Umeshgouda C Patil

Directions

Umeshgouda C Patil ಹೆಮ್ಮೆಯ ಭಾರತೀಯ, ಬಿಜೆಪಿ ಪಕ್ಷದ ಕಾರ್ಯಕರ್ತ

ಇಂದು ನಮ್ಮ ನಿವಾಸದಲ್ಲಿ ಕುಟುಂಬಸ್ಥರೊಂದಿಗೆ ಪೂಜ್ಯ ತಂದೆಯವರ ಹುಟ್ಟುಹಬ್ಬ ಆಚರಣೆ ಮಾಡಿದ ಸಂದರ್ಭ.
22/10/2026

ಇಂದು ನಮ್ಮ ನಿವಾಸದಲ್ಲಿ ಕುಟುಂಬಸ್ಥರೊಂದಿಗೆ ಪೂಜ್ಯ ತಂದೆಯವರ ಹುಟ್ಟುಹಬ್ಬ ಆಚರಣೆ ಮಾಡಿದ ಸಂದರ್ಭ.

ದೇಶದ ಅಭಿವೃದ್ಧಿ, ಸಹಕಾರ ಕ್ಷೇತ್ರದ ಬಲವರ್ಧನೆ ಹಾಗೂ ಸಾರ್ವಜನಿಕ ಕಲ್ಯಾಣದ ಉದ್ದೇಶಗಳೊಂದಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ  ಪಕ್ಷದ ಹಿ...
22/10/2026

ದೇಶದ ಅಭಿವೃದ್ಧಿ, ಸಹಕಾರ ಕ್ಷೇತ್ರದ ಬಲವರ್ಧನೆ ಹಾಗೂ ಸಾರ್ವಜನಿಕ ಕಲ್ಯಾಣದ ಉದ್ದೇಶಗಳೊಂದಿಗೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಪಕ್ಷದ ಹಿರಿಯ ನಾಯಕರು, ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ Amit Shah ಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ದೇಶದ ಪ್ರಗತಿ ಮತ್ತು ಜನರ ಕಲ್ಯಾಣಕ್ಕಾಗಿ ನೀವು ತೋರುತ್ತಿರುವ ಬದ್ಧತೆ, ಕಾರ್ಯನಿಷ್ಠೆ ಹಾಗೂ ದೂರದೃಷ್ಟಿ ಸದಾ ಪ್ರಶಂಸನೀಯ. ಭಗವಂತ ನಿಮಗೆ ಆಯುರಾರೋಗ್ಯ ಕೊಟ್ಟು ಕಾಪಾಡಲೆಂದು ಪ್ರಾರ್ಥಿಸುತ್ತೇನೆ.

ಆತ್ಮೀಯರೇ, ದಿನಾಂಕ 22-10-2026, ಗುರುವಾರ ಪೂಜ್ಯ ತಂದೆಯವರು ಹಾಗೂ ಶಾಸಕರಾದ ಸನ್ಮಾನ್ಯ ಶ್ರೀ ಸಿ.ಸಿ ಪಾಟೀಲ್ ಅವರ ಜನ್ಮದಿನವಿದ್ದು, ಮರುದಿನ ಅಂ...
21/10/2026

ಆತ್ಮೀಯರೇ,

ದಿನಾಂಕ 22-10-2026, ಗುರುವಾರ ಪೂಜ್ಯ ತಂದೆಯವರು ಹಾಗೂ ಶಾಸಕರಾದ ಸನ್ಮಾನ್ಯ ಶ್ರೀ ಸಿ.ಸಿ ಪಾಟೀಲ್ ಅವರ ಜನ್ಮದಿನವಿದ್ದು, ಮರುದಿನ ಅಂದರೆ 23-10-2026 ಶುಕ್ರವಾರದಂದು ಕರ್ನಾಟಕ ಪದವೀಧರ ಕ್ಷೇತ್ರದ ವಿಧಾನ ಪರಿಷತ್ತಿನ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಯಾವುದೇ ರೀತಿಯ ಜನ್ಮದಿನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಿರಲು ಅವರು ನಿರ್ಧರಿಸಿದ್ದಾರೆ.

ಆದ್ದರಿಂದ, ಪಕ್ಷದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಜನ್ಮದಿನಾಚರಣೆಯ ಬದಲಾಗಿ ಚುನಾವಣಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಪಶ್ಚಿಮ ಪದವೀಧರರ ಕ್ಷೇತ್ರದ ನಮ್ಮ ಬಿಜೆಪಿ ಅಭ್ಯರ್ಥಿಯಾದ ಶ್ರೀ ಎಸ್. ವಿ. ಸಂಕನೂರ ಅವರ ಪರವಾಗಿ ಮತದಾರರನ್ನು ಸಂಪರ್ಕಿಸಿ, ಮತಯಾಚನೆ ಕಾರ್ಯವನ್ನು ವ್ಯವಸ್ಥಿತವಾಗಿ ಕೈಗೊಳ್ಳಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.

ಯಾ ದೇವಿ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ ನಮಸ್ತಸ್ಯೈ  ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||‎ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಾಗೂ ದಸರಾ ಹಬ...
21/10/2026

ಯಾ ದೇವಿ ಸರ್ವಭೂತೇಷು ಶಕ್ತಿರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||

‎ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.

‎ಅಧರ್ಮದ ವಿರುದ್ಧ ಧರ್ಮದ ವಿಜಯವನ್ನ ಸಾರುವ ಈ ವಿಜಯದಶಮಿ ಹಬ್ಬ ನಾಡಿನ ಸಮಸ್ತ ಜನತೆಗೆ ಒಳಿತನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.
‎
‎

20/10/2026

ವಿರೋಧ ಪಕ್ಷಗಳು ಜನರಲ್ಲಿ ಅಥವಾ ಯುವಕರಲ್ಲಿ ಗೊಂದಲ ಮೂಡಿಸುವ ಮೂಲಕ ರಾಜಕೀಯ ಲಾಭ ಪಡೆಯಲು ಮತ್ತು ಸರ್ಕಾರದ ಕಾರ್ಯವೈಖರಿಯನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ.

ರಾಷ್ಟ್ರಭಕ್ತಿ, ಶಿಸ್ತು, ಸೇವೆ ಮತ್ತು ಸಮರ್ಪಣೆಯ ಆದರ್ಶಗಳೊಂದಿಗೆ ದೇಶದ ಏಕತೆ, ಅಖಂಡತೆ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಶ್ರಮಿಸುತ್ತಿ...
20/10/2026

ರಾಷ್ಟ್ರಭಕ್ತಿ, ಶಿಸ್ತು, ಸೇವೆ ಮತ್ತು ಸಮರ್ಪಣೆಯ ಆದರ್ಶಗಳೊಂದಿಗೆ ದೇಶದ ಏಕತೆ, ಅಖಂಡತೆ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಶ್ರಮಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪನಾ ದಿನದ ಹಾರ್ದಿಕ ಶುಭಾಶಯಗಳು!

ಯಾವುದೇ ವೈಯಕ್ತಿಕ ಪ್ರತಿಫಲದ ನಿರೀಕ್ಷೆಯಿಲ್ಲದೆ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ಸ್ವಯಂಸೇವಕರ ನಿಸ್ವಾರ್ಥ ಸೇವೆ ಸದಾ ಮುಂದುವರಿಯಲಿ. ಸಂಘದ ಆದರ್ಶಗಳು ರಾಷ್ಟ್ರ ನಿರ್ಮಾಣಕ್ಕೆ ಪ್ರೇರಣೆಯಾಗಲಿ ಹಾಗೂ ಭಾರತವು ಸರ್ವತೋಮುಖ ಅಭಿವೃದ್ಧಿಯತ್ತ ಮುನ್ನಡೆಯಲಿ.

ನಾಡಿನ ಸಮಸ್ತ ಜನತೆಗೆ ಮಹಾನವಮಿ ಹಾಗೂ ಆಯುಧ ಪೂಜೆ ಹಬ್ಬದ ಹಾರ್ದಿಕ ಶುಭಾಶಯಗಳು.ದುರ್ಗಾ ದೇವಿಯು ದುಷ್ಟರನ್ನು ಕೊಂದ ದಿನವಾಗಿ ಆಯುಧಪೂಜೆ ಆಚರಣೆಗೆ...
20/10/2026

ನಾಡಿನ ಸಮಸ್ತ ಜನತೆಗೆ ಮಹಾನವಮಿ ಹಾಗೂ ಆಯುಧ ಪೂಜೆ ಹಬ್ಬದ ಹಾರ್ದಿಕ ಶುಭಾಶಯಗಳು.

ದುರ್ಗಾ ದೇವಿಯು ದುಷ್ಟರನ್ನು ಕೊಂದ ದಿನವಾಗಿ ಆಯುಧಪೂಜೆ ಆಚರಣೆಗೆ ಬಂದಿದೆ‌. ಆಯುಧ ಪೂಜೆಯನ್ನು ಅಸ್ತ್ರ ಪೂಜೆ ಎಂದೂ ಕರೆಯುತ್ತಾರೆ. ಇದು ನಮ್ಮ ಜೀವನಕ್ಕೆ ಮಹತ್ವ ನೀಡುವ ಎಲ್ಲಾ ಸಾಧನಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದಾಗಿದೆ.

ತಾಯಿ ಚಾಮುಂಡೇಶ್ವರಿ ಅಮ್ಮನವರ ಆಶೀರ್ವಾದ ಸದಾ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ.

ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯ.

"ಚುನಾವಣಾ ಪ್ರಚಾರ ಸಭೆ" ಭಾರತೀಯ ಜನತಾ ಪಾರ್ಟಿಯ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ನಿಮಿತ್ತ ನರಗುಂದ ವಿಧಾನಸಭಾ ಕ್ಷೇತ್ರದ ಹೊ...
19/10/2026

"ಚುನಾವಣಾ ಪ್ರಚಾರ ಸಭೆ"

ಭಾರತೀಯ ಜನತಾ ಪಾರ್ಟಿಯ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ನಿಮಿತ್ತ ನರಗುಂದ ವಿಧಾನಸಭಾ ಕ್ಷೇತ್ರದ ಹೊಳೆ ಆಲೂರು ಹಾಗೂ ಕೊಣ್ಣೂರ ಗ್ರಾಮಗಳಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾದ ಶ್ರೀ ಎಸ್.ವಿ. ಸಂಕನೂರ್ ಅವರ ಪರವಾಗಿ ಚುನಾವಣಾ ಪ್ರಚಾರ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ಬೆನಹಾಳ, ಹುನಗುಂಡಿ, ಹೊಳೆಮಣ್ಣೂರು, ಹೊಳೆಹಡಗಲಿ, ಗಾಡಗೋಳಿ, ಅಮರಗೋಳ, ಬಿ ಎಸ್ ಬೇಲೇರಿ, ಬೂದಿಹಾಳ, ವಾಸನಾ ಬೆಳ್ಳೇರಿ, ಲಖಮಾಪುರ ಗ್ರಾಮಗಳ ಮುಖಂಡರುಗಳು ಭಾಗಿಯಾಗಿದ್ದರು.

BJP Karnataka Pralhad Joshi Vijayendra Yediyurappa R Ashoka C C Patil

ಸಮುದ್ರದಲ್ಲೂ ಮೊಳಗುತ್ತಿದೆ ಭಾರತದ ಆತ್ಮನಿರ್ಭರ ಭಾರತದ ಶಕ್ತಿ!ಪ್ರಧಾನಮಂತ್ರಿಗಳಾದ ಶ್ರೀ Narendra Modi  ಅವರ ಆತ್ಮನಿರ್ಭರ ಭಾರತ ಸಂಕಲ್ಪದಡಿ ...
19/10/2026

ಸಮುದ್ರದಲ್ಲೂ ಮೊಳಗುತ್ತಿದೆ ಭಾರತದ ಆತ್ಮನಿರ್ಭರ ಭಾರತದ ಶಕ್ತಿ!

ಪ್ರಧಾನಮಂತ್ರಿಗಳಾದ ಶ್ರೀ Narendra Modi ಅವರ ಆತ್ಮನಿರ್ಭರ ಭಾರತ ಸಂಕಲ್ಪದಡಿ ಸ್ವದೇಶಿ ರಕ್ಷಣಾ ಸಾಮರ್ಥ್ಯಕ್ಕೆ ಮತ್ತಷ್ಟು ಬಲ!

ಶೇ.75ಕ್ಕೂ ಹೆಚ್ಚು ಸ್ವದೇಶಿ ತಂತ್ರಜ್ಞಾನ, ಸಾಮಗ್ರಿಗಳಿಂದ ನಿರ್ಮಿತವಾದ ಭಾರತದ ಮೊದಲ ಬಹುಪಯೋಗಿ ನೌಕೆ INS ಸಮರ್ಥಕ್ ಕಾರವಾರದ ಕದಂಬ ನೌಕಾನೆಲೆಯಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದೆ.

ಮುಂದಿನ ಪೀಳಿಗೆಯ ಆಯುಧಗಳು, ಸೆನ್ಸರ್‌ಗಳು ಹಾಗೂ ಮಾನವರಹಿತ ವ್ಯವಸ್ಥೆಗಳ ಪ್ರಯೋಗಕ್ಕೆ ನೆರವಾಗಲಿರುವ ಈ ನೌಕೆ, ವಿಕಸಿತ ಭಾರತದತ್ತ ಸ್ವದೇಶಿ ತಂತ್ರಜ್ಞಾನದ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

ಭಾರತೀಯ ಜನತಾ ಪಾರ್ಟಿಯ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ನಿಮಿತ್ತ ನರಗುಂದ ವಿಧಾನಸಭಾ ಕ್ಷೇತ್ರದ ಲಕ್ಕುಂಡಿ ಹಾಗೂ ಹೊಂಬಳ ಗ್ರ...
17/10/2026

ಭಾರತೀಯ ಜನತಾ ಪಾರ್ಟಿಯ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ನಿಮಿತ್ತ ನರಗುಂದ ವಿಧಾನಸಭಾ ಕ್ಷೇತ್ರದ ಲಕ್ಕುಂಡಿ ಹಾಗೂ ಹೊಂಬಳ ಗ್ರಾಮದಲ್ಲಿ ಪೂಜ್ಯ ತಂದೆಯವರು ಹಾಗೂ ಶಾಸಕರಾದ ಶ್ರೀ ಸಿ.ಸಿ. ಪಾಟೀಲ್ ಅವರ ನೇತೃತ್ವದಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿಯಾದ ಶ್ರೀ ಎಸ್.ವಿ. ಸಂಕನೂರ್ ಅವರ ಪರವಾಗಿ ಚುನಾವಣಾ ಪ್ರಚಾರ ಸಭೆ ನಡೆಸಲಾಯಿತು.

ಈ ಸಭೆಯಲ್ಲಿ ಹಾತಲಗೇರಿ, ಅಡವಿಸೋಮಾಪೂರ, ಪಾಪನಾಶಿ, ಸಂಭಾಪೂರ, 3 ತಾಂಡಾ ಗ್ರಾಮಗಳ ಹಾಗೂ ಲಿಂಗಧಾಳ, ಹೆಚ್.ಎಸ್.ವೆಂಕಟಾಪೂರ, ಬೆಳಹೋಡ, ಮದಗಾನೂರ ಗ್ರಾಮಗಳ ಮುಖಂಡರುಗಳು ಉಪಸ್ಥಿತರಿದ್ದರು.

Address

Nargund

Website

Alerts

Be the first to know and let us send you an email when Umeshgouda C Patil posts news and promotions. Your email address will not be used for any other purpose, and you can unsubscribe at any time.

Shortcuts

Share

Category