Satish Gowda For Rajya vokkaligara Sangha

Satish Gowda For Rajya vokkaligara Sangha

Share

ಸಮುದಾಯದ ಆಂತರಿಕ ಸರ್ಕಾರ ರಾಜ್ಯ ಒಕ್ಕಲಿಗರದ ಗೌರವ ಘನತೆ ಕಾಪಾಡುವುದು.

ಒಕ್ಕಲಿಗರ ಸಂಘದ ಮೂಲಕ ಒಕ್ಕಲಿಗರ ಹಿತ ಕಾಯುವುದು ಹಾಗು ಒಕ್ಕಲಿಗರ ಸಂಘದ ಮೂಲ ಉದ್ದೇಶ ಸಾಮಾನ್ಯ ಒಕ್ಕಲಿಗರಿಗೆ ತಲುಪುವಂತೆ ಮಾಡುವುದು ಹಾಗು ಆ ಮೂಲಕ ಸಂಘದ ಗೌರವ ಕಾಪಾಡುವುದು..
ರಾಜ್ಯ ಒಕ್ಕಲಿಗರ ಸಂಘ ಸಮುದಾಯದ ಆಂತರಿಕ ಸರ್ಕಾರ ಇಂತಹ ಸರ್ಕಾರವನ್ನು ಸಮುದಾಯದ ಜನರಿಗಾಗಿ ತರುವ ಸಲುವಾಗಿ ಹಿರಿಯ ಜೀವಗಳು ಕಲ್ಲು ಮುಳ್ಳಿನ ಹಾದಿಯನ್ನೇ ಸವೆಸಿದ್ದಾರೆ ಅದರ ಪರಿಣಾಮ ಸಾಮಾನ್ಯ ಗುಡಿಸಲಿನಲ್ಲಿ ಪ್ರಾರಂಭ ಆದ ಸಂಸ್ಥೆ ಜಾತಿವಾರು ಅತ್ಯಂತ ದೊಡ್ಡ ಸಂಸ್ಥೆಯಾಗಿ ಹೊರ ಹೊಮ್ಮಿದೆ .
ಬದಲಾದ ಕಾಲ ಅಟ್ಟದಲ್ಲಿ

Photos from Satish Gowda For Rajya vokkaligara Sangha's post 28/04/2026

ಮೈಸೂರು ತಾಲ್ಲೂಕಿನ ಲಲಿತಾದ್ರಿಪುರದಲ್ಲಿ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಲೋಕಾರ್ಪಣ ಕಾರ್ಯಕ್ರಮದಲ್ಲಿ ಪರಮಪೂಜ್ಯ ಜಗದ್ಗುರುಗಳಾದ ಡಾ: ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿಗಳ ದಿವ್ಯ ಸಾನಿದ್ಯದಲ್ಲಿ ಯುವ ನಾಯಕರಾದ ನಿಖಿಲ್ ಕುಮಾರಸ್ವಾಮಿ ಅವರು ಮಾಜಿ ಸಚಿವರಾದ ಸಾ ರಾ ಮಹೇಶಣ್ಣ ಅವರಿ ಶಾಸಕದ್ವಯರಾದ ಜಿ ಡಿ ಹರೀಶ್ ಗೌಡ ಹಾಗು ಕೆ ಹರೀಶ್ ಗೌಡ ಅವರು ಇತರ ಪ್ರಮುಖರ ಜತೆ ಕಾರ್ಯಕ್ರಮದಲ್ಲಿ ಭಾಗಿಯಾದೆನು...
ಸತೀಶ್ ಗೌಡ ಬೀಡನಹಳ್ಳಿ

13/04/2026

ಭೈರವೈಕ್ಯ ಮಂದಿರದ ಮುಂದೆ...

13/04/2026

ನಾಡಾಳಿದ ಶ್ರೇಷ್ಠ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಾದರಿ ಪೇಟ ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿಯವರ ಮುಡಿಗೇರಲು ಸಿದ್ದವಾಗಿರುವ ಪೇಟವನ್ನು ಶ್ರೀಕ್ಷೇತ್ರದಲ್ಲಿ ಪೂಜ್ಯ ಪ್ರಸನ್ನನಾಥ ಸ್ವಾಮೀಜಿ ಅವರಿಗೆ ಹಸ್ತಾಂತರಿಸಿದೆವು...

ಜೈ ಶ್ರೀ ಗುರುದೇವ್ ...
ಸತೀಶ್ ಗೌಡ ಬೀಡನಹಳ್ಳಿ

13/04/2026

ನಾಡಾಳಿದ ಶ್ರೇಷ್ಠ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಾದರಿ ಪೇಟ ಮಾನ್ಯ ಪ್ರಧಾನಿಗಳಾದ ನರೇಂದ್ರ ಮೋದಿಯವರ ಮುಡಿಗೇರಲು ಸಿದ್ದವಾಗಿದೆ...
ಜೈ ಶ್ರೀ ಗುರುದೇವ್ ...
ಸತೀಶ್ ಗೌಡ ಬೀಡನಹಳ್ಳಿ

04/04/2026
01/04/2026

ರಾಜ್ಯ ಒಕ್ಕಲಿಗರ ಸಂಘ – 120 ವರ್ಷದ ಗೌರವಯುತ ಪಯಣ.

ರಾಜ್ಯ ಒಕ್ಕಲಿಗರ ಸಂಘ ಅಸ್ತಿತ್ವಕ್ಕೆ ಬಂದು ಇಂದಿಗೆ 120 ವರ್ಷಗಳು ಪೂರ್ತಿಯಾಗಿವೆ. ಈ ಸಂಘದ ಪರಿಕಲ್ಪನೆಯನ್ನು ಮಾಡಿ, ಅದನ್ನು ಕಾರ್ಯರೂಪಕ್ಕೆ ತಂದು, ಒಕ್ಕಲಿಗ ಸಮಾಜವನ್ನು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂಚೂಣಿಗೆ ತಂದ ಮಹನೀಯರಾದ ಶ್ರೀ ಕೆ.ಹೆಚ್. ರಾಮಯ್ಯನವರು, ಬ್ಯಾರಿಸ್ಟರ್ ಬಿ.ಎನ್. ನಾಗಪ್ಪ, ತಹಶೀಲ್ದಾರ್ ಬಿ. ಚೆನ್ನಿಗಪ್ಪ,ಉರಿಗದ ಬೈಯಣ್ಣ, ಸಿದ್ಧಾಪುರದ ಪಟೇಲ್ ಪುಟ್ಟಣ್ಣ, ಫ್ಲೀಡರ್ ಕೆಂಪಣ್ಣ, ಎಂ.ಎಲ್. ಶ್ಯಾಮಗೌಡ, ಸಿ. ಲಕ್ಷ್ಮಣಗೌಡ ಇವರಾದಿ ಎಲ್ಲಾ ಸಂಸ್ಥಾಪಕರ ದಿವ್ಯ ಚಿಂತನೆಗಳಿಗೆ ನಮ್ಮ ಅನಂತ ನಮನಗಳು 🙏

ನಾವು ಕನಸು ಕಂಡ ರಾಜ್ಯ ಒಕ್ಕಲಿಗರ ಸಂಘವೆಂದರೆ
ರಾಮಯ್ಯರಂತಹ ಮಹನೀಯರು ಮತ್ತು
ಎಂ.ಹೆಚ್. ಮರೀಗೌಡರಂತಹ ಸೈದ್ದಾಂತಿಕ ವ್ಯಕ್ತಿತ್ವಗಳು ಕಟ್ಟಿದ ಸಂಘ.
ಹತ್ತು ಜನರ ಹಣದ ಕಾಫಿ ಸಹ ಕುಡಿಯಬಾರದು ಎಂದು ಮನೆಯಿಂದ ಕಾಫಿ ತಂದು
ಸಭೆಗಳನ್ನು ನಡೆಸುತ್ತಿದ್ದ ನಿಷ್ಠಾವಂತ ನಾಯಕರು ಇದ್ದರು.
ಆದರೆ, ಇಂದಿನ ಬದಲಾಗಿರುವ ಪರಿಸ್ಥಿತಿಯಲ್ಲಿ
ಅವರು ಅಲಂಕರಿಸಿದ ಹುದ್ದೆಗಳ ಗೌರವ ಕುಂದಿದಂತಾಗಿದೆ.
ಸ್ವಾರ್ಥ ಮತ್ತು ಲಾಭದ ಚಿಂತನೆಗಳು ಹೆಚ್ಚುತ್ತಿರುವುದು
ಸಂಘದ ದುಃಸ್ಥಿತಿಯನ್ನು ಸ್ಪಷ್ಟಪಡಿಸುತ್ತದೆ.

ಸಂಘದ ಪುನರುಜ್ಜೀವನ ಅವಶ್ಯಕವಾಗಿದೆ!
ಆ ದಿಕ್ಕಿನಲ್ಲಿ
ನಾವು ಎಲ್ಲರೂ ಸಕಾರಾತ್ಮಕವಾಗಿ ಯೋಚಿಸಿ,
ಒಗ್ಗಟ್ಟಿನಿಂದ ಮುಂದೆ ಸಾಗೋಣ.

ಬೀಡನಹಳ್ಳಿ ಸತೀಶ್ ಗೌಡ
9986403488
2026/27 ರ ರಾಜ್ಯ ಒಕ್ಕಲಿಗರ ಸಂಘದ ಚುನಾವಣ ಅಭ್ಯರ್ಥಿ.
(ಮೈಸೂರು ಚಾಮರಾಜನಗರ ಹಾಗು ಊಟಿ)

28/03/2026

ನನ್ನ ಗುರು ನನ್ನ ಹೆಮ್ಮೆ..

Satish Gowda Beednahalli - WhatsApp channel 26/03/2026

Pls join my whatsup channel..🙏

Satish Gowda Beednahalli - WhatsApp channel Follow Satish Gowda Beednahalli's WhatsApp Channel. ಸಮುದಾಯ ಮತ್ತು ಸಂಘಟನೆ.... Join 133 followers for the latest updates.

21/03/2026

2021ರಲ್ಲಿ ನಡೆದ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಯಾವುದೇ ಸ್ವಾರ್ಥವಿಲ್ಲದೆ, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ನನ್ನ ಮೇಲಿನ ಪ್ರೀತಿ, ವಿಶ್ವಾಸ ಮತ್ತು ಅಭಿಮಾನದಿಂದ 7,852 ಅಮೂಲ್ಯ ಮತಗಳನ್ನು ನೀಡಿ ನನಗೆ ನೈತಿಕ ಗೆಲುವು ತಂದುಕೊಟ್ಟ ಪ್ರತಿೊಬ್ಬ ಪ್ರಜ್ಞಾವಂತ ಬಂಧುಗಳಿಗೂ ನನ್ನ ಹೃದಯದಾಳದ ನಮಸ್ಕಾರಗಳು.

ಆ ಚುನಾವಣೆಯಲ್ಲಿ ನನಗೆ ಸಿಕ್ಕಿದ್ದು ಕೇವಲ ಮತಗಳಲ್ಲ — ಅದು ನಿಮ್ಮ ಪ್ರೀತಿ, ನಿಮ್ಮ ನಂಬಿಕೆ, ನನ್ನ ಮೇಲಿಟ್ಟಿದ್ದ ವಿಶ್ವಾಸದ ಆಶೀರ್ವಾದವಾಗಿತ್ತು. ನೀವು ಕೊಟ್ಟ ಆ ಬೆಂಬಲ ನನ್ನ ಬದುಕಿನ ದಾರಿಯಲ್ಲಿ ಒಂದು ದೊಡ್ಡ ಧೈರ್ಯವಾಯಿತು, ಸಮಾಜದ ಪರವಾಗಿ ಇನ್ನಷ್ಟು ಕೆಲಸ ಮಾಡಲು ಒಂದು ಶಕ್ತಿಯಾಯಿತು. ಆ ಪ್ರೀತಿಯ ಋಣವನ್ನು ನಾನು ಜೀವನಪೂರ್ತಿ ಮರೆಯಲಾರೆ.

ಈಗ 2026ರ ವರ್ಷಾಂತ್ಯದಲ್ಲಿ ಅಥವಾ 2027ರ ಆರಂಭದಲ್ಲಿ ನಡೆಯಲಿರುವ ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮೈಸೂರು, ಚಾಮರಾಜನಗರ ಹಾಗೂ ಊಟಿ ಭಾಗದಿಂದ ಮತ್ತೊಮ್ಮೆ ನಿಮ್ಮ ಸೇವಕನಾಗಿ ಸ್ಪರ್ಧಿಸುತ್ತಿದ್ದೇನೆ.
ನನ್ನ ಮನದಾಳದಲ್ಲಿ ಸದಾ ಹೊತ್ತಿರುವುದು ನಮ್ಮ ಸಮುದಾಯದ ನೋವು, ಮತ್ತು ಭವಿಷ್ಯದ ಚಿಂತನೆ. ಸಮುದಾಯದ ಪರವಾಗಿ ನಿಷ್ಠೆಯಿಂದ ಕೆಲಸ ಮಾಡಬೇಕು, ನಮ್ಮ ಜನರ ಧ್ವನಿಯಾಗಬೇಕು, ನಮ್ಮ ಹಕ್ಕುಗಳಿಗೆ ಬಲವಾಗಬೇಕು ಎಂಬ ಬದ್ಧತೆಯೊಂದೇ ನನ್ನನ್ನು ಮತ್ತೆ ನಿಮ್ಮ ಮುಂದೆ ಕರೆದುಕೊಂಡು ಬಂದಿದೆ.

ಆದ್ದರಿಂದ ಪ್ರೀತಿಯ ಬಂಧುಗಳೇ, ನನಗೆ ಒಂದು ಅವಕಾಶ ನೀಡಿ. ನೀವು 2021ರಲ್ಲಿ ತೋರಿದ ಪ್ರೀತಿ, ವಿಶ್ವಾಸ ಮತ್ತು ಬೆಂಬಲವನ್ನು ದ್ವಿಗುಣಗೊಳಿಸಿ ಈ ಬಾರಿಯೂ ನನ್ನ ಮೇಲೆ ಭರವಸೆ ಇಟ್ಟು, ನಿಮ್ಮ ಅಮೂಲ್ಯ ಮತದಾನದ ಮೂಲಕ ಗೆಲುವಿನ ದಾರಿಗೆ ಕೊಂಡೊಯ್ಯಬೇಕಾಗಿ ವಿನಮ್ರವಾಗಿ ಬೇಡಿಕೊಳ್ಳುತ್ತೇನೆ.

ನಿಮ್ಮ ಒಂದು ಮತ ನನ್ನ ವೈಯಕ್ತಿಕ ಗೆಲುವಿಗಲ್ಲ — ಅದು ನಮ್ಮ ಸಮುದಾಯದ ಗೌರವಕ್ಕೆ, ನಮ್ಮ ಏಕತೆಗೆ, ನಮ್ಮ ಭವಿಷ್ಯಕ್ಕೆ ಬಲ ತುಂಬುವ ಮತವಾಗಿರುತ್ತದೆ.

ನಿಮ್ಮ ಪ್ರೀತಿ ನನ್ನ ಉಸಿರು,
ನಿಮ್ಮ ವಿಶ್ವಾಸ ನನ್ನ ಶಕ್ತಿ,
ನಿಮ್ಮ ಆಶೀರ್ವಾದವೇ ನನ್ನ ಗೆಲುವಿನ ಬೆಳಕು.

ನಿಮ್ಮವ..
ಬೀಡನಹಳ್ಳಿ ಸತೀಶ್ ಗೌಡ .
099864 03488

Want your business to be the top-listed Government Service in Mysore?

Click here to claim your Sponsored Listing.

Location

Category

Telephone

Website

Address


Mysore
570023