‘ಹೀನ ಸುಳಿ ಬೋಳಿಸಿದರೂ ಹೋಗಲ್ಲ’ ಅಂತ ಗಾದೆ. ಕಾಂಗ್ರೆಸ್ಸಿಗರು ಅವಕಾಶ ಸಿಕ್ಕಾಗಲೆಲ್ಲಾ ಹಿಂದೂಗಳ ಆಚಾರ ವಿಚಾರಗಳನ್ನು ಅವಮಾನಿಸುತ್ತಲೇ ಬರುತ್ತಿದ್ದಾರೆ.
ಕಳೆದ ಬಾರಿಯ ಪರೀಕ್ಷೆಯಲ್ಲೂ ಕೂಡ ಕಲಬುರಗಿ, ಬೀದರ್‌ನಲ್ಲಿ ಸಿಇಟಿ ಪರೀಕ್ಷೆಗೆ ಜನಿವಾರ ಧರಿಸಿ ಬಂದಿದ್ದ ಎಂಬ ಏಕೈಕ ಕಾರಣಕ್ಕೆ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆಗೆ ಹಾಜರಾಗಲು ಕೂಡ ಅನುಮತಿ ನೀಡಿರಲಿಲ್ಲ. ಕೆ.ಪಿ.ಎಸ್.ಸಿ ಪರೀಕ್ಷೆ ನಡೆಯುವ ಸಂದರ್ಭದಲ್ಲಿ, ಮಹಿಳೆಯೊಬ್ಬರ ಮಾಂಗಲ್ಯಸರವನ್ನು ತೆಗೆಸಿದ್ದರು. ಈ ಬಾರಿ ಕೂಡ ಬೆಂಗಳೂರಿನಲ್ಲಿ ಸಿಇಟಿ ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವುದು ಅಕ್ಷಮ್ಯ.
ನ್ಯಾಯಾಲಯ ಶಾಲಾ ಕಾಲೇಜಿನಲ್ಲಿ ಸಮಾನ ವಸ್ತ್ರಸಂಹಿತೆಗೆ ಆದೇಶ ನೀಡಿದರೂ ಸಹ ಸಿದ್ದರಾಮಯ್ಯ & ಪಟಾಲಂ ಹಿಜಾಬ್ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಎಂದು ಪುಂಖಾನುಪುಂಖವಾಗಿ ಭಾಷಣ ಬಿಗಿದಿದ್ದರು. ಆದರೆ ಈಗ ಹಿಂದೂಗಳ ವಿಷಯದಲ್ಲಿ ಎಂದಿನಂತೆ ತನ್ನ ಮತಾಂಧ ರೂಪ ಹೊರಬಿಟ್ಟಿದ್ದಾರೆ.
Girish Reddy
Let's make it! Bjp everywhere
ಮಹಾಜ್ಞಾನಿ ಅವರೇ S.S.L.C ಹಾಗೂ PUC ಫಲಿತಾಂಶಗಳಲ್ಲಿ ಕಲಬುರಗಿ ಕೊನೆಯ ಸ್ಥಾನದಲ್ಲಿರಲು ಕಾರಣ ಶಿಕ್ಷಕರ ಕೊರತೆ ಎಂಬುದನ್ನು ನಿಮ್ಮ ತಂದೆಯವರೇ ಹೇಳಿದ್ದಾರೆ ಕೇಳಿ
50 ವರ್ಷಗಳಿಂದ ಕಲ್ಯಾಣ ಕರ್ನಾಟಕದಲ್ಲಿ ಜಹಗೀರು ನಡೆಸುತ್ತಲೇ ಇದ್ದೀರಿ ಕನಿಷ್ಠ ಶಿಕ್ಷಕರ ಹುದ್ದೆ ಭರ್ತಿ ಮಾಡುವಷ್ಟು ತಾಕತ್ತು ನಿಮಗಿಲ್ಲವೇ. ಸೋಶಿಯಲ್ ಮೀಡಿಯಾದಲ್ಲಿಇಲ್ಲದ ಪುರಾಣ ಹೊಡೆಯುತ್ತೀರಿ.
ಬೆಂಗಳೂರು ಜನತೆಯ ಮೇಲೆ ತೆರಿಗೆ ಹೇರುವಲ್ಲಿ ತೋರುವ ಆಸಕ್ತಿ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ತೋರುತ್ತಿಲ್ಲ.
ಗುಂಡಿಬಿದ್ದ ರಸ್ತೆಗಳು, ನೀರು ಕಾಣದ ನಲ್ಲಿಗಳು, ಕಸದ ರಾಶಿ ರಾಜಧಾನಿಯ ಜನರನ್ನು ಭ್ರಮನಿರಸನಗೊಳಿಸಿದೆ. ಸಿದ್ದರಾಮಯ್ಯ ಸರ್ಕಾರ ಬೆಂಗಳೂರನ್ನು ಎರಡು ದಶಕಗಳಷ್ಟು ಹಿಂದಕ್ಕೆ ಕಳಹಿಸಿದೆ. ಕಾಂಗ್ರೆಸ್ ದುರಾಡಳಿತಕ್ಕೆ ಜನಸಾಮಾನ್ಯರು ಪರಿತಪಿಸುತ್ತಿದ್ದಾರೆ.
ಅನಗತ್ಯ ವಿಷಯಗಳ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವ ಗ್ರಾಮೀಣಾಭಿವೃದ್ಧಿ ಸಚಿವ ಅವರೇ, ರಾಜ್ಯದ ಜನತೆಗೆ ನೀಡಬೇಕಾದ ಕನಿಷ್ಠ ಮೂಲಭೂತ ಸೌಕರ್ಯಗಳನ್ನೇ ಮರೆತು ಕುಳಿತಿದ್ದೀರಾ? ಗ್ರಾಮೀಣ ಜನರು ಇಂದು ನೀರಿಗಾಗಿ ಗುಂಡಿಗಳನ್ನು ಅವಲಂಬಿಸಿರುವ ಈ ದಯನೀಯ ಸ್ಥಿತಿಗೆ ನಿಮ್ಮ ಸರ್ಕಾರದ ದುರಾಡಳಿತವೇ ನೇರ ಹೊಣೆ.
ಜನರ ಮೂಲಭೂತ ಹಕ್ಕಾದ ಕುಡಿಯುವ ನೀರನ್ನು ನೀಡಲಾಗದ ಮೇಲೆ ನಿಮ್ಮ ಉದ್ದುದ್ದದ ಭಾಷಣಗಳು ಯಾರಿಗಾಗಿ? ಜನರ ದಾಹ ತೀರಿಸದ ಸಚಿವಾಲಯವಿದ್ದು ಏನು ಲಾಭ? ಇನ್ನಾದರೂ ಪ್ರಚಾರದ ವ್ಯಾಮೋಹ ಬಿಟ್ಟು, ಗುಂಡಿ ನೀರು ಕುಡಿಯುತ್ತಿರುವ ಬಡವರ ಕಡೆಗೆ ಗಮನಹರಿಸಿ, ಇಲ್ಲದಿದ್ದರೆ ಜನರ ಆಕ್ರೋಶಕ್ಕೆ ನಿಮ್ಮ ಕುರ್ಚಿ ಅಲುಗಾಡುವುದು ಖಚಿತ.
ಇದೇ ರೀತಿಯ ಕುತ್ಸಿತ ಮನಸ್ಥಿತಿಗಳೇ ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸಿದ್ದು!
ಪುರುಷ ನಾಯಕರ ಕೋಣೆಗೆ ಹೋಗದೆ 90% ಮಹಿಳೆಯರು ರಾಜಕೀಯ ಮಾಡಲು ಸಾಧ್ಯವಿಲ್ಲ ಎಂಬ ಕಾಂಗ್ರೆಸ್ ಮೈತ್ರಿಕೂಟದ ಸಂಸದನ ಹೇಳಿಕೆಯ ಹಿಂದೆ "ನಾರಿ ಶಕ್ತಿ ವಂದನಾ ಅಧಿನಿಯಮ" ಮಸೂದೆಯ ಸೋಲಿನ ರಹಸ್ಯ ಅಡಗಿದೆ.
ಮಹಿಳೆಯರು ಮನೆಯಿಂದ ಹೊರಗೆ ಬರಬಾರದು, ಅಡುಗೆ ಮನೆಗೆ ಸೀಮಿತವಾಗಿರಬೇಕು, ಪುರುಷರ ಅಡಿಯಾಳಾಗಿರಬೇಕು ಎನ್ನುವುದು ಕಾಂಗ್ರೆಸ್ ನಾಯಕರ ಹೀನ ಮನಸ್ಥಿತಿಯಾಗಿದೆ.
ನಾಡದ್ರೋಹಿಯ ಜೊತೆ ಕೈ ಜೋಡಿಸಿದ ಡಿಕೆಶಿ.
ಅಂದು ಮೇಕೆದಾಟಿಗೆ ಪಾದಯಾತ್ರೆ, ಇಂದು ಮೇಕೆದಾಟು ಯೋಜನೆಗೆ ವಿರೋಧಿಸಿದವರ ಜೊತೆ ರಾಜಕೀಯದ ಕುಣಿತ !
ಡಿಕೆಶಿ ಅವರೇ, "ನಮ್ಮ ನೀರು - ನಮ್ಮ ಹಕ್ಕು" ಎಂದು ಸ್ಟ್ಯಾಲಿನ್ ಜೊತೆ ಹೇಳಿದ್ದೀರಾ?
#ನಾಡದ್ರೋಹಿಕಾಂಗ್ರೆಸ್
ವಾಲ್ಮೀಕಿ ಸಮುದಾಯದ ಮತ ಪಡೆದು ಅದೇ ಸಮುದಾಯಕ್ಕೆ ದ್ರೋಹ ಬಗೆದ ಸರ್ಕಾರ.
ಮಸ್ಕಿ ಕ್ಷೇತ್ರದ ವಯೋವೃದ್ಧೆ ಒಬ್ಬರು ಸೂರಿಲ್ಲದೆ ನಾಲ್ಕು ಗೋಡೆಗಳ ಮಧ್ಯೆ ನರಕಯಾತನೆ ಅನುಭವಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಶಾಸಕ ಬಸನಗೌಡ ತುರ್ವಿಹಾಳ ಕಣ್ಮುಚ್ಚಿ ಕುಳಿತುಕೊಂಡಿದ್ದು, ಕನಿಷ್ಠ ಮೂಲಸೌಕರ್ಯ ನೀಡುವ ಮಾನವೀಯತೆಯನ್ನೇ ಮರೆತಿದ್ದಾರೆ.
ಮಹಿಳೆಯರಿಗೆ ವಂಚಿಸುವುದು ಪಕ್ಷಕ್ಕೆ ಸಿದ್ದಿಸಿದ ಕಲೆ.! ಮಹಿಳಾ ಮೀಸಲಾತಿಗೆ ಕಲ್ಲು ಹಾಕಿ, ಮಹಿಳೆಯರ ಹಕ್ಕುಗಳನ್ನು ತುಳಿಯುತ್ತಿರುವ ಕಾಂಗ್ರೆಸ್‌ಗೆ ದೇಶದ ಮತದಾರರು ಬುದ್ಧಿ ಕಲಿಸಲಿದ್ದಾರೆ. ಮಹಿಳಾ ವಿರೋಧಿ ಕಾಂಗ್ರೆಸ್‌ಗೆ ಹೆಣ್ಣುಮಕ್ಕಳ ಶಕ್ತಿ ಏನೆಂದು ತೋರಿಸುವ ಕಾಲವೂ ಹತ್ತಿರದಲ್ಲಿದೆ.
ಕಾಂಗ್ರೆಸ್ಸಿನ ಮಹಿಳಾ ವಿರೋಧಿ ನೀತಿಯ ವಿರುದ್ಧ ದೇವರಿಗೂ ದೂರು ಸಲ್ಲಿಕೆಯಾಗಿದೆ !
ಮಹಿಳೆಯರಿಗೆ 33% ಮೀಸಲಾತಿ ನೀಡುವುದನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಅಕ್ಷಮ್ಯ ಅಪರಾಧ ಮಾಡಿದೆ. ತುರ್ತು ಪರಿಸ್ಥಿತಿ ಎಷ್ಟು ದೊಡ್ಡ ಅಪರಾಧವೋ ಅದನ್ನು ಮೀರಿದ ಪ್ರಮಾದವಿದು.
ಮಹಿಳಾ ವಿರೋಧಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಬಾಳೆಹಣ್ಣಿನಲ್ಲಿ ಬರೆದು ಹರಕೆ ಸಲ್ಲಿಸಿರುವುದು ಜನರು ಕಾಂಗ್ರೆಸ್‌ನ ನಡೆಗೆ ಭಾವನಾತ್ಮಕವಾಗಿಯೂ ಘಾಸಿಗೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.
ನಿಮ್ಮ ಮನವ ಸಂತೈಸಿಕೊಳ್ಳಿ
ಹಿಂದಿಯನ್ನು ದೇಶದ ಅಧಿಕೃತ ಭಾಷೆಯನ್ನಾಗಿ ಜಾರಿಗೆ ತಂದಿದ್ದೇ ನಿಮ್ಮ ನೆಹರು ಮತ್ತು ಕಾಂಗ್ರೆಸ್ ಪಕ್ಷ.
ಡಿಕೆಶಿ ಅವರೇ, ಅನ್ಯರಾಜ್ಯಗಳ ಚುನಾವಣಾ ಪ್ರಚಾರಗಳಲ್ಲಿ ಸುಳ್ಳು ಹೇಳುವುದನ್ನು ಇನ್ನಾದರೂ ನಿಲ್ಲಿಸಿ.
21/04/2026
ರಾಜ್ಯದ ಸಾರಿಗೆ ಇಲಾಖೆಯನ್ನು ಕೋಮಾಗೆ ತಳ್ಳಿದ ಕೀರ್ತಿ ಡಕೋಟಾ ಸಾರಿಗೆ ಸಚಿವ ಅವರಿಗೆ ಸಲ್ಲಬೇಕು.!
ಕೇವಲ ಬುರುಡೆ ಬಿಡುವ ರಾಮಲಿಂಗಾರೆಡ್ಡಿ ಅವರ ಸಾಧನೆ ಸಣ್ಣದಲ್ಲ.! ಸಾರಿಗೆ ಇಲಾಖೆಯನ್ನು ಹಾಳುಬಾವಿಗೆ ತಳ್ಳಿ ನೆಮ್ಮದಿಯಾಗಿ ನಿದ್ರಿಸುತ್ತಿರುವ ಸಾಧಕರಾಗಿದ್ದಾರೆ.
Click here to claim your Sponsored Listing.
Location
Category
Website
Address
ಚಿಂತಾಮಣಿ
Chintamani
563125
