28/07/2026
🎗️ ರೋಗಿಗಳ ಸೇವೆ ಪ್ರಚಾರಕ್ಕಾಗಿ ಅಲ್ಲ, ಮಾನವೀಯತೆಗಾಗಿ ಇರಲಿ.
ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವಾಗ ಅವರ ಫೋಟೋ ಹಾಗೂ ವಿಡಿಯೋಗಳನ್ನು ಅವರ ಅನುಮತಿ ಇಲ್ಲದೆ Facebook, Instagram, WhatsApp ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಅವರ ಗೌರವ ಮತ್ತು ಗೌಪ್ಯತೆಗೆ ಧಕ್ಕೆ ಉಂಟುಮಾಡುತ್ತದೆ.
ಸೇವೆ ಎಂದರೆ ಪ್ರಚಾರವಲ್ಲ. ರೋಗಿಗಳ ಹಕ್ಕುಗಳನ್ನು ಗೌರವಿಸಿ. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗಳು ಈ ಕುರಿತು ಸ್ಪಷ್ಟ ಮಾರ್ಗಸೂಚಿ ರೂಪಿಸಿ, ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾನವ ಹಕ್ಕುಗಳ ರಕ್ಷಣಾ ಸಮಿತಿ ಆರ್ಗನೈಜೇಷನ್ ಆಗ್ರಹಿಸುತ್ತದೆ.
"ಮಾನವೀಯತೆ ಉಳಿಯಲಿ... ಪ್ರಚಾರ ನಿಲ್ಲಲಿ!"