02/10/2026
🏗️ ಮದ್ದೂರು ನಗರ ಅಭಿವೃದ್ಧಿಗೆ ಮತ್ತೊಂದು ಹೆಜ್ಜೆ
₹1.70 ಕೋಟಿ ವೆಚ್ಚದಲ್ಲಿ ತಾಲೂಕು ಪಂಚಾಯಿತಿ ಅಂಗಡಿ ಮಳಿಗೆಗಳ (ವಾಣಿಜ್ಯ ಸಂಕೀರ್ಣ) ನಿರ್ಮಾಣಕ್ಕೆ ಭೂಮಿಪೂಜೆ
ಮದ್ದೂರು ನಗರದ ತಾಲೂಕು ಕಚೇರಿ ಬಳಿ ತಾಲೂಕು ಪಂಚಾಯಿತಿಗೆ ಸೇರಿದ ಹಲವು ವರ್ಷಗಳಿಂದ ಹಳೆಯದಾಗಿದ್ದ ಅಂಗಡಿ ಮಳಿಗೆಗಳ ಜಾಗದಲ್ಲಿ ₹1.70 ಕೋಟಿ ವೆಚ್ಚದಲ್ಲಿ ನೂತನ ಅಂಗಡಿ ಮಳಿಗೆಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಹಲವು ದಶಕಗಳಿಂದ ಹಳೆಯದಾಗಿದ್ದ ಅಂಗಡಿ ಮಳಿಗೆಗಳನ್ನು ಆಧುನಿಕ ಹಾಗೂ ಸುಸಜ್ಜಿತವಾಗಿ ನಿರ್ಮಿಸುವುದರಿಂದ ವ್ಯಾಪಾರಸ್ಥರಿಗೆ ಉತ್ತಮ ಸೌಲಭ್ಯ ದೊರೆಯುವುದರ ಜೊತೆಗೆ, ತಾಲೂಕು ಪಂಚಾಯಿತಿಗೂ ನಿರಂತರ ಆದಾಯದ ಮೂಲ ಸೃಷ್ಟಿಯಾಗಲಿದೆ.
ಮದ್ದೂರು ನಗರದ ಅಭಿವೃದ್ಧಿಗೆ ಅಗತ್ಯವಿರುವ ಮೂಲಸೌಕರ್ಯ ಕಾಮಗಾರಿಗಳಿಗೆ ಆದ್ಯತೆ ನೀಡುವ ಮೂಲಕ, ಸಾರ್ವಜನಿಕರಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಮಮತಾ ಶಂಕರೇಗೌಡ, TAPCMS ನಿರ್ದೇಶಕರಾದ ಅಮೂಲ್ಯ, ಮರಿದೇವರು, ರಾಘವ್, ಮುಖಂಡರಾದ ಆರಿಫ್, ಇನಾಯತ್ ಖಾನ್, ಮಹದೇವಯ್ಯ, ನಟರಾಜು, ನಗರಸಭೆ ಮಾಜಿ ಸದಸ್ಯರಾದ ಪ್ರಸನ್ನಕುಮಾರ್, ಸಿದ್ದರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಮದ್ದೂರು ನಗರದ ಸಮಗ್ರ ಅಭಿವೃದ್ಧಿಯೇ ನಮ್ಮ ಮುಖ್ಯ ಗುರಿ. ಅಭಿವೃದ್ಧಿಯ ಪಯಣ ನಿರಂತರವಾಗಿರಲಿ.