BJP4Hungund-Ilkal

Call Directions

BJP4Hungund-Ilkal Official Page of BJP SMIT Cell, Hungund Constituency

*ಮಹರ್ಷಿ ವಾಲ್ಮೀಕಿ ಜಯಂತಿ* ನಿಮಿತ್ಯವಾಗಿ ಇಂದು ಇಳಕಲ್ಲ ನಗರದಲ್ಲಿ ಜರುಗಿದ ಮೆರುವಣಿಗೆಯಲ್ಲಿ ಭಾಗಿಯಾಗಿ ಸಮಸ್ತ ಜನತೆಗೆ ಶುಭಹಾರೈಸಿದ *ಶ್ರೀ ದೊ...
26/10/2026

*ಮಹರ್ಷಿ ವಾಲ್ಮೀಕಿ ಜಯಂತಿ* ನಿಮಿತ್ಯವಾಗಿ ಇಂದು ಇಳಕಲ್ಲ ನಗರದಲ್ಲಿ ಜರುಗಿದ ಮೆರುವಣಿಗೆಯಲ್ಲಿ ಭಾಗಿಯಾಗಿ ಸಮಸ್ತ ಜನತೆಗೆ ಶುಭಹಾರೈಸಿದ *ಶ್ರೀ ದೊಡ್ಡನಗೌಡ ಜಿ ಪಾಟೀಲ* ಅವರು....
* #ಮಹರ್ಷಿ_ವಾಲ್ಮೀಕಿ_ಜಯಂತಿ*

ಪ್ರಧಾನಿ ನರೇಂದ್ರ  ಮೋದಿ ಅವರ ಜನಪ್ರಿಯತೆ ಸಹಿಸದ ಕಾಂಗ್ರೆಸ್‌ ದ್ವೇಷದಿಂದ ಕುದಿಯುತ್ತಿದೆ.ಅಧಿಕಾರ ಸಿಗದೆ ಹತಾಶೆಯ ಅಗ್ನಿಕುಂಡದಲ್ಲಿ ಬೆಯ್ಯುತ್ತ...
26/10/2026

ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಸಹಿಸದ ಕಾಂಗ್ರೆಸ್‌ ದ್ವೇಷದಿಂದ ಕುದಿಯುತ್ತಿದೆ.

ಅಧಿಕಾರ ಸಿಗದೆ ಹತಾಶೆಯ ಅಗ್ನಿಕುಂಡದಲ್ಲಿ ಬೆಯ್ಯುತ್ತಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರು ಮೋದಿ ಅವರ ತಂದೆಯ ಕುರಿತು ಕೀಳುಮಟ್ಟದ ಭಾಷೆ ಬಳಸುವ ಮೂಲಕ ತಮ್ಮೊಳಗಿನ ದ್ವೇಷ ಹಾಗೂ ರಾಜಕೀಯ ದಿವಾಳಿತನ ಪ್ರದರ್ಶನ ಮಾಡಿದ್ದಾರೆ. ಖರ್ಗೆ ಅವರ ಅಸಭ್ಯ ಹೇಳಿಕೆ ಅತ್ಯಂತ ಖಂಡನೀಯ. ಗೊಂದಲ, ನಿಂದನೆ ಮತ್ತು ಸುಳ್ಳುಗಳನ್ನೇ ಗುರುತಾಗಿಸಿಕೊಂಡಿರುವ ಕಾಂಗ್ರೆಸ್‌, ಮೊದಲು ಪ್ರಧಾನಿ ಅವರ ಪೂಜ್ಯ ತಾಯಿ ಅವರನ್ನು ಅವಮಾನಿಸಿತ್ತು. ಈಗ ಅವರ ತಂದೆಯ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡುತ್ತಿರುವುದು ನೀಚತನದ ಪರಮಾವಧಿ.

ಮಲ್ಲಿಕಾರ್ಜುನ್ ಖರ್ಗೆ ಆಡಿರುವ ದ್ವೇಷದ ಮಾತು

➡️ಮೋದಿ ಅವರಿಗೆ
ಮಾಡಿದ ಅವಮಾನ

➡️ದೇಶದ ಜನಾದೇಶಕ್ಕೆ
ಮಾಡಿದ ಅವಮಾನ

➡️ಪ್ರಜಾಪ್ರಭುತ್ವದ ಮೌಲ್ಯಗಳಿಗೆ
ಮಾಡಿದ ಅವಮಾನ

➡️ದೇಶದ ರಾಜಕೀಯ
ಸಭ್ಯತೆಗೆ ಮಾಡಿದ ಅವಮಾನ

ಒಂದು ಕುಟುಂಬದ ಹಿಡಿತಕ್ಕೆ ಸಿಕ್ಕಿರುವ ಕಾಂಗ್ರೆಸ್‌ನ ನೈಜ ಮುಖವಾಡವೇ ದ್ವೇಷ ರಾಜಕಾರಣ. ಮಲ್ಲಿಕಾರ್ಜುನ ಖರ್ಗೆ ಅವರೇ, ರಾಜಕೀಯ ವಿರೋಧವಿರಲಿ, ಆದರೆ ವೈಯಕ್ತಿಕ ದ್ವೇಷ ಸಲ್ಲದು. ಕೂಡಲೇ ತಮ್ಮ ಹೇಳಿಕೆ ಸಂಬಂಧ ದೇಶದ ಜನತೆಯ ಮುಂದೆ ಕ್ಷಮೆಯಾಚಿಸಿ.

ರಾಜ್ಯದಲ್ಲಿ 55.35% ನೀರಿನ ಕೊರತೆಯಿದೆ ಮತ್ತು ಕಾವೇರಿ ಕೊಳ್ಳದ 55 ತಾಲೂಕುಗಳು ಭೀಕರ ಬರಪೀಡಿತವಾಗಿವೆ. ಇಂತಹ ಸಂಕಷ್ಟದ ಸಮಯದಲ್ಲೂ ಕಾಂಗ್ರೆಸ್ ಸ...
26/10/2026

ರಾಜ್ಯದಲ್ಲಿ 55.35% ನೀರಿನ ಕೊರತೆಯಿದೆ ಮತ್ತು ಕಾವೇರಿ ಕೊಳ್ಳದ 55 ತಾಲೂಕುಗಳು ಭೀಕರ ಬರಪೀಡಿತವಾಗಿವೆ. ಇಂತಹ ಸಂಕಷ್ಟದ ಸಮಯದಲ್ಲೂ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ನಿಗದಿಗಿಂತ 1.8 ಟಿಎಂಸಿ ಹೆಚ್ಚು (ಒಟ್ಟು 47.092 ಟಿಎಂಸಿ) ಕಾವೇರಿ ನೀರು ಹರಿಸಿ ನಾಡಿನ ರೈತರ ಬೆನ್ನಿಗೆ ಚೂರಿ ಹಾಕಿದೆ.

ದೆಹಲಿ ಹೈಕಮಾಂಡ್ ಹಾಗೂ ಇಂಡಿ ಮೈತ್ರಿಕೋಟದ ಓಲೈಕೆಗಾಗಿ ಕನ್ನಡಿಗರ ಹಿತಾಸಕ್ತಿಯನ್ನು ಬಲಿಕೊಟ್ಟಿರುವ ಡಿ ಕೆ ಶಿವಕುಮಾರ್
ಅವರೇ, ನಿಮ್ಮ ಈ ಮೈತ್ರಿ ರಾಜಕಾರಣಕ್ಕೆ ರಾಜ್ಯದ ಜನತೆಯೇ ಶೀಘ್ರದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ.

*ಭಾರತೀಯ ಜನತಾ ಪಕ್ಷ ಹುನಗುಂದ ಮತಕ್ಷೇತ್ರದ ವತಿಯಿಂದ ವಿಶ್ವಶ್ರೇಷ್ಠ ಮಹಾಕಾವ್ಯ, ಆದಿಕಾವ್ಯ 'ರಾಮಾಯಣ'ವನ್ನು ಜಗತ್ತಿಗೆ ನೀಡಿದ ಆದಿಕವಿ, ಮಹರ್ಷಿ...
26/10/2026

*ಭಾರತೀಯ ಜನತಾ ಪಕ್ಷ ಹುನಗುಂದ ಮತಕ್ಷೇತ್ರದ ವತಿಯಿಂದ ವಿಶ್ವಶ್ರೇಷ್ಠ ಮಹಾಕಾವ್ಯ, ಆದಿಕಾವ್ಯ 'ರಾಮಾಯಣ'ವನ್ನು ಜಗತ್ತಿಗೆ ನೀಡಿದ ಆದಿಕವಿ, ಮಹರ್ಷಿ ವಾಲ್ಮೀಕಿಗಳ ಜಯಂತಿಯ ಕಾರ್ಯಕ್ರಮವನ್ನು ಜನಪ್ರಿಯ ಮಾಜಿ ಶಾಸಕರಾದ ಶ್ರೀ ದೊಡ್ಡನಗೌಡ ಜಿ ಪಾಟೀಲ ಅವರ ನೇತೃತ್ವದಲ್ಲಿ ಪಕ್ಷದ ಕಾರ್ಯಾಲಯದಲ್ಲಿ ಆಚರಣೆ ಮಾಡಲಾಯಿತು....*🚩🙏

ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ಮುಖಂಡರು , ಬಿಜೆಪಿ ಪಕ್ಷದ ಪ್ರಮುಖರು , ಕಾರ್ಯಕರ್ತರು ಉಪಸ್ಥಿತರಿದ್ದರು...

26/10/2026

ಕಾಂಗ್ರೆಸ್ ಪಕ್ಷವಲ್ಲ, ಅದೊಂದು ಮಾಫಿಯಾ ಗ್ಯಾಂಗ್!

ದೇಶದ ಪ್ರಧಾನಿ ವಿರುದ್ಧ ಗೂಂಡಾ ಭಾಷೆ ಬಳಸುವ ಹಂತಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಳಿದಿದ್ದಾರೆ. ಅಧಿಕಾರ ಸಿಗದ ಹತಾಶೆಯ ತುತ್ತತುದಿಗೆ ತಲುಪಿರುವ ಕಾಂಗ್ರೆಸ್‌ಗೆ ರಾಜಕೀಯ ಸೌಜನ್ಯವೇ ಮರೆತುಹೋಗಿದೆ. ರಾಜಕೀಯ ಪಕ್ಷದಂತೆ ವರ್ತಿಸುವ ಬದಲು ಮಾಫಿಯಾ ಗ್ಯಾಂಗ್‌ನಂತೆ ರೌಡಿಗಳ ಭಾಷೆ ಮಾತನಾಡುತ್ತಿರುವ ಇವರ ಕೀಳು ಪ್ರವೃತ್ತಿಗೆ ದೇಶದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ!

ಯಾವ ಕಾಂಗ್ರೆಸ್ ಇಂದು ವೋಟ್ ಚೋರಿ ಎಂಬ ವಿಚಾರವನ್ನು ಪ್ರಸ್ತಾಪಿಸುತ್ತಿದೆಯೋ ಅದೇ Indian National Congress  ಆಗಿನ ನೆಹರೂ ಕಾಲದಿಂದ ಹಿಡಿದು ...
26/10/2026

ಯಾವ ಕಾಂಗ್ರೆಸ್ ಇಂದು ವೋಟ್ ಚೋರಿ ಎಂಬ ವಿಚಾರವನ್ನು ಪ್ರಸ್ತಾಪಿಸುತ್ತಿದೆಯೋ ಅದೇ Indian National Congress ಆಗಿನ ನೆಹರೂ ಕಾಲದಿಂದ ಹಿಡಿದು ಈಗಿನ ರಾಹುಲ್ ಗಾಂಧಿ ಕಾಲದವರೆಗೆ ಮತಕಳ್ಳತನ ನಡೆಸುತ್ತಲೇ ಬಂದಿದೆ.

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ Indian National Congress - Karnataka ಜಿಲ್ಲಾಧ್ಯಕ್ಷರ ಪತ್ನಿಯ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರು ಸಚಿವರ ಸಮ್ಮುಖದಲ್ಲೇ ಮತದಾನ ಮಾಡಿದ್ದಾರೆ. ಮತಕಳ್ಳತನದ ಬಗ್ಗೆ ಹೋರಾಡುವ Rahul Gandhi ಅವರು ಈ ಬಗ್ಗೆ ಧ್ವನಿ ಎತ್ತುವರೇ?

ಪರಮ ಪವಿತ್ರವಾದ ರಾಮಾಯಣದ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ *ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯ* ಶುಭಾಶಯಗಳು.
26/10/2026

ಪರಮ ಪವಿತ್ರವಾದ ರಾಮಾಯಣದ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ *ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯ* ಶುಭಾಶಯಗಳು.




ಎಲ್ಲರ ಬದುಕನ್ನು ಪೋಷಿಸುವ ಜೀವಸೆಲೆಯಾಗಿ, ಬೆಳೆಗಳನ್ನು ಧರಿಸಿ ಶೋಭಿಸುವ ಭೂಮಿತಾಯಿಗೆ ಭಕ್ತಿಯಿಂದ ಪೂಜೆ ಸಲ್ಲಿಸುವ *ಭೂಮಿ ಹುಣ್ಣಿಮೆಯ ಹಬ್ಬದಂದು...
26/10/2026

ಎಲ್ಲರ ಬದುಕನ್ನು ಪೋಷಿಸುವ ಜೀವಸೆಲೆಯಾಗಿ, ಬೆಳೆಗಳನ್ನು ಧರಿಸಿ ಶೋಭಿಸುವ ಭೂಮಿತಾಯಿಗೆ ಭಕ್ತಿಯಿಂದ ಪೂಜೆ ಸಲ್ಲಿಸುವ *ಭೂಮಿ ಹುಣ್ಣಿಮೆಯ ಹಬ್ಬದಂದು* ಎಲ್ಲರಿಗೂ, ಅದರಲ್ಲೂ ವಿಶೇಷವಾಗಿ ನಮ್ಮ ಅನ್ನದಾತ ರೈತ ಬಂಧುಗಳಿಗೆ ಶೀಗಿ ಹುಣ್ಣಿಮೆಯ ಹಾರ್ದಿಕ ಶುಭಾಶಯಗಳು.



ರಾಜ್ಯ ಸರ್ಕಾರ 2026ನೇ ಸಾಲಿನ ತನ್ನ ಪಾಲಿನ ಬೆಳೆ ವಿಮೆ ಪ್ರೀಮಿಯಂ ಹಣ ಬಿಡುಗಡೆ ಮಾಡದೆ ರೈತರಿಗೆ ದೊರೆಯಬೇಕಾದ ವಿಮಾ ಹಣ ದೊರೆಯುತ್ತಿಲ್ಲ ಕೂಡಲೇ ...
25/10/2026

ರಾಜ್ಯ ಸರ್ಕಾರ 2026ನೇ ಸಾಲಿನ ತನ್ನ ಪಾಲಿನ ಬೆಳೆ ವಿಮೆ ಪ್ರೀಮಿಯಂ ಹಣ ಬಿಡುಗಡೆ ಮಾಡದೆ ರೈತರಿಗೆ ದೊರೆಯಬೇಕಾದ ವಿಮಾ ಹಣ ದೊರೆಯುತ್ತಿಲ್ಲ ಕೂಡಲೇ ಪ್ರೀಮಿಯಂ ಹಣ ಬಿಡುಗಡೆಗೆ ಆಗ್ರಹ
------------------------------------------------------------------------------------------------------------------------------------------------------------------------------------------
ಕರ್ನಾಟಕದಲ್ಲಿ ತೀವ್ರ ಬರಗಾಲದಿಂದ ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ದೊರೆಯುವ ವಿಮಾ ಪರಿಹಾರವು ಮಹತ್ವದ ಆಸರೆಯಾಗಿದೆ.
ಆದರೆ, ರಾಜ್ಯ ಸರ್ಕಾರವು ತನ್ನ ಪಾಲಿನ ಪ್ರೀಮಿಯಂ ಮೊತ್ತವನ್ನು ಬಿಡುಗಡೆ ಮಾಡದಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ.
ಕೇಂದ್ರ ಸರ್ಕಾರವು ತನ್ನ ಪಾಲಿನ ಪ್ರೀಮಿಯಂ ಸಹಾಯಧನವಾಗಿ ಈಗಾಗಲೇ ₹1,342 ಕೋಟಿಗಳನ್ನು ಪಾವತಿಸಿದೆ. ಆದರೆ, ರಾಜ್ಯ ಸರ್ಕಾರವು ಪಾವತಿಸಬೇಕಾದ ₹1,680 ಕೋಟಿ ಪ್ರೀಮಿಯಂ ಮೊತ್ತವನ್ನು ಕಳೆದ ಒಂದೂವರೆ ತಿಂಗಳಿಂದ ಹಣಕಾಸು ಇಲಾಖೆಯಲ್ಲಿ ಬಾಕಿ ಉಳಿಸಿಕೊಂಡಿದೆ. ಇದರಿಂದಾಗಿ ಸಂಕಷ್ಟದಲ್ಲಿರುವ ರೈತರಿಗೆ ಸಕಾಲದಲ್ಲಿ ಪರಿಹಾರ ತಲುಪಲು ಆಡಚಣೆಯಾಗುತ್ತಿದೆ.
ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ DK Shivakumar ಅವರಿಗೆ ನಾನು ಪತ್ರದ ಮೂಲಕ ತಾವು ಕೂಡಲೇ ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ, ಹಣಕಾಸು ಇಲಾಖೆಯಲ್ಲಿ ಬಾಕಿಯಿರುವ ಕಡತವನ್ನು ವಿಲೇವಾರಿ ಮಾಡಿಸಿ, ರಾಜ್ಯ ಸರ್ಕಾರದ ಪಾಲಿನ ಪ್ರೀಮಿಯಂ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಬೇಕೆಂದು ಒತ್ತಾಯಪೂರ್ವಕವಾಗಿ ಕೋರಿದ್ದೆನೆ.

25/10/2026

ಸಚಿವರೇ...
ಇಲ್ಲಸಲ್ಲದ ಸುಳ್ಳಿನ ಸರಮಾಲೆ ಹಾಕಿಕೊಂಡು ಕಂಡಕಂಡಲ್ಲಿ ಏನಾದರು ಮೈಕ್ ಡಿಡಕೊಂಡ ಸುಳ್ಳು ಇತಾಹಾಸ ಓದಬೇಡಿ. ವಿಷಯವನ್ನು ತಿಳಿದು ಮಾತನಾಡಿ. ಓಟ್ ಬ್ಯಾಂಕ್ ಸಲುವಾಗಿ ಇಷ್ಟು ಹೀನವಾಗಿ ಎಲ್ಲ ಸ್ವತಂತ್ರ್ಯ ಹೋರಾಟಗಾರರನ್ನು ಹಿಯಾಳಸಬೇಡರಿ. ಅದು ನಿಮಗ ಶೋಭೆ ತರುವದಲ್ಲ...

Address

Ilkal

Telephone

+919780218888

Website

Alerts

Be the first to know and let us send you an email when BJP4Hungund-Ilkal posts news and promotions. Your email address will not be used for any other purpose, and you can unsubscribe at any time.

Shortcuts

Share