BJP Sringeri Constituency

Directions

BJP Sringeri Constituency BJP Sringeri Official

07/10/2026

ಮಹಿಳಾ ಪೊಲೀಸರ ಮೇಲೆ ಅನುಚಿತ ವರ್ತನೆ ತೋರಿದ ರಾಹುಲ್ ಗಾಂಧಿ

ರಾಹುಲ್ ಗಾಂಧಿ ವಿರುದ್ಧ FIR ದಾಖಲಾಗುತ್ತಿದ್ದಂತೆ ಇದನ್ನು ರಾಜಕೀಯ ದಮನ ಎಂದು ಆರೋಪಿಸಲಾಗುತ್ತಿದೆ.ಆದರೆ ಒಂದು ವಿಷಯವನ್ನು ಮರೆಯಬಾರದು.ಅಮಿತ್ ಶ...
07/10/2026

ರಾಹುಲ್ ಗಾಂಧಿ ವಿರುದ್ಧ FIR ದಾಖಲಾಗುತ್ತಿದ್ದಂತೆ ಇದನ್ನು ರಾಜಕೀಯ ದಮನ ಎಂದು ಆರೋಪಿಸಲಾಗುತ್ತಿದೆ.

ಆದರೆ ಒಂದು ವಿಷಯವನ್ನು ಮರೆಯಬಾರದು.

ಅಮಿತ್ ಶಾ ಅವರೂ ಸಹ ಸುಳ್ಳು ಎನ್‌ಕೌಂಟರ್ ಪ್ರಕರಣದ ಆರೋಪಗಳು, CBI ತನಿಖೆ, ಬಂಧನ ಹಾಗೂ ನ್ಯಾಯಾಲಯದ ಪ್ರಕ್ರಿಯೆಯನ್ನು ಎದುರಿಸಬೇಕಾಯಿತು. ಒಂದು ಹಂತದಲ್ಲಿ ಗುಜರಾತ್‌ಗೆ ಪ್ರವೇಶಿಸದಂತೆ ನಿರ್ಬಂಧವನ್ನೂ ಎದುರಿಸಿದರು. ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಗಳನ್ನು ಎದುರಿಸಿದ ಬಳಿಕ ಅಂತಿಮವಾಗಿ ಅವರು ಖುಲಾಸೆಯಾದರು.

ಅದೇ ರೀತಿ, ನರೇಂದ್ರ ಮೋದಿ ಅವರು ಗುಜರಾತ್ ಗಲಭೆಗಳ ಕುರಿತು ವಿಶೇಷ ತನಿಖಾ ತಂಡದ (SIT) ವಿಚಾರಣೆಯನ್ನು ಎದುರಿಸಿದರು. ವರ್ಷಗಳ ಕಾಲ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆ ನಡೆದ ನಂತರ, ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಅವರಿಗೆ ಕ್ಲೀನ್ ಚಿಟ್ ದೊರೆಯಿತು.

ಕಾಲ ಬದಲಾಗುತ್ತದೆ…
ಅಧಿಕಾರ ಬದಲಾಗುತ್ತದೆ…
ಆದರೆ ಕಾನೂನು ಮತ್ತು ನ್ಯಾಯದ ಮುಂದೆ ಎಲ್ಲರೂ ಸಮಾನರು.

ನಾವು ಮಾಡುವ ಕೆಲಸಗಳು ಒಂದಲ್ಲ ಒಂದು ದಿನ ನಮ್ಮ ಬಳಿಗೆ ಮರಳಿ ಬರುತ್ತವೆ.

07/10/2026

ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸಲು SIR ಅಗತ್ಯವಿದೆ. ಮತದಾರರ ಪಟ್ಟಿಯಿಂದ ಸತ್ತವರು, ನಕಲುಗಳು, ಸ್ಥಳಾಂತರಗೊಂಡವರು ಮತ್ತು ಬಾಂಗ್ಲಾದೇಶಿಗಳನ್ನ ತೆಗೆದುಹಾಕಲು SIR ಬೇಕು

ರಂಗಣ್ಣ 👌

07/10/2026

ಪ್ರಧಾನಿ ನರೇಂದ್ರ ಮೋದಿಜಿಯವರ ಉತ್ಸಾಹಭರಿತ ಹಾಗೂ ಸಕಾರಾತ್ಮಕ ಮಾತುಗಳು.

ದೇಶದ 140 ಕೋಟಿ ಜನರ ಹೆಮ್ಮೆಯ ನಾಯಕನಾಗಿ, ಭಾರತವನ್ನು ಮುನ್ನಡೆಸುತ್ತಿರುವ ನಿಮ್ಮ ಸೇವೆ ಸದಾ ಸ್ಮರಣೀಯ 🇮🇳

07/10/2026

ಬಿಜೆಪಿ ನರಸಿಂಹರಾಜಪುರ ಮಂಡಲ ಪ್ರಕಟಣೆ

ಇಂದಿಗೆ ಸಾರ್ವಜನಿಕ ಜೀವನದಲ್ಲಿ 25 ವರ್ಷಗಳ ಸಾರ್ಥಕ ಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಲು ನಡೆಯುತ್ತಿರುವ ‘ಸೇವಾ ಸಂಕಲ್ಪ’ ಅಭಿಯಾನದ ಭಾಗವಾಗಿ, ನರಸಿಂಹರಾಜಪುರ ಬಿಜೆಪಿ ಯುವಮೋರ್ಚಾ ವತಿಯಿಂದ ಬೈಕ್ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

ಇಂದು ಸಂಜೆ 5 ಗಂಟೆಗೆ ಕೈಮರ ದಿಂದಾ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಬೈಕ್ ಯಾತ್ರೆ ನಡೆಯಲಿದೆ.

ಪಕ್ಷದ ಎಲ್ಲಾ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುತ್ತೇವೆ.

07/10/2026

ಬಿಜೆಪಿ ನರಸಿಂಹರಾಜಪುರ ಮಂಡಲ ಪ್ರಕಟಣೆ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ದೇಶಾದ್ಯಂತ ನಡೆಯುತ್ತಿರುವ ‘ಸೇವಾ ಸಂಕಲ್ಪ’ ಅಭಿಯಾನದ ಭಾಗವಾಗಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಕ್ಟೋಬರ್ 7 ರಂದು ‘ಸೇವಾ ಜ್ಯೋತಿ ಯಾತ್ರೆ’ಯನ್ನು ಹಮ್ಮಿಕೊಳ್ಳಲಾಗಿದೆ.

ಇದರ ಅಂಗವಾಗಿ ನರಸಿಂಹರಾಜಪುರದಲ್ಲಿ ಬಿಜೆಪಿ ಯುವಮೋರ್ಚಾ ವತಿಯಿಂದ ಅಕ್ಟೋಬರ್ 7ರಂದು ಸಂಜೆ 5 ಗಂಟೆಗೆ ಕೈಮರದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.

ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಹಾಗೂ ಯುವಮೋರ್ಚಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಬೈಕ್ ರ್ಯಾಲಿಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುತ್ತೇವೆ.

04/10/2026

ತಡೆಗೋಡೆ ಕಾಮಗಾರಿಯಲ್ಲೂ ಕಮಿಷನ್, ರಸ್ತೆ ನಿರ್ಮಾಣದಲ್ಲೂ ಕಮಿಷನ್. ಈಗಾಗಲೇ ಹದಗೆಟ್ಟಿರುವ ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾಮಗಾರಿಯಲ್ಲೂ ಕಳಪೆ ಕೆಲಸ ಮಾಡಿ, ಅದರಲ್ಲೂ ಕಮಿಷನ್ ಪಡೆಯುವ ಪರಿಸ್ಥಿತಿ.

ಜಯಪುರ ರಸ್ತೆ ದುರಸ್ಥಿ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಲ್ಲಿದ್ದು, ಕಾಮಗಾರಿ ಮುಗಿದ ಕೆಲವೇ ದಿನಗಳಲ್ಲಿ ಮತ್ತೆ ರಸ್ತೆ ಹದಗೆಡುವಂತಾಗಿದೆ.

ಕಾಮಗಾರಿಯ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಪ್ರಶ್ನಿಸುತ್ತಿದ್ದರೂ, ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಏಕೆ ಉತ್ತರ ನೀಡಿ ಶಾಸಕರೇ...

04/10/2026

ಶೌಚಾಲಯ ನಿರ್ಮಾಣ ಮಾಡಿಕೊಡಿ ಎಂಬ ಬೇಡಿಕೆಯೊಂದಿಗೆ ಒಬ್ಬ ಮಹಿಳೆ ತನ್ನೆಲ್ಲ ಅಂಜಿಕೆ ಬಿಟ್ಟು ಕೇಳಿಕೊಂಡಾಗ, ತುಂಬು ಸಭೆಯಲ್ಲಿ ಆಕೆಯ ಜಾತಿ ಯಾವುದು ಎಂದು ಕೇಳುವುದು ಎಷ್ಟು ಸರಿ, ಶಾಸಕರೇ?

ಜಾತಿ ನೋಡಿ ರಾಜಕಾರಣ ಮಾಡುವುದು, ಜಾತಿ–ಜಾತಿಗಳ ನಡುವೆ ಬೆಂಕಿ ಹಚ್ಚುವುದು ಕಾಂಗ್ರೆಸ್‌ನ ಹಳೆಯ ಚಾಳಿ. ಈಗ ಬಡವರ ಮೂಲಭೂತ ಅಗತ್ಯವಾದ ಶೌಚಾಲಯ ನಿರ್ಮಾಣಕ್ಕೂ ಜಾತಿ ನೋಡಬೇಕಾದ ಪರಿಸ್ಥಿತಿ ತಂದಿದ್ದೀರಾ?

ರೀ ಶಾಸಕರೇ, ನಿಮಗೆ ಸಾಧ್ಯವಿದ್ದರೆ ಶೌಚಾಲಯ ನಿರ್ಮಾಣ ಮಾಡಿಕೊಡಿ. ಸಾಧ್ಯವಿಲ್ಲ ಎಂದರೆ ನೇರವಾಗಿ ಹೇಳಿ. ನಾವೆಲ್ಲರೂ ಸೇರಿ ಆ ಕುಟುಂಬಕ್ಕೆ ಶೌಚಾಲಯ ನಿರ್ಮಿಸಿಕೊಡುತ್ತೇವೆ.

ಆದರೆ ಇಂತಹ ಕೀಳುಮಟ್ಟದ ಜಾತಿ ರಾಜಕಾರಣದ ಮೂಲಕ ಕ್ಷೇತ್ರದ ಗೌರವವನ್ನು ಇನ್ನಷ್ಟು ತಗ್ಗಿಸಬೇಡಿ.

04/10/2026

ಜಗಣ್ಣ ❤️👌

Address

Narasimharajpura
Sringeri
577134

Website

Alerts

Be the first to know and let us send you an email when BJP Sringeri Constituency posts news and promotions. Your email address will not be used for any other purpose, and you can unsubscribe at any time.

Shortcuts

Share