21/07/2025
#ದಿನಾಂಕ : 21-07-2025
ಹೆಚ್ .ಡಿ. ಕೋಟೆ ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ಶಾಸಕರ ಅನುದಾನದಲ್ಲಿ 1.5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ತಾಲ್ಲೂಕಿನ ಮಿನಿ ವಿಧಾನಸಭಾ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಹಾಗೂ ಶಿಥಿಲಗೊಂಡ ಕೊಠಡಿಗಳ ದುರಸ್ಥಿ ಕಾಮಗಾರಿಗೆ ಗುದ್ದಲಿಪೂಜೆ ನೇರವೇರಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಶ್ರೀನಿವಾಸ್ ರವರು, ರವರು, ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ಬಾಲಯ್ಯ ರವರು ಕೆಂಡಗಣಸ್ವಾಮಿ ಮಾಜಿ ತಾಲ್ಲೂಕಿನ ಪಂಚಾಯತಿ ಅದ್ಯಕ್ಷರಾದ ಗುರುಸ್ವಾಮಿ ರವರು, ಡಿಸಿಸಿ ಸದಸ್ಯರಾದ ಪರಶುರಾಮ ಮೂರ್ತಿ ಹಾಗೂ ಎಸ್ .ಚಿಕ್ಕಮಾದು ಅಭಿಮಾನಿ ಬಳಗದ ಅಧ್ಯಕ್ಷರಾದ ಜಿನ್ನಹಳ್ಳಿ ರಾಜನಾಯಕ ರವರು ಉಪಸ್ಥಿತರಿದ್ದರು.
28/05/2025
ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯನ್ನು ಆರಂಭಿಸಿ 45 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾರ್ಯಕ್ರಮದ ಕುರಿತು ಮಾತನಾಡಿದ ಜೆಎಲ್ಆರ್ (JLR) ಸಂಸ್ಥೆಯ ಅಧ್ಯಕ್ಷ ಮಾನ್ಯ ಅನಿಲ್ ಚಿಕ್ ಮಾದು ರವರು.
ನನಗೆ ಈ ಸಂಸ್ಥೆಯ ಜವಾಬ್ದಾರಿ ವಹಿಸಿ ಅಧ್ಯಕ್ಷನಾಗಿ ಮಾಡಿದ ಶ್ರೀ ರಾಹುಲ್ ಗಾಂಧಿ ಅವರಿಗೆ, ಹಾಗೂ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಸಾಹೇಬರಿಗೆ, ಉಪ ಮುಖ್ಯ ಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ್ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. 💐💐
ಇಡೀ ಭಾರತದಲ್ಲಿ ಯಾವುದಾದರೂ ಸರ್ಕಾರವೊಂದು ಪರಿಸರ ಪ್ರವಾಸೋದ್ಯಮಕ್ಕೆ ಪೂರಕವಾಗಿ ನಡೆಸುತ್ತಿರುವ ಸರ್ಕಾರವೆಂದರೆ ಕರ್ನಾಟಕ ಸರ್ಕಾರ ಅದರಲ್ಲೂ ನಮ್ಮ ಜೆಎಲ್ಆರ್ ಸಂಸ್ಥೆ ಎಂದು ಹೇಳಲು ಹೆಮ್ಮೆ ಆಗುತ್ತದೆ. ಇಂದು ನಮ್ಮ ಜೆಎಲ್ಆರ್ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದು ಇದಕ್ಕೆ ಕಾರಣಕರ್ತರು ಎಂದರೆ ನಮ್ಮ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಅವರ ಪರಿಶ್ರಮ.
ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದ್ದು ,ಇನ್ನಷ್ಟು ರೆಸಾರ್ಟ್ ಗಳನ್ನು ಆರಂಭಿಸಿ ಇನ್ನೂ ಹೆಚ್ಚು ಮಂದಿಗೆ ಉದ್ಯೋಗ ಹಾಗೂ ಸಂಸ್ಥೆಯ ಲಾಭವನ್ನು ಹೆಚ್ಚು ಮಾಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದೆ.
ಈ ಸಂದರ್ಭದಲ್ಲಿ ಅರಣ್ಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ(PCCF) ಅರಣ್ಯ ಪಡೆ ಮುಖ್ಯಸ್ಥೆ (HOFF) ಶ್ರೀಮತಿ ಮೀನಾಕ್ಷಿ ನೇಗಿ ರವರು,ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ರವರು, ಎಂಎಸ್ಐಲ್ ಎಂಡಿ ಮನೋಜ್ ಕುಮಾರ್ ರವರು,ಮಾಜಿ ಅಧ್ಯಕ್ಷರಾದ ಅಪ್ಪಣ್ಣ ರವರು,ಮಹೇಶ್ ರವರು, ಕೆಪಿಸಿಸಿ ವಕ್ತಾರರಾದ ಅನಿಲ್ ರವರು,ಕಾಂಗ್ರೆಸ್ ಮುಖಂಡರಾದ
ಅಲಿಗೊರವನಹಳ್ಳಿ , ಗ್ಯಾರೆಂಟಿ ಯೋಜನೆ ಉಪಾಧ್ಯಕ್ಷರಾದ ಮೆಹರೂಜ್ ಖಾನ್ ರವರು
ಈ ಜೆಎಲ್ಆರ್ ನಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ಎಂ.ಡಿ ಗಳು ಹಾಗೂ ನಮ್ಮ ಜೆಎಲ್ಆರ್ ಎಂ.ಡಿ ಪ್ರಶಾಂತ್ ಶಂಖಿನ ಮಠ ರವರು, ಇ.ಡಿ ಅನುಷಾ ರವರು ಮತ್ತು ನಮ್ಮ ಜೆಎಲ್ಆರ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
19/05/2025
ದಿನಾಂಕ : 19-05-2025
ಸರಗೂರು ತಾಲ್ಲೂಕಿನ ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿದರಹಳ್ಳಿ,ತೆರಣಿಮುಂಟಿ,ಉಯ್ಯಂಬಳ್ಳಿ,
ಹೊಸಕೇರೆಸುಂಡ,ಮೊಸರಳ್ಳ,ನಂದಿನಾಥಪುರ,ಬಸಾಪುರ,ಗ್ರಾಮಗಳಲ್ಲಿ "ಜನಸಂಪರ್ಕ ಸಭೆಯನ್ನು" ಆಯೋಜಿಸಿ,ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು ಹಾಗೂ ನನಗೆ ಎರಡನೇ ಭಾರಿಗೆ ಶಾಸಕನಾಗಿ ಆಯ್ಕೆಮಾಡಿದ ಜನತೆಗೆ ಧನ್ಯವಾದಗಳನ್ನು ಸಲ್ಲಿಸಿದರು.
ಈ ಏಳು ವರ್ಷಗಳ ಕಾಲ ಶಾಸಕನಾಗಿ ತಾಲೂಕಿನಲ್ಲಿ ಪಕ್ಷಾತೀತವಾಗಿ ಯಾವುದೇ ತಾರತಮ್ಯವಿಲ್ಲದೆ,ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ.ಇಂದು ನಮ್ಮ ಕಾಂಗ್ರೆಸ್ ಸರ್ಕಾರದ ಅಧಿಕಾರದಲ್ಲಿದ್ದು ,ನಮ್ಮ ತಾಲೂಕಿಗೆ ಇನ್ನೂ ಹೆಚ್ಚಿನ ಅನುದಾನವನ್ನು ತಂದು ಅಭಿವೃದ್ಧಿ ಪಡಿಸುತ್ತೇನೆಎಂದು ಭರವಸೆ ಗ್ರಾಮಸ್ಥರಿಗೆ ಭರವಸೆ ನೀಡಿದ ತಾಲೂಕಿನ ಶಾಸಕ ಅನಿಲ್ ಚಿಕ್ ಮಾದು.
#ಜನಸಂಪರ್ಕಸಭೆ
Anil Chikkamadu MLA
19/05/2025
ಹೆಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ ನಾಲೆಯ ಮುಂದಿನ ಹೊರಸೇತುವೇ ಕಾಮಗಾರಿ ಪ್ರಗತಿಯಲ್ಲಿದ್ದು .
ಶಾಸಕರ ಅನುಧಾನದಲ್ಲಿ ಸೇತುವೆ ಕಾಮಗಾರಿ ಪೂರ್ಣವಾಗುತ್ತಿರುವ ಹಿನ್ನೆಲೆಯಲ್ಲಿ.
ಇಂದು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ,ಪರಿಶೀಲನೆ ಮಾಡಿ ಅಧಿಕಾರಿಗಳಿಗೆ ಸರಿಯಾದ ನಿಟ್ಟಿನಲ್ಲಿ ಯಾವುದೇ ಕಳಪೆ ಕಾಮಗಾರಿಯಾಗದೇ ಸೇತುವೆ ಕಾಮಗಾರಿಯೂ ಪೂರ್ಣಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಮಾನ್ಯ ಅನಿಲ್ ಚಿಕ್ ಮಾದು ಶಾಸಕರು.