Sridhara KV For Rajya vokkaligara Sangha

Directions Website

ನಲ್ಮೆಯ ಕುಲಬಾಂಧವರೇ ನಮಸ್ಕಾರ,

ಈ ನೆಲದ ಅಂತಃಸತ್ವವನ್ನು ತನ್ನ ನರನಾಡಿಗಳಲ್ಲಿ ಮೈಗೂಡಿಸಿಕೊಂಡಿರುವ ಯಾವುದಾದರೂ ಒಂದು ಸಮಾಜವಿದ್ದರೆ ಅದು ಒಕ್ಕಲಿಗ ಸಮಾಜ ಮಾತ್ರ. ಇಂತಹ ಸಮಾಜದಲ್ಲಿ ಜನ್ಮ ತಳೆದ ನಾವುಗಳೇ ಪುಣ್ಯವಂತರು.
ನಮ್ಮ ಸಮಾಜಕ್ಕೆ ಕೊಟ್ಟು ಅಭ್ಯಾಸವೇ ಹೊರತು, ದೇಹೀ ಎಂದು ಕೈ ಒಡ್ಡಿದ್ದು ವಿರಳ. ಅದು ಈ ಸಮಾಜದ ಗಟ್ಟಿತನವೇ ಸರಿ. ಇಂತಹ ಸಮಾಜ ಮತ್ತಷ್ಟು, ಮಗದಷ್ಟು ಎತ್ತರಕ್ಕೆ ಏರಬೇಕು. ಸ್ವಾಭಿಮಾನದ ಕಿಚ್ಚು ಹೆಚ್ಚಾಗಬೇಕು. ಬದಲಾದ ಕಾಲಘಟ್ಟದಲ್ಲಿಯೂ ನಮ್ಮ ಹಿರಿಯರು ನಡೆದ ಹಾದಿ ನಮಗೆ ಸ್ಪೂರ್ತಿಯಾಗಬೇಕು. ಆ ಸಲುವಾಗಿಯೇ ನಿಮ್ಮಲ್ಲಿ ನನ್ನದೊಂದು ವಿನಮ್ರಪೂರ್ವಕ ಅರಿಕೆ.
ಸಾಂಸ್ಕೃತಿಕ ರಾಜಧಾನಿ ಮೈಸೂರಿನಂತಹ ರಾಜಾಶ್ರಯವಿದ್ದ ಈ ನೆಲದಲ್ಲಿ ಕುಂಬಾರಕೊಪ್ಪಲು ಗ್ರಾಮದವನೇ ಆದ ನಾನು ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಪದವಿ ಪಡೆದಿದ್ದು, ಇದೀಗ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ.
ಮೂಲತಃ ಕೃಷಿ ಕುಟುಂಬದವರಾದ ನಾನು, ತಾತ ನರಸಿಂಹೇಗೌಡ, ತಂದೆ ವೈರಮುಡಿಗೌಡ ಅವರು ಹಾಕಿಕೊಟ್ಟ ಒಕ್ಕಲುತನವನ್ನೇ ಇಂದಿಗೂ ಜೀವಾಳವಾಗಿಸಿಕೊಂಡಿದ್ದೇನೆ. ೨೧ನೇ ಶತಮಾನದ ಈ ಹೊತ್ತಿನಲ್ಲಿ ವಿಜ್ಞಾನ ನಾಗಾಲೋಟದಲ್ಲಿ ಓಡುತ್ತಿದೆ. ಆದರೂ, ನಮ್ಮ ಹಿರಿಯರು ನಡೆದ ಸ್ವಾಭಿಮಾನದ ಹಾದಿಯಲ್ಲಿ ಸಾಗಬೇಕೆನ್ನುವ ಇಚ್ಛಾಶಕ್ತಿಯೊಂದಿಗೆ ಇಂದಿಗೂ ನಮ್ಮ ಕುಟುಂಬ ಕೃಷಿಯನ್ನೇ ಪ್ರಮುಖವಾಗಿ ಅವಲಂಭಿಸಿ ಸಾವಯವ ಪದ್ದತಿ ಮುಖೇನ ಕೃಷಿ ಚಟುವಟಿಕೆ ಮಾಡುತ್ತಿದೆ.
’ನಾನು’ ಎಂಬದಕ್ಕಿಂತ ’ನಾವು’ ಎಂಬ ನಮ್ಮೆಲ್ಲರ ಹಿರಿಯರ ಆಶಯದಂತೆ ಅನೇಕ ಸಮಾಜಮುಖಿ ಕಾರ್‍ಯಗಳಲ್ಲಿ ತೊಡಗಿಸಿಕೊಂಡಿರುವ ನಾನು ಅದಕ್ಕಾಗಿ ನವಭಾರತ ನಿರ್ಮಾಣ ಸೇವಾ ಟ್ರಸ್ಟ್ ಮೂಲಕ ಸಾರ್ವಜನಿಕ ಆರೋಗ್ಯ ತಪಾಸಣಾ ಶಿಬಿರ, ಬಡಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು, ನೆಲ-ಜಲ.ಭಾಷೆ ವಿಚಾರದಲ್ಲಿ ಹೋರಾಟ, Bnb, ಕುವೆಂಪು ಪುತ್ಥಳಿ ನಿರ್ಮಾಣ, ನಾಡಪ್ರಭು ಕೆಂಪೇಗೌಡ ಜಯಂತಿ, ಜನಜಾಗೃತಿ ಕಾರ್‍ಯಕ್ರಮಗಳು, ಒಕ್ಕಲಿಗ ಸಮಾಜದ ಪರ ಕಾರ್‍ಯಕ್ರಮಗಳು, ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇನೆ.
ಮಾತ್ರವಲ್ಲ, ಇವತ್ತಿನ ಈ ರಾಜಕೀಯ ವ್ಯವಸ್ಥೆಯಲ್ಲಿ ಮೈಸೂರು ಮಹಾನಗರಪಾಲಿಕೆಗೆ ವಾರ್ಡ್ ನಂಬರ್ ೩ರ ಮಹದೇಶ್ವರ ಬಡಾವಣೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಅತ್ಯಧಿಕ ಮತ ಗಳಿಸಿ ಗೆಲುವು ಸಾಧಿಸಿ, ಆ ಮೂಲಕವೂ ಜನರ ಆಶೋತ್ತರಗಳಿಗೆ ಸ್ಪಂಧಿಸಿದ್ದೇನೆ.
ನಿಮ್ಮೆಲ್ಲರ ಆಶೀರ್ವಾದದಿಂದ ನನ್ನ ಕಾರ್‍ಯಚಟುವಟಿಕೆಯನ್ನು ಮತ್ತಷ್ಟು ವಿಸ್ತರಿಸಿಗೊಳ್ಳುವ ಸಲುವಾಗಿ ಇದೀಗ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ. ಮಾತ್ರವಲ್ಲ, ನಾನಾ ಕಾರಣಗಳಿಗಾಗಿ ರಾಜ್ಯ ಒಕ್ಕಲಿಗರ ಸಂಘ ಮತ್ತಷ್ಟು ಬಲವರ್ಧನೆಗೊಳ್ಳಬೇಕಾದ ಅನಿವಾರ್‍ಯತೆ ಇರುವ ಈ ಸಂಕ್ರಮಣ ಕಾಲದಲ್ಲಿ ಗಟ್ಟಿತನದ ಸ್ಪರ್ಶವಾಗಬೇಕಿದೆ.
ಸಮಾಜದ ದಾರಿದೀಪವಾಗಿರುವ ಆದಿಚುಂಚನಗಿರಿ ಶ್ರೀಕ್ಷೇತ್ರದ ಭೈರವೈಕ್ಯ ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಸ್ಮರಣೆಯೊಂದಿಗೆ, ಇಂದಿನ ಕ್ಷೇತ್ರಾಧಿಪತಿಗಳಾದ ಶ್ರೀ ಡಾ. ನಿರ್ಮಲಾನಂದನಾಥ ಶ್ರೀಗಳು, ಮೈಸೂರು ಶಾಖಾ ಮಠದ ಶ್ರೀ ಸೋಮನಾಥ ಶ್ರೀಗಳ ಆಶೀರ್ವಾದದೊಂದಿಗೆ ಮುಂದಡಿ ಇಡುತ್ತಿದ್ದೇನೆ. ಇಂತಹ ಹೊತ್ತಿನಲ್ಲಿ ನಿಮ್ಮೆಲ್ಲರ ಆಶೀರ್ವಾದವನ್ನು ವಿನಮ್ರವಾಗಿ ಬೇಡುತ್ತಿದ್ದೇನೆ.
ಈ ಚುನಾವಣೆಯ ಹೊತ್ತಿನಲ್ಲಿ ನಮ್ಮ ಸಮಾಜದ ಹಿರಿಯರು, ಮುತ್ಸದ್ದಿಗಳ ಅಣತಿಯಂತೆ ರಾಜ್ಯ ಸಂಘದ ಹಿರಿಯ ನಿರ್ದೇಶಕರಾದ ಡಾ.ಕೆ.ಮಹದೇವ್, ರೈಲ್ವೇ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಡಾ.ಎಂ.ಬಿ.ಮಂಜೇಗೌಡ ಅವರೊಂದಿಗೆ ನಾನೂ ಹೆಜ್ಜೆ ಹಾಕಿದ್ದೇನೆ. ದಯವಿಟ್ಟು ಮೂವರನ್ನೂ ಹರಸಿ, ಹಾರೈಸಿ.

ಕೆ.ವಿ.ಶ್ರೀಧರ
ಸದಸ್ಯರು, ಮೈಸೂರು ಮಹಾನಗರ ಪಾಲಿಕೆ ೩ನೇ ವಾರ್ಡ್ (ಮಹದೇಶ್ವರ ಬಡಾವಣೆ)
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನದ ಸೇವಾಕಾಂಕ್ಷಿ
82778 89403

Address

Mysore

Alerts

Be the first to know and let us send you an email when Sridhara KV For Rajya vokkaligara Sangha posts news and promotions. Your email address will not be used for any other purpose, and you can unsubscribe at any time.

Shortcuts

Share