Yathindra Siddaramaiah Fans

Yathindra Siddaramaiah Fans

Share

Contact information, map and directions, contact form, opening hours, services, ratings, photos, videos and announcements from Yathindra Siddaramaiah Fans, Political organisation, mysore palace, Mysore.

01/06/2026

Dr.ಯತೀಂದ್ರ ಸಿದ್ದರಾಮಯ್ಯನವರಿಗೆ ಡಿಸಿಎಂ ಸ್ಥಾನಕ್ಕಾಗಿ ನಾವು ಬಲವಾಗಿ ಆಗ್ರಹಿಸುತ್ತೇವೆ .

01/06/2026

ಆಟ ಮುಗಿದಿಲ್ಲ

01/06/2026

ಅಪಮಾನದ ಎಕ್ಸಿಟ್. 💔

31/05/2026

ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರು, ನಿಯೋಜಿತ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಇಂದು ಭೇಟಿಯಾಗಿ ಅಭಿನಂದನೆ ತಿಳಿಸಿದ, MLC Dr.ಯತೀಂದ್ರ ಸಿದ್ದರಾಮಯ್ಯರವರು

Photos from Yathindra Siddaramaiah Fans's post 31/05/2026

🛑 ಹೋರಾಟದಿಂದ ನಾಯಕತ್ವದವರೆಗೆ: ಒಂದು ಐತಿಹಾಸಿಕ ಪಯಣ! 🛑
​"ಆಲೋಚನೆ ಬದಲಾದರೆ, ಸಮಾಜ ಬದಲಾಗುತ್ತದೆ" ಎಂಬ ತತ್ವದೊಂದಿಗೆ ಸಾಗುತ್ತಿರುವ ನಮ್ಮ 'ವಿಚಾರ ಕ್ರಾಂತಿ' ಮಾಧ್ಯಮದ ವಿಶೇಷ ಪ್ರಸ್ತುತಿ.
​ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಸಿದ್ದರಾಮಯ್ಯನವರ ಹೆಸರು ಸದಾ ಮುಂಚೂಣಿಯಲ್ಲಿ ಇರುತ್ತದೆ. ವಿದ್ಯಾರ್ಥಿ ಹೋರಾಟಗಾರನಾಗಿ ಸಾರ್ವಜನಿಕ ಜೀವನ ಪ್ರವೇಶಿಸಿದ ಅವರು, ಕೇವಲ ಅಧಿಕಾರದ ಹಿಂದೆ ಬಿದ್ದವರಲ್ಲ; ಬದಲಿಗೆ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ (ಅಹಿಂದ) ವರ್ಗಗಳ ಅಸ್ಮಿತೆಯಾಗಿ ಹೊರಹೊಮ್ಮಿದವರು.
​ರಾಜಕೀಯ ಪಯಣದ ಮೈಲಿಗಲ್ಲುಗಳು:
1️⃣ 1970ರ ದಶಕದಲ್ಲಿ ವಿದ್ಯಾರ್ಥಿ ಸಂಘಟನೆಗಳ ಮೂಲಕ ಸಾರ್ವಜನಿಕ ಹೋರಾಟಕ್ಕೆ ಧುಮುಕಿದ್ದು.
2️⃣ ಶೋಷಿತ ವರ್ಗಗಳ ಧ್ವನಿಯಾಗಿ ವಿಧಾನಸಭೆಯಲ್ಲಿ ಸದ್ದು ಮಾಡಿದ್ದು.
3️⃣ ತಳಮಟ್ಟದ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ, ಇಂದು ರಾಜ್ಯ ರಾಜಕೀಯವನ್ನು ಮುನ್ನಡೆಸುವ ನಾಯಕರಾಗಿ ಬೆಳೆದಿದ್ದು.
​ಇದು ಕೇವಲ ಒಬ್ಬ ವ್ಯಕ್ತಿಯ ಸಾಧನೆಯಲ್ಲ, ಜನಬೆಂಬಲವಿದ್ದರೆ ಸಾಮಾನ್ಯನೂ ಸಹ ಪರಮೋಚ್ಛ ನಾಯಕನಾಗಬಹುದು ಎಂಬುದಕ್ಕೆ ಸಾಕ್ಷಿ.
​ನಿಮ್ಮ ಪ್ರಕಾರ ಸಿದ್ದರಾಮಯ್ಯನವರ ಆಡಳಿತದ ಅತ್ಯುತ್ತಮ ನಿರ್ಧಾರ ಅಥವಾ ಯೋಜನೆ ಯಾವುದು? ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಿ. ಪೋಸ್ಟ್ ಇಷ್ಟವಾದರೆ ಶೇರ್ ಮಾಡಿ!
​🔗 ನಮ್ಮ ಮತ್ತಷ್ಟು ವಿಶ್ಲೇಷಣೆಗಳಿಗಾಗಿ 'ವಿಚಾರ ಕ್ರಾಂತಿ' ಪೇಜ್ ಅನ್ನು ಲೈಕ್ ಮಾಡಿ ಮತ್ತು ಫಾಲೋ ಮಾಡಿ.

​ SocialJustice Kannada Karnataka ಸಿದ್ದರಾಮಯ್ಯ ಜನನಾಯಕ ವಿಚಾರಕ್ರಾಂತಿ ಕರ್ನಾಟಕರಾಜಕಾರಣ PoliticalLeader Inspiration
​TrendingNow ViralPost PoliticalAnalysis SocialAwareness DailyUpdates

31/05/2026

ಸರಿಯಾದ ಸಮಯಕ್ಕೆ ’ಕುರ್ಚಿ’ ಬಿಡುವುದೂ
ಒಂದು ಸಿದ್ಧಾಂತ - ಧರ್ಮ – ಪ್ರಬುದ್ಧತೆ – ಮುತ್ಸದ್ದೀತನ

ರಾಜಕೀಯ- ಇಸಂ – ವ್ಯಕ್ತಿ ಪೂಜೆ ಎಲ್ಲವನ್ನೂ ಬದಿಗಿಟ್ಟು ನಡೆದ ನಿಜ ಘಟನೆ ಪ್ರಸ್ತುತ ಪಡಿಸುತ್ತಿದ್ದೇನೆ. ಈ ಘಟನೆ ನಡೆದಿದ್ದು 2021 ರ ಆಚೀಚೆಗೆ. ಆಗ ಸಿದ್ಧರಾಮಯ್ಯ ಮಾಜಿ ಮುಖ್ಯಮಂತ್ರಿಗಳಾಗಿದ್ದರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದರು.
ಒಂದು ಮುಂಜಾನೆ ಬೆಂಗಳೂರು- ಮಂಗಳೂರು ಇಂಡಿಗೋ ವಿಮಾನದ 1F ಸೀಟಿನಲ್ಲಿ ನಾನು ಕೂತಿದ್ದೆ. ವಿಮಾನ ಹೊರಡುವ ನಿಗದಿತ ಸಮಯಕ್ಕೆ ಸ್ವಲ್ಪ ಮೊದಲು ಸಿದ್ದರಾಮಯ್ಯ ಒಳಗಡಿಯಿಟ್ಟು, 1D ಸೀಟಿನಲ್ಲಿ ಕೂತರು. ನಮಸ್ಕಾರ ಎಂದೆ. ಮುಗುಳ್ನಕ್ಕು ನಮಸ್ಕಾರ ಮಾಡಿ ಕೂತವರು ಪುಸ್ತಕವೊಂದನ್ನು ತೆಗೆದು ಓದಲಾರಂಭಿಸಿದರು. ನಾನೂ ಓದುತ್ತ ನನ್ನಷ್ಟಕ್ಕೆ ಕೂತೆ. 1E ಸೀಟಲ್ಲಿ ಬಂದು ಕೂತ ಯುವತಿಯೊಬ್ಬರು ಸಿದ್ದರಾಮಯ್ಯ ಅವರನ್ನು ಮಾತನಾಡಿಸಿ, ’ಸಾಫ್ಟ್ವೇರ್‍ ಎಂಜಿನಿಯರ್‍’ ಎಂದು ಪರಿಚಯ ಮಾಡಿಕೊಂಡು ಸೆಲ್ಫಿ ಬೇಕೆಂದು ಮನವಿ ಮಾಡಿಕೊಂಡರು. ಸಿದ್ದರಾಮಯ್ಯ ಅವರು ನಗುತ್ತಲೇ ಒಪ್ಪಿಕೊಂಡು ಫೋಸ್ ಕೊಟ್ಟರು.
ಈ ನಡುವೆ 1A ನಲ್ಲಿ ಯಾರೋ ಒಬ್ಬ ಪ್ರಯಾಣಿಕರಿದ್ದರು. 1B ಸೀಟು ಖಾಲಿಯಿತ್ತು. 1C ಸೀಟ್ ನಲ್ಲಿ ಕೂತಿದ್ದ ಮಂಗಳೂರಿನ ಪುಡಾರಿಯೊಬ್ಬರು, ಸಿದ್ದರಾಮಯ್ಯ ಗಮನ ಸೆಳೆಯಲು ಹರಸಾಹಸ ಮಾಡುತ್ತಿದ್ದರು. ಆ ಪುಣ್ಯಾತ್ಮರ ಹೆಸರನ್ನು ಸದ್ಯದ ಮಟ್ಟಿಗೆ ’ಪುಡಾರಿ’ ಎಂದು ಇಟ್ಟುಕೊಳ್ಳೋಣ. ಆ ಪುಡಾರಿಗೆ ಸಿದ್ದರಾಮಯ್ಯ ಅವರು ಅಷ್ಟು ಸೊಪ್ಪು ಹಾಕಿದಂತೆ ಕಂಡು ಬರುತ್ತಿರಲಿಲ್ಲ.
ಎಲ್ಲ ಪ್ರಯಾಣಿಕರು ಬಂದು ವಿಮಾನ ತುಂಬಿದರೂ, ವಿಮಾನ ಹೊರಡಲು ತಡವಾಗುತ್ತಿತ್ತು. ನಿಗದಿತ ನಿರ್ಗಮನದ ಸಮಯ ಕಳೆದು ಸುಮಾರು ಮುಕ್ಕಾಲು ಗಂಟೆಯಾದರೂ ಅದು ಹೊರಡಲಿಲ್ಲ. ಉಳಿದ ಪ್ರಯಾಣಿಕರು ಗೊಂದಲದಲ್ಲಿರುವುದು ಸ್ಪಷ್ಟವಾಗಲಾರಂಭಿಸಿತು. ಸಿದ್ದರಾಮಯ್ಯ ಆ ಬಗ್ಗೆ ತಲೆ ಕೆಡಿಸಿಕೊಳ್ಳದೇ ಓದಿನಲ್ಲಿ ಮಗ್ನರಾಗಿದ್ದರು
ಸುತ್ತಮುತ್ತಲಿನ ಆಗು ಹೋಗುಗಳನ್ನು ಒಂದಿಷ್ಟು ಸೂಕ್ಷ್ಮವಾಗಿ ಗಮನಿಸುವ ಜಾಯಮಾನದ ನಾನು ವಿಮಾನದ ಗ್ರೌಂಡ್ ಸ್ಟಾಫ್, ಕ್ಯಾಬಿನ್ ಸಿಬ್ಬಂದಿ, ಪೈಲಟ್ ಗಳ ನಡುವಿನ ಪಿಸು-ಪಿಸು ಮಾತುಗಳ ಮೇಲೆ ಗಮನ ಹರಿಸಿದ್ದೆ. ನನಗೆ ವಿಮಾನ ತಡವಾಗುತ್ತಿರುವ ಹಿನ್ನಲೆ ಅರ್ಥವಾಗಲಾರಂಭಿಸಿತು.
ವಿಮಾನದ ಮಧ್ಯ ಭಾಗದ ಬಾಗಿಲುಗಳ ಬಳಿಯ ಒಂದು ಸಾಲಿನ ಒಂದು ಭಾಗದ ಮೂರು XL ಸೀಟುಗಳಲ್ಲಿ ಆಕ್ಸಿಡೆಂಟ್ ಆಗಿ ಕಾಲಿಗೆ ಪಟ್ಟಿಕೊಂಡಿದ್ದ ಮೂವರು ಪ್ರಯಾಣಿಕರು ಕೂತಿದ್ದರು. ತಾಂತ್ರಿಕವಾಗಿ ಅಂತಹ ದೈಹಿಕವಾಗಿ ನ್ಯೂನತೆ ಇರುವ ಪ್ರಯಾಣಿಕರನ್ನು ಅಲ್ಲಿ ಕೂರಿಸುವ ಹಾಗಿಲ್ಲ. ಏಕೆಂದರೆ, ತುರ್ತು ಸಂದರ್ಭದಲ್ಲಿ ಆ ಬಾಗಿಲುಗಳನ್ನು ತೆರೆದಿಡುವ ದೈಹಿಕ ಸಾಮರ್ಥ್ಯ ಇರುವವರು ಮಾತ್ರ ಆ XL ಸೀಟುಗಳಲ್ಲಿ ಕೂರಬೇಕು. ಕಾಲಿಗೆ ಪಟ್ಟಿಕೊಂಡಿದ್ದ ಪ್ರಯಾಣಿಕರಿಗೆ ಕೊಡಬಹುದಾದ ಸೀಟುಗಳೆಂದರೆ ನಾವು ಕೂತಿದ್ದ ಮೊದಲ ಸಾಲಿನ ಸೀಟುಗಳು ಮಾತ್ರ. ಆ ಮೂವರನ್ನು ಸಿದ್ದರಾಮಯ್ಯ, ಸಾಫ್ಟ್ವೇರ್‍ ಯುವತಿ ಮತ್ತು ನಾನು ಕೂತಿದ್ದ ಸೀಟುಗಳಲ್ಲಿ ಕೂರಿಸುವ ನಿರ್ಧಾರಕ್ಕೆ ವಿಮಾನದ ಸಿಬ್ಬಂದಿ ಬಂದಿದ್ದರು.
ಆ ಹಿನ್ನಲೆಯಲ್ಲಿ ಒಬ್ಬ ಗ್ರೌಂಡ್ ಸ್ಟಾಫ್ ಬಂದು ಸಿದ್ದರಾಮಯ್ಯ ಅವರನ್ನು ನೇರವಾಗಿ ’ನೀವು ಹಿಂದಿರುವ XL ಸಾಲಿನ ಸೀಟಿಗೆ ಹೋಗಿ’ ಎಂದು ಹೇಳಿದ. ಹೆಚ್ಚಿನ ಪಕ್ಷ ಆ ಸಿಬ್ಬಂದಿಗೆ ಸಿದ್ದರಾಮಯ್ಯ ಯಾ

30/05/2026

ಯತೀಂದ್ರ ಸಿದ್ದರಾಮಯ್ಯ ರವರು #ಉಪಮುಖ್ಯಮಂತ್ರಿ ಯಾದರೆ, ಅವರಲ್ಲಿ ಸಿದ್ದರಾಮಯ್ಯ ರವರನ್ನು ಕಾಣಬಹುದು. ಬೆಂಬಲಿಗ ಶಾಸಕರಿಗೆ ಶಕ್ತಿ ಕೇಂದ್ರ ಸೃಷ್ಟಿ ಮಾಡಿ ಆಸರೆಯಾಗಬಹುದಾಗಿದೆ..

ಜೊತೆಗೆ ಇಂಧನ, ನೀರಾವರಿ, ಲೋಕೋಪಯೋಗಿ ಇಲಾಖೆಯಂತಹ ಪ್ರಮುಖ ಖಾತೆ ನೀಡಿದಲ್ಲಿ ಸಿದ್ದರಾಮಯ್ಯ ಬೆಂಬಲಿಗ ಶಾಸಕರಿಗೆ ಉತ್ತಮ ಅನುದಾನ ಒದಗಿಸಬಹುದಾಗಿದೆ.

ಜೊತೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೀಡಿದರೆ ಸಿದ್ದರಾಮಯ್ಯ ಬಹುದಿನದ ಕನಸಾದ ಜಾತಿ ಗಣತಿಯನ್ನು ಜಾರಿಗೊಳಿಸಬಹುದು.

SiddaramaiahDr Yathindra Siddaramaiah


30/05/2026

ಇಂದು ಪಾವಗಡ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವರು ಮಾಜಿ ಶಾಸಕರಾದ ದಿವಂಗತ ಶ್ರೀ ಹೆಚ್. ವೆಂಕಟರಮಣಪ್ಪ ರವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದೆ.

30/05/2026
Want your business to be the top-listed Government Service in Mysore?

Click here to claim your Sponsored Listing.

Location

Website

Address


Mysore Palace
Mysore
570001