30/05/2021
ಶಿಡ್ಲಘಟ್ಟ ನಗರದ ಬೀದಿ ಬದಿ ವ್ಯಾಪಾರಿಗಳಿಗೆ ಕೋವಿಡ್ ವ್ಯಾಕ್ಸಿನ್ ಹಾಕಿಸುವ ಸಲುವಾಗಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳೊಂದಿಗೆ ಹಾಗೂ ಮೌಲ್ವಿ ಗಳೊಂದಿಗೆ ಸಭೆ ನಡೆಸಿ ಹೆಚ್ಚು ಹೆಚ್ಚು ಪ್ರಚಾರ ಮಾಡಲು ಸೂಚಿಸಲಾಯಿತು. ಈ ಸಂದರ್ಭದಲ್ಲಿ ಪೌರಾಯುಕ್ತರು ಮತ್ತು ನಗರಸಭೆಯ ಉಪಾಧ್ಯಕ್ಷರು ಉಪಸ್ಥಿತರಿದ್ದರು.
30/05/2021
ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಚಿಕ್ಕಬಳ್ಳಾಪುರ ರವರು ಶಿಡ್ಲಘಟ್ಟ ನಗರಸಭೆಯ, ಪೌರಾಯುಕ್ತರೊಂದಿಗೆ ನಗರದ ವಾರ್ಡ್ ಲೆವೆಲ್ ಟಾಸ್ಕ್ ಫೋರ್ಸ್ ಕಮಿಟಿಯ ಪ್ರಗತಿ ಪರಿಶೀಲನೆ ನಡೆಸಲಾಯಿತು ಮತ್ತು ಕಮಿಟಿಯ ಸದಸ್ಯರ ಕಾರ್ಯವೈಖರಿಯನ್ನು ಪರಿಶೀಲಿಸಲು ಸ್ಥಳ ಪರಿಶೀಲನೆ ನಡೆಸಲಾಯಿತು.
29/05/2021
ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಚಿಕ್ಕಬಳ್ಳಾಪುರ ರವರು ಚಿಂತಾಮಣಿ ನಗರಸಭೆಯ, ಪೌರಾಯುಕ್ತರು ಮತ್ತು ಪರಿಸರ ಅಭಿಯಂತರ ರೊಂದಿಗೆ ನಗರದ ವಾರ್ಡ್ ಲೆವೆಲ್ ಟಾಸ್ಕ್ ಫೋರ್ಸ್ ಕಮಿಟಿಯ ಪ್ರಗತಿ ಪರಿಶೀಲನೆ ನಡೆಸಲಾಯಿತು ಮತ್ತು ಕಮಿಟಿಯ ಸದಸ್ಯರ ಕಾರ್ಯವೈಖರಿಯನ್ನು ಪರಿಶೀಲಿಸಲು ಹೋಂ ಐಸೋಲೇಶನ್ ಆಗಿರುವವರನ್ನು ವೈಯಕ್ತಿಕವಾಗಿ ಭೇಟಿ ನೀಡಿ ಸದರಿಯವರ ಕುಂದುಕೊರತೆಗಳನ್ನು ವಿಚಾರಿಸಲಾಯಿತು.
29/05/2021
ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಚಿಕ್ಕಬಳ್ಳಾಪುರ ರವರು ಚಿಂತಾಮಣಿ ನಗರಸಭೆಯ, ಪೌರಾಯುಕ್ತರು ಮತ್ತು ಪರಿಸರ ಅಭಿಯಂತರ ರೊಂದಿಗೆ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಕ್ಯಾಂಟೀನ್ ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿ ಉತ್ತಮ ಗುಣಮಟ್ಟದ ಆಹಾರ ನೀಡಲು ಸೂಚಿಸಲಾಯಿತು ಈ ಸಂದರ್ಭದಲ್ಲಿ ಚಿಂತಾಮಣಿಯ ತಹಸೀಲ್ದಾರ್ ರವರು ಹಾಗೂ ನೋಡಲ್ ಅಧಿಕಾರಿ ರವರು ಹಾಜರಿದ್ದರು.