Namma Challakere

Call Directions Website Contact the organization

Namma Challakere Connecting Challakere Connecting Challakere People

07/09/2026
07/09/2026

ಒಂದು ಮೀನು, ಒಂದು ಹಕ್ಕಿಯ ಜೊತೆ ಪ್ರೇಮದಲ್ಲಿ ಬಿತ್ತು...ಇನ್ನಿಲ್ಲದಂತೆ...ಆಳವಾಗಿ...

ಅವರ ಪ್ರೀತಿಯ ಸ್ವರೂಪ ಮಾತ್ರ ಭಿನ್ನವಾಗಿತ್ತು.

ಹಕ್ಕಿ ಮರದಲ್ಲಿ ಕುಳಿತೇ ಪ್ರೇಮಿಸಿತು...
ನೀರಲ್ಲಿನ ಮೀನು ಕಂಡರೆ ಸಾಕು, ಪ್ರೇಮದಿಂದ ಪುಳಕಗೊಳ್ಳುತ್ತಿತ್ತು...
ಆದರೆ ಮೀನಿಗೆ ಒಟ್ಟಿಗಿರಬೇಕಿತ್ತು, ಹಕ್ಕಿಯ ಜೊತೆ ಬದುಕಬೇಕಿತ್ತು..

ಕೆಲವು ಹೃದಯಗಳು ಬೆರೆಯುತ್ತವೆ, ಆದರೆ ಒಟ್ಟಿಗಿರುವ ಯೋಗವಿರುವುದಿಲ್ಲ ಎಂಬುದು ಗೊತ್ತಿರದ ಮೀನು,
ಜಗತ್ತಿನ ನಿಯಮಗಳನ್ನೆಲ್ಲ ಧಿಕ್ಕರಿಸಿ, ಹಾರಲು ಕಲಿಯಿತು..
ಗಾಯವಾದವು, ನೋವಾಯ್ತು, ಕಿವಿರು ಹರಿಯಿತು..
ಆದರೆ ಮತ್ತೆ ಹಾರಿತು...

ಕೊನೆಗೊಂದು ದಿನ, ಹಕ್ಕಿ ಕೂರುವ ರೆಂಬೆ ನಿಲುಕೇಬಿಟ್ಟಿತು.
ಕೆಲ ಕ್ಷಣಗಳು ಅಮೃತವಾದವು. ಎಲ್ಲವೂ ಸಿಕ್ಕಿತು...ಸಾಮೀಪ್ಯ, ತೆಕ್ಕೆ, ಅಪ್ಪುಗೆ, ಆನಂದಭಾಷ್ಪ...

ಅಷ್ಟೇ!

ಮೀನಿಗೆ ಉಸಿರಾಡಲಾಗಲಿಲ್ಲ...ಪ್ರಾಣ ಸಂಕಟ! ಮತ್ತೆ ಮತ್ತೆ ನೀರಿಗೆ ಬಿದ್ದು, ತನ್ನ ಸ್ವಂತ ಉಸಿರನ್ನೇ ಸಾಲ ಪಡೆದು, ಮತ್ತೆ ಮತ್ತೆ ರೆಂಬೆಗೆ ಹಾರಿತು...

ಪ್ರೇಮದ ಉನ್ಮಾದದಲ್ಲಿ ತನ್ನನ್ನೇ ಕಳೆದುಕೊಳ್ಳುತ್ತಿರುವ ಮೀನನ್ನು, ಹಕ್ಕಿ ನೋಡುತ್ತಿತ್ತು... ಮೈ ತುಂಬ ಗಾಯ, ಹರಿದ ಕಿವಿರು, ಹೋರಾಟದ ಉಸಿರು...ಘಟಿಸಲಿರುವ ಏನನ್ನೋ ನೆನೆದು ಭಯಭೀತವಾಯ್ತು... ಮೀನು ನೀರಿನಡಿಯಲ್ಲಿದ್ದ ಸಮಯ ನೋಡಿ, ಒಂದು ದಿನ, ರೆಂಬೆ ಬಿಟ್ಟು ಹಾರಿತು..

ವಿದಾಯವಿಲ್ಲ..ವಿವರಣೆಯಿಲ್ಲ..ಕೊನೆಯ ಅಪ್ಪುಗೆಯಂತೂ ಇಲ್ಲವೇ ಇಲ್ಲ...

ಮೀನು ಕಾದೇ ಕಾದಿತು....
ಹಕ್ಕಿ ಹಿಂದಿರುಗಲಿಲ್ಲ...

ಮೀನು, ರೆಂಬೆಗೆ ಹಾರುವುದ ಬಿಟ್ಟಿತು. ಆದರೆ, ಕಾಯುವುದ ನಿಲ್ಲಿಸಲಿಲ್ಲ...ಗಾಯ ಮಾಯಿತು..ಕಿವಿರು ಚಿಗುರಿತು..
(ಆದರೇನು? ದೇಹವನ್ನು ಸ್ಪರ್ಶಿಸದ ಕೆಲ ಗಾಯವಿತ್ತಲ್ಲ?! ಅದು ಉಳಿಯಿತು)

ಮತ್ತೆ ಹಕ್ಕಿ?

ಹಕ್ಕಿ, ಮೀನು ನೀರೊಳಗಿರುವ ಸಮಯ ನೋಡಿ, ದಿನವೂ ರೆಂಬೆಗೆ ಬಂದು ಕೂರುತ್ತದೆ..ಮೀನು ಉಸಿರಾಡುವುದನ್ನೂ, ಬದುಕಿರುವುದನ್ನೂ ನೋಡುತ್ತದೆ...

ಇಲ್ಲಿ, ಯಾರು ಹೆಚ್ಚು ಪ್ರೇಮಿಸಿದರು?

ಪ್ರೇಮಕ್ಕಾಗಿ ತನ್ನನ್ನೇ ಕಳೆದುಕೊಳ್ಳಲಿದ್ದ ಮೀನು?
ಪ್ರೇಮಿಯನ್ನೇ ಕಳೆದುಕೊಂಡು ಪ್ರೇಮಿಸಿದ ಹಕ್ಕಿ?

LOVE is a great TEACHER

ಮೂಲ ಇಂಗ್ಲಿಷ್

07/09/2026

ಭದ್ರೆ ನೀರು

18/04/2026

#ಚಳ್ಳಕೆರೆ #ಬಿಚ್ಚುಗತ್ತಿಪ್ರಿಮಿಯರ್ಲಿಗ್

 #ಮೇಘಸಿರಿ  #ಆಸ್ಪತ್ರೆ  #ಚಳ್ಳಕೆರೆ  #ಚಿತ್ರದುರ್ಗ #ಬಾಪೂಜಿಕಾಲೇಜ್ ರಸ್ತೆ  #ಸುಧಾಕರ್  #ಕ್ರೀಡಾಂಗಣ ಸಮೀಪ
27/01/2026

#ಮೇಘಸಿರಿ #ಆಸ್ಪತ್ರೆ #ಚಳ್ಳಕೆರೆ #ಚಿತ್ರದುರ್ಗ
#ಬಾಪೂಜಿಕಾಲೇಜ್ ರಸ್ತೆ #ಸುಧಾಕರ್ #ಕ್ರೀಡಾಂಗಣ ಸಮೀಪ

Address

Nehru Cicle
Challakere
577522

Alerts

Be the first to know and let us send you an email when Namma Challakere posts news and promotions. Your email address will not be used for any other purpose, and you can unsubscribe at any time.

Contact The Organization

Send a message to Namma Challakere:

Shortcuts

Share

Category