AIDSO MYSORE

AIDSO MYSORE

Share

Contact information, map and directions, contact form, opening hours, services, ratings, photos, videos and announcements from AIDSO MYSORE, Social service, Mysore.

Photos from AIDSO MYSORE's post 24/04/2026

ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮದ ಮುಖವಾಡದಲ್ಲಿ ಕನ್ನಡ ಮಾಧ್ಯಮವನ್ನು ಕಿತ್ತುಹಾಕಿ ಇಂಗ್ಲೀಷನ್ನು ಹೇರುತ್ತಿರುವ ರಾಜ್ಯ ಸರ್ಕಾರದ ಅವೈಜ್ಞಾನಿಕ ಹಾಗೂ ಜನವಿರೋಧಿ ನಿರ್ಧಾರವನ್ನು ಖಂಡಿಸಿ ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ AIDSO ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.

Photos from AIDSO MYSORE's post 24/04/2026

ಪತ್ರಿಕಾ ಪ್ರಕಟಣೆ

ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮದ ಮುಖವಾಡದಲ್ಲಿ ಕನ್ನಡ ಮಾಧ್ಯಮವನ್ನು ಕಿತ್ತುಹಾಕಿ ಇಂಗ್ಲೀಷನ್ನು ಹೇರುತ್ತಿರುವ ರಾಜ್ಯ ಸರ್ಕಾರದ ಅವೈಜ್ಞಾನಿಕ ಹಾಗೂ ಜನವಿರೋಧಿ ನಿರ್ಧಾರವನ್ನು ಖಂಡಿಸಿ ಮೈಸೂರಿನ ರಾಮಸ್ವಾಮಿ ವೃತ್ತದ ಬಳಿ AIDSO ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.

17/04/2026

*_"ತನ್ನ ಕಣ್ಣೆದುರೇ ಅನ್ಯಾಯ ನಡೆಯುತ್ತಿದ್ದರೂ ಅದನ್ನು ತಡೆಯಲು ಪ್ರಯತ್ನಿಸದ ವ್ಯಕ್ತಿಯೊಬ್ಬ ತನ್ನ ಮಾನವತ್ವಕ್ಕೆ ಮಾತ್ರವಲ್ಲದೆ, ತುಳಿತಕ್ಕೊಳಗಾದ ಪ್ರತಿಯೊಬ್ಬದ ಮಾನವತ್ವಕ್ಕೆ ಅಪಮಾನ ಎಸಗುತ್ತಾನೆ. ಅನ್ಯಾಯವಾಗದಂತೆ ತಡೆಯುವ ಪ್ರಯತ್ನದಲ್ಲಿ ತನ್ನ ಜೀವನವನ್ನೇ ಅಪಾಯಕ್ಕೆ ಒಡ್ಡಿಕೊಳ್ಳುವ, ಜೈಲು ಸೇರುವ ಅಥವಾ ಕಿರುಕುಳ ಅನುಭವಿಸುವ ವ್ಯಕ್ತಿಯೊಬ್ಬನು, ಆ ತ್ಯಾಗ ಮತ್ತು ಬಲಿದಾನದ ಮೂಲಕ ಮಾನವತ್ವದ ಹೆಮ್ಮೆಯ ಸ್ಥಾನವನ್ನು ಗಳಿಸುತ್ತಾನೆ. ಶಾಲೆ,ಕಾಲೇಜು, ಬೀದಿ, ಮನೆ ಸೇರಿದಂತೆ ಯಾವುದೇ ಜಾಗದಲ್ಲಿ ದಬ್ಬಾಳಿಕೆ, ಅನ್ಯಾಯ ಮತ್ತು ದುರ್ನಡತೆ ಕಂಡುಬಂದರೂ ಅದರ ವಿರುದ್ದ ಧೈರ್ಯವಾಗಿ ಧ್ವನಿಯೆತ್ತಿ ....ನನ್ನ ಈ ಸಾಧಾರಣ ಬದುಕಿನಲ್ಲಿ ನಾನೇನಾದರೂ ಅಲ್ಪ ಸಾಧನೆ ಮಾಡಲು ಸಾಧ್ಯವಾಗಿದ್ದರೆ, ಅದು ಈ ಪಕ್ರಿಯೆಯ ಮೂಲಕ ಮಾತ್ರವೇ"_*

- ಸುಭಾಷ್ ಚಂದ್ರ ಬೋಸ್

Photos from AIDSO MYSORE's post 10/04/2026

ಜನರ ಶಿಕ್ಷಣದ ಹಕ್ಕು ಕಿತ್ತುಕೊಂಡು, ಗ್ಯಾರಂಟಿ ಕೊಟ್ಟ ಕಾಂಗ್ರೆಸ್ ಸರ್ಕಾರ!- ಕೆ. ಮರುಳಸಿದ್ದಪ್ಪ

'ನಮ್ಮೂರ ಶಾಲೆ ಉಳಿಸಿ' 'ನಮ್ಮೂರ ಶಾಲೆ ನಮ್ಮ ಅಸ್ತಿತ್ವ', ಎಂಬ ಘೋಷಣೆಯೊಂದಿಗೆ ಇಂದು ನಗರದ ಫ್ರೀಡಂ ಪಾರ್ಕಿನಲ್ಲಿ ರಾಜ್ಯ ಮಟ್ಟದ ಬೃಹತ್ ಜನ ಸಮಾವೇಶದಲ್ಲಿ ಹಿರಿಯ ಸಾಹಿತಿಗಳಾದ ಕೆ. ಮರುಳಸಿದ್ದಪ್ಪ ಮಾತನಾಡಿದರು.

ನಮ್ಮನ್ನು ಆಳುತ್ತಿರುವ ಎಲ್ಲಾ ಸರ್ಕಾರಗಳು ಶ್ರೀಮಂತ ವ್ಯಾಪಾರಿಗಳ ಹಿತಾಸಕ್ತಿಯನ್ನು ಕಾಪಾಡುತ್ತಾ, ಬಡವರನ್ನು ಕಡೆಗಣಿಸುತ್ತಲೇ ಬಂದಿವೆ. ಶಿಕ್ಷಣ, ಆರೋಗ್ಯ ಹಾಗೂ ಉದ್ಯೋಗದ ಜನರ ಹಕ್ಕು ಕಿತ್ತುಕೊಂಡು ಗ್ಯಾರಂಟಿ ಕೊಟ್ಟು ಜನರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದೆ. ಸರ್ಕಾರಿ ಶಾಲೆಗಳ ಮಹತ್ವ ಅರಿಯದ ಸರ್ಕಾರದ ವಿರುದ್ಧ ನಮ್ಮೂರ ಶಾಲೆ ಉಳಿಸಲು ಒಂದಾಗಿ ಹೋರಾಡೋಣ ಎಂದರು.

ಸಮಾವೇಶದಲ್ಲಿ ಅಭಿವೃದ್ಧಿ ಶಿಕ್ಷಣ ತಜ್ಞರಾದ ನಿರಂಜನಾರಾಧ್ಯ ಮಾತನಾಡುತ್ತಾ, ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ NEP - 2020 ನ್ನು ನಾವು ಸಂಪೂರ್ಣವಾಗಿ ಧಿಕ್ಕರಿಸಿ,
ಎಸ್.ಈ.ಪಿ ತರುವ ಮೂಲಕ ಶಿಕ್ಷಣವನ್ನು ಬಲಪಡಿಸುತ್ತೇವೆ ಎಂದಿದ್ದರು. ಆದರೆ ಇಂದು ಅವರೇ ಅಪ್ರಜಾತಾಂತ್ರಿಕವಾಗಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಜಾರಿಗೆ ತಂದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

ಸಂಸ್ಕೃತಿ ಚಿಂತಕರು ಮತ್ತು ಶಿಕ್ಷಣ ತಜ್ಞರಾದ, ಪ್ರೊ ಎಸ್. ಜಿ ಸಿದ್ದರಾಮಯ್ಯ ಅವರು ಮಾತನಾಡಿ, ಹಳ್ಳಿಗಾಡಿನ ಮಕ್ಕಳು ತಮ್ಮ ಊರಿನ ಸರ್ಕಾರಿ ಶಾಲೆ ಉಳಿಸಿಕೊಳ್ಳಲು ಹೋರಾಟಕ್ಕೆ ಬಂದಿದ್ದಾರೆ. ಮಕ್ಕಳನ್ನು ಈ ಸ್ಥಿತಿಗೆ ತಳ್ಳಿರುವುದು ಸರ್ಕಾರಕ್ಕೆ ಗೌರವ ತರುವ ವಿಷಯವಲ್ಲ. ಒಬ್ಬೊಬ್ಬ ಮಂತ್ರಿಯು ಖಾಸಗಿ ಶಾಲೆಗಳನ್ನು ತೆರೆಯುವ ಮೂಲಕ ಶಿಕ್ಷಣವನ್ನು ದರೋಡೆ ಮಾಡುತ್ತಿದ್ದಾರೆ. ಕೆಪಿಎಸ್ ಯೋಜನೆ ಮೂಲಕ ಬಡ ಮಕ್ಕಳ ಶಿಕ್ಷಣದ ಕನಸನ್ನು ಕಿತ್ತುಕೊಳ್ಳುವ ನೀತಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿದೆ. ಸರ್ಕಾರದ ಈ ನಡೆಯನ್ನು ವಿರೋಧಿಸಿ ಹಳ್ಳಿಗಾಡಿನ ಮಕ್ಕಳು ಹೋರಾಟಕ್ಕೆ ಬಂದಿದ್ದು, ಅದನ್ನು ನೋಡಿದರೆ ಕಣ್ಣಲ್ಲಿ ನೀರಲ್ಲ ರಕ್ತ ಬರುತ್ತದೆ. ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚಿದರೂ ಹಳ್ಳಿಗಾಡಿನ ಮಕ್ಕಳು; ಅದರಲ್ಲೂ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಈ ಕನಿಷ್ಠ ಜ್ಞಾನದ ಅರಿವಿಲ್ಲದ ರಾಜ್ಯ ಸರ್ಕಾರದ ಶಾಲೆ ಮುಚ್ಚುವ ಕ್ರಮ ಅತ್ಯಂತ ಖಂಡನೀಯ ಮತ್ತು ನಾಚಿಕೆಗೇಡು ಎಂದು ಖಂಡಿಸಿದರು.

AIDSO ಅಖಿಲ ಭಾರತ ಕೌನ್ಸಿಲ್ ನ ಜಂಟಿ ಕಾರ್ಯದರ್ಶಿಗಳಾದ ಸಿದ್ಧಾರ್ಥ್ ರಥ್ ರವರು ಮಾತನಾಡಿ, ವಿವಿಧ ಹೆಸರುಗಳ ಅಡಿಯಲ್ಲಿ ಸರ್ಕಾರಿ ಶಾಲೆಗಳನ್ನು ವ್ಯವಸ್ಥಿತವಾಗಿ ಮುಚ್ಚುವ ಮೂಲಕ ಬಡ ಮಕ್ಕಳ ಶಿಕ್ಷಣ ಮತ್ತು ಅವರ ಭವಿಷ್ಯದ ಕನಸುಗಳನ್ನು ಹೊಸಕಿ ಹಾಕುವ ಹುನ್ನಾರ ದೇಶಾದ್ಯಂತ ನಡೆಯುತ್ತಿದೆ. ಒರಿಸ್ಸಾದಲ್ಲಿ 14,379 ಶಾಲೆಗಳ ವಿಲೀನ ಪ್ರಕ್ರಿಯೆ ಇದಕ್ಕೆ ತಾಜಾ ಉದಾಹರಣೆಯಾಗಿದ್ದು, ಇದು ಕೇವಲ ಶೈಕ್ಷಣಿಕ ಅನ್ಯಾಯವಲ್ಲದೆ ನಮ್ಮ ಸಂಸ್ಕೃತಿಯ ಮೇಲಿನ ಭಯಾನಕ ದಾಳಿಯೂ ಹೌದು. ಮಹಾನ್ ವ್ಯಕ್ತಿಗಳ ಆಶಯಗಳನ್ನು ನನಸಾಗಿಸಲು ಸಜ್ಜಾಗಿರುವ ನಾವು ಚರಿತ್ರೆಯಿಂದ ಪಾಠಕಲಿಯಬೇಕು. ಆಳುವವರು ಶ್ರಮಿಕ ವರ್ಗವನ್ನು ತುಳಿಯಲು ಯತ್ನಿಸಿದಾಗಲೆಲ್ಲ ಸಂಘಟಿತ ಹೋರಾಟವೇ ಅನ್ಯಾಯದ ವಿರುದ್ಧ ಜಯಗಳಿಸಿದೆ. ಆದ್ದರಿಂದ, ಸರ್ಕಾರಿ ಶಾಲೆಗಳನ್ನು ಕೊಲ್ಲುವ KPS ಮ್ಯಾಗ್ನೆಟ್ ಯೋಜನೆಯ ವಿರುದ್ಧದ ಈ ಹೋರಾಟವು ಐತಿಹಾಸಿಕ ವಿಜಯ ಸಾಧಿಸಿಯೇ ತೀರುತ್ತದೆ ಎಂದು ಕರ್ನಾಟಕದ ವಿದ್ಯಾರ್ಥಿಗಳು ಪೋಷಕರು ಹಾಗೂ ಎಲ್ಲಾ ಹೋರಾಟಗಾರರಿಗೆ ಕ್ರಾಂತಿಕಾರಿ ಅಭಿನಂದಿಸಿದರು.

"ನೆಗಡಿ ಬಂದಾಗ ಮೂಗನ್ನು ಕತ್ತರಿಸುವ ಕ್ರಮ ಸರಿಯಲ್ಲ. ಸರ್ಕಾರವು ಸರ್ಕಾರಿ ಶಾಲೆಗೆ ಮಕ್ಕಳು ಬಾರದೇ ಇರುವುದಕ್ಕೆ ಪರಿಹಾರ ಹುಡುಕಬೇಕೇ ಹೊರತು ಸರ್ಕಾರಿ ಶಾಲೆಗಳನ್ನೇ ಮುಚ್ಚುವುದಲ್ಲ" -ಪ್ರೊ. ಎ ಮುರಿಗೆಪ್ಪ, ಹಂಪಿ ಕನ್ನಡ ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿಗಳು.

"NEP ವಿರೋಧಿಸಿದ ಸರ್ಕಾರವು ಅದರ ಆತಂಕಕಾರಿ ಅಂಶಗಳನ್ನೇ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಮೂಲಕ ಜಾರಿಗೊಳಿಸಿರುವುದು ವಿಷಾದನೀಯ"-ಪ್ರೊ. ಸಬಿಹಾ ಭೂಮಿಗೌಡ,ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು.

"ಶಾಲೆಯಲ್ಲಿ ಕುಳಿತು ಓದಬೇಕಾದ ಮಕ್ಕಳು ಇಂದು ತಮ್ಮ ಶಾಲೆಗಾಗಿ ಬೀದಿಗಿಳಿದಿರುವುದಕ್ಕಿಂತ ದೊಡ್ಡ ದುರಂತ ಇನ್ಯಾವುದೂ ಇಲ್ಲ".-ಗುರುಪ್ರಸಾದ್ ಕೆರಗೋಡು, ದಲಿತ ಸಂಘರ್ಷ ಸಮಿತಿ ಸಂಚಾಲಕರು.

"ನಮ್ಮನ್ನಾಳುತ್ತಿರುವ ಸರ್ಕಾರಗಳು ಬಡವರ ಪರವಾಗಿ ನೀತಿಗಳನ್ನು ತರುತ್ತಾರೆಂದು ನಂಬಲಾಗುವುದಿಲ್ಲ. ನಮ್ಮ ಹಕ್ಕಿಗಾಗಿ ಬೀದಿಗಿಳಿದು ಮಾಡುವ ಹೋರಾಟಗಳೇ ಏಕೈಕ ದಾರಿ".-ಬಡಗಲಪುರ ನಾಗೇಂದ್ರ,ಕರ್ನಾಟಕ ರಾಜ್ಯ ರೈತ ಸಂಘಟನೆ ಮುಖಂಡರು.

"ಎಲ್ಲೆಲ್ಲಿ ಕೋಳಿ ಕೂಗುತ್ತದೆಯೋ ಅಲ್ಲಲ್ಲಿ ಸರ್ಕಾರಿ ಶಾಲೆಗಳಿರಬೇಕು. ಸರಕಾರಿ ಶಾಲೆಗಳನ್ನು ಉಳಿಸಲು ಶಿಕ್ಷಕರ ಹಾಗೂ ಸಿಬ್ಬಂದಿ ವರ್ಗದ ನೇಮಕಾತಿಗಳು ತುರ್ತಾಗಿ ನಡೆಯಬೇಕು"- ಅಲ್ಲಮಪ್ರಭು ಬೆಟ್ಟದೂರು, ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ, ರಾಜ್ಯ ಅಧ್ಯಕ್ಷರು

"ಶಾಲೆಗಳನ್ನು ಮುಚ್ಚುತ್ತಿರುವುದರ ಹಿಂದೆ ನಮ್ಮ ದೇಶದ ಬಂಡವಾಳಶಾಹಿ ವ್ಯವಸ್ಥೆಯ ಹುನ್ನಾರವಿದೆ ಎಂದು ಅರ್ಥೈಸಿಕೊಳ್ಳಬೇಕಿದೆ"- ಉಗ್ರ ನರಸಿಂಹೇ ಗೌಡ, ಸಾಮಾಜಿಕ ಹೋರಾಟಗಾರರು

ಸಮಾವೇಶದಲ್ಲಿ ನಮ್ಮೂರ ಶಾಲೆ ಉಳಿಸಲು ಮುಂದಿನ ಹೋರಾಟವನ್ನು ತೀವ್ರಗೊಳಿಸಲು, ಹಂಪಿ ಕನ್ನಡ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಪ್ರೊ.ಎ. ಮುರಿಗೆಪ್ಪ ಅವರ ಅಧ್ಯಕ್ಷತೆಯಲ್ಲಿ ನಾಡಿನ ಹೆಸರಾಂತ ಶಿಕ್ಷಣ ತಜ್ಞರು, ಸಾಹಿತಿಗಳು, ಸಾಮಾಜಿಕ ಹೋರಾಟಗಾರರು, ರಾಜ್ಯದ ಎಲ್ಲಾ ಜಿಲ್ಲೆಗಳ ಗ್ರಾಮದ ಪೋಷಕರು, ಗ್ರಾಮಸ್ಥರು ಸೇರಿದಂತೆ ರಾಜ್ಯ ಮಟ್ಟದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯನ್ನು ರಚಿಸಲಾಯಿತು.

ಸಮಾವೇಶದಲ್ಲಿ ಎಐಡಿಎಸ್ಓ ರಾಜ್ಯ ಕಾರ್ಯದರ್ಶಿಗಳಾದ ಅಜಯ್ ಕಾಮತ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು ಹಾಗೂ ಸಭೆಯ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷರಾದ ಅಶ್ವಿನಿ ಕೆ ಎಸ್ ರವರು ವಹಿಸಿದ್ದರು ಹಾಗೂ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಉಪಾಧ್ಯಕ್ಷರಾದ ವಿ.ಎನ್ ರಾಜಶೇಖರ್, ಎಐಯುಟಿಯುಸಿ ರಾಜ್ಯಾಧ್ಯಕ್ಷರಾದ ಸೋಮಶೇಖರ ಕೆ, ಎಐಕೆಕೆಎಂಎಸ್ ರಾಜ್ಯಾಧ್ಯಕ್ಷರಾದ ಶಶಿಧರ್ ಎಂ, ಎಐಎಂಎಸ್‌ಎಸ್ ರಾಜ್ಯ ಕಾರ್ಯದರ್ಶಿಗಳಾದ ಶೋಭಾ ಎಸ್, ಎಐಡಿವೈಓ ರಾಜ್ಯ ಕಾರ್ಯದರ್ಶಿಗಳಾದ ಸಿದ್ದಲಿಂಗ ಬಾಗೇವಾಡಿಯವರು, ಎಐಡಿಎಸ್ಓ ರಾಜ್ಯ ನಾಯಕರು ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದ ಧಾವಿಸಿದ ಸಾವಿರಾರು ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಭಾಗವಹಿಸಿದ್ದರು.

06/04/2026

"ಶಾಲೆ ಮತ್ತು ಕಾಲೇಜುಗಳಲ್ಲಿ, ಮನೆಯಲ್ಲಿ ಅಥವಾ ಹೊರಗಡೆ ಎಲ್ಲೇ ಆಗಲಿ ದಬ್ಬಾಳಿಕೆ, ಅನ್ಯಾಯ ಅಥವಾ ಅನೈತಿಕ ಕೃತ್ಯವನ್ನು ನೀವು ಗಮನಿಸಿದರೆ, ಕೆಚ್ಚೆದೆಯಿಂದ ಅದನ್ನು ಎದುರಿಸಿ ಮತ್ತು ವಿರೋಧಿಸಿ...ದಬ್ಬಾಳಿಕೆಯನ್ನು ಅಂತ್ಯಗೊಳಿಸುವ ಈ ಪ್ರಯತ್ನದಲ್ಲಿ ಒಬ್ಬ ವ್ಯಕ್ತಿಯು ಅವಮಾನಕ್ಕೀಡಾಗಬಹುದು, ತೊಂದರೆಗೀಡಾಗಬಹುದು ಮತ್ತು ಬಂಧನಕ್ಕೊಳಗಾಗಬಹುದು ಆದರೆ ಅದೇ ತ್ಯಾಗ ಮತ್ತು ಅವಮಾನದ ಮೂಲಕವೇ ಆ ವ್ಯಕ್ತಿಯು ಮಾನವ ಜನಾಂಗದ ವೈಭವಯುತ ಸ್ಥಾನದಲ್ಲಿ ನಿಲ್ಲಿಸಲ್ಪಡುತ್ತಾರೆ."

-ನೇತಾಜಿ ಸುಭಾಷ್‌ ಚಂದ್ರ ಬೋಸ್

06/04/2026

ಏಪ್ರಿಲ್ 10- ಕೆಪಿಎಸ್ ಮ್ಯಾಗ್ನೆಟ್ ಯೋಜನೆ ವಿರುದ್ಧ ರಾಜ್ಯಮಟ್ಟದ ಬೃಹತ್ ಜನಸಮಾವೇಶ!

Photos from AIDSO MYSORE's post 28/03/2026

KPS- ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಹೊರಟಿರುವ ಮೈಸೂರಿನ ಹೆಚ್.ಡಿ.ಕೋಟೆಯ ಹಂಪಾಪುರ,ಪುರ,ದೆಗ್ಗಲ್ ಹುಂಡಿ,ಕೋಹಳ, ಶಂಖಹಳ್ಳಿ,ಹಿರೇನಂದಿ,ಮಾರ್ಚಳ್ಳಿ,ಮಲಾರದಹುಂಡಿ,ಹೇರಗಳ್ಳಿ,ವಡ್ಡರಪಾಳ್ಯ,ಜಿನ್ನಹಳ್ಳಿ ಗ್ರಾಮಗಳ ಸರ್ಕಾರಿ ಶಾಲೆಯನ್ನು ಉಳಿಸಲು ವಿದ್ಯಾರ್ಥಿಗಳು, ಗ್ರಾಮಸ್ಥರು ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

Photos from AIDSO MYSORE's post 04/03/2026

ಸಾರ್ವಜನಿಕ ಶಿಕ್ಷಣ ಉಳಿಸಿ!

ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ರದ್ದುಗೊಳಿಸಲು ಮೈಸೂರು ಜಿಲ್ಲಾಮಟ್ಟದ ಪ್ರತಿಭಟನಾ ಸಮಾವೇಶ

Photos from AIDSO MYSORE's post 17/02/2026

ಮೈಸೂರು ಜಿಲ್ಲೆಯ ಮೈಸೂರು ತಾಲೂಕಿನ ತಳೂರು,ಡಿ.ಸಾಲುಂಡಿ ಮತ್ತು ಕೆಂಚಲಗೂಡು ಗ್ರಾಮದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ವಿರೋಧಿಸಿ ನಮ್ಮೂರ ಶಾಲೆಯನ್ನು ಉಳಿಸಿ ಎಂದು AIDSO ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.

Photos from AIDSO MYSORE's post 15/02/2026

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಶಿರಮಳ್ಳಿ, ಕಾರ್ಯ, ಮತ್ತು ಬೆಳಲೆ ಗ್ರಾಮದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ವಿರೋಧಿಸಿ ನಮ್ಮೂರ ಶಾಲೆಯನ್ನು ಉಳಿಸಿ ಎಂದು AIDSO ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.

15/02/2026

ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುತ್ತಿರುವ ಆಳ್ವಿಕರ ಹುನ್ನಾರದ ವಿರುದ್ಧ ಹೋರಾಟಕ್ಕೆ ಮುಂದಾಗಿ!

Photos from AIDSO MYSORE's post 07/02/2026

ಸರ್ಕಾರಿ ಶಾಲೆ ಇಲ್ಲದ ಊರನ್ನು ಸೃಷ್ಟಿಸುವುದು ಯುದ್ಧವನ್ನು ಮೀರಿದ ಕ್ರೌರ್ಯ!
ಸರ್ಕಾರಿ ಶಾಲೆ ಉಳಿಸಲು ಚಿಂತಕರ ಅಭಿಮತ

ಕೆಪಿಎಸ್ ಮ್ಯಾಗ್ನೆಟ್ ಹೆಸರಲ್ಲಿ ಸರ್ಕಾರಿ ಶಾಲೆ ಮುಚ್ಚುವುದರ ವಿರುದ್ಧ ನಡೆದ ರಾಜ್ಯಮಟ್ಟದ ವಿದ್ಯಾರ್ಥಿ-ಪೋಷಕರ ಸಮಾವೇಶದಲ್ಲಿ ನಾಡಿನ ಅನೇಕ ಚಿಂತಕರು ಮಾತನಾಡಿ ಸರ್ಕಾರಿ ಶಾಲೆ ಇಲ್ಲದ ಊರನ್ನು ಸೃಷ್ಟಿಸುವುದು ಯುದ್ಧಕ್ಕಿಂತ ಕ್ರೂರವಾದದ್ದು ಎಂಬ ಅಭಿಮತ ವ್ಯಕ್ತಪಡಿಸಿದರು.

40,000 ಸರ್ಕಾರಿ ಶಾಲೆಗಳನ್ನು ಕೊಲ್ಲುವ ಕೆ.ಪಿ.ಎಸ್ ಮ್ಯಾಗ್ನೆಟ್ ಯೋಜನೆಯನ್ನು ರದ್ದುಗೊಳಿಸಿ, 'ನಮ್ಮೂರ ಶಾಲೆ' ಉಳಿಸಲು ಎಐಡಿಎಸ್ಓ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳ ನೇತೃತ್ವದಲ್ಲಿ ರಾಜ್ಯ ಮಟ್ಟದ ವಿದ್ಯಾರ್ಥಿ ಮತ್ತು ಪೋಷಕರ ಸಮಾವೇಶವನ್ನು ಇಂದು ನಗರದ ಗಾಂಧಿ ಭವನದ ಮೈಲಾರ ಮಹದೇವಪ್ಪ ಸಭಾಂಗಣದಲ್ಲಿ ಸಂಘಟಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿಕ್ಷಣ ತಜ್ಞರಾದ ಪ್ರೊ. ನಿರಂಜನಾರಧ್ಯ ಮಾತನಾಡಿ, ಕೇಂದ್ರ ಬಿ.ಜೆ.ಪಿ ಸರ್ಕಾರ ಜಾರಿಗೊಳಿಸಿದ ಎನ್.ಇ.ಪಿ 2020 ಯನ್ನೇ ಕೆ. ಪಿ. ಎಸ್, ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ಪ್ರಸ್ತುತ ರಾಜ್ಯ ಸರ್ಕಾರವು ಅನುಷ್ಠಾನಗೊಳಿಸಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಬಿಜೆಪಿ ಸರ್ಕಾರವು 13,800 ಶಾಲೆಗಳನ್ನು ಮುಚ್ಚಲು ಹೊರಟಾಗ ವಿರೋಧಿಸಿದ್ದ ಕಾಂಗ್ರೆಸ್ ಸರ್ಕಾರವೇ ಈಗ 23,000 ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲು ಹೊರಟಿದೆ. ಸಚಿವರು ಸದನದಲ್ಲಿ ಕುಳಿತೇ ಸುಳ್ಳು ಹೇಳುತ್ತಿರುವುದನ್ನು ನಾವು ಹಿಂದೆ ಎಂದೂ ಕಂಡಿರಲಿಲ್ಲ. ಒಂದೇ ಒಂದು ಶಾಲೆ ಮುಚ್ಚುವುದಿಲ್ಲ ಎಂದು ಹೇಳಿ, ಅದೇ ದಿನ ಚನ್ನಪಟ್ಟಣದ 7 ಶಾಲೆಗಳನ್ನು ಮುಚ್ಚುವ ಆದೇಶ ಹೊರಡಿಸಿದರು. ಹಿಂಬಾಗಿಲಿನಿಂದ ಹೊಸ ಶಿಕ್ಷಣ ನೀತಿ 2020ನ್ನು ಚಾಚೂ ತಪ್ಪದೇ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸುತ್ತಿದೆ ಎಂದು ಹೇಳಿದರು.

ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಸಬಿಹಾ ಭೂಮಿ ಗೌಡ ಮಾತನಾಡಿ, ಶಿಕ್ಷಣವು ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆ ನೀಡಿ ಮೌಢ್ಯ ಹಾಗೂ ದಾಸ್ಯದಿಂದ ಹೊರ ತರುತ್ತದೆ. ಅಂತಹ ಶಿಕ್ಷಣವನ್ನು ಕೆ. ಪಿ. ಎಸ್ ಮ್ಯಾಗ್ನೆಟ್ ಯೋಜನೆ ಮೂಲಕ ತಳ ಸಮುದಾಯದಕ್ಕೆ ದಕ್ಕದ ಹಾಗೆ ಮಾಡುತ್ತಿರುವ ಹುನ್ನಾರದ ವಿರುದ್ಧ ನಾವು ಹೋರಾಡಬೇಕು ಎಂದರು.

ಕಲಬುರ್ಗಿಯ ಕೇಂದ್ರೀಯ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಪಕರಾದ ಕಿರಣ್ ಗಾಜನೂರು ಮಾತನಾಡಿ, ಶಾಲೆಗಳೇ ಇಲ್ಲದ ಊರನ್ನು ಸೃಷ್ಟಿಸುವುದು ಯುದ್ಧಕ್ಕಿಂತ ಕ್ರೂರವಾದದ್ದು. ಸರ್ಕಾರಿ ಶಾಲೆಗಳೇ ಇಲ್ಲದೇ ಇರುವ ಊರನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಇಂತಹ ಕ್ರೌರ್ಯವನ್ನು ಎಸಗುತ್ತಿದೆ. ಸರ್ಕಾರಿ ಶಾಲೆಗಳು ಆಧುನಿಕ ಚಿಂತನೆಗಳ ದ್ವಾರಗಳು. ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಪ್ರಜಾಪ್ರಭುತ್ವದ ಉಳಿವು. ಶಿಕ್ಷಣ, ಸಂಸ್ಕೃತಿ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಸರ್ಕಾರಿ ಶಾಲೆ ಉಳಿಸುವ ಚಾರಿತ್ರಿಕ ಹೋರಾಟವು ಮುಂದುವರೆಯಬೇಕು ಎಂದು ಕರೆ ನೀಡಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಗುರುಪ್ರಸಾದ್ ಕೆರೆಗೋಡು ಮಾತನಾಡಿ, ಕೆ. ಪಿ. ಎಸ್ ಮ್ಯಾಗ್ನೆಟ್ ಯೋಜನೆಯು, ಹಳ್ಳಿಗಳಲ್ಲಿ, ಹಟ್ಟಿಗಳಲ್ಲಿ, ಜೀವಿಸುತ್ತಿರುವ ಎಲ್ಲಾ ಸಮುದಾಯದ ಶಿಕ್ಷಣವನ್ನು
ಕಿತ್ತುಕೊಳ್ಳುತ್ತಿದೆ. ಖಾಸಗೀ ಲಾಭಿಗಳಿಗೆ ಒಳಗಾಗಿ ಸರ್ಕಾರ ಶಾಲೆ ಮುಚ್ಚುತ್ತಿರುವುದರ ವಿರುದ್ಧ ಒಗ್ಗಟ್ಟಿನ ಹೋರಾಟ ಕಟ್ಟುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯ ಉಪಾಧ್ಯಕ್ಷರಾದ ವಿ. ಎನ್. ರಾಜಶೇಖರ್ ಮಾತನಾಡಿ, "ಪ್ರತಿಯೊಂದು ಪಕ್ಷ, ಸರ್ಕಾರವು ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರಕ್ಕೆ ಕೈ ಜೋಡಿಸಿದೆ. ಸದನದಲ್ಲಿ ಕೂತು 'ಸರ್ಕಾರಿ ಶಾಲೆಗಳನ್ನು ಹೇಗೆ ಮುಚ್ಚೋದು?' ಎಂದು ಚರ್ಚಿಸುತ್ತಿರುವುದು ಅತ್ಯಂತ ದುರಂತದ. KPS ಮ್ಯಾಗ್ನೆಟ್ ಶಾಲೆಗಳಿಗೆ ADB (ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್) ನಂತಹ ದೊಡ್ಡ ಬ್ಯಾಂಕಿನಿಂದ 2 ಸಾವಿರ ಕೋಟಿ ರೂ. ಸಾಲ ಪಡೆದಿದೆ. ಊರಾಚೆ ಇರುವ ಮ್ಯಾಗ್ನೆಟ್ ಶಾಲೆಗಳಿಗೆ ಉಚಿತ ಬಸ್ ಎನ್ನುವುದು ಕೇವಲ ಕಾಗದದ ಮೇಲಿನ ಭರವಸೆ, ಅದರ ಸಂಪೂರ್ಣ ಜವಾಬ್ದಾರಿಯನ್ನು SDMC ಮತ್ತು ಪೋಷಕರ ತಲೆಗೆ ಕಟ್ಟಿ ಸರ್ಕಾರ ಕೈತೊಳೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರವು KPS ಮ್ಯಾಗ್ನೆಟ್ ಯೋಜನೆಯನ್ನು ತಂದಿರುವುದೇ, ಸಾರ್ವಜನಿಕ ಶಿಕ್ಷಣವನ್ನು ಸಂಪೂರ್ಣ ಖಾಸಗೀಕರಿಸುವುದಕ್ಕಾಗಿ ಮತ್ತು ಬಡ ಮಕ್ಕಳಿಂದ ಶಾಶ್ವತವಾಗಿ ಶಿಕ್ಷಣವನ್ನು ಕಸಿಯುವುದಕ್ಕಾಗಿ!" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿಗಳಾದ ಪ್ರೊ ಎಸ್. ಜಿ. ಸಿದ್ದರಾಮಯ್ಯ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದಾಖಲಾತಿ ಕುಸಿಯುವುದನ್ನು ನೋಡಿದರೆ, 100 ವರ್ಷಗಳ ಹಿಂದೆ ಹೋಗುವ ದುಸ್ಥಿತಿ ಎದುರಾಗುತ್ತಿದೆ. ಈಗಾಗಲೇ ವಾಸ್ತವದಲ್ಲಿ ಹಳ್ಳಿಗಳಲ್ಲಿನ ಹೆಣ್ಣು ಮಕ್ಕಳು 5 ಕಿ.ಮೀ. ಆಚೆ ಇರುವ ಶಾಲೆಗಳಿಗೆ ತೆರಳಲಾಗದೆ, ಶಿಕ್ಷಣದಿಂದ ದೂರ ಹೋಗುತ್ತಿದ್ದಾರೆ. ಶಾಲೆ ಮುಚ್ಚುವುದು ಅಮಾನವೀಯ ಮತ್ತು ಅನಾಗರೀಕವಾದ ನಡೆ. ಸರ್ಕಾರವು ಜನರಿಗೆ ಸುಳ್ಳು ಹೇಳಿ ಮೋಸ ಮಾಡುತ್ತಿದೆ. ಈ ನೀತಿಯ ವಿರುದ್ಧದ ಹೋರಾಟಕ್ಕೆ ಎಲ್ಲರೂ ಧ್ವನಿಯಾಗೋಣ ಎಂದು ಅಭಿಮತ ವ್ಯಕ್ತಪಡಿಸಿದರು.

ಮುಖ್ಯ ಭಾಷಣಕಾರರಾಗಿ ಎಐಡಿಎಸ್ಓ ಕೇಂದ್ರ ಕೌನ್ಸಿಲ್ ಜಂಟಿ ಕಾರ್ಯದರ್ಶಿ ಅಲೀನಾ ಮಾತನಾಡಿ, ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ, ವರ್ಷದಿಂದ ವರ್ಷಕ್ಕೆ ಶಿಕ್ಷಣಕ್ಕೆ ನೀಡುತ್ತಿರುವ ಅನುದಾನ ಕಡಿತಗೊಳಿಸುತ್ತಿದೆ. ಶಿಕ್ಷಣದ ಬಜೆಟ್ ಕೇವಲ ಶೇ.2.8ರಷ್ಟಿದೆ. ತತ್ಪರಿಣಾಮ, ಸರ್ಕಾರಿ ಶಾಲೆ - ಕಾಲೇಜು ಹಾಗೂ ವಿಶ್ವ ವಿದ್ಯಾನಿಲಯಗಳು ಅನುದಾನ ಕೊರತೆಯಿಂದ ನರಳುತ್ತಿವೆ. ಸರ್ಕಾರಗಳು ಪ್ರಜಾತಾಂತ್ರಿಕ- ಧರ್ಮನಿರಪೇಕ್ಷ- ವೈಜ್ಞಾನಿಕ ಶಿಕ್ಷಣವನ್ನು ನೀಡುವ ಬದಲು, ವಿದ್ಯಾರ್ಥಿಗಳನ್ನು ಕಾರ್ಖಾನೆಗಳಲ್ಲಿ ಅಗ್ಗದ ಕಾರ್ಮಿಕರನ್ನಾಗಿಸಲು ಹೊರಟಿರುವುದು ದುರಂತ ಎಂದರು.

ಭಾಷಣಕಾರರಾಗಿ, ಎಐಡಿಎಸ್ಓ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, ನಮ್ಮ ದೇಶದಲ್ಲಿ ಕಳೆದ 5 ವರ್ಷಗಳಲ್ಲಿ 84,000 ಶಾಲೆಗಳು ಬಿಸಿಯೂಟದಿಂದ ಆಚೆ ಬಂದಿದೆ. ಈ ಅಂಕಿ ಅಂಶವು ದೇಶದಲ್ಲಿ ಶಾಲೆಗಳು ಮುಚ್ಚಿರುವುದನ್ನು ಬಯಲುಗೊಳಿಸುತ್ತದೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಶಾಲೆ ಮುಚ್ಚುವ ಕೆಲಸವನ್ನು ಎಲ್ಲ ಪಕ್ಷಗಳೂ ವ್ಯವಸ್ಥಿತವಾಗಿ ಮಾಡುತ್ತಿದೆ. ಸರ್ಕಾರಗಳು ರಚಿಸುವ ಈ ನೀತಿಗಳ ಹಿಂದಿರುವುದು ಈ ದೇಶದ ಬಂಡವಾಳಶಾಹಿಗಳು. ಬಡ ಕಾರ್ಮಿಕರು ,ರೈತರ ಮಕ್ಕಳಿಂದ ಶಿಕ್ಷಣ ಕಸಿಯುವ ಹುನ್ನಾರ ಇದಾಗಿದ್ದು, ಸಾರ್ವಜನಿಕ ಶಿಕ್ಷಣ ಉಳಿಸಿದರೆ ಮಾತ್ರ ಮಾನವ ನಾಗರೀಕತೆ ಉಳಿಯಲು ಸಾಧ್ಯ ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆ ಉಳಿಸಲು ಬಲಿಷ್ಠ ಹೋರಾಟ ಬೆಳೆಸಬೇಕೆಂದು ಕರೆ ನೀಡಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷರು, ಸದಸ್ಯರು ಸಮಾವೇಶದಲ್ಲಿ ಮಾತನಾಡಿದರು. ಸಮಾವೇಶದ ಅಧ್ಯಕ್ಷತೆಯನ್ನು ಎಐಡಿಎಸ್ಓ ರಾಜ್ಯ ಅಧ್ಯಕ್ಷರಾದ ಅಶ್ವಿನಿ ಕೆ. ಎಸ್ ಅವರು ವಹಿಸಿದ್ದರು.

ಸಮಾವೇಶದಲ್ಲಿ ಎಐಡಿಎಸ್ಓ ರಾಜ್ಯ ಉಪಾಧ್ಯಕ್ಷರುಗಳಾದ ಹಣಮಂತ, ಅಭಯ, ಚಂದ್ರಕಲಾ, ಅಪೂರ್ವ ಸಿ. ಎಂ, ರಾಜ್ಯ ಖಜಾಂಚಿಗಳಾದ ಸುಭಾಷ್ ಬಿ. ಜೆ, ಕಚೇರಿ ಕಾರ್ಯದರ್ಶಿ ಮಹಾಂತೇಶ್ ಬಿಳೂರ್ ಸೇರಿದಂತೆ ರಾಜ್ಯದ ನೂರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.

Want your business to be the top-listed Government Service in Mysore?

Click here to claim your Sponsored Listing.

Location

Category

Telephone

Website

Address


Mysore
570024