Sujana seva trust

Sujana seva trust

Share

" ಪರೋಪಕಾರಂ ಇದಂ ಶರೀರಂ "

Photos from Sujana seva trust's post 26/02/2026

ಸುಜನ ಸೇವಾ ಟ್ರಸ್ಟ್ ವತಿಯಿಂದ 22.02.2026 ರಂದು ಸೇವಾಯಾನ ವೃದ್ಧಾಶ್ರಮದಲ್ಲಿ ಹೃದಯಸ್ಪರ್ಶಿ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ವೃದ್ಧರ ದಿನನಿತ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕುರ್ಚಿಗಳು ಹಾಗೂ ಪೌಷ್ಟಿಕ ಆಹಾರ ಪದಾರ್ಥಗಳನ್ನು ಪ್ರೀತಿಯಿಂದ ದಾನವಾಗಿ ನೀಡಲಾಯಿತು.
ಕಾರ್ಯಕ್ರಮದ ಅಂಗವಾಗಿ ವೃದ್ಧರ ಮನಸ್ಸಿಗೆ ಉಲ್ಲಾಸ ನೀಡುವ ಉದ್ದೇಶದಿಂದ ಸಂವಾದ ಕಾರ್ಯಕ್ರಮ, ಭಜನೆ, ಪ್ರೇರಣಾದಾಯಕ ಮಾತುಕತೆ, ಆಟಗಳು ಹಾಗೂ ಸ್ಮರಣೆಯ ಕ್ಷಣಗಳನ್ನು ಹಂಚಿಕೊಳ್ಳುವಂತಹ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಯಿತು. ವೃದ್ಧರು ಸಂತೋಷದಿಂದ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡ ಕ್ಷಣಗಳು ಎಲ್ಲರ ಮನದಲ್ಲಿ ಮರೆಯಲಾಗದ ನೆನಪಾಗಿ ಉಳಿದವು.
ಪ್ರೀತಿ, ಸೇವೆ ಮತ್ತು ಮಾನವೀಯ ಮೌಲ್ಯಗಳನ್ನು ಸಾರುವ ಸುಜನ ಸೇವಾ ಟ್ರಸ್ಟ್‌ನ ಈ ಕಾರ್ಯವು ವೃದ್ಧರ ಮುಖದಲ್ಲಿ ಮೂಡಿದ ನಗು ಮತ್ತು ತೃಪ್ತಿಯ ಮೂಲಕ ಮತ್ತಷ್ಟು ಅರ್ಥಪೂರ್ಣವಾಗಿ ಪರಿಣಮಿಸಿತು

Photos from Sujana seva trust's post 26/02/2026

ದಿನಾಂಕ 19.10.2025ರಂದು ಸಮಾಜ ಸೇವೆಯ ಉದ್ದೇಶದಿಂದ Sneha Charitable Trust ನಲ್ಲಿ ವಾಸಿಸುತ್ತಿರುವ ವೃದ್ಧ ಮಹಿಳೆಯರ ಅವಶ್ಯಕತೆಗಳನ್ನು ಮನಗಂಡು, ಅವರಿಗೆ ದಿನನಿತ್ಯದ ವಸ್ತುಗಳನ್ನು ಸುರಕ್ಷಿತವಾಗಿ ಇಡಲು ಅನುಕೂಲವಾಗುವಂತೆ ಒಂದು ಬೀರುವನ್ನು ದಾನವಾಗಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಮಾನವೀಯತೆ ಹಾಗೂ ಕರುಣೆಯ ಸಂದೇಶವನ್ನು ಸಾರುವ ಉದ್ದೇಶದಿಂದ Sujana Seva Trust ವತಿಯಿಂದ ಹಣ್ಣುಗಳನ್ನು ವಿತರಿಸಿ, ವೃದ್ಧರೊಂದಿಗೆ ಆತ್ಮೀಯವಾಗಿ ಸಮಯ ಕಳೆಯಲಾಯಿತು.
ಈ ಸೇವಾ ಕಾರ್ಯವು ವೃದ್ಧರ ಮುಖದಲ್ಲಿ ಸಂತೋಷದ ನಗು ಮೂಡಿಸಿದ್ದು, ಸಮಾಜದಲ್ಲಿ ಪರಸ್ಪರ ಸಹಕಾರ ಮತ್ತು ದಾನಧರ್ಮದ ಮಹತ್ವವನ್ನು ಮತ್ತಷ್ಟು ಬಲಪಡಿಸುವಂತಾಯಿತು.

Photos from Sujana seva trust's post 25/02/2026

ದಿನಾಂಕ 07.07.2025ರಂದು ಶ್ರೀರಾಂಪುರದಲ್ಲಿರುವ ನವಚೇತನ ಬಸವೇಶ್ವರ ಟ್ರಸ್ಟ್ ಗೆ ಭೇಟಿ ನೀಡಿ ಅಲ್ಲಿ ವಿಶೇಷ ಚೇತನರ ಮಕ್ಕಳ ಶಾಲೆಯನ್ನು ನಡೆಸುತ್ತಿರುವ ಮರಿಗೌಡ ರವರನ್ನು ಭೇಟಿ ಮಾಡಿ 27.07.2025 ರ ಭಾನುವಾರದಂದು ವಾರ್ಷಿಕ ಸಮಾರಂಭದ ಜೊತೆ ಅವರ ಟ್ರಸ್ಟ್ ನ ಮಕ್ಕಳಿಗೆ ಅಗತ್ಯವಿರುವ ಚಟುವಟಿಕೆಯ ಸಾಮಗ್ರಿಗಳನ್ನು ವಿತರಣೆ ಮಾಡಿ ವಿಶೇಷ ಚೇತನ ಮಕ್ಕಳೊಂದಿಗೆ ವಿಶೇಷ ಕ್ಷಣಗಳನ್ನು ಕಳೆಯಲಾಯಿತು

25/02/2026

ದಿನಾಂಕ:15/02/2025 ರಂದು ಮೇಟಗಳ್ಳಿಯಲ್ಲಿರುವ ಆಶಾದಾಯಕ ಸೇವಾ ಟ್ರಸ್ಟ್ ಗೆ ಬೇಟಿ ನೀಡಿ ಅಲ್ಲಿ ನೆಲೆಸಿರುವ ಅನಾಥ ಮಕ್ಕಳಿಗೊಸ್ಕರ ಕೆಲವು ಅಗತ್ಯವಿರುವ ವಸ್ತುಗಳನ್ನು ಕೇಳಲಾಗಿ ನಂತರ ಟ್ರಸ್ಟ್ ನ ಸದಸ್ಯರ ತಿರ್ಮಾನದಂತೆ ಹಣ್ಣು ಮತ್ತು ಒಳ ಉಡುಪುಗಳನ್ನು ವಿತರಿಸಿ ಮಕ್ಕಳೊಂದಿಗೆ ಬೆರೆತು ಆನಂದಿಸಲಾಯಿತು.

Photos from Sujana seva trust's post 25/02/2026

ಸುಜನ ಸೇವಾ ಟ್ರಸ್ಟ್ ನ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪೈಲ್ವಾನ ಬಸವಯ್ಯ ಶಾಲೆಯ ಮುಖ್ಯೋಪಾಧ್ಯಾಯರನ್ನು ಭೇಟಿ ಮಾಡಿ ಶಾಲೆಯ 44 ಮಕ್ಕಳಿಗೆ ಟಿ-ಶರ್ಟ್ ಅಗತ್ಯವಿರುವುದನ್ನುಮನಗಂಡು , ಜನವರಿ 26 ಗಣರಾಜ್ಯೋತ್ಸವದ ದಿನದಂದು ಕಾರ್ಯಕ್ರಮವನ್ನು ಹಮ್ಮಿಕೊಂಡು ಹಸಿರು ಬಣ್ಣದ ಟಿ-ಶರ್ಟ್ ಹಾಗೂ ಸಿಹಿ ಲಾಡುಗಳನ್ನು ನೀಡಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ವೀಕ್ಷಿಸಿ ಮಕ್ಕಳಿಗೆ ಪುಸ್ತಕ, ಪೇನ್, ಪೆನ್ಸಿಲ್, ರಬ್ಬರ್ ಹಾಗೂ ಇತ್ಯಾದಿಗಳನ್ನು ಬಹುಮಾನವಾಗಿ ವಿತರಿಸಲಾಯಿತು.

Photos from Sujana seva trust's post 25/02/2026

ದಿನಾಂಕ:20/12/2024 ರಿಂದ 22/12/2024ರ ವರೆಗೆ ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶಾಂತಿನಿಕೇತನ ಪ್ರತಿಷ್ಠಾನ(ರಿ) ಹಾಗೂ ಸುಜನ ಸೇವಾ ಟ್ರಸ್ಟ್ ನ ವತಿಯಿಂದ ‘ಕನ್ನಡ ಜಾಗೃತಿ,’ ಕಾರ್ಯಕ್ರಮವನ್ನು ಆಯೋಜಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಸರ್ಕಾರಿ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಮಕ್ಕಳಿಗೆ ಕನ್ನಡ ವ್ಯಾಕರಣ ಪುಸ್ತಕ ಹಾಗೂ ಪ್ರಮಾಣಪತ್ರಗಳನ್ನು ನೀಡಲಾಯಿತು.

Photos from Sujana seva trust's post 25/02/2026

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ತಿಂಗಳಿನಲ್ಲಿ ಲಕ್ಷ್ಮೀ ಪುರಂ ನ ಸರ್ಕಾರಿ ಪ್ರೌಢ ಶಾಲೆಗೆ ಬೇಟಿ ನೀಡಿ ಮುಖ್ಯ ಶಿಕ್ಷಕರ ಸಹಕಾರದೊಂದಿಗೆ ಕನ್ನಡದ ಕಂಪನ್ನು ಪಸರಿಸಲು ಮಕ್ಕಳಿಗೆ ಪ್ರಬಂಧ ಸ್ವರ್ಧೆ, ಚರ್ಚಾ ಸ್ವರ್ಧೆ, ಆಶುಭಾಷಣ ಸ್ವರ್ಧೆ, ಕನ್ನಡ ಪದ್ಯ ಒದುವುದು, ಜೊತೆಗೆ ವಿಧ್ಯಾರ್ಥಿಗಳಿಗೆ ಕಾನೂನು ಹರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿಜೇತರಾದವರಿಗೆ ದಿನಾಂಕ:07/11/2024 ರಂದು ಬಹುಮಾನಗಳನ್ನು ವಿತರಿಸಲಾಯಿತು.

25/02/2026

ದಿನಾಂಕ:26/10/2024ರಂದು ಮೈಸೂರಿನಲ್ಲಿರುವ ಛಾಯದೇವಿ ಮಕ್ಕಳ ಆಶ್ರಮಕ್ಕೆ ಭೇಟಿ ನೀಡಿ, ದೀಪಾವಳಿ ಹಬ್ಬದ ಪ್ರಯುಕ್ತ ಮಕ್ಕಳಿಗೆ ಹೊಸ ಬಟ್ಟೆಗಳನ್ನು ಸುಜನ ಸೇವಾ ಟ್ರಸ್ಟ್ ಸದಸ್ಯರ ವತಿಯಿಂದ ವ್ಯವಸ್ತೆ ಮಾಡಲಾಯಿತು.

25/02/2026

ದಿನಾಂಕ:22/09/2024ರಂದು K.G ಕೊಪ್ಪಲು ನಲ್ಲಿರುವ ಸಾನಿಧ್ಯಾ ವೃದ್ದಾಶ್ರಮಕ್ಕೆ ಭೇಟಿ ನೀಡಿ, ಅವರ ಅವಶ್ಯಕತೆಗಳನ್ನು ಮನಗಂಡು ಅವರಿಗೆ ಸ್ಟೀಲ್ ಪಾತ್ರೆಗಳು ಹಾಗೂ ಮಧ್ಯಾನದ ಊಟವನ್ನು ಸುಜನ ಸೇವಾ ಟ್ರಸ್ಟ್ ಸದಸ್ಯರ ವತಿಯಿಂದ ವ್ಯವಸ್ತೆ ಮಾಡಲಾಯಿತು.

Photos from Sujana seva trust's post 25/02/2026

ದಿನಾಂಕ:20/08/2024ರಂದು ಸುಜನ ಸೇವಾ ಟ್ರಸ್ಟ್ ನ ಸದಸ್ಯರು ಮೈಸೂರು ನಗರದಲ್ಲಿರುವ ಚಿಗುರು ಆಶ್ರಮಕ್ಕೆ ಬೇಟಿ ನೀಡಿ ಮನೋವೈಕಲ್ಯದಿಂದ ಬಳಲುತಿದ್ದ 30ಕ್ಕು ಹೆಚ್ಚು ವೃದ್ದ ಮಹಿಳೆಯರಿಗೆ ಸ್ವೆಟರ್ಗಳನ್ನುವಿತರಿಸಿದರು. ಬದವಲಾಣೆಯ ಮೊದಲ ಹೆಜ್ಜೆ ನಾವು, ನಾವೆಲ್ಲರು ಸಮಾಜಕ್ಕೆ ಬೆಳಕಾಗೋಣ.

Photos from Sujana seva trust's post 15/02/2026

ದಿನಾಂಕ:27/07/2024ರಂದು ಕೃಷ್ಣ ಮೂರ್ತಿಪುರಂನ 104 ವರ್ಷಕ್ಕು ಹಳೆಯ ಸರ್ಕಾರಿ ಮಿಶ್ರಿತ ಪ್ರಾಥಮಿಕ ಶಾಲೆಗೆ ಸುಜನ ಸೇವಾ ಟ್ರಸ್ಟ್ ನ ವತಿಯಿಂದ ಬೇಟಿ ನೀಡಿ, 1 - 7ನೇ ತರಗತಿ ಮಕ್ಕಳಿಗೆ ಅಗತ್ಯವಿದ್ದ ಗ್ರೀನ್ ಯೂನಿಫಾರ್ಮ್ ವ್ಯವಸ್ತೆಯನ್ನು ಮಾಡಲಾಗಿರುತ್ತದೆ. " ಮಕ್ಕಳ ಶಿಕ್ಷಣಕ್ಕೆ ಎಲ್ಲರ ಸಹಕಾರ ಅಗತ್ಯ"

Want your business to be the top-listed Government Service in Mysore?

Click here to claim your Sponsored Listing.

Location

Category

Website

Address


KG KOPPAL
Mysore