28/09/2026
ತುರ್ತು ಕರೆ: ಅನ್ನಭಾಗ್ಯ ಅಕ್ಕಿ ಹಗರಣದ ವಿರುದ್ಧ ಪ್ರತಿಭಟನೆ!
ನಮಸ್ಕಾರ ಆಮ್ ಆದ್ಮಿ ಪಕ್ಷದ (AAP) ಪದಾಧಿಕಾರಿಗಳೇ ಹಾಗೂ ಕಾರ್ಯಕರ್ತರೇ,
ನಿನ್ನೆ ಕುಂದಗೋಳದಲ್ಲಿ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯ ಅಕ್ರಮ ದಂಧೆ ಬಯಲಾಗಿದ್ದು, ಅಕ್ರಮವಾಗಿ ಸಾಗಿಸುತ್ತಿದ್ದ ಪೂರ್ಣ ಲೋಡ್ ಅಕ್ಕಿಯ ಲಾರಿಯನ್ನು ಪತ್ತೆಹಚ್ಚಲಾಗಿದೆ. ಬಡವರ ಹಕ್ಕಿನ ಅನ್ನವನ್ನು ಲೂಟಿ ಮಾಡುತ್ತಿರುವ ಭ್ರಷ್ಟರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ, ಇಂದು ನಮ್ಮ ಆಮ್ ಆದ್ಮಿ ಪಕ್ಷದ ವತಿಯಿಂದ ಕುಂದಗೋಳ ತಹಶೀಲ್ದಾರ್ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ದಿನಾಂಕ: ಇಂದು, ಸೋಮವಾರ (28-09-2026)
ಸಮಯ: ಬೆಳಗ್ಗೆ 11:00 ಗಂಟೆಗೆ
ಸ್ಥಳ: ತಹಶೀಲ್ದಾರ್ ಕಾರ್ಯಾಲಯ, ಕುಂದಗೋಳ
ಬಡವರ ಪರ ಧ್ವನಿ ಎತ್ತಲು ನಮ್ಮ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.
ಇಂಕ್ವಿಲಾಬ್ ಜಿಂದಾಬಾದ್!
ಇರ್ಷಾದಅಹ್ಮದ ಸಂಶಿ,
ತಾಲೂಕು ಅಧ್ಯಕ್ಷರು ಕುಂದಗೋಳ
ಆಮ್ ಆದ್ಮಿ ಪಕ್ಷ,
ಕುಂದಗೋಳ ಘಟಕ.
+91 8123930026