16/09/2026
ಮಾನ್ವಿ: AIMIM ಪಕ್ಷದ ವಾರ್ಡ್ ನಂ. 10ರ ನೂತನ ಕಮಿಟಿ ರಚನೆ
ಮಾನ್ವಿ ಪಟ್ಟಣದ ಎಐಎಂಐಎಂ ಪಕ್ಷದ ಕಾರ್ಯಾಲಯದಲ್ಲಿ ಇಂದು ತಾಲೂಕು ಅಧ್ಯಕ್ಷರಾದ ಶ್ರೀ ನಾಸೀರ್ ಖುರೇಷಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ವಾರ್ಡ್ ನಂ.10ರ ಅಧ್ಯಕ್ಷರಾದ ಶ್ರೀ ಭೀಮೇಶ್ ಅವರ ನೇತೃತ್ವದಲ್ಲಿ ವಾರ್ಡ್ ಕಮಿಟಿಯನ್ನು ರಚಿಸಲಾಯಿತು.
ನೂತನ ಪದಾಧಿಕಾರಿಗಳು:
🔹 ಜಲೀಲ್ ಪಾಷಾ – ಪ್ರಧಾನ ಕಾರ್ಯದರ್ಶಿ
🔹 ಸತ್ತಾರ್ – ಸಹ ಕಾರ್ಯದರ್ಶಿ
🔹 ನದೀಮ್ ಬಾಬಾ – ಖಜಾಂಚಿ
🔹 ಬಾಲರಾಜ್ – ಸಹ ಕಾರ್ಯದರ್ಶಿ
🔹 ಶೇಖರ್ – ಸಹ ಕಾರ್ಯದರ್ಶಿ
🔹 ಮಂಜುನಾಥ್ – ಸಹ ಕಾರ್ಯದರ್ಶಿ
🔹 ಕಿರಣ್ – ಕಾರ್ಯಕಾರಿಣಿ ಸಮಿತಿ ಸದಸ್ಯ
🔹 ಚೆನ್ನಯ್ಯ – ಕಾರ್ಯಕಾರಿಣಿ ಸಮಿತಿ ಸದಸ್ಯ
ನೂತನ ಪದಾಧಿಕಾರಿಗಳಿಗೆ ತಾಲೂಕು ಅಧ್ಯಕ್ಷರಾದ ನಾಸೀರ್ ಖುರೇಷಿ ಅವರು ಅಭಿನಂದನೆ ಸಲ್ಲಿಸಿ, ಪಕ್ಷದ ಸಂಘಟನೆ ಬಲಪಡಿಸಲು ಸಕ್ರಿಯವಾಗಿ ಶ್ರಮಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
#ಎಐಎಂಐಎಂ #ಮಾನ್ವಿ #ವಾರ್ಡ್10 #ನೂತನಕಮಿಟಿ #ಪಕ್ಷಸಂಘಟನೆ #ನಾಸೀರ್ಖುರೇಷಿ #ಭೀಮೇಶ್