CEO Chamarajanagar

Call Directions Website Contact the organization

CEO Chamarajanagar Official Handle of Chief executive officer Zilla panchayat Chamarajanagar

19/10/2026

ಚಾಮರಾಜನಗರ ದಸರಾ ಮಹೋತ್ಸವ – 2026 Day3

18/10/2026

"ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಆವರಣದ ವೇದಿಕೆ ಕಾರ್ಯಕ್ರಮ - ದಿನ 2"

18/10/2026

ಚಾಮರಾಜನಗರ ದಸರಾ ಮಹೋತ್ಸವ - 2026 "ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಆವರಣದ ವೇದಿಕೆ ಕಾರ್ಯಕ್ರಮ - ದಿನ 2"

17/10/2026

ಚಾಮರಾಜನಗರ ದಸರಾ ಮಹೋತ್ಸವ – 2026 Day 1

ಇಂದು ಹನೂರು ಮತ್ತು ಗುಂಡ್ಲುಪೇಟೆ ತಾಲೂಕುಗಳ ವಿವಿಧ ಗ್ರಾಮಗಳಿಗೆ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡದೊಂದಿಗೆ ಭೇಟಿ ನೀಡಿ, ಜಿಲ್ಲೆಯಲ್ಲಿನ ಬರದ ತ...
06/10/2026

ಇಂದು ಹನೂರು ಮತ್ತು ಗುಂಡ್ಲುಪೇಟೆ ತಾಲೂಕುಗಳ ವಿವಿಧ ಗ್ರಾಮಗಳಿಗೆ ಕೇಂದ್ರ ಸರ್ಕಾರದ ಬರ ಅಧ್ಯಯನ ತಂಡದೊಂದಿಗೆ ಭೇಟಿ ನೀಡಿ, ಜಿಲ್ಲೆಯಲ್ಲಿನ ಬರದ ತೀವ್ರತೆ ಹಾಗೂ ಬೆಳೆ ಹಾನಿಯನ್ನು ಖುದ್ದಾಗಿ ಪರಿಶೀಲಿಸಿದೆವು. ಮಳೆಯ ಅಭಾವದಿಂದ ನಮ್ಮ ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ಹತ್ತಿರದಿಂದ ಆಲಿಸುವ ಹಾಗೂ ವಾಸ್ತವ ಸ್ಥಿತಿಯನ್ನು ಕೇಂದ್ರದ ಗಮನಕ್ಕೆ ತರುವ ನಿಟ್ಟಿನಲ್ಲಿ ಈ ಭೇಟಿ ಅತ್ಯಂತ ಪ್ರಮುಖವಾಗಿದೆ.
​ಇಂದಿನ ಭೇಟಿಯ ಪ್ರಮುಖ ಅಂಶಗಳು:
* ​ಬೆಳೆ ಹಾನಿ ವೀಕ್ಷಣೆ: ಗುಂಡ್ಲುಪೇಟೆ ತಾಲೂಕಿನ ಪರ್ವತನಪುರದಲ್ಲಿ ಒಣಗಿದ ಬಾಳೆ ಬೆಳೆ, ಹನೂರು ತಾಲೂಕಿನ ಹುಲ್ಲೇಪುರದಲ್ಲಿ ಒಣಗಿದ ಮೆಕ್ಕೆಜೋಳ ಹಾಗೂ ಅಜ್ಜಿಪುರದಲ್ಲಿ ಹಾನಿಗೀಡಾದ ಅರಿಶಿನ ಜಮೀನುಗಳನ್ನು ವೀಕ್ಷಿಸಲಾಯಿತು.
* ​ರೈತರೊಂದಿಗೆ ಸಂವಾದ: ರೈತರಾದ ದೇವಿರಮ್ಮ ಮಲ್ಲಿಯಯ್ಯ, ರಾಜಮ್ಮಣ್ಣಿ ಹಾಗೂ ಮಲ್ಲೇಗೌಡ ಅವರು ಮಳೆಯಿಲ್ಲದೆ ತಾವು ಅನುಭವಿಸುತ್ತಿರುವ ಆರ್ಥಿಕ ನಷ್ಟದ ಕುರಿತು ಕೇಂದ್ರ ತಂಡದ ಮುಂದೆ ಅಳಲು ತೋಡಿಕೊಂಡರು.
*​ಮೇವು ಮತ್ತು ನೀರಿನ ಸಮಸ್ಯೆ: ಹುಬ್ಬೆಹುಣಸೆ ಗ್ರಾಮದ ಡೈರಿಗೆ ಭೇಟಿ ನೀಡಿದಾಗ, ಅಂತರ್ಜಲ ಕುಸಿತದಿಂದ ಉಂಟಾಗಿರುವ ಕುಡಿಯುವ ನೀರಿನ ಕೊರತೆ ಮತ್ತು ಜಾನುವಾರುಗಳಿಗೆ ಮೇವಿನ ಅಭಾವದ ಬಗ್ಗೆ ರೈತರು ವಿವರಿಸಿದರು. ಶಾಸಕರಾದ ಎಂ.ಆರ್. ಮಂಜುನಾಥ್ ಅವರು ಹನೂರು ತಾಲೂಕಿನ ತೀವ್ರ ನೀರಿನ ಸಮಸ್ಯೆಯ ಬಗ್ಗೆ ತಂಡಕ್ಕೆ ಮಾಹಿತಿ ನೀಡಿದರು.
*​ಕಾಮಗಾರಿ ಪರಿಶೀಲನೆ: ಪುದುರಾಮಪುರ ಗ್ರಾಮದಲ್ಲಿ ನಡೆಯುತ್ತಿರುವ ಕಾಲುವೆ ಹೂಳೆತ್ತುವ ಕಾಮಗಾರಿಯನ್ನು ತಂಡವು ಪರಿಶೀಲಿಸಿತು.

​ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀರೂಪ ಅವರು, ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು, ಒಟ್ಟಾರೆ 13,500 ಎಕರೆ ತೋಟಗಾರಿಕೆ ಬೆಳೆ ನಷ್ಟವಾಗಿರುವ ಬಗ್ಗೆ ನಿಖರ ಮಾಹಿತಿಯನ್ನು ಕೇಂದ್ರ ತಂಡಕ್ಕೆ ಒದಗಿಸಿದರು.
​
Eshwar Khandre Chief Minister of Karnataka

​

ಇಂದು ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕುಗಳಲ್ಲಿ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ತಂಡದೊಂದಿಗೆ (IMCT) ಜಿಲ್ಲೆಯ ಬರ ಪರಿಸ್ಥಿತ...
05/10/2026

ಇಂದು ಚಾಮರಾಜನಗರ ಮತ್ತು ಗುಂಡ್ಲುಪೇಟೆ ತಾಲೂಕುಗಳಲ್ಲಿ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ತಂಡದೊಂದಿಗೆ (IMCT) ಜಿಲ್ಲೆಯ ಬರ ಪರಿಸ್ಥಿತಿಯ ವಾಸ್ತವಿಕ ಅಧ್ಯಯನ ನಡೆಸಲಾಯಿತು.

ಕೇಂದ್ರದ ತಂಡಕ್ಕೆ ಕೆರೆಹಳ್ಳಿ, ಮಲೆಯೂರು, ಕುಲಗಾಣ ಹಾಗೂ ನಿಟ್ರೆ ಗ್ರಾಮಗಳಲ್ಲಿ ಭೇಟಿ ನೀಡಿ, ಒಣಗಿದ ಜೋಳ ಮತ್ತು ಸೂರ್ಯಕಾಂತಿ ಬೆಳೆಗಳು, ಮಲೆಯೂರು ಗೋಶಾಲೆಯ ಮೇವು ನಿರ್ವಹಣೆ ಹಾಗೂ ವಿಬಿ ಜಿ ರಾಮ್ ಜಿ (VB-GRAM G) ಯೋಜನೆಯಡಿ ನಡೆಯುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿಗಳನ್ನು ಖುದ್ದು ತೋರಿಸಿ, ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಲಾಯಿತು. ಸಂಕಷ್ಟದಲ್ಲಿರುವ ನಮ್ಮ ರೈತರೊಂದಿಗೆ ಮುಕ್ತವಾಗಿ ಮಾತನಾಡಿ, ಅವರ ಕುಂದುಕೊರತೆಗಳನ್ನು ಆಲಿಸಲಾಯಿತು.

​ಬಳಿಕ ಗುಂಡ್ಲುಪೇಟೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, ಗ್ರಾಮೀಣ ಭಾಗದ ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆ ಹಾಗೂ ವಿಬಿ ಜಿ ರಾಮ್ ಜಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳ ಕುರಿತು ಕೇಂದ್ರ ತಂಡಕ್ಕೆ ಸಮಗ್ರ ಮಾಹಿತಿ ನೀಡಲಾಯಿತು.

Eshwar Khandre DK Shivakumar

​

ಇಂದು ಹನೂರು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ 'ಪ್ರಜಾಸೇವೆ ಆಂದೋಲನ'...
03/10/2026

ಇಂದು ಹನೂರು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ 'ಪ್ರಜಾಸೇವೆ ಆಂದೋಲನ' ಸಭೆಯಲ್ಲಿ ಪಾಲ್ಗೊಳ್ಳಲಾಯಿತು.
​ಸಭೆಯನ್ನು ಉದ್ಘಾಟಿಸಿದ ಸನ್ಮಾನ್ಯ ಜಿಲ್ಲಾ ಉಸ್ತುವಾರಿ ಹಾಗೂ ಪಶುಸಂಗೋಪನೆ, ರೇಷ್ಮೆ ಸಚಿವರಾದ ಶ್ರೀ ಸಿ. ಪುಟ್ಟರಂಗಶೆಟ್ಟಿ ಅವರು ಮೂರು ಗಂಟೆಗಳಿಗೂ ಹೆಚ್ಚು ಕಾಲ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು. ಶಾಸಕರಾದ ಶ್ರೀ ಎಂ.ಆರ್. ಮಂಜುನಾಥ್ ಹಾಗೂ ಜಿಲ್ಲಾಧಿಕಾರಿಗಳಾದ ಶ್ರೀರೂಪ ಅವರು ಉಪಸ್ಥಿತರಿದ್ದರು.
​ಸಭೆಯಲ್ಲಿ ಸಚಿವರು ನೀಡಿದ ಪ್ರಮುಖ ನಿರ್ದೇಶನಗಳಂತೆ, ಜಿಲ್ಲಾ ಪಂಚಾಯತ್ ವತಿಯಿಂದ ಕೈಗೊಳ್ಳಲಿರುವ ಕ್ರಮಗಳು:
💧 ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಸಮಸ್ಯೆ ಇದ್ದಲ್ಲಿ ತಕ್ಷಣ ಸ್ಪಂದಿಸಲು ಎಲ್ಲಾ ಪಿಡಿಒ (PDO) ಹಾಗೂ ತಾಪಂ ಇಒ (EO) ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
💧 ಕುಡಿಯುವ ನೀರು ಪೂರೈಕೆಗೆ ಅನುದಾನದ ಕೊರತೆಯಿಲ್ಲ; ಕೊಳವೆಬಾವಿಗಳ ರೀ-ಡ್ರಿಲ್ಲಿಂಗ್ ಹಾಗೂ ನೀರು ಪೋಲಾಗುವುದನ್ನು ತಡೆಯಲು ತ್ವರಿತ ಕ್ರಮ ಕೈಗೊಳ್ಳಲಾಗುವುದು.
🧹 ಗ್ರಾಮಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
📑 ಸಾರ್ವಜನಿಕರ ಪಿಂಚಣಿ, ಇ-ಸ್ವತ್ತು, ಖಾತೆ ಬದಲಾವಣೆ ಮುಂತಾದ ಅಹವಾಲುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.
​ಇದೇ ವೇಳೆ ಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಹಾಗೂ ರೈತರಿಗೆ ಪಶುಪಾಲನಾ ಇಲಾಖೆಯಿಂದ ಮೇವಿನ ಕಿಟ್‌ಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಜಿಲ್ಲಾ ಪಂಚಾಯತ್ ಸದಾ ಬದ್ಧವಾಗಿದೆ.

Chief Minister of Karnataka DK Shivakumar Eshwar Khandre
​

01.10.2026 ರಂದು  ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಶ್ರೀ ಎಚ್.ವಿ. ಚಂದ್ರು ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನ...
03/10/2026

01.10.2026 ರಂದು ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷರಾದ ಶ್ರೀ ಎಚ್.ವಿ. ಚಂದ್ರು ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲಾಯಿತು.

​ಸಭೆಯ ಪ್ರಮುಖ ವಿಷಯಗಳು:
​ಅನ್ನಭಾಗ್ಯ ಹಾಗೂ ಪಡಿತರ: ಬಿ.ಪಿ.ಎಲ್ (BPL) ಕಾರ್ಡ್‌‌ಗಳ ಪರಿಷ್ಕರಣೆ ವೇಳೆ ನೈಜ ಬಡವರಿಗೆ ಯಾವುದೇ ತೊಂದರೆಯಾಗದಂತೆ ಬ್ಯಾಂಕ್ ಸ್ಟೇಟ್‌ಮೆಂಟ್ ಪರಿಶೀಲಿಸಿ ಕ್ರಮ ವಹಿಸುವುದು. ಕಾಳಸಂತೆಯಲ್ಲಿ ಅಕ್ಕಿ ಮಾರಾಟವಾಗದಂತೆ ಕಟ್ಟುನಿಟ್ಟಿನ ನಿಗಾ ಇಡುವುದು.

​ಶಕ್ತಿ ಯೋಜನೆ: ಆದರ್ಶ ವಿದ್ಯಾಲಯ ಹಾಗೂ ವಸತಿ ಶಾಲಾ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಕೆ.ಎಸ್.ಆರ್.ಟಿ.ಸಿ (KSRTC) ಬಸ್ ಸೌಕರ್ಯ ಒದಗಿಸುವುದು.
​ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ: ಈ ಯೋಜನೆಗಳ ಫಲಾನುಭವಿಗಳ ಪರಿಷ್ಕರಣೆ ಕಾರ್ಯವನ್ನು ಶೀಘ್ರವಾಗಿ ಹಾಗೂ ನಿಖರವಾಗಿ ಪೂರ್ಣಗೊಳಿಸುವುದು.

​ಯುವನಿಧಿ ಹಾಗೂ ಪರಿಸರ ಕಾಳಜಿ: ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು

ದಿನಾಂಕ: 01/10/26 ರಂದು 'ಸ್ವಚ್ಛತಾ ಹಿ ಸೇವಾ' ಅಭಿಯಾನದ ಅಂಗವಾಗಿ, ಹೆಬ್ಬಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಡದಹಳ್ಳಿ ಗ್ರಾಮದಲ್ಲಿ "ಒಂದು ದ...
03/10/2026

ದಿನಾಂಕ: 01/10/26 ರಂದು 'ಸ್ವಚ್ಛತಾ ಹಿ ಸೇವಾ' ಅಭಿಯಾನದ ಅಂಗವಾಗಿ, ಹೆಬ್ಬಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಡದಹಳ್ಳಿ ಗ್ರಾಮದಲ್ಲಿ "ಒಂದು ದಿನ, ಒಂದು ಗಂಟೆ, ಎಲ್ಲರೂ ಒಟ್ಟಿಗೆ ಶ್ರಮದಾನ" (Ek Din Ek Ganta Ek Saath) ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಎಲ್ಲರಿಗೂ ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧಿಸಲಾಯಿತು.

​ಐತಿಹಾಸಿಕ ನಂದಿ ಬಸವೇಶ್ವರ ದೇವಸ್ಥಾನದ ಆವರಣ ಹಾಗೂ ಪ್ರಾಚೀನ ಕಲ್ಯಾಣಿಯಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಗಿಡಗಂಟಿಗಳನ್ನು ತೆರವುಗೊಳಿಸಿ, ಶ್ರಮದಾನದ ಮೂಲಕ ಆವರಣವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದೆವು.
​ಈ ಕಾರ್ಯದಲ್ಲಿ ಉತ್ಸಾಹದಿಂದ ಪಾಲ್ಗೊಂಡ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಅಧಿಕಾರಿಗಳು, ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು, ಸಂಜೀವಿನಿ ಒಕ್ಕೂಟದ ಮಹಿಳೆಯರು, ಗ್ರಾ.ಪಂ. ಪ್ರತಿನಿಧಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ದಡದಹಳ್ಳಿ ಗ್ರಾಮಸ್ಥರ ಕಾರ್ಯಕ್ಷಮತೆ ನಿಜಕ್ಕೂ ಶ್ಲಾಘನೀಯ.
​ಒಗ್ಗಟ್ಟಿನಲ್ಲಿ ಬಲವಿದೆ, ಸ್ವಚ್ಛತೆಯಲ್ಲಿ ಆರೋಗ್ಯವಿದೆ! 🌿
​
Rural Development and Panchayat Raj - Karnataka Jal Jeevan Mission, India

​

ಇಂದು ಕೊಳ್ಳೇಗಾಲದ ಎಂಜಿಎಸ್ ವಿ ಪ.ಪೂ. ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಕೊಳ್ಳೇಗಾಲ ಹಾಗೂ ಹನೂರು...
30/09/2026

ಇಂದು ಕೊಳ್ಳೇಗಾಲದ ಎಂಜಿಎಸ್ ವಿ ಪ.ಪೂ. ಕಾಲೇಜು ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಕೊಳ್ಳೇಗಾಲ ಹಾಗೂ ಹನೂರು ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಪಾಲ್ಗೊಂಡು, ಜಿಲ್ಲೆಯ ಜನರಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಶಕ್ತಿ ತುಂಬುವ ಸರ್ಕಾರದ ಸಂಕಲ್ಪವನ್ನು ಸಾರಿದರು.
ಕಾರ್ಯಕ್ರಮದಲ್ಲಿ:
✅ ನೂತನವಾಗಿ ನಿರ್ಮಾಣವಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ಉದ್ಘಾಟನೆ.
✅ ನೀರಾವರಿಗೆ ಬೃಹತ್ ಕೊಡುಗೆ: ಸುವರ್ಣಾವತಿ ಸರಣಿ ಕೆರೆಗಳ ಅಭಿವೃದ್ಧಿಗೆ ₹120 ಕೋಟಿ ಹಾಗೂ ಗುಂಡ್ಲುಪೇಟೆ ತಾಲೂಕಿಗೆ ₹450 ಕೋಟಿ ಸೇರಿದಂತೆ, ಜಿಲ್ಲೆಗೆ ಒಟ್ಟು ₹1,000 ಕೋಟಿ ರೂ.ಗಳ ನೀರಾವರಿ ಯೋಜನೆಗಳು!
✅ ಕೊಳ್ಳೇಗಾಲದ ಪಾರಂಪರಿಕ ರೇಷ್ಮೆ ಉದ್ಯಮವನ್ನು ಬೆಂಬಲಿಸಲು, ಕೈಮಗ್ಗ ಉದ್ಯಮಕ್ಕೆ 'ಕೈಗಾರಿಕಾ ಸ್ಥಾನಮಾನ' ನೀಡುವ ಐತಿಹಾಸಿಕ ನಿರ್ಧಾರ.
✅ ಜಿಲ್ಲೆಯ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ.
✅ ಚಾಮರಾಜನಗರ ವಿಶ್ವವಿದ್ಯಾಲಯಕ್ಕೆ 'ಡಾ. ಬಿ.ಆರ್. ಅಂಬೇಡ್ಕರ್ ವಿಶ್ವವಿದ್ಯಾಲಯ' ಎಂದು ಮರುನಾಮಕರಣ ಮಾಡುವ ಬಗ್ಗೆ ಸಂಪುಟದಲ್ಲಿ ಚರ್ಚಿಸುವ ಭರವಸೆ.

ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸಿ. ಪುಟ್ಟರಂಗಶೆಟ್ಟಿ, ಸಚಿವರಾದ ಶ್ರೀ ಕೆ.ಹೆಚ್. ಮುನಿಯಪ್ಪ, ಜಿಲ್ಲೆಯ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳಾದ ಶ್ರೀರೂಪ ಹಾಗೂ ಇತರ ಗಣ್ಯರು ಹಾಜರಿದ್ದರು.

DK Shivakumar Chief Minister of Karnataka

Address

Chamarajanagar
571313

Alerts

Be the first to know and let us send you an email when CEO Chamarajanagar posts news and promotions. Your email address will not be used for any other purpose, and you can unsubscribe at any time.

Contact The Organization

Send a message to CEO Chamarajanagar:

Shortcuts

Share