Chitradurga District Police

Call Directions Website Contact the organization

Chitradurga District Police Official page of Chitradurga Police . Please Follow and Share page

we serve public to attend the complaints immediately to rush to the spot immediately to maintain the law & order and to prevent the Crimes.

 #ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್‌ಇಂದು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಕುಶಲ್ ಚೌಕ್ಸೆ, IPS., ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ...
08/10/2026

#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್‌
ಇಂದು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಕುಶಲ್ ಚೌಕ್ಸೆ, IPS., ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಮತ್ತು ಕಾನೂನು ಸೇವೆಗಳ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯ ಎಲ್ಲಾ ಠಾಣೆಯ ತನಿಖಾಧಿಕಾರಿಗಳಿಗೆ ಮತ್ತು ತನಿಖಾಸಹಾಯಕರಿಗೆ ಗುಣಮಟ್ಟದ ತನಿಖೆ ಕೈಗೊಳ್ಳುವ ಕುರಿತು ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು. ಶ್ರೀ ಜಿ.ಡಿ ಮಹಾವರ್ಕರ್, ಗೌರವಾನ್ವಿತ ನ್ಯಾಯಾಧೀಶರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಚಿತ್ರದುರ್ಗ ರವರು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಾಗಾರದಲ್ಲಿ ನ್ಯಾಯಾಧೀಶರು, ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಪಸ್ಥಿತರಿದ್ದರು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಕೆ. ಕೆಂಚಪ್ಪ, ನಿವೃತ್ತ ಪಿಪಿ ದಾವಣಗೆರೆ, ಶ್ರೀ ಟಿ. ಮಂಜಣ್ಣ, ಎಡಿಪಿ ಜಿಲ್ಲಾ ಪೊಲೀಸ್ ಕಛೇರಿ, ಶ್ರೀ ಮನೋಜ್, ಜಿಲ್ಲಾಧಿಕಾರಿಗಳ ಕಛೇರಿ ಚಿತ್ರದುರ್ಗ ರವರುಗಳು , ಉಪನ್ಯಾಸವನ್ನು ನೀಡಿದರು.

Karnataka State Police
112chitradurga

 #ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್‌ದಿನಾಂಕ 07.09.2026 ಮತ್ತು 08.09.2026 ರಂದು ಬೆಂಗಳೂರು ಯಲಹಂಕ APTS ನಲ್ಲಿ ನಡೆದ 8ನೇ ರಾಜ್ಯ ಮಟ್ಟದ ಪ...
08/10/2026

#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್‌
ದಿನಾಂಕ 07.09.2026 ಮತ್ತು 08.09.2026 ರಂದು ಬೆಂಗಳೂರು ಯಲಹಂಕ APTS ನಲ್ಲಿ ನಡೆದ 8ನೇ ರಾಜ್ಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಭಾಗವಹಿಸಿ ಚಿತ್ರದುರ್ಗ ಜಿಲ್ಲೆಯಿಂದ ಶ್ರೀ ಶಿವಕುಮಾರ್ ಪಿಎಸ್ಐ ರವರು HLT ನಲ್ಲಿ 2ನೇ ಸ್ಥಾನ ಹಾಗೂ ಶ್ರೀ ಮಹದೇವ ಎಹೆಚ್‌ಸಿ ಫೋಟೋಗ್ರಪಿ ಯಲ್ಲಿ 2ನೇ ಸ್ಥಾನವನ್ನು ಪಡೆದಿರುತ್ತಾರೆ. ವಿಜೇತರನ್ನು ಇಂದು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಕುಶಲ್ ಚೌಕ್ಸೆ, IPS., ರವರು ಅಭಿನಂದಿಸಿದರು ಹಾಗೂ ಮಹಾರಾಷ್ಟ್ರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಪೊಲೀಸ್ ಕರ್ತವ್ಯ ಕೂಟದಲ್ಲಿ ಭಾಗವಹಿಸಿ ಹೆಚ್ಚಿನ ಪದಕಗಳನ್ನು ಗೆಲ್ಲುವಂತೆ ಶುಭ ಕೋರಿದರು.

112chitradurga
Karnataka State Police

08/10/2026

#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್‌
ನಿಮ್ಮ ಮೊಬೈಲ್‌ ಗಳಿಗೆ ಮದುವೆ ಆಮಂತ್ರಣ, ಬ್ಯಾಂಕ್‌ ಅಪ್ಡೇಟ್‌, ಲಾಟರಿ, ಬಹುಮಾನ, ಕರೆಂಟ್‌ ಬಿಲ್‌, ಆರ್‌ಟಿಓ ಚಲನ್‌, ಶುಭಾಶಯಗಳು, ಸರ್ಕಾರಿ ಯೋಜನೆಗಳು ಮತ್ತುಇನ್ನಿತರೆ ಹೆಸರುಗಳ ಮೂಲಕ ಬರುವ APK File ಗಳನ್ನು Install ಮಾಡಬೇಡಿ ಹಾಗೂ ಅಪರಿಚಿತ ಲಿಂಕ್‌ ಗಳನ್ನು ಕ್ಲೀಕ್‌ ಮಾಡಬೇಡಿ ಇಂತಹ ವಂಚನೆಗಳಿಂದ ಜಾಗೃತೆಯಿಂದ ಇರಿ.


Karnataka State Police
112chitradurga

ದಿನಾಂಕ:07.10.2026 ರಂದು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಕುಶಲ್ ಚೌಕ್ಸೆ, IPS., ರವರು ಭರಮಸಾಗರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಕಾನೂನು & ಸ...
08/10/2026

ದಿನಾಂಕ:07.10.2026 ರಂದು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಕುಶಲ್ ಚೌಕ್ಸೆ, IPS., ರವರು ಭರಮಸಾಗರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಕಾನೂನು & ಸುವ್ಯವಸ್ಥೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚರ್ಚಿಸಿ ನಂತರ ಕಡತಗಳನ್ನು ಪರಿಶೀಲಿಸಿದರು ಹಾಗೂ ಬಾಕಿಯಿರುವ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸೂಚಿಸಿದರು

Karnataka State Police

ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ಇಂದು ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾದಕ ...
07/10/2026

ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ಇಂದು ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾದಕ ವಸ್ತುಗಳಿಗೆ ಸಂಬಂಧಿಸಿದ ಮಾಹಿತಿ ವಿನಿಮಯ, ಕಳ್ಳ ಸಾಗಾಣಿಕೆ, ಮಾದಕ ವಸ್ತುಗಳ ಬೆಳೆಯುವಿಕೆ, ಮಾದಕ ವಸ್ತು ಬಗ್ಗೆ ಜಾಗೃತಿ ಕಾರ್ಯಕ್ರಮಗಳು,ದಾಖಲಾದ ಪ್ರಕರಣಗಳ ಪರಮರ್ಶೆ,ಮಾದಕ ವಸ್ತು ಪತ್ತೆ ಉಪಕಾರಣಗಳ ಲಭ್ಯತೆ ಹಾಗೂ ಅಗತ್ಯತೆ,ಮಾದಕ ವಸ್ತು ವಿಮುಕ್ತಿ ಕೇಂದ್ರಗಳು ಹಾಗೂ ಪುನರ್ ವಸತಿ ಕುರಿತಂತೆ ಚರ್ಚಿಸಲು ಜಿಲ್ಲಾ ಮಟ್ಟದ NCORD ಸಭೆ ಮಾಡಲಾಯಿತು.ಈ ಸಭೆಯಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು, ಕಾಲೇಜು ಪ್ರಾಂಶುಪಾಲರುಗಳು ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದರು.

112chitradurga

ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ಸ್ವಂತ ಮಗಳ ಮೇಲೆ ಅತ್ಯಾಚಾರವೆಸಗಿದ ತಂದೆಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿದ ಘನ ನ್ಯಾಯ...
06/10/2026

ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ಸ್ವಂತ ಮಗಳ ಮೇಲೆ ಅತ್ಯಾಚಾರವೆಸಗಿದ ತಂದೆಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿದ ಘನ ನ್ಯಾಯಾಲಯ

112chitradurga

ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ಇಂದು ಶಿವಮೊಗ್ಗ ನಗರದ ಕೆಳದಿ ಶಿವಪ್ಪ ನಾಯಕರ ಮೈದಾನಲ್ಲಿ 2026-27 ನೇ ಸಾಲಿನ ಪೊಲೀಸ್ ಕಾನ್ಸ್ ಟೇಬಲ್(ಸಿವಿಲ್...
06/10/2026

ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ಇಂದು ಶಿವಮೊಗ್ಗ ನಗರದ ಕೆಳದಿ ಶಿವಪ್ಪ ನಾಯಕರ ಮೈದಾನಲ್ಲಿ 2026-27 ನೇ ಸಾಲಿನ ಪೊಲೀಸ್ ಕಾನ್ಸ್ ಟೇಬಲ್(ಸಿವಿಲ್) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಕುಶಲ್ ಚೌಕ್ಸೆ ಐಪಿಎಸ್., ರವರ ನೇತೃತ್ವದಲ್ಲಿ ದೇಹದಾಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗಳು ನಡೆದಿದ್ದು, ಲಿಖಿತ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸದರು.

112chitradurga

06/10/2026

ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ಚಿತ್ರದುರ್ಗ ನಗರದ ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆಯಲ್ಲಿ ಸಹಕರಿಸಿದ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಜಿಲ್ಲೆಯ ಸಮಸ್ತ ಜನತೆಗೆ ಜಿಲ್ಲಾ ಪೊಲೀಸ್ ವತಿಯಿಂದ ಅಭಿನಂದನೆಗಳು.

112chitradurga
Karnataka State Police

ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ದಿನಾಂಕ:05.10.2026 ರಂದು  ಐಮಂಗಲ ವೃತ್ತ ನಿರೀಕ್ಷಕರಾದ ಶ್ರೀ ಗುಡ್ಡಪ್ಪ ಹಾಗೂ ಐಮಂಗಲ ಪೊಲೀಸ್ ಠಾಣೆಯ ಪೊಲೀಸ...
06/10/2026

ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ದಿನಾಂಕ:05.10.2026 ರಂದು ಐಮಂಗಲ ವೃತ್ತ ನಿರೀಕ್ಷಕರಾದ ಶ್ರೀ ಗುಡ್ಡಪ್ಪ ಹಾಗೂ ಐಮಂಗಲ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಸುರೇಶ್ ರವರು ಮತ್ತು NHAI safety ಇಂಜಿನಿಯರ್ ಹಾಗೂ IRB ಅಧಿಕಾರಿಗಳೊಂದಿಗೆ ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಎನ್ ಹೆಚ್ -48 ರಸ್ತೆಯ ಹೆಚ್ಚು ಅಪಘಾತ ಆಗುವ ಸ್ಥಳಗಳಿಗೆ ಭೇಟಿ ನೀಡಿ, 10 ಕ್ಕೂ ಹೆಚ್ಚು ಅಪಘಾತವಲಯಗಳನ್ನು ಗುರುತಿಸಿ, ರಸ್ತೆ ಅಪಘಾತಗಳನ್ನು ತಡೆಯಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿದ್ದು,NHAI safety ಇಂಜಿನಿಯರ್ ಹಾಗೂ IRB ಅಧಿಕಾರಿಗಳು rumblers, sign boards, lights, blinkers, stickering, repair works, fencing, cat eyes ಮುಂತಾದವುಗಳನ್ನು ಇನ್ನೂ 15 ದಿನಗಳೊಳಗೆ ಅಳವಡಿಸುವುದಾಗಿ ತಿಳಿಸಿರುತ್ತಾರೆ.

112chitradurga
Karnataka State Police

ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ಇಂದು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಕುಶಲ್ ಚೌಕ್ಸೆ ಐಪಿಎಸ್ ರವರು 2026-27 ನೇ ಸಾಲಿನ ಪೊಲೀಸ್ ಕಾನ್ಸ್ ಟ...
05/10/2026

ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್
ಇಂದು ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ ಕುಶಲ್ ಚೌಕ್ಸೆ ಐಪಿಎಸ್ ರವರು 2026-27 ನೇ ಸಾಲಿನ ಪೊಲೀಸ್ ಕಾನ್ಸ್ ಟೇಬಲ್(ಸಿವಿಲ್) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ದಿನಾಂಕ:06.10.2026 ರಂದು ಶಿವಮೊಗ್ಗ ನಗರದಲ್ಲಿ ನಡೆಯುವ ದೇಹದಾಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆಗಳಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ,, ಸೂಕ್ತ ಕರ್ತವ್ಯ ಸೂಚನೆಗಳನ್ನು ನೀಡಿರುತ್ತಾರೆ.

112chitradurga
Karnataka State Police

Address

Turuvanuru Road
Chitradurga
577501

Alerts

Be the first to know and let us send you an email when Chitradurga District Police posts news and promotions. Your email address will not be used for any other purpose, and you can unsubscribe at any time.

Contact The Organization

Send a message to Chitradurga District Police:

Shortcuts

Share