CV Chandrashekar

Directions Contact the organization

CV Chandrashekar For a better Society!

ಇಂದು ನಮ್ಮ ಪಕ್ಷದ ಹಿರಿಯ ಮುಖಂಡರಾದ ಶ್ರೀ ವೀರೇಶ ಮಹಾಂತಯ್ಯನ ಮಠ ಅವರ ಹುಟ್ಟು ಹಬ್ಬ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.ಅವರ ನಿವಾಸಕ್ಕೆ ತೆರಳ...
05/10/2026

ಇಂದು ನಮ್ಮ ಪಕ್ಷದ ಹಿರಿಯ ಮುಖಂಡರಾದ ಶ್ರೀ ವೀರೇಶ ಮಹಾಂತಯ್ಯನ ಮಠ ಅವರ ಹುಟ್ಟು ಹಬ್ಬ. ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

ಅವರ ನಿವಾಸಕ್ಕೆ ತೆರಳಿದ ಕೊಪ್ಪಳ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರಾದ ಶ್ರೀ ಮೂರ್ತಪ್ಪ ಗಿಣಿಗೇರಿ, ಜೆಡಿಎಸ್ ತಾಲೂಕು ಅಧ್ಯಕ್ಷರಾದ ಶ್ರೀ ವೀರೇಶ ಗೌಡ್ರು ದಳಪತಿ, ಕೊಪ್ಪಳ ಜಿಲ್ಲಾ ಜೆಡಿಎಸ್ ಒಬಿಸಿ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀ ಕರಿಯಪ್ಪ ಹಾಲವರ್ತಿ ಹಾಗೂ ಜೆಡಿಎಸ್ ತಾಲೂಕು ಪ್ರಧಾನ ಕಾರ್ಯದರ್ಶಿಯಾದ ಶ್ರೀ ಶಿವಕುಮಾರ ಏಣಿಗಿ ಅವರು ಗೌರವಪೂರ್ವಕವಾಗಿ ಸನ್ಮಾನಿಸಿ, ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು.

ಶ್ರೀ ವೀರೇಶ ಮಹಾಂತಯ್ಯನ ಮಠ ಅವರಿಗೆ ಆಯುಷ್ಯ, ಆರೋಗ್ಯ, ಐಶ್ವರ್ಯ ಹಾಗೂ ಯಶಸ್ಸು ಸದಾ ದೊರೆಯಲಿ. ಪಕ್ಷದ ಸಂಘಟನೆಗೆ ಮತ್ತಷ್ಟು ಶಕ್ತಿ ತುಂಬುವಂತಹ ಸೇವಾ ಕಾರ್ಯಗಳನ್ನು ಮಾಡುತ್ತಾ, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಕೆ.

ನಿಮ್ಮ ಸಿವಿಸಿ

ಜೆಡಿಎಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಆಚರಿಸಲಾಯಿತು.ಪಕ್ಷದ ಕೋರ್ ಕಮಿಟಿ ಸದಸ...
02/10/2026

ಜೆಡಿಎಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ
ಆಚರಿಸಲಾಯಿತು.

ಪಕ್ಷದ ಕೋರ್ ಕಮಿಟಿ ಸದಸ್ಯರಾದ ಶ್ರೀ ಸಿ ವಿ ಚಂದ್ರಶೇಖರ ಅವರು ಮಾದಕ ಪದಾರ್ಥಗಳ ಮಾರಾಟ ಮತ್ತು ಸೇವನೆಯನ್ನು ನಿರ್ಮೂಲನೆ ಮಾಡುವ ಮೂಲಕ ದೇಶ ಸೇವೆ ಮಾಡಬೇಕೆಂದು ಹೇಳಿದರು.

ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿ ಅವರ ಕೊಡುಗೆಗಳ ಕುರಿತು ಪಕ್ಷದ ಸಾಂಸ್ಕೃತಿಕ ಘಟಕದ ಜಿಲ್ಲಾಧ್ಯಕ್ಷರಾದ ಶ್ರೀ ಮಂಜುನಾಥ ಸೊರಟೂರು ಮಾತನಾಡಿದರು.

ಜಾಗತೀಕರಣ ತಂದಿಟ್ಟ ಸಮಸ್ಯೆಗಳಿಗೆ ಗಾಂಧಿ ಚಿಂತನೆಯಲ್ಲಿ ಉತ್ತರಗಳಿವೆ ಎಂದು ತಾಲೂಕು ಎಸ್ ಸಿ ಅಧ್ಯಕ್ಷರಾದ ಶ್ರೀ ಸುರೇಶ್ ದದಗಲ್ ಹೇಳಿದರು.

ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಗಾಂಧಿ ಮತ್ತು ಶಾಸ್ತ್ರಿ ಅವರು ಒತ್ತು ಕೊಟ್ಟಿದ್ದರು. ಕೃಷಿ ಆಧಾರಿತ ವ್ಯವಸ್ಥೆಯನ್ನು ಬಲಪಡಿಸಿದರೆ ದೇಶ ಮುನ್ನಡೆಯಲು ಸಾಧ್ಯ ಎಂದು ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಮೂರ್ತ್ಯೆಪ್ಪ ಹಿಟ್ನಾಳ ಹೇಳಿದರು.

ಜಿಲ್ಲಾ ಓಬಿಸಿ ಅಧ್ಯಕ್ಷರಾದ ಶ್ರೀ ಕರಿಯಪ್ಪ ಹಾಲವರ್ತಿ ಹಾಗೂ ಜಿಲ್ಲಾ ಖಜಾಂಚಿಯವರಾದ ಶ್ರೀ ಮೌನೇಶ್ ಕಿನ್ನಾಳ ಮಾತನಾಡಿದರು.

ಜಿಲ್ಲಾ ಕೈಗಾರಿಕಾ ಅಧ್ಯಕ್ಷರಾದ ಶ್ರೀ ಮಾರುತಿ ಗೌಡ ಪೊಲೀಸ್ ಪಾಟೀಲ್, ನಗರ ಘಟಕದ ಅಧ್ಯಕ್ಷರಾದ ಶ್ರೀ ಸೋಮನಗೌಡ ಹೊಗರನಾಳ, ನಗರ ಘಟಕದ ಉಪಾಧ್ಯಕ್ಷರಾದ ಶ್ರೀ ಗಂಗಾಧರ್ ವಸ್ತ್ರದ್, ಮಹಿಳಾ ಘಟಕದ ಅಧ್ಯಕ್ಷೆಯಾದ ಶ್ರೀಮತಿ ನಿರ್ಮಲ ಮೇದಾರ,ಮಹಿಳಾ ಘಟಕದ ಓಬಿಸಿ ಅಧ್ಯಕ್ಷೆಯಿದ ಭಾಗ್ಯಶ್ರೀ ಐಹೊಳೆ, ನಗರ ಘಟಕದ ಕಾನೂನು ಅಧ್ಯಕ್ಷರಾದ ಶ್ರೀ ಬಸವರಾಜ್ ಎಸ್, ಪಕ್ಷದ ಹಿರಿಯ ಮುಖಂಡರಾದ ಶ್ರೀ ವಸಂತ ಹಟ್ಟಿ ಮತ್ತು
ಶ್ರೀ ಪ್ರಶಾಂತ ಹಾಜರಿದ್ದರು.

ನಿಮ್ಮ ಸಿವಿಸಿ

ಸರಳತೆ, ಪ್ರಾಮಾಣಿಕತೆ ಮತ್ತು ದೃಢ ನಾಯಕತ್ವದ ಪ್ರತೀಕಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದುಅವರಿಗೆ ಗೌರವಪೂರ್ವಕ ನಮನಗಳು.“ಜೈ ಜವಾನ್ ...
02/10/2026

ಸರಳತೆ, ಪ್ರಾಮಾಣಿಕತೆ ಮತ್ತು ದೃಢ ನಾಯಕತ್ವದ ಪ್ರತೀಕ
ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯಂದು
ಅವರಿಗೆ ಗೌರವಪೂರ್ವಕ ನಮನಗಳು.

“ಜೈ ಜವಾನ್ – ಜೈ ಕಿಸಾನ್”
ಎಂಬ ಅವರ ಸ್ಫೂರ್ತಿದಾಯಕ ಸಂದೇಶ
ದೇಶದ ಸೈನಿಕರು ಮತ್ತು ರೈತರ ಕೊಡುಗೆಯನ್ನು ಸದಾ ಸ್ಮರಿಸುವಂತೆ ಮಾಡುತ್ತದೆ.

ರಾಷ್ಟ್ರ ಸೇವೆಯೇ ಶ್ರೇಷ್ಠ ಸೇವೆ —
ಶಾಸ್ತ್ರಿಜಿಯವರ ಆದರ್ಶಗಳು ಸದಾ ನಮ್ಮನ್ನು ಪ್ರೇರೇಪಿಸಲಿ.

ಸತ್ಯ • ಅಹಿಂಸೆ • ಶಾಂತಿ“ನೀವು ಜಗತ್ತಿನಲ್ಲಿ ಕಾಣಲು ಬಯಸುವ ಬದಲಾವಣೆಯೇ ನೀವಾಗಿ.”ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮ ಜಯಂತಿಯಂದು ಅವರ ಸತ...
02/10/2026

ಸತ್ಯ • ಅಹಿಂಸೆ • ಶಾಂತಿ

“ನೀವು ಜಗತ್ತಿನಲ್ಲಿ ಕಾಣಲು ಬಯಸುವ ಬದಲಾವಣೆಯೇ ನೀವಾಗಿ.”

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮ ಜಯಂತಿಯಂದು ಅವರ ಸತ್ಯ, ಅಹಿಂಸೆ, ಸರಳತೆ ಮತ್ತು ಮಾನವೀಯತೆಯ ಆದರ್ಶಗಳನ್ನು ಸ್ಮರಿಸೋಣ.

ಅವರ ವಿಚಾರಗಳು ನಮ್ಮ ದಾರಿ,
ಅವರ ಆದರ್ಶಗಳು ನಮ್ಮ ಶಕ್ತಿ.

ಗಾಂಧೀ ಜಯಂತಿಯ ಹಾರ್ದಿಕ ಶುಭಾಶಯಗಳು 🇮🇳

01/10/2026

ಜೆಡಿಎಸ್ ಪಕ್ಷದ ಎಲ್ಲಾ ಪದಾಧಿಕಾರಿಗಳೇ, ಕಾರ್ಯಕರ್ತ ಬಂಧುಗಳೇ, ಪಕ್ಷದ ಮುಖಂಡರೇ ಹಾಗೂ ನಾಗರಿಕ ಬಂಧುಗಳೇ,

ದಿನಾಂಕ: 02-10-2026, ಶುಕ್ರವಾರ, ರಾಷ್ಟ್ರಪಿತ
ಮಹಾತ್ಮ ಗಾಂಧೀಜಿಯವರ ಜಯಂತಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಜೀಯವರ ಜಯಂತಿಯನ್ನು
ಜೆಡಿಎಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಆಚರಿಸಲಾಗುತ್ತಿದೆ.

ಸಮಯ: ಬೆಳಿಗ್ಗೆ 8.00 ಗಂಟೆ

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಭಾಷಣ ಮಾಡಲಿದ್ದಾರೆ.

ಆದ್ದರಿಂದ ಪಕ್ಷದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತ ಬಂಧುಗಳು, ಮುಖಂಡರು ಹಾಗೂ ನಾಗರಿಕ ಬಂಧುಗಳು ತಪ್ಪದೇ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

ನಿಮ್ಮ ಸಿವಿಸಿ

ಬೆಂಗಳೂರಿನಲ್ಲಿ ಇಂದು ಖಾಸಗಿ ಹೋಟೆಲ್ ನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಜಂಟಿ ಸಭೆ ಜರುಗಿತು.ಪಕ್ಷಗಳ ಸಂಘಟನೆ, ಸಮನ್ವಯ ಸಮಿತಿಗಳ ರಚನೆ, ಏ...
26/09/2026

ಬೆಂಗಳೂರಿನಲ್ಲಿ ಇಂದು ಖಾಸಗಿ ಹೋಟೆಲ್ ನಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಜಂಟಿ ಸಭೆ ಜರುಗಿತು.

ಪಕ್ಷಗಳ ಸಂಘಟನೆ, ಸಮನ್ವಯ ಸಮಿತಿಗಳ ರಚನೆ, ಏಕೀಕೃತ ಹೋರಾಟ ಹಾಗೂ ಮುಂದೆ ಬರುವ ಎಲ್ಲಾ ಚುನಾವಣೆಗಳಲ್ಲಿ ಎನ್.ಡಿ.ಎ. ಒಕ್ಕೂಟ ಅನುಸರಿಸಬೇಕಾದ ನಿಲುವುಗಳ ಕುರಿತು ಸುಧೀರ್ಘ ಚರ್ಚೆ ಚಿಂತನ - ಮಂಥನ ನಡೆಯಿತು.

ಮೈತ್ರಿ ಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ರಾಜ್ಯಮಟ್ಟದ ಪ್ರಮುಖ ನಾಯಕರು ಸಭೆಯಲ್ಲಿ ಪಾಲ್ಗೊಂಡು ಅಭಿಪ್ರಾಯ ಹಂಚಿಕೊಂಡರು.

ಒಗ್ಗಟ್ಟಿನಿಂದ ಹೋರಾಟಗಳನ್ನು ರೂಪಿಸಿ ಕಾಂಗ್ರೆಸ್ ಸರಕಾರದ ವಿರುದ್ಧ ಜನಾಂದೋಲನ ರೂಪಿಸ ಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.

ಎಲ್ಲ ನಾಯಕರು ಹುಮ್ಮಸ್ಸಿನಿಂದ ಕೆಲಸ ಮಾಡಲು ಪಣ ತೊಟ್ಟರು.

ನಿಮ್ಮ ಸಿವಿಸಿ

ಕನಕಾಪುರ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಮುಕುಂದ ಕಂಪನಿಯ ವಿಸ್ತರಣೆ ಆಗಬಾರದು. ಇದೇ ಸೆಪ್ಟೆಂಬರ್ 29ರಂದು ಆ ಯೋಜನೆಗೊಂಡ ಸಾರ್ವಜನಿಕ ಆಲಿಕೆ ಸಭೆ...
26/09/2026

ಕನಕಾಪುರ ಗ್ರಾಮದಲ್ಲಿ ಯಾವುದೇ ಕಾರಣಕ್ಕೂ ಮುಕುಂದ ಕಂಪನಿಯ ವಿಸ್ತರಣೆ ಆಗಬಾರದು. ಇದೇ ಸೆಪ್ಟೆಂಬರ್ 29ರಂದು ಆ ಯೋಜನೆಗೊಂಡ ಸಾರ್ವಜನಿಕ ಆಲಿಕೆ ಸಭೆ ರದ್ದಾಗಬೇಕು. ಕಂಪನಿಯ ವಿರುದ್ಧದ ಹೋರಾಟವನ್ನು ಶಾಸಕ ಮತ್ತು ಸಂಸದ ವಹಿಸಿಕೊಳ್ಳಬೇಕು ಎಂದು ಒತ್ತಾಯಿಸಿ ನಿನ್ನೆ ನಮ್ಮ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.

ಅದನ್ನು ಇಂದಿನ ಎಲ್ಲಾ ದಿನಪತ್ರಿಕೆಗಳು ವಿವರವಾಗಿ ವರದಿ ಮಾಡಿವೆ.

ಪ್ರಕಟಿಸಿದ ಸಂಪಾದಕೀಯ ಬಳಗಕ್ಕೆ ಧನ್ಯವಾದಗಳು.

ನಿಮ್ಮ ಸಿವಿಸಿ

ಹೊಸಪೇಟೆಯ ಯುವಕರಾದ ಶ್ರೀ ನಿಝಾಮ್, ಶ್ರೀ ಇಬ್ರಾಹಿಂ ಹಾಗೂ ಶ್ರೀ ಅಬ್ಬಾಸ್ ಅವರು ಇಂದು ನಮ್ಮ ಕಚೇರಿಗೆ ಬಂದು ನನಗೆ ಭಾರತರತ್ನ ಡಾ. ಬಾಬಾ ಸಾಹೇಬ್ ...
25/09/2026

ಹೊಸಪೇಟೆಯ ಯುವಕರಾದ ಶ್ರೀ ನಿಝಾಮ್, ಶ್ರೀ ಇಬ್ರಾಹಿಂ ಹಾಗೂ ಶ್ರೀ ಅಬ್ಬಾಸ್ ಅವರು ಇಂದು ನಮ್ಮ ಕಚೇರಿಗೆ ಬಂದು ನನಗೆ ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ನೀಡಿ ಆತ್ಮೀಯವಾಗಿ ಗೌರವಿಸಿದರು.

ಕಳೆದ ವಾರ ಕೊಪ್ಪಳವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಎರಡು ದಿನಗಳ ಪಾದಯಾತ್ರೆ 'ನ್ಯಾಯಕ್ಕಾಗಿ ನಡಿಗೆ' ಹಮ್ಮಿಕೊಂಡಿದ್ದೆವು.

ನಮ್ಮ ಬೇಡಿಕೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದೆವು. ರೈತರ ಮತ್ತು ಜನಸಾಮಾನ್ಯರ ಧನಿಯಾಗಿ ಹೋರಾಟ ಮಾಡಿದ್ದಕ್ಕಾಗಿ ಈ ಮೂವರು ಹೊಸಪೇಟೆಯಿಂದ ಆಗಮಿಸಿ ಸತ್ಕರಿಸಿದರು.

ಅವರಿಗೆ ಧನ್ಯವಾದಗಳು.

ಈ ಸಂದರ್ಭದಲ್ಲಿ ನಮ್ಮ ಕ್ರೀಡಾ ವಿಭಾಗದ ಅಧ್ಯಕ್ಷರಾದ
ಶ್ರೀ ಸೈಯದ್ ಮೆಹಮೂದ್ ಹುಸೇನಿ ಬಲ್ಲೆ ಅವರು ಹಾಜರಿದ್ದರು.

ನಿಮ್ಮ ಸಿವಿಸಿ

ಅಗಳಕೇರಾ ಗ್ರಾಮದ ಶ್ರೀ ದ್ಯಾಮವ್ವ ದೇವಿ ನೂತನ ರಜತ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಇಂದು ಜರುಗಿತು. ಅದರಲ್ಲಿ ಭಾಗವಹಿಸಿ ತಾಯಿಯ ಆಶೀರ್ವಾದ ಪ...
25/09/2026

ಅಗಳಕೇರಾ ಗ್ರಾಮದ ಶ್ರೀ ದ್ಯಾಮವ್ವ ದೇವಿ ನೂತನ ರಜತ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮ ಇಂದು ಜರುಗಿತು. ಅದರಲ್ಲಿ ಭಾಗವಹಿಸಿ ತಾಯಿಯ ಆಶೀರ್ವಾದ ಪಡೆದೆ.

ವಿವಿಧ ಮಠಗಳ ಪೂಜ್ಯರು, ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಮೂರ್ತೆಪ್ಪ ಹಿಟ್ನಾಳ ಅವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶರಣಪ್ಪ ಜಡಿ ಅವರು ಸೇರಿದಂತೆ ಜೆಡಿಎಸ್ ಪಕ್ಷದ ಪ್ರಮುಖರು, ಕಾರ್ಯಕರ್ತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ನಿಮ್ಮ ಸಿವಿಸಿ

ನಮ್ಮ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಇಂದು ಅತ್ಯಂತ ಮಹತ್ವದ ಸುದ್ದಿಗೋಷ್ಠಿ ನಡೆಯಿತು. ಸುದ್ದಿಗೋಷ್ಠಿಯ ಸಂಕ್ಷಿಪ್ತ ವಿವರ:ಕನಕಾಪುರದಲ್ಲಿರುವ ಮೆ. ಮ...
25/09/2026

ನಮ್ಮ ಪಕ್ಷದ ಜಿಲ್ಲಾ ಕಛೇರಿಯಲ್ಲಿ ಇಂದು ಅತ್ಯಂತ ಮಹತ್ವದ ಸುದ್ದಿಗೋಷ್ಠಿ ನಡೆಯಿತು.

ಸುದ್ದಿಗೋಷ್ಠಿಯ ಸಂಕ್ಷಿಪ್ತ ವಿವರ:

ಕನಕಾಪುರದಲ್ಲಿರುವ ಮೆ. ಮುಕುಂದ ಸುಮಿ ಸ್ಪೆಷಲ್ ಸ್ಟೀಲ್ ಲಿಮಿಟೆಡ್ ಕಂಪನಿ ಮತ್ತೊಂದು ಘಟಕ ನಿರ್ಮಿಸಲು ಸಿದ್ಧತೆ ನಡೆಸಿದೆ.

ಕಂಪನಿಯ ವಿಸ್ತರಣೆಗಾಗಿ ಇದೇ ಸೆಪ್ಟೆಂಬರ್ 29ರಂದು ಕರೆಯಲಾಗಿರುವ 'ಪರಿಸರ ಸಾರ್ವಜನಿಕ ಆಲಿಕೆ ಸಭೆ'ಯನ್ನು ರದ್ದುಪಡಿಸಬೇಕು ಹಾಗೂ ವಿಸ್ತರಣೆಗಾಗಿ ಕಂಪನಿ ಸಲ್ಲಿಸಿರುವ ಕರಡು ಪ್ರತಿಯನ್ನು ತಿರಸ್ಕರಿಸಬೇಕು.

ಮುಂದಿನ ದಿನಗಳಲ್ಲಿ ಜೀವಿಗಳು ಮತ್ತು ಕೃಷಿಯನ್ನು ನಿರ್ನಾಮ ಮಾಡಿ ನರಕವನ್ನೇ ಸೃಷ್ಟಿಸುವ ಈ ಘಟಕದ ವಿಸ್ತರಣೆ ಬೇಡ.

ಕೊಪ್ಪಳದ ಪರಿಸರ, ಸಾರ್ವಜನಿಕರ ಬೇಡಿಕೆ, ನೂರಾರು ದಿನಗಳ ನಿರಂತರ ಪ್ರತಿಭಟನೆ ಹಾಗೂ ಧಾರ್ಮಿಕ ಮುಖಂಡರ ಮನವಿಯನ್ನು ನಿರ್ಲಕ್ಷಿಸಿ ಈ ಯೋಜನೆಯನ್ನು ನಮ್ಮ ಮೇಲೆ ಹೇರಲಾಗುತ್ತಿದೆ.

ಆ ಕಂಪನಿ ಸಲ್ಲಿಸಿರುವ ಕರಡು ವರದಿಯಲ್ಲಿ ಒಟ್ಟು 11 ಗಂಭೀರ ಸ್ವರೂಪದ ಪ್ರಮಾಣಗಳು ಹಾಗೂ ಕಾನೂನುಗಳ ಉಲ್ಲಂಘನೆಗಳಾಗಿವೆ.

ಇಲ್ಲಿನ ಜನರನ್ನು ವಂಚಿಸಿ ಅನೈತಿಕ ಮಾರ್ಗದ ಮೂಲಕ ವಿಮೋಚನಾ ಪತ್ರವನ್ನು ಪಡೆಯಲು ದೊಡ್ಡಮಟ್ಟದ ಹುನ್ನಾರ ನಡೆಯುತ್ತಿದೆ. ಈ ಹುನ್ನಾರದಲ್ಲಿ ಕೊಪ್ಪಳದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ಪಾಲುದಾರರು.

ಕೊಪ್ಪಳದ ಶಾಸಕರು, ಸಂಸದರು ಮತ್ತು ಸಚಿವರು ಇದರ ನೇತೃತ್ವ ವಹಿಸಬೇಕು. ಮತ್ತೊಂದು ಘಟಕ ತಲೆಯೆತ್ತದಂತೆ ಅವರು ವಿರೋಧ ವ್ಯಕ್ತಪಡಿಸಬೇಕು. ಇಲ್ಲಿಯ ಜನರು ಜೀವಿಗಳು ಹಾಗೂ ಪರಿಸರ ಉಳಿಸುವ ಜವಾಬ್ದಾರಿ ಮತ್ತು ಕರ್ತವ್ಯ ಅವರದು.

ಕಂಪನಿಯ ವಿರುದ್ಧ ಹಾಗೂ ತಪ್ಪಿತಸ್ಥ ಪರಿಸರ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮೂರ್ತೆಪ್ಪ ಗಿಣಿಗೇರಿ, ಜಿಲ್ಲಾ ಒಬಿಸಿ ಅಧ್ಯಕ್ಷ ಕರಿಯಪ್ಪ ಹಾಲವರ್ತಿ, ಜಿಲ್ಲಾ ಎಸ್ ಟಿ ಘಟಕ ಅಧ್ಯಕ್ಷ ರಮೇಶ ಡಂಬ್ರಳ್ಳಿ, ತಾಲೂಕು ಅಧ್ಯಕ್ಷ ವಿರೇಶಗೌಡ್ರ ದಳಪತಿ, ನಗ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜೆಡಿ ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ ಏಣಿಗಿ ಉಪಸ್ಥಿತರಿದ್ದರು.

ನಿಮ್ಮ ಸಿವಿಸಿ

Address

Cvc Farm House Next To Padkhi Township Kustagi Road Koppal
Koppal
583231

Website

Alerts

Be the first to know and let us send you an email when CV Chandrashekar posts news and promotions. Your email address will not be used for any other purpose, and you can unsubscribe at any time.

Contact The Organization

Send a message to CV Chandrashekar:

Shortcuts

Share

Category