27/03/2024
ಪ್ರಜಾಪ್ರಭುತ್ವ ಎಂದರೆ ಕೇವಲ ಆಡಳಿತದ ವಿಧಾನವಲ್ಲ. ಅದೊಂದು ಒಗ್ಗೂಡಿ ಬಾಳುವ ವಿಧಾನ. ಸಮಗ್ರ ಬದುಕಿನ ಅನುಭವ. ಜೊತೆಯಲ್ಲಿರುವ ಮನುಷ್ಯರಿಗೆ ಘನತೆ, ಗೌರವ ನೀಡುವ ಕ್ರಮ.
- ಡಾ.ಬಿ.ಆರ್. ಅಂಬೇಡ್ಕರ್
Mysore District Youth Congress
Siddaramaiah
Rahul Gandhi
Raghu ifun
20/03/2024
*ಸಂವಿಧಾನ ರಕ್ಷಿಸುವ, ಗೌರವಿಸುವ ನಾಯಕನಿಗಿರಲಿ ನಿಮ್ಮ ಅಮೂಲ್ಯ ಮತ*
ಲೋಕಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆ ಸಾರ್ವಜನಿಕರು ಯಾವುದೇ ಸಭೆ- ಸಮಾರಂಭ ಅಥವಾ ಕಾರ್ಯಕ್ರಮಗಳನ್ನು ನಡೆಸಿದರೆ ಅದಕ್ಕೆ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಜೊತೆಗೆ ಅಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಚರ್ಚೆಗಳನ್ನು ಮಾಡಬಾರದು. ರಾಜಕೀಯ ಪಕ್ಷಗಳ ಬಾವುಟ, ಚಿಹ್ನೆಗಳನ್ನು ಬಳಸಬಾರದು ಹಾಗೂ ಮತಯಾಚಿಸುವುದು ಕೂಡ ಕಾನೂನು ಬಾಹಿರವಾಗಿದೆ.
Mysore District Youth Congress
20/03/2024
"ಕಲ್ಯಾಣ ಕರ್ನಾಟಕದ ನಡೆ - ಅಭಿವೃದ್ಧಿಯ ಕಡೆ"
ಪ್ರಾದೇಶಿಕ ಅಸಮತೋಲನದಿಂದಾಗಿ ಅಭಿವೃದ್ಧಿಯಲ್ಲಿ ಹಿನ್ನಡೆ ಕಂಡಿದ್ದ ಕಲ್ಯಾಣ ಕರ್ನಾಟಕ ಇಂದು ಆರೋಗ್ಯ, ಶಿಕ್ಷಣ, ಉದ್ಯೋಗ, ಆಡಳಿತಾತ್ಮಕ ದೃಷ್ಟಿಯಿಂದ ರಾಜ್ಯದ ಇತರೆ ಜಿಲ್ಲೆಗಳಿಗೆ ಸಮಾನವಾಗಿ ಮುನ್ನಡೆಯುತ್ತಿದೆ.
ಕರ್ನಾಟಕದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭಗೊಂಡಿದೆ.
#ಕಲ್ಯಾಣಕರ್ನಾಟಕ
Mysore District Youth Congress
Siddaramaiah
Rahul Gandhi
Raghu ifun
19/03/2024
ಮಳೆ ಕೊರತೆಯಿಂದಾಗಿ ಈ ವರ್ಷ ನೀರಿನ ಆಕರಗಳೆಲ್ಲವು ಬತ್ತಿ ಹೋಗಿವೆ. ಬಿರು ಬಿಸಿಲಿಗೆ ಬಾಯಾರಿದ ಪ್ರಾಣಿ ಪಕ್ಷಿಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಈ ಮೂಕವೇದನೆಯನ್ನು ಅರ್ಥ ಮಾಡಿಕೊಂಡ ಮಲೆನಾಡಿನ ರೈತರೊಬ್ಬರು ತಮ್ಮ ಸ್ವಂತ ಜಮೀನಿನಲ್ಲಿರುವ ಬೋರ್‌ವೆಲ್‌ನಿಂದ ನೀರೆತ್ತಿ ಬತ್ತಿದ ನದಿಗೆ ಹರಿಸುವ ಮೂಲಕ ಸಹಸ್ರಾರು ವನ್ಯಜೀವಿಗಳಿಗೆ ನೀರುಣಿಸುವ ಕೆಲಸ ಮಾಡಿದ್ದಾರೆ.
ನೀವು ಕೂಡ ನಿಮ್ಮ ಮನೆಯ ಮೇಲ್ಛಾವಣಿಯಲ್ಲಿ ಅಥವಾ ಅಂಗಳದಲ್ಲಿ ನಿತ್ಯ ಸ್ವಲ್ಪ ನೀರನ್ನು ಇಡಿ, ನಿಮ್ಮ ಈ ಪುಟ್ಟ ಕಾರ್ಯ ನಾಲ್ಕಾರು ಜೀವ ಉಳಿಸಬಲ್ಲದು.
Mysore District Youth Congress
Siddaramaiah
Rahul Gandhi
Raghu ifun
19/03/2024
ಮಳೆಕೊರತೆಯಿಂದಾಗಿ ರಾಜ್ಯದಲ್ಲಿ ಬಹುತೇಕ ಬೋರ್‌ವೆಲ್‌ಗಳು ಬತ್ತಿಹೋಗಿವೆ,
ಬಿಸಿಲಿನ ತಾಪಕ್ಕೆ ನದಿಗಳ ಒಡಲು ಬರಿದಾಗುತ್ತಿದೆ, ಇಂತಹ ಸಂದರ್ಭದಲ್ಲಿ ನೀರಿನ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಅಗತ್ಯಕ್ಕೆ ಬೇಕಾದಷ್ಟೇ ಬಳಸುವ ಮೂಲಕ ಇತರರಿಗೆ ಮಾದರಿಯಾಗೋಣ.
ನೀರನ್ನು ಹಿತಮಿತವಾಗಿ ಬಳಸೋಣ,
ಜವಾಬ್ದಾರಿಯುತ ಪ್ರಜೆಗಳಾಗೋಣ.
Mysore District Youth Congress
Siddaramaiah
Rahul Gandhi
Raghu ifun
19/03/2024
ರಾಜ್ಯದ 28 ಲೋಕಸಭಾ ಸ್ಥಾನಗಳಿಗೆ ಮೊದಲ ಹಂತದಲ್ಲಿ ಏಪ್ರಿಲ್ 26 ಹಾಗೂ ಎರಡನೇ ಹಂತದಲ್ಲಿ ಮೇ 07 ರಂದು ಸಾರ್ವತ್ರಿಕ ಚುನಾವಣೆಗಳು ನಡೆಯಲಿದೆ.
ಅಂದು ನಿಮ್ಮೆಲ್ಲಾ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬದಿಗೊತ್ತಿ ತಪ್ಪದೇ ಮತದಾನ ಮಾಡಿ.
ನಿಮ್ಮ ಮತ ನಿಮ್ಮ ಹಕ್ಕು....
Mysore District Youth Congress
Siddaramaiah Rahul Gandhi Raghu ifun
17/03/2024
ನಟನೆಯ ಜೊತೆಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ನಿಷ್ಕಲ್ಮಶ ಮನಸಿನ ನಗುಮೊಗದ ಹುಡುಗ "ಅಪ್ಪು" ವನ್ನು ಅವರ ಜನ್ಮದಿನದಂದು ಪ್ರೀತಿ ಗೌರವದಿಂದ ಸ್ಮರಿಸಿ ನಮಿಸೋಣ.
ಪುನೀತ್ ರಾಜ್‍ಕುಮಾರ್ ತೋರಿದ ಅಂತಃಕರಣ ತುಂಬಿದ ಬದುಕಿನ ಹಾದಿ ನಮ್ಮೆಲ್ಲರದಾಗಲಿ.
Mysore District Youth Congress
Raghu ifun
Rahul Gandhi
Siddaramaiah
15/03/2024
ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ವೇಳೆ ಜನರ ಪ್ರಾಣರಕ್ಷಣೆಗಾಗಿ ನಿಸ್ವಾರ್ಥದಿಂದ ಹೋರಾಡಿ, ವೀರಮರಣವನ್ನಪ್ಪಿದ ನಾಡಿನ ಹೆಮ್ಮೆಯ ಯೋಧ, ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಜನ್ಮದಿನದ ಸಂದರ್ಭದಲ್ಲಿ ಅವರ ಸೇವೆ - ಸಮರ್ಪಣಾಭಾವವನ್ನು ಗೌರವದಿಂದ ಸ್ಮರಿಸಿ ನಮಿಸುತ್ತೇನೆ.
Mysore District Youth Congress
Raghu ifun Siddaramaiah Rahul Gandhi
12/03/2024
ರಾಜ್ಯ ಸರ್ಕಾರಿ ನೌಕರರುಗಳಿಗೆ 1ನೇ ಜನವರಿ 2024 ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯ ದರಗಳನ್ನು ಪ್ರಸ್ತುತ ಮೂಲ ವೇತನದ ಶೇ. 38.75 ರಿಂದ ಶೇ. 42.5 ಕ್ಕೆ ಹೆಚ್ಚಿಸಿ ಆದೇಶಿಸಲಾಗಿದೆ.
ಸರ್ಕಾರ ಮತ್ತು ಜನರ ನಡುವಿನ ಕೊಂಡಿಯಂತೆ ಕೆಲಸ ಮಾಡುತ್ತಿರುವ, ಸರ್ಕಾರದ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ನಮ್ಮ ಜೊತೆ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರ ಜೊತೆ ನಾವಿದ್ದೇವೆ. ಸರ್ಕಾರಿ ನೌಕರರ ಹಿತಕಾಯಲು ನಾವು ಸದಾ ಬದ್ಧರಿದ್ದೇವೆ.
#ತುಟ್ಟಿಭತ್ಯೆ
Mysore District Youth Congress
Raghu ifun
Rahul Gandhi
Siddaramaiah
05/03/2024
"ಪೋಲಿಯೋ ಮುಕ್ತ ಭಾರತ"
ನಮ್ಮ ಅಭಿಯಾನಕ್ಕೆ ನಿಮ್ಮ ಬೆಂಬಲವಿರಲಿ.
5 ವರ್ಷದೊಳಗಿನ ಮಗುವಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ.
ಎರಡು ಹನಿ ಲಸಿಕೆ ನಿಮ್ಮ ಮಗುವಿನ ಭವಿಷ್ಯ ನಿರ್ಧರಿಸಲಿದೆ.
ಮರೆಯದಿರಿ.. ಮಾರ್ಚ್ 3 ರ ಭಾನುವಾರದ ನಿಮ್ಮ ಮೊದಲ ಕಾರ್ಯ ಮಗುವಿಗೆ ಪೋಲಿಯೋ ಲಸಿಕೆ ಹಾಕಿಸುವುದಾಗಿರಲಿ.
05/03/2024
ನಾವು ಜನರನ್ನು ದೇವರು - ಧರ್ಮದ ಹೆಸರಲ್ಲಿ ಮರುಳು ಮಾಡಿ ಅಧಿಕಾರ ನಡೆಸುವುದಿಲ್ಲ. ಅನ್ನ - ಆರೋಗ್ಯ - ಅಕ್ಷರ - ಸೂರು - ನೀರಿಗಾಗಿ ಕಾರ್ಯಕ್ರಮ ಜಾರಿ ಮಾಡಿದ್ದೇವೆ.
ಹಿಂದಿನ ಅವಧಿಯಲ್ಲಿ 3 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಕೆ.ಸಿ.ವ್ಯಾಲಿ ಮತ್ತು ಹೆಚ್.ಎನ್.ವ್ಯಾಲಿ ಯೋಜನೆ ಜಾರಿ ಮಾಡಿದ್ದೆವು ಮತ್ತು ಈಗ ವೃಷಭಾವತಿ ಯೋಜನೆಯನ್ನು 2,100 ಕೋಟಿ ಖರ್ಚು ಮಾಡಿ ಜಾರಿ ಮಾಡುತ್ತಿದ್ದೇವೆ. ಇದರಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರ ನೀರಿನ ಬವಣೆ ಶಾಶ್ವತವಾಗಿ ತೀರುತ್ತದೆ. ಈ ಜಿಲ್ಲೆಗಳ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ, ಆ ಮೂಲಕ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಜೀವಕಳೆ ಬರಲಿ....
...