Anikethana Seva trust

Anikethana Seva trust

Share

this page is about political, art and literature.

27/05/2026
Photos from HV Rajeeva's post 09/05/2026
06/05/2026

ಮಡಿಕೇರಿ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪ ಅವರಿಗೆ ಅಭಿನಂದನೆಗಳು

ಮಡಿಕೇರಿ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ, ಕವಿ, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಆಯ್ಕೆಯಾಗಿದ್ದಾರೆ.

ಐತಿಚಂಡ ರಮೇಶ್ ಉತ್ತಪ್ಪ ಅವರು ಕೊಡಗು ಮೂಲದ ಹಿರಿಯ ಪತ್ರಕರ್ತರು ಮತ್ತು ಹೆಸರಾಂತ ಲೇಖಕರು. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕರಡ ಗ್ರಾಮದಲ್ಲಿ ಜನಿಸಿದ ಇವರು ತಮ್ಮ ವಿದ್ಯಾಭ್ಯಾಸವನ್ನು ಕೊಡಗು ಜಿಲ್ಲೆ ಮತ್ತು ಮೈಸೂರಿನಲ್ಲಿ ಪೂರೈಸಿದ್ದಾರೆ. ಅವರು ಕನ್ನಡ ಜಾನಪದ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ವೃತ್ತಿಜೀವನ ಮತ್ತು ಸಾಹಿತ್ಯ ಕೃಷಿಯನ್ನು ಪತ್ರಿಕೋದ್ಯಮದ ಮೂಲಕ ಪ್ರಾರಂಭಿಸಿದ ಇವರು ದೀರ್ಘಕಾಲದಿಂದ ಪತ್ರಿಕೋದ್ಯಮದಲ್ಲಿದ್ದು, ಪ್ರಸ್ತುತ ಮೈಸೂರಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಮೇಶ್ ಉತ್ತಪ್ಪ ಅವರು ಇದುವರೆಗೆ 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ವನ್ಯಜೀವಿ ಸಾಹಿತ್ಯದಲ್ಲಿ ಆಸಕ್ತರಾಗಿದ್ದು, ವಿಶೇಷವಾಗಿ ಆನೆಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಇವರು, ಆನೆಗಳ ಕುರಿತೇ ಸುಮಾರು 10 ಪುಸ್ತಕಗಳನ್ನು ಬರೆದಿದ್ದಾರೆ. ಕೊಡುವ ಭಾಷೆಯಲ್ಲಿಯೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ.
ಪತ್ರಕರ್ತ ರಮೇಶ್ ಉತ್ತಪ್ಪ ಅವರ ಕೆಲವು ಗಮನಾರ್ಹ ಕೃತಿಗಳೆಂದರೆ, ಅಭಿಮನ್ಯು ದಿ ಗ್ರೇಟ್, ಮೈಸೂರು ದಸರಾದ ಅಂಬಾರಿ ಆನೆ ಅಭಿಮನ್ಯುವಿನ ಕುರಿತಾದ ಪುಸ್ತಕ.
ಆನೆ ಲೋಕದ ವಿಸ್ಮಯ, ಆನೆಗಳ ಪ್ರಪಂಚದ ಕುರಿತಾದ ಮಾಹಿತಿ ಹೊಂದಿರುವ ಕೃತಿ (ಇದು 'ದಿ ಟಾಕಿಂಗ್ ಎಲಿಫೆಂಟ್' ಹೆಸರಿನಲ್ಲಿ ಇಂಗ್ಲಿಷ್‌ಗೂ ಅನುವಾದಗೊಂಡಿದೆ).
ಕುಶಾ ಕಿ ಕಹಾನಿ, ಕೊಡಗಿನ ದುಬಾರೆ ಆನೆ ಶಿಬಿರದ ಕುಶ ಎಂಬ ಆನೆಯ ಕುರಿತಾದ ಕಥೆ.
ಸಾವಿನ ಸತ್ಯ, ದಸರಾ ಆನೆ ಅರ್ಜುನನ ಸಾವಿನ ಕುರಿತಾದ ತನಿಖಾ ವರದಿ ಒಳಗೊಂಡ ಕೃತಿ.
ಇವರ 'ಕೊಡಗಿನ ಆಟಿ ತಿಂಗಳ ಆಚರಣೆಯ ಅಚ್ಚರಿಗಳು' ಎಂಬ ಲೇಖನವು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿ.ಎಸ್ಸಿ ಪಠ್ಯಪುಸ್ತಕದಲ್ಲಿಯೂ ಸೇರ್ಪಡೆಯಾಗಿದೆ.

ಮಡಿಕೇರಿ ತಾಲೂಕು 12ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮಡಿಕೇರಿ ತಾಲೂಕಿನ ಕಡಂಗ (ಅರಪಟ್ಟು) ಗ್ರಾಮದಲ್ಲಿ 20.05.2026 ರಂದು ನಡೆಯಲಿದೆ.

Photos from Anikethana Seva trust's post 03/05/2026
01/05/2026

ಕಾಯಕ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭ

ಅನಿಕೇತನ ಸೇವಾ ಟ್ರಸ್ಟ್ ವತಿಯಿಂದ ಕಾಯಕ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 03-05-2026ನೇ ಭಾನುವಾರ ಬೆಳಗ್ಗೆ 10.30ಕ್ಕೆ ಮೈಸೂರಿನ ತ್ಯಾಗರಾಜ ರಸ್ತೆಯ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ಧುರೀಣರು ಹಾಗೂ ಎಂಡಿಎ ಮಾಜಿ ಅಧ್ಯಕ್ಷರಾದ ಶ್ರೀ ಎಚ್.ವಿ. ರಾಜೀವ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಮಾಜಿ ಮಹಾಪೌರರಾದ ಶ್ರೀ ಅಯೂಬ್‌ಖಾನ್ ಮತ್ತು ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಶ್ರೀ ಬಿ.ಎಲ್. ಭೈರಪ್ಪ ಭಾಗವಹಿಸಲಿದ್ದಾರೆ.

ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಯನ್ನು ಬಸವ ಬಳಗಗಳ ಒಕ್ಕೂಟ ೨೦೨೬ರ ಅಧ್ಯಕ್ಷರು ಹಾಗೂ ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಎಂ. ಚಂದ್ರಶೇಖರ್ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರತಿನಿಧಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಸಿ.ಕೆ. ಮಹೇಂದ್ರ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಕೆ. ದೀಪಕ್, ಪ್ರಧಾನ ಕಾರ್ಯದರ್ಶಿಯಾದ ಶ್ರೀ ಧರ್ಮಾಪುರ ನಾರಾಯಣ್ ಉಪಸ್ಥಿತರಿರುವರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಮುನಿಗೋಪಾಲರಾಜು ಹಾಗೂ ಉತ್ತಮ ಪುಟವಿನ್ಯಾಸಕ ರಾಜ್ಯ ಪ್ರಶಸ್ತಿ ಪುರಸ್ಕೃತರು ಮತ್ತು ಪ್ರತಿನಿಧಿ ದಿನಪತ್ರಿಕೆಯ ಉಪಸಂಪಾದಕರಾದ ಶ್ರೀ ರಂಗು ಸಂದೇಶ್ ಅವರಿಗೆ ಕಾಯಕ ಸೇವಾ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ಜಿಲ್ಲಾ ಘಟಕ ಮೈಸೂರಿನ ಅಧ್ಯಕ್ಷರಾದ ಶ್ರೀ ಬಿ.ಆರ್. ಶಿವಕುಮಾರ್ ನಿರ್ವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಬೇಕಾಗಿ ಕೋರುತ್ತೇನೆ.

ಕೆ.ವಿ. ಮಲ್ಲೇಶ್‌
ಮಾಜಿ ಸದಸ್ಯರು, ಮೈಸೂರು ಮಹಾ ನಗರ ಪಾಲಿಕೆ
ಅಧ್ಯಕ್ಷರು, ಅನಿಕೇತನ ಸೇವಾ ಟ್ರಸ್ಟ್‌
9845218453

24/04/2026

ಭಾವಪೂರ್ಣ ಶ್ರದ್ಧಾಂಜಲಿ

ಬಂಧುಗಳೇ ,
ಮೈಸೂರಿನ ಲಲಿತಮಹಲ್ ನಗರ ( ಆಲನಹಳ್ಳಿ ಬಡಾವಣೆ) ಯ ನಿವಾಸಿಗಳು ವಿಶ್ರಾಂತ ಪೊಲೀಸ್ ಅಧಿಕಾರಿಗಳಾದ ಜೆ.ಬಿ.ರಂಗಸ್ವಾಮಿ ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ರಂಗಸ್ವಾಮಿ ( ಕೆಮಿಸ್ಟ್ರಿ ಪ್ರೊಫೆಸರ್ , ಟೆರೇಸಿಯನ್ ಕಾಲೇಜು, ಮೈಸೂರು ) ಇವರು ದಿನಾಂಕ 20- 04-2026 ರಂದು ನಿಧನರಾಗಿರುವುದು ದು:ಖಕರ ವಿಷಯ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬದವರು, ಬಂಧು ವರ್ಗದವರಿಗೆ ಭಗವಂತನು ದು:ಖ ಭರಿಸುವ ಶಕ್ತಿ ನೀಡಲಿ.

27/03/2026

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ಅವರು ಇಂದು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ಅವರಿಗೆ ಬೆಂಬಲ ಘೋಷಿಸಿದರು.ಈ ವೇಳೆ ನಾನು ಸೇರಿದಂತೆ ಶಾಸಕ ರಿಜ್ವಾನ್ ಅರ್ಷದ್ ಮತ್ತಿತರರು ಉಪಸ್ಥಿತರಿದ್ದರು.

Want your business to be the top-listed Government Service in Mysore?

Click here to claim your Sponsored Listing.

Location

Telephone

Website

Address


#186, Anikethana Road South, I Block, Kuvempunagara
Mysore
5700023