Mysuru District Police

Mysuru District Police

Share

ಮೈಸೂರು ಜಿಲ್ಲಾ ಪೊಲೀಸ್ ಘಟಕವು ಸಾಮಾಜಿಕ ಜಾಲತಾಣಗಳ ಮೂಲಕವು ಸಹ ಸದಾ ನಿಮ್ಮ ಸೇವೆಯಲ್ಲಿದೆ.

04/06/2026

ಮಹಿಳಾ ಮತ್ತು ಮಕ್ಕಳ ರಕ್ಷಣೆಗಾಗಿ
ಅಕ್ಕ ಪಡೆ ಸದಾ ನಿಮ್ಮೊಂದಿಗೆ. 🚔
ಯಾವುದೇ ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ಕರೆಮಾಡಿ.
📞 ಮಹಿಳಾ ಸಹಾಯವಾಣಿ : 181
📞 ಮಕ್ಕಳ ಸಹಾಯವಾಣಿ : 1098

03/06/2026

ಶಾಲಾ ಮಕ್ಕಳು ರಸ್ತೆ ದಾಟುವ ಸ್ಥಳಗಳಲ್ಲಿ ವೇಗ ಕಡಿಮೆ ಮಾಡಿ, ಎಚ್ಚರಿಕೆಯಿಂದ ವಾಹನ ಚಲಾಯಿಸಿ — ನಿಮ್ಮ ಒಂದು ಕ್ಷಣದ ಜಾಗರೂಕತೆ ಅಮೂಲ್ಯ ಜೀವಗಳನ್ನು ಕಾಪಾಡುತ್ತದೆ.

🔹 ನಿಧಾನಗತಿ • ಸುರಕ್ಷಿತ ಸಂಚಾರ • ಮಕ್ಕಳ ರಕ್ಷಣೆ 🔹

#ಸುರಕ್ಷಿತಸಂಚಾರ #ಶಾಲಾಮಕ್ಕಳಸುರಕ್ಷತೆ

03/06/2026

ಕಳುವಾಗಿದ್ದ 35ಲಕ್ಷ ರೂ ಮೌಲ್ಯದ 173 ಮೊಬೈಲ್ ವಶಕ್ಕೆ ಪಡೆದಿರುವ ಬಗ್ಗೆ ಪತ್ರಿಕಾ ವರದಿ.

03/06/2026

Tweeted by,
Dr. M. A. Saleem, IPS.
Director General and Inspector General of Police,
Head of Police Force,
Karnataka State.

03/06/2026

ಕೆಲವು ನಿಮಿಷಗಳನ್ನು ಉಳಿಸಲು ತಪ್ಪು ಲೇನ್ ನಲ್ಲಿ ಚಲಿಸಿದರೆ, ಅದರಿಂದಾಗುವ ಅನಾಹುತದಿಂದ ಚೇತರಿಸಿಕೊಳ್ಳಲು ಬಹಳ ವರ್ಷ ಬೇಕಾಗುತ್ತದೆ.

02/06/2026

ಸಾರ್ವಜನಿಕ Wi-Fi ಬಳಕೆ ಮಾಡುವಾಗ ಎಚ್ಚರ!
📶 ಉಚಿತ Public Wi-Fi ಬಳಸುವುದರಿಂದ ನಿಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕ್ ವಿವರಗಳು ಮತ್ತು ಪಾಸ್‌ವರ್ಡ್‌ಗಳು ಹ್ಯಾಕರ್ ಗಳ ಕೈಗೆ ಸಿಲುಕುವ ಸಾಧ್ಯತೆ ಇದೆ.

🚫 ಅಗತ್ಯವಿಲ್ಲದೆ Public Wi-Fi ಬಳಸಬೇಡಿ
✅ ಸುರಕ್ಷಿತ ಮತ್ತು ನಂಬಿಗಸ್ತ ಜಾಲವನ್ನು ಮಾತ್ರ ಬಳಸಿ
🔒 Cyber Safetyಗಾಗಿ ಸದಾ ಎಚ್ಚರಿಕೆಯಿಂದಿರಿ

Photos from Mysuru District Police's post 02/06/2026

ಮೈಸೂರು ಜಿಲ್ಲಾ ಪೊಲೀಸ್ ಘಟಕದ ವ್ಯಾಪ್ತಿಯಲ್ಲಿ, ಸಾರ್ವಜನಿಕರ ಕಳೆದುಹೋದ ಮೊಬೈಲ್ ಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ CEIR (Central Equipment Identity Register) ಪೋರ್ಟಲ್ ಬಳಸಿ ಕೈಗೊಂಡ ವಿಶೇಷ ಕಾರ್ಯಾಚರಣೆಯಲ್ಲಿ ಸುಮಾರು ₹35 ಲಕ್ಷ ಮೌಲ್ಯದ ವಿವಿಧ ಕಂಪೆನಿಗಳ 173 ಆಂಡ್ರಾಯ್ಡ್ ಮೊಬೈಲ್ ಗಳನ್ನು ಪತ್ತೆಹಚ್ಚಲಾಗಿದೆ. ಪತ್ತೆಯಾದ ಮೊಬೈಲ್ ಗಳನ್ನು ಮರಳಿ ವಾರಸುದಾರರಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಮಲ್ಲಿಕಾರ್ಜುನ ಬಾಲದಂಡಿ, ಐಪಿಎಸ್ ರವರ ಸಮಕ್ಷಮದಲ್ಲಿ ಹಸ್ತಾಂತರಿಸಲಾಯಿತು.

ದಿನಾಂಕ 27.01.2026 ರಂದು ಪಿರ್ಯಾದಿದಾರರು ನೀಡಿದ ದೂರಿನ ಅನ್ವಯ, ಅಪರಿಚಿತ ವ್ಯಕ್ತಿಗಳು ವಾಟ್ಸಾಪ್ ಮೂಲಕ ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿಗಳು ತನಿಖೆ ನಡೆಸಿ, 3 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದರು.

ಈ ಸಂದರ್ಭದಲ್ಲಿ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ. ಮಲ್ಲಿಕ್ ಸಿ. ರವರು ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಡಿವೈಎಸ್ಪಿ ಶ್ರೀಕಾಂತ್ ಆರ್. ರವರು ಉಪಸ್ಥಿತರಿದ್ದರು.

Photos from Mysuru District Police's post 02/06/2026

ಇಂದು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಮಲ್ಲಿಕಾರ್ಜುನ ಬಾಲದಂಡಿ, ಐಪಿಎಸ್ ರವರು ಸಾರ್ವಜನಿಕರಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ KSP ಮೊಬೈಲ್ ಆ್ಯಪ್‌ನಲ್ಲಿರುವ "Drug Free Karnataka" ಮಾಡ್ಯೂಲ್ ಅನ್ನು ಸದುಪಯೋಗಪಡಿಸಿಕೊಂಡು ಮಾದಕ ವಸ್ತುಗಳ ಮಾರಾಟ, ಸಾಗಾಟ ಹಾಗೂ ದುರ್ಬಳಕೆ ಕುರಿತು ಮಾಹಿತಿಯನ್ನು ಗೌಪ್ಯವಾಗಿ ಹಂಚಿಕೊಳ್ಳುವಂತೆ ಮನವಿ ಮಾಡಿದರು.

ಅದೇ ರೀತಿ, ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಜಾರಿಗೊಳಿಸಲಾಗಿರುವ ಸಮುದಾಯ ಪೊಲೀಸ್ ಉಪಕ್ರಮವಾದ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ (LHBS) ಸೇವೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. ಮನೆಗಳನ್ನು ಲಾಕ್ ಮಾಡಿ ಹೊರ ಊರಿಗೆ ತೆರಳುವ ಸಂದರ್ಭದಲ್ಲಿ LHBS ನಲ್ಲಿ ನೋಂದಾಯಿಸಿಕೊಳ್ಳುವುದರಿಂದ ಪೊಲೀಸ್ ಇಲಾಖೆಯಿಂದ ಮನೆಗಳ ಮೇಲ್ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು.

Photos from Mysuru District Police's post 01/06/2026

ನಂಜನಗೂಡು ಪಟ್ಟಣದಲ್ಲಿ ನಡೆಯಲಿರುವ ಹನುಮ ಜಯಂತಿ ಪ್ರಯುಕ್ತ, ಈ ದಿನ ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಮಲ್ಲಿಕಾರ್ಜುನ ಬಾಲದಂಡಿ ಐಪಿಎಸ್ ರವರ ನೇತೃತ್ವದಲ್ಲಿ ಶಾಂತಿ ಸಭೆಯನ್ನು ಆಯೋಜಿಸಲಾಯಿತು.

ಸಭೆಯಲ್ಲಿ ಅಪರ ಪೊಲೀಸ್ ಅಧೀಕ್ಷಕರು ಹಾಗೂ ವಿವಿಧ ಕೋಮಿನ ಮುಖಂಡರುಗಳು ಉಪಸ್ಥಿತರಿದ್ದು, ಹಬ್ಬವನ್ನು ಶಾಂತಿಯುತವಾಗಿ, ಸೌಹಾರ್ದಯುತವಾಗಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಆಚರಿಸುವ ಕುರಿತು ಚರ್ಚಿಸಿ ಅಗತ್ಯ ಸಲಹೆ ಹಾಗೂ ಸೂಚನೆಗಳನ್ನು ನೀಡಲಾಯಿತು.

01/06/2026

ದ್ವಿಚಕ್ರ ವಾಹನ‌ ಸವಾರರು ಮತ್ತು ಹಿಂಬದಿ‌ ಸವಾರರು ಸದಾ ಹೆಲ್ಮೆಟ್ ಧರಿಸಿರಿ.ಹೆಲ್ಮೆಟ್ ಧರಿಸುವುದು ದಂಡದ ಭಯದಿಂದಲ್ಲ ಬದಲಿಗೆ ಜೀವನ‌ ರಕ್ಷಣೆಗೆ .

Want your business to be the top-listed Government Service in Mysore?

Click here to claim your Sponsored Listing.

Location

Telephone

Address


Office Of The Superintendent Of Police , District Police Office , T. Hari Krishna Circle , Jalpuri
Mysore
570019