Indian Youth Congress T Narasipura

Indian Youth Congress T Narasipura

Share

Indian Youth Congress T Narasipura Constuency official page

22/02/2026

ನಾಳೆ ನಡೆಯಲಿರುವ ಮಹಾತ್ಮ ಗಾಂಧಿ ನರೇಗಾ ಉಳಿವಿಗಾಗಿ ಪಾದಯಾತ್ರೆಗೆ ಟಿ ನರಸೀಪುರ ಕ್ಷೇತ್ರದ ಪಕ್ಷದ ಮುಖಂಡರುಗಳು, ಕಾರ್ಯಕರ್ತರು, ಜನಪ್ರತಿನಿಧಿಗಳು, ಮುಂಚೂಣಿ ಘಟಕದ ಪದಾಧಿಕಾರಿಗಳು ಹಾಗೂ ತಾಲ್ಲೂಕು ಹಾಗೂ ಬ್ಲಾಕ್ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರುತ್ತೇವೆ..

ಇಂತಿ,
ನವಾಜ್ ಖಾನ್
ಅಧ್ಯಕ್ಷರು, ಯುವ ಕಾಂಗ್ರೆಸ್ ಸಮಿತಿ
ಟಿ ನರಸೀಪುರ ವಿಧಾನಸಭಾ ಕ್ಷೇತ್ರ

29/08/2025

*ಆತ್ಮೀಯ ಯುವಕರೇ..*

*ಬೃಹತ್ ಉದ್ಯೋಗ ಮೇಳಕ್ಕೆ ಆಹ್ವಾನ*

ನಮ್ಮ ನಿಮ್ಮೆಲ್ಲರ ಯುವ ನಾಯಕರು, ಚಾಮರಾಜನಗರ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಶ್ರೀ ಸುನಿಲ್ ಬೋಸ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ನಮ್ಮ ಟಿ ನರಸಿಪುರ ತಾಲೂಕಿನ ಬನ್ನೂರು ಪಟ್ಟಣದಲ್ಲಿ "ಬೃಹತ್ ಉದ್ಯೋಗ ಮೇಳ" ಆಯೋಜಿಸಲಾಗಿದ್ದು ಅದರಿಂದ ಎಲ್ಲಾ ನಿರುದ್ಯೋಗಿ ಯುವಕರು ಮತ್ತು ಯುವತಿಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿ ಮಾಡುತ್ತೇವೆ..

🔹 100ಕ್ಕೂ ಹೆಚ್ಚು ರಾಷ್ಟ್ರ ಮಟ್ಟದ ಹಾಗೂ ರಾಜ್ಯ ಮಟ್ಟದ ಪ್ರತಿಷ್ಠಿತ ಕಂಪನಿಗಳು ಭಾಗಿಯಾಗಲಿದ್ದು, ಕ್ಷೇತ್ರದ ಸಾವಿರಾರು ಯುವಕರಿಗೆ ಭವಿಷ್ಯದ ದಾರಿ ತೋರಲಿದೆ..

🔹ವಿಶೇಷವಾಗಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ನಿರುದ್ಯೋಗಿ ಯುವಕರು ಹಾಗೂ ಯುವತಿಯರಿಗೆ ನೇರವಾಗಿ ಉತ್ತಮ ಉದ್ಯೋಗಾವಕಾಶಗಳು ಲಭ್ಯವಾಗಲಿವೆ.

🔹 ಇದು ಕೇವಲ ಉದ್ಯೋಗ ಮೇಳವಲ್ಲ "ನಮ್ಮ ಯುವಕರ ಕನಸುಗಳನ್ನು ಸಾಕಾರಗೊಳಿಸುವ ವೇದಿಕೆ".

📅 ದಿನಾಂಕ: 31-08-2025, ಭಾನುವಾರ
⏰ ಸಮಯ: ಬೆಳಿಗ್ಗೆ 10:00 ಗಂಟೆಯಿಂದ
📍 ಸ್ಥಳ: ಫುಟ್ಬಾಲ್ ಮೈದಾನ, ಬನ್ನೂರು
Google Map Location:-
https://maps.app.goo.gl/NY5yQbWh4ifJTRwF8

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- ಚೆನ್ನಕೇಶವ - 9986562326
ಬಸವರಾಜು - 9845447046
ಮುನಾವರ್ ಪಾಷಾ - 9986919921

ಪ್ರಕಟಣೆ:-
*ಸುನಿಲ್ ಬೋಸ್ ಅಭಿಮಾನಿ ಬಳಗ ಹಾಗೂ ಮಾನ್ಯ ಸಂಸದರ ಸಾಮಾಜಿಕ ಜಾಲತಾಣ ವಿಭಾಗ*

Photos from Indian Youth Congress T Narasipura's post 04/07/2025

ಟಿ ನರಸಿಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕಾರಣಿ ಸಭೆ

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಂಜುನಾಥ್ ಗೌಡ ರವರ ಆದೇಶದ ಮೇರೆಗೆ ವಿಧಾನಸಭಾ ಕ್ಷೇತ್ರಗಳ ಯುವ ಕಾಂಗ್ರೆಸ್ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಕಾರ್ಯಕಾರಣಿ ಸಭೆಯನ್ನು ಮೈಸೂರು ಗ್ರಾಮಾಂತರ ಉಸ್ತುವಾರಿಗಳಾದ ಶಿವಶಂಕರ ರವರ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಚಂದನ್ ಗೌಡ ರವರ ನೇತೃತ್ವದಲ್ಲಿ ಮತ್ತು ಟಿ ನರಸೀಪುರ ವಿಧಾನಸಭಾ ಅಧ್ಯಕ್ಷರಾದ ನವಾಜ್ ಖಾನ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಟಿ ನರಸೀಪುರ ಬ್ಲಾಕ್ ಅಧ್ಯಕ್ಷರಾದ ಪ್ರದೀಪ್ ಎಸ್ ರವರು ಮತ್ತು ಬನ್ನೂರು ಬ್ಲಾಕ್ ಅಧ್ಯಕ್ಷರಾದ ಮೊಹಮ್ಮದ್ ವಾಸಿಮ್ ರವರ ಸಮ್ಮುಖದಲ್ಲಿ ನಡೆಸಲಾಯಿತು..

ಈ ಸಭೆಯಲ್ಲಿ ಪಕ್ಷದ ಸಂಘಟನೆ ಹೆಚ್ಚಿನ ಆದ್ಯತೆ, ನಮ್ಮ ಕಾಂಗ್ರೆಸ್ ಸರ್ಕಾರ ನೀಡಿರುವ ಜನಪರ ಯೋಜನೆಗಳ ಬಗ್ಗೆ ಕ್ಷೇತ್ರದ ಮನೆಮನೆಗೆ ಮುಟ್ಟಿಸುಂತೆ, ಮುಂಬರುವ ಸ್ಥಳೀಯ ಚುನಾವಣೆಗೆ ಯುವಕರನ್ನು ಒಗ್ಗೂಡಿಸಿ ಸಜ್ಜಾಗುವುದು, ಕೇಂದ್ರ ಮತ್ತು ರಾಜ್ಯ ಬಿಜೆಪಿಯವರು ನಮ್ಮ ಪಕ್ಷದ ನಾಯಕರುಗಳ ಬಗ್ಗೆ ಅಪಪ್ರಚಾರ ಹಾಗೂ ಸಂವಿಧಾನ ವಿರುದ್ಧ ಹೇಳಿಕೆಗಳ ವಿರುದ್ಧ ಹೋರಾಟದ ಬಗ್ಗೆ ಸೇರಿದಂತೆ ಇನ್ನೂ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಲಾಯಿತು..

ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಗ್ರಾಮಾಂತರ ಯುವ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಶಶಾಂಕ್ ರವರು,ಮಹಮ್ಮದ್ ಫಯಾಜ್ ರವರು,ಪೂಜಾಶ್ರೀ ರವರು ಸೇರಿದಂತೆ ನಮ್ಮ ನರಸೀಪುರ ವಿಧಾನಸಭಾ ಕ್ಷೇತ್ರದ ಅನೇಕ ಯುವಕರು ಉಪಸ್ಥಿತರಿದ್ದರು..

#ಯುವಕಾಂಗ್ರೆಸ್ #ಕಾರ್ಯಕಾರಣಿಸಭೆ #ಟಿನರಸೀಪುರ #ಮೈಸೂರು

Photos from Indian Youth Congress T Narasipura's post 24/02/2025

ಇಂದು ಮೈಸೂರಿನಲ್ಲಿ ನಡೆದ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಮೈಸೂರು ಜಿಲ್ಲಾ ಯುವ ಕಾಂಗ್ರೆಸ್ ಸಮಿಯ ನೂತನವಾಗಿ ಚುನಾಯಿತರಾದ ಟಿ ನರಸೀಪುರ ಯುವ ಕಾಂಗ್ರೆಸ್ ಸಮಿತಿಯ ಅಸೆಂಬ್ಲಿ ಮತ್ತು ಬ್ಲಾಕ್ ಅಧ್ಯಕ್ಷರಾದ ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಲಾಯಿತು..

20/01/2025

We Will All Start Very Soon..✋

Want your business to be the top-listed Government Service in Mysore?

Click here to claim your Sponsored Listing.

Location

Address


T Narasipura Constuency
Mysore
571124