28/08/2026
ಬೆಂಗ್ರೆ ಪ್ರದೇಶದಲ್ಲಿ ಪದೇಪದೇ ಉಂಟಾಗುತ್ತಿರುವ ವಿದ್ಯುತ್ ವ್ಯತ್ಯಯದಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ, ಎಸ್‌ಡಿಪಿಐ ಬೆಂಗ್ರೆ ವಾರ್ಡ್ ಸಮಿತಿಯ ವತಿಯಿಂದ MESCOM ಕಾವೂರು ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಅವರಿಗೆ ಲಿಖಿತ ಮನವಿ ಸಲ್ಲಿಸಲಾಯಿತು. ಇತ್ತೀಚೆಗೆ ಸುಮಾರು 24 ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರೂ ಸೂಕ್ತ ಸ್ಪಂದನೆ ಸಿಗದಿರುವುದನ್ನು ಅಧಿಕಾರಿಗಳ ಗಮನಕ್ಕೆ ತಂದ ಸಮಿತಿಯು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ ಸಾರ್ವಜನಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಒತ್ತಾಯಿಸಿತು.
ಈ ಸಂದರ್ಭದಲ್ಲಿ ಬೆಂಗ್ರೆ ವಾರ್ಡ್ ಅಧ್ಯಕ್ಷರಾದ ಸಲೀಂ ಬೆಂಗ್ರೆ, ಉಪಾಧ್ಯಕ್ಷರಾದ ಹಮೀದ್ ಬೆಂಗ್ರೆ , ಮುಖಂಡರಾದ ಸಾದಾಬ್, ಮುಝೃನ್ ಮತ್ತು ಅಸ್ವಿರ್ ಉಪಸ್ಥಿತರಿದ್ದರು.