20/06/2019
*ಹೊರಗಿನಿಂದ ಸಂಘವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ: ಡಾ. ಮನಮೋಹನ್ ವೈದ್ಯ*
👉
ಹೊರಗಿನಿಂದ ಸಂಘವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ: ಡಾ. ಮನಮೋಹನ್ ವೈದ್ಯ
ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬುದು ರಾಜಕೀಯ ಪಕ್ಷವೂ ಅಲ್ಲ, ಧಾರ್ಮಿಕ ಅಥವಾ ಸಾಮಾಜಿಕ ಸಂಘಟನೆಯೂ ಅಲ್ಲ. ಸಂಘ ಎಂಬುದು ಸಂಘವ.....
02/02/2018
ವಿಜಯ ಶಕ್ತಿ ಸಂಗಮ, ಕಾಸರಗೋಡು,1ಪೆಬ್ರವರಿ 2015
ವಿಜಯ ಶಕ್ತಿ ಸಂಗಮ, ಕಾಸರಗೋಡು,1ಪೆಬ್ರವರಿ 2015
ವಿಜಯ ಶಕ್ತಿ ಸಂಗಮವು ಕೇರಳ ಹಾಗೂ ಕರ್ನಾಟಕದ ಸರ್ಕಾರಿ ಗಡಿ ಜಿಲ್ಲೆಗಳನ್ನೊಳಗೊಂಡ 8 ತಾಲೂಕುಗಳ ಗಣವೇಷಧಾರಿ ಸ್ವಯಂಸೇವಕರ ಸಂಚಲನಗಳ ಸಂಗ...
01/02/2018
3 years before............
07/07/2017
Kindly request all to report below page as it is spreading hate and openly threatening to kill RSS leader.Government is not taking action against. So pls report it as spreading violence and hate.
ಆತ್ಮೀಯರೇ,
ಈ ಕೆಳಗಿನ ಫೇಸ್ ಬುಕ್ ಪೇಜ್ ನ ಮೂಲಕ ನಿರಂತರವಾಗಿ ದ್ವೇಷ ಹರಡುವ ಹಾಗೂ ಜೊತೆಯಲ್ಲಿ RSS ನಾಯಕರ ಹತ್ಯೆ ನಡೆಸುವ ಬೆದರಿಕೆಯ ಪೋಸ್ಟ್ ಗಳು ಬರುತ್ತಿದೆ.ಸರಕಾರದ ಗಮನಕ್ಕೆ ಇದು ಬಂದಿದ್ದರೂ ಯಾವುದೇ ಕ್ಮ ಕೈಗೊಳ್ಳುತ್ತಿಲ್ಲ. ನಾವೆಲ್ಲರೂ ಈ ಪೇಜ್ ನ್ನು Report ಮಾಡೋಣ.
https://www.facebook.com/MangaloreMuslims/
leader.gov
17/02/2016
ವಿಜಯಧ್ವನಿ ಮಾಧ್ಯಮ ವರದಿ
Vijayadhwani media reports
14/02/2016
ನೀಲೇಶ್ವರದಲ್ಲಿ ಮೊಳಗಿದ ವಿಜಯಧ್ವನಿ.
VIJAYADHWANI Ghosh Sanchalan held at Kasaragod, hundreds of Swayamsevaks marched with Pride http://samvada.org/2016/news/vijayadhwani-sanchalan/
ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಫೆಬ್ರವರಿ 14, 2016 ರಂದು ಕಾಸರಗೋಡು ಜಿಲ್ಲೆಯ ನೀಲೇಶ್ವರದಲ್ಲಿ “ವಿಜಯಧ್ವನಿ” ಘೋಷ್ ಪಥ ಸಂಚಲನ ನಡೆಯಿತು.ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಾಂತ ಕಾರ್ಯಕಾರಿಣಿ ಸದಸ್ಯ ವಲ್ಸನ್ ತಿಲ್ಲಂಗೇರಿ ಇಂದು ಸಂಘದ ಘೋಷ್ ಸಂಚಕನ ಹಾಗೂ ಘೋಷ್ ಪ್ರದರ್ಶನ ನಡೆದಿದೆ. ಸಂಘ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಕಾರ್ಯವಿಸ್ತಾರ ಮಾಡಿದೆ.ಅದೇ ರೀತಿ ಘೋಷ್ ನಲ್ಲೂ ತನ್ನದೇ ಆದ ಛಾಪನ್ನು ಬೀರಿದೆ.ಹಿಂದೆ ವಿದೇಶೀ ಸಂಗೀತದ ಉಪಯೋಗ ಆಗುತ್ತಿತ್ತು. ಆದರೆ ಸಂಘ ಭಾರತೀಯ ಸಂಗೀತವನ್ನು ಘೋಷ್ ನಲ್ಲಿ ಅಳವಡಿಸಿದೆ.ವೇದ ಕಾಲದಲ್ಲೂ ಘೋಷ್ ನ ಉಪಯೋಗ ಮಾಡುತ್ತಿದ್ದ ಉಲ್ಲೇಖ ಇದೆ. ದೇವರನ್ನು ಆರಾಧಿಸಲು ಕೂಡ ಸಂಗೀತವನ್ನು ಉಪಯೋಗಿಸುತ್ತಿದ್ದರು. ಭಾವ, ರಾಗ ಹಾಗೂ ತಾಳಗಳ ಸಮ್ಮಿಲನವೇ ಭಾರತ. ಭಾರತವನ್ನು ಇಂದು ಜಗತ್ತೇ ಒಪ್ಪಕೊಳ್ಳುತ್ತಿದೆ.ಭಾರತದ ಯೋಗವನ್ನು ಇಡೀ ವಿಶ್ವವೇ ಒಪ್ಪಕೊಂಡಿದೆ.ಎಲ್ಲಾ ಸಮಸ್ಯೆಗಳಿಗೆ ಇಂದು ಪರಿಹಾರವನ್ನು ಭಾರತದಿದಂದ ಕಂಡುಕೊಳ್ಳುತ್ತಿದ್ದಾರೆ ಎಂದು ಹೇಳಿದರು.ಅವರು ಮಾತನಾಡುತ್ತಾ ಈ ದೇಶದಲ್ಲಿ ಎರಡು ರೀತಿಯ ಶಕ್ತಿಗಳು ಕೆಲಸ ಮಾಡುತ್ತಿದ್ದು ದೇಶ ಹಿತಕ್ಕಾಗಿಯೇ ಒಂದು ವಿಭಾಗ ಕೆಲಸ ಮಾಡುತ್ತಿದ್ದು ಇನ್ನೊಂದು ವಿಭಾಗ ದೇಶದ ಸವಲತ್ತನ್ನು ಪಡೆದು ದೇಶವಿರೋಧಿ ಕೃತ್ಯವನ್ನು ನಡೆಸುತ್ತಿದೆ.ಆದರೂ ಎದುರಾಳಿಗಳು ದುರ್ಬಲಾಗುತ್ತಿದ್ದಾರೆ ಅವರ ಹತಾಶೆಯಿಂದ ಇದು ತಿಳಿಯುತ್ತದೆ.ವಿಜಯಕ್ಕಾಗಿ ಹೋರಾಟವನ್ನು ನಾವು ನಡೆಸಬೇಕಾಗಿದೆ.ಆ ಹೋರಾಟದ ಧ್ವನಿ ಇಂದಿನ ವಿಜಯಧ್ವನಿಯ ಮೂಲಕ ಮೊಳಗಲಿ ಎಂದು ಹೇಳಿದರು.
ಸಮಾರಂಭದ ಮೊದಲು ನೀಲೇಶ್ವರ ನಗರದಲ್ಲಿ ಅಕರ್ಷಕವಾದ ಘೋಷ್ ಪಥಸಂಚಲನ ನಡೆಯಿತು. ಸಂಚಲನದುದ್ದಕ್ಕೂ ಸುಮಾರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಹಿತೈಷಿಗಳು, ಮಾತಾ ಭಗಿನಿಯರಿಂದ ಭಗವಾವಧ್ವಜಕ್ಕೆ ಪುಷ್ಪಾರ್ಚನೆ ಮೂಲಕ ಭವ್ಯ ಸ್ವಾಗತ ದೊರೆಯಿತು.ಪಥಸಂಚನಲದ ನಂತರ ಆಕರ್ಷಕ ಘೋಷ್ ಪರ್ದರ್ಶನ ನಡೆಯಿತು.ವಿಜಯಧ್ವನಿ ಕೇರಳ ಹಾಗೂ ಕರ್ನಾಟಕದ ಸರ್ಕಾರಿ ಗಡಿ ಜಿಲ್ಲೆಗಳನ್ನೊಳಗೊಂಡ 8 ತಾಲೂಕುಗಳ ಕೇವಲ ಘೋಷ್ ವಾದಕರ ಈ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.ಇದಕ್ಕೆ ಸಂಘದ ಕಾಂಞಂಗಾಡ್ ಜಿಲ್ಲೆಯ ಹೊಸದುರ್ಗ, ನೀಲೇಶ್ವರ, ಪನತ್ತಾಡಿ ಹಾಗೂ ಉದುಮ ತಾಲೂಕು. ಮಂಗಳೂರು ಗ್ರಾಮಾಂತರ ಜಿಲ್ಲೆಯ ಮಂಜೇಶ್ವರ, ಬದಿಯಡ್ಕ, ಕಾಸರಗೋಡು ನಗರ, ಕಾಸರಗೋಡು ಗ್ರಾಮಾಂತರ ಭಾಗದ 33 ಘೋಷ್ ಕೇಂದ್ರಗಳಿಂದ ಸುಮಾರು 1000 ಕ್ಕೂ ಹೆಚ್ಚಿನ ಘೋಷ್ ವಾದಕರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಸಂಘಚಾಲಕ್ ಮಾನನೀಯ ಟಿ.ಗೋಪಾಲಕೃಷ್ಣನ್ ಮಾಸ್ಟರ್ ಅವರು ವಹಿಸಿದ್ದರು. ಮಂಗಳೂರು ವಿಭಾಗ ಸಹ ಕಾರ್ಯವಾಹ ಶ್ರೀ ಜನಾರ್ಧನ ಪ್ರತಾಪನಗರ ಅವರು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹಿಂದೂ ಸಮಾಜಕ್ಕೆ ಗೆಲುವಿನ ವಿಶ್ವಾಸವನ್ನು ಮೂಡಿಸಿ, ಸದೃಢಗೊಳಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
12/02/2016
ನಮಸ್ತೆ,
2016 ಫ಼ೆಬ್ರವರಿ 14 ಭಾನುವಾರ ಕಾಸರಗೋಡು ರೆವೆನ್ಯು ಜಿಲ್ಲೆಯ ಘೋಷ್ ಪಥಸಂಚಲನ “ವಿಜಯಧ್ವನಿ” ನೀಲೇಶ್ವರದಲ್ಲಿ ಸಂಜೆ 3.30 ಕ್ಕೆ ನಡೆಯಲಿದೆ.ನಂತರ ಸಂಜೆ 5.00 ಗಂಟೆಗೆ ನೀಲೇಶ್ವರ ರಾಜಾಸ್ ಹೈ ಸ್ಕೂಲ್ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಮಾರಂಭಕ್ಕೂ ತಮಗೆ ಹಾರ್ದಿಕ ಸ್ವಾಗತ
31/01/2016
Media reports on ""Vijayadwani " Ghosh sanchalan to be held.on February 14.
ಪೆಬ್ರವರಿ 14 ರಂದು ನೀಲೇಶ್ವರದಲ್ಲಿ ನಡೆಯುವ "ವಿಜಯಧ್ವನಿ" ಘೋಷ್ ಸಂಚಲನದ ಪೂರ್ವಭಾವಿ ಕಾರ್ಯಕ್ರಮಗಳ ಮಾಧ್ಯಮ ವರದಿ.
28/01/2016
ಕಾಸರಗೋಡು: ಫೆಬ್ರವರಿ 14, 2016ರ “ವಿಜಯಧ್ವನಿ” ಘೋಷ್ ಸಂಚಲನಕ್ಕೆ ಭರದ ಸಿದ್ದತೆ .
http://samvada.org/2016/news-digest/vijayadhwani/
http://news13.in/archives/36486
27/01/2016
"ವಿಜಯಧ್ವನಿ" ಘೋಷ್ ಸಂಚಲನಕ್ಕೆ ಕಾಸರಗೋಡಿನಲ್ಲಿ ಭರದ ಸಿದ್ದತೆ:
ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಫೆಬ್ರವರಿ 14, 2016 ರಂದು “ನೀಲೇಶ್ವರ” ದಲ್ಲಿ "ವಿಜಯಧ್ವನಿ" ಘೋಷ್ ಪಥ ಸಂಚಲನ ಹಾಗೂ ಸಾರ್ವಜನಿಕ ಸಮಾರಂಭ ನಡೆಯಲಿದೆ. ಇದರಲ್ಲಿ ಕಾಸರಗೋಡು ಸರಕಾರೀ ಜಿಲ್ಲೆಯ ಘೋಷ್ ವಾದಕರು ಭಾಗವಹಿಸಲಿದ್ದಾರೆ. ಈ ಘೋಷ್ ಸಂಚಲನಕ್ಕೆ ಸಂಘದ ಕಾಂಞಂಗಾಡ್ ಜಿಲ್ಲೆಯ ಹೊಸದುರ್ಗ, ನೀಲೇಶ್ವರ,ಪನತ್ತಾಡಿ ಹಾಗೂ ಉದುಮ ತಾಲೂಕು ಹಾಗೂ ಮಂಗಳೂರು ಗ್ರಾಮಾಂತರ ಜಿಲ್ಲೆಯ ಮಂಜೇಶ್ವರ ಬದಿಯಡ್ಕ, ಕಾಸರಗೋಡು ನಗರ ಹಾಗೂ ಕಾಸರಗೋಡು ಗ್ರಾಮಾಂತರ ತಾಲೂಕುಗಳ ಒಟ್ಟು 33 ಘೋಷ್ ಕೇಂದ್ರಗಳ 2000 ದಷ್ಟು ಘೋಷ್ ವಾದಕರು ಭಾಗವಹಿಸಲಿದ್ದಾರೆ. ಹಿಂದೂ ಸಮಾಜಕ್ಕೆ ಗೆಲುವಿನ ವಿಶ್ವಾಸವನ್ನು ಮೂಡಿಸಿ, ಸದೃಢಗೊಳಿಸುವ ದೃಷ್ಟಿಯಿಂದ ಆಯೋಜಿಸಿದ ಕಾರ್ಯಕ್ರಮ ಇದಾಗಿದೆ.
"ವಿಜಯ ಧ್ವನಿ" ಘೋಷ್ ಸಂಚಲನಕ್ಕಾಗಿ ಕಳೆದ ಕೆಲವು ತಿಂಗಳುಗಳಿಂದ ಸ್ವಯಂಸೇವಕರು ಘೋಷ್ ಅಭ್ಯಾಸ ನಡೆಸುತ್ತಿದ್ದು ಅದರ ಪೂರ್ವಭಾವಿಯಾಗಿ ಕಾಸರಗೋಡು ಜಿಲ್ಲೆಯ ವಿವಿಧ ಘೋಷ್ ಕೇಂದ್ರಗಳಲ್ಲಿ ಘೋಷ್ ಸಂಚಲನ ನಡೆಸಲಾಯಿತು. ಮಂಗಳೂರು ಗ್ರಾಮಾಂತರ ಜಿಲ್ಲೆಯ 18 ಘೋಷ್ ಕೇಂದ್ರಗಳ ಪೈಕಿ ಮಂಜೇಶ್ವರ, ಮೀಂಜ,ಮಂಗಲ್ಪಾಡಿ, ಉಪ್ಪಳ,ಪೈವಳಿಕೆ, ಬಾಯಾರು,ಕುಂಬಳೆ, ಬದಿಯಡ್ಕ, ಪುತ್ತಿಗೆ, ನೀರ್ಚಾಲು,ಪೆರ್ಲ , ಮುಳ್ಳೇರಿಯ, ಮುಳಿಯಾರು,ಮಧೂರು, ಮೊಗ್ರಾಲ್ ಪುತ್ತೂರು, ಹಾಗೂ ಹೊಸದುರ್ಗ ತಾಲೂಕಿನ 15 ಘೋಷ್ ಕೇಂದ್ರಗಳ ಪೈಕಿ ಮಡಿಕೈ, ತಯ್ಯನ್ನೂರು, ಬೇಳೂರು ಹಾಗೂ ಹೊಸದುರ್ಗ ನಗರ ಮೊದಲಾದ ಘೋಷ್ ಕೇಂದ್ರಗಳಲ್ಲಿ ಜನವರಿ 26, 2016 ನೇ ಮಂಗಳವಾರ .ಘೋಷ್ ಅಭ್ಯಾಸ ಮತ್ತು ಸಂಚಲನಗಳು ನಡೆದವು.
http://news13.in/archives/36486