಯ ಜನರ ಮನೆ, ನಿವೇಶನ ಮತ್ತು ಕಟ್ಟಡಗಳ ಹಕ್ಕನ್ನು ಕಸಿಯುತ್ತಿರುವ ಕರ್ನಾಟಕ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ, ಇಂದು ಭಾರತೀಯ ಜನತಾ ಪಾರ್ಟಿ ಹೊನ್ನಾವರ ಮಂಕಿ ಮಂಡಲದ ವತಿಯಿಂದ ಉಪ್ಪೋಣಿ, ನಗರಬಸ್ತಿಕೇರಿ ಪಂಚಾಯತ್ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಜನಾಂದೋಲನ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಲಾಯಿತು.

ಮಂಡಲದ ಪ್ರಮುಖ ಮುಖಂಡರು, ಮಂಡಲಾದ್ಯಕ್ಷರಾದ ಮಂಜುನಾಥ್ ನಾಯ್ಕ್ ಅವರು ಮಾಜಿ ಸಚಿವರಾದ ಶಿವಾನಂದ್ ನಾಯ್ಕ್ ಅವರು ಪಕ್ಷದ ಕಾರ್ಯಕರ್ತರು, ಗ್ರಾಮ ಪಂಚಾಯಿತಿಯ ಮಾಜಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸರ್ಕಾರದ ಜನವಿರೋಧಿ ಧೋರಣೆಗಳ ವಿರುದ್ಧ ಒಕ್ಕೊರಲಿನಿಂದ ಧ್ವನಿ ಎತ್ತಿದರು.

ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ವಿ.ಎಸ್. ಸಂಕನೂರ ಹಾಗೂ ಲಿಂಗರಾಜ ಪಾಟೀಲ ಅವರೊಂದಿಗೆ ಪಕ್ಷದ ಪ್ರಮುಖರ ಉಪ...
29/09/2026

ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ವಿ.ಎಸ್. ಸಂಕನೂರ ಹಾಗೂ ಲಿಂಗರಾಜ ಪಾಟೀಲ ಅವರೊಂದಿಗೆ ಪಕ್ಷದ ಪ್ರಮುಖರ ಉಪಸ್ಥಿತಿಯಲ್ಲಿ ಭಟ್ಕಳ ಬಿಜೆಪಿ ಮಂಡಲದಲ್ಲಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಗತ್ಯ ಸಿದ್ಧತೆಗಳು, ಮತದಾರರ ಸಂಪರ್ಕ ಹಾಗೂ ಚುನಾವಣಾ ಕಾರ್ಯಚಟುವಟಿಕೆಗಳ ಕುರಿತು ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಲಾಯಿತು.

ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸುವ ನಿಟ್ಟಿನಲ್ಲಿ ಸಂಘಟನಾತ್ಮಕವಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಕುರಿತು ಚರ್ಚಿಸಲಾಯಿತು.

fansBS YediyurappaR AshokaVijayendra YediyurappaBJP Karnataka

28/09/2026

"ನಮ್ಮ ಮನೆ – ನಮ್ಮ ಹಕ್ಕು"

​ಗ್ರಾಮೀಣ ಪ್ರದೇಶದ ಬಡ ಹಾಗೂ ಸಾಮಾನ್ಯ ಜನರ ಮನೆ, ನಿವೇಶನ ಮತ್ತು ಕಟ್ಟಡಗಳ ಹಕ್ಕನ್ನು ಕಸಿಯುತ್ತಿರುವ ಕರ್ನಾಟಕ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ, ಇಂದು ಭಾರತೀಯ ಜನತಾ ಪಾರ್ಟಿ ಹೊನ್ನಾವರ ಮಂಕಿ ಮಂಡಲದ ವತಿಯಿಂದ ಚಿಕ್ಕನಕೊಡು, ಜಲವಳ್ಳಿ, ಹೆರಂಗಡಿ ಪಂಚಾಯಿತ್ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಜನಾಂದೋಲನ ಹಾಗೂ ಪ್ರತಿಭಟನೆಯಲ್ಲಿ

ಮಂಡಲದ ಪ್ರಮುಖ ಮುಖಂಡರು, ಮಂಡಲಾದ್ಯಕ್ಷರಾದ ಮಂಜುನಾಥ್ ನಾಯ್ಕ್ ಅವರು ಮಾಜಿ ಸಚಿವರಾದ ಶಿವಾನಂದ್ ನಾಯ್ಕ್ ಅವರು ಪಕ್ಷದ ಕಾರ್ಯಕರ್ತರು, ಗ್ರಾಮ ಪಂಚಾಯಿತಿಯ ಮಾಜಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸರ್ಕಾರದ ಜನವಿರೋಧಿ ಧೋರಣೆಗಳ ವಿರುದ್ಧ ಒಕ್ಕೊರಲಿನಿಂದ ಧ್ವನಿ ಎತ್ತಿದರು.

​ಸಾಮಾನ್ಯ ಜನರ ಹಕ್ಕು ಮತ್ತು ಅವರ ಮನೆಗಳ ರಕ್ಷಣೆಗಾಗಿ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ.

​ನಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತೋಣ – ಮನೆಗಳ ರಕ್ಷಣೆಗೆ ಒಗ್ಗೂಡೋಣ.

​

BJP Karnataka@top fansVijayendra YediyurappaR AshokaC T RaviNarendra ModiKota Shrinivas PoojariBS YediyurappaB Y RaghavendraSunil Kumar Karkala

ಇಂದು ಯಲ್ಲಾಪುರದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಭಾರತೀಯ ಜನತಾ ಪಕ್ಷದ 'ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿ'ಯ ಸಭೆಯಲ್ಲಿ  ...
27/09/2026

ಇಂದು ಯಲ್ಲಾಪುರದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಭಾರತೀಯ ಜನತಾ ಪಕ್ಷದ 'ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿ'ಯ ಸಭೆಯಲ್ಲಿ ಭಾಗವಹಿಸಿ, ಮುಂಬರುವ ಚುನಾವಣೆಗೆ ಪಕ್ಷ ಸಂಘಟನೆ ಹಾಗೂ ಗೆಲುವಿನ ಕಾರ್ಯತಂತ್ರಗಳ ಕುರಿತು ಪ್ರಮುಖರೊಂದಿಗೆ ಸಭೆ ನಡಸಲಾಯಿತು.

​ಈ ಸಭೆಯಲ್ಲಿ ನಮ್ಮ ಹೆಮ್ಮೆಯ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ವಿಧಾನ ಪರಿಷತ್ ಶಾಸಕರಾದ ಶ್ರೀ ವಿ. ಸಂಕನೂರು, ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಎನ್. ಎಸ್. ಹೆಗಡೆ, ಶಾಸಕರಾದ ಶ್ರೀ ದಿನಕರ ಶೆಟ್ಟಿ ಅವರು ಹಾಗೂ ಮಾಜಿ ಶಾಸಕರುಗಳು, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

​ಕಾರ್ಯಕರ್ತರ ಶ್ರಮ ಹಾಗೂ ನಾಯಕರ ಮಾರ್ಗದರ್ಶನದೊಂದಿಗೆ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಭಾರಿ ಬಹುಮತದ ಗೆಲುವಿಗೆ ಶ್ರಮಿಸಲು ಈ ಸಂದರ್ಭದಲ್ಲಿ ಸಂಕಲ್ಪ ಮಾಡಲಾಯಿತು.

Karnatakalapura

BJP Karnataka

Address

Shirali
Bhatkal
581354

Alerts

Be the first to know and let us send you an email when Sunil Naik posts news and promotions. Your email address will not be used for any other purpose, and you can unsubscribe at any time.

Contact The Organization

Send a message to Sunil Naik:

Shortcuts

Share