SanjeeviniksrlpsTumakuru

Directions

SanjeeviniksrlpsTumakuru Contact information, map and directions, contact form, opening hours, services, ratings, photos, videos and announcements from SanjeeviniksrlpsTumakuru, Government Organization, Tumkur.

ಇಂದು(29.09.2026)ಮಧುಗಿರಿ ತಾಲ್ಲೂಕು ಪಂಚಾಯತ್ ನ ಸಾಮರ್ಥ್ಯ ಸೌಧದಲ್ಲಿ ಶ್ರೀ ದಂಡಿಮಾರಮ್ಮ ಸಂಜೀವಿನಿ ಮಹಿಳಾ ಕಿಸಾನ್ ಉತ್ಪಾದಕರ ಕಂಪನಿ(ರಿ) ನ ...
29/09/2026

ಇಂದು(29.09.2026)ಮಧುಗಿರಿ ತಾಲ್ಲೂಕು ಪಂಚಾಯತ್ ನ ಸಾಮರ್ಥ್ಯ ಸೌಧದಲ್ಲಿ ಶ್ರೀ ದಂಡಿಮಾರಮ್ಮ ಸಂಜೀವಿನಿ ಮಹಿಳಾ ಕಿಸಾನ್ ಉತ್ಪಾದಕರ ಕಂಪನಿ(ರಿ) ನ ಮೂರನೇ ವಾರ್ಷಿಕ ಮಹಾ ಸಭೆಯನ್ನು ಮಾಡಲಾಯಿತು. ಈ ವಾರ್ಷಿಕ ಸಭೆಯಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಯುತ ಬಿ.ಕೆ.ಉತ್ತಮ ಅವರು ಮಾತನಾಡಿ ಮಾರುಕಟ್ಟೆ ವಿಸ್ತರಣೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಲೆಕ್ಕಿಗ ಹುದ್ದೆ ನೇಮಕಾತಿ, ಸಮಿತಿ ಬದಲಾವಣೆ ಹಾಗೂ ವಾರ್ಷಿಕ ವಹಿವಾಟು ಬಗ್ಗೆ ಚರ್ಚಿಸಿದರು. ಬಳಿಕ ಷೇರುದಾರರಿಗೆ ಷೇರು ಪ್ರಮಾಣಪತ್ರ ವಿತರಣೆ ಮಾಡಲಾಯಿತು. ನಂತರ ಸಮಿತಿಯ ಪದಾಧಿಕಾರಿಗಳ ಬದಲಾವಣೆ ಮಾಡಲಾಯಿತು. ಈ ವೇಳೆ ತಾಲ್ಲೂಕು ಯೋಜನಾಧಿಕಾರಿಗಳಾದ ರಾಜೇಂದ್ರ ಪ್ರಸಾದ್, ಜಿಲ್ಲಾ ಪಂಚಾಯತ್ ನ ಎನ್.ಆರ್.ಎಲ್.ಎಂ ವಿಭಾಗದ ಸಿಬ್ಬಂದಿ ಕೃಷ್ಣಮೂರ್ತಿ, ಮಧುಗಿರಿ ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕದ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ತಿಪ್ಪೇಸ್ವಾಮಿ, ತಾಲ್ಲೂಕು ವ್ಯವಸ್ಥಾಪಕರಾದ ವಿಷ್ಣುವರ್ಧನ ನಾಯ್ಕ ಹಾಗೂ ರಂಗರಾಜು ಎನ್.ಆರ್, ವಲಯ ಮೇಲ್ವಿಚಾರಕರಾದ ನಾಗರಾಜ ಜೆ.ಸಿ, ಸಮಗ್ರ ಕೃಷಿ ಸಮೂಹರಾದ ದಿವ್ಯ, ಡಿಇಓ ಮುಬಾರಕ್ ಬಾನು, ಕಮಲಮ್ಮ ಇದ್ದರು.

ದಿನಾಂಕ:22.09.2026 ರಂದು ತುಮಕೂರು ತಾಲ್ಲೂಕು ಪಂಚಾಯತ್ ನಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಎನ್.ಆರ್.ಎಲ್.ಎಂ ಯೋಜನೆ ಸಿಬ್ಬಂದಿಗಳಿಗೆ ವಿ.ಪಿ.ಆ...
24/09/2026

ದಿನಾಂಕ:22.09.2026 ರಂದು ತುಮಕೂರು ತಾಲ್ಲೂಕು ಪಂಚಾಯತ್ ನಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಎನ್.ಆರ್.ಎಲ್.ಎಂ ಯೋಜನೆ ಸಿಬ್ಬಂದಿಗಳಿಗೆ ವಿ.ಪಿ.ಆರ್.ಪಿ ಕುರಿತು ತರಬೇತಿ ನೀಡಲಾಯಿತು. ಈ ವೇಳೆ ಜಿಲ್ಲಾ ಪಂಚಾಯತ್ ನ ಮಾನ್ಯ ಯೋಜನಾ ನಿರ್ದೇಶಕರಾದ ಶ್ರೀಯುತ ನಾರಾಯಣ ಸ್ವಾಮಿ ಅವರು ಲೋಕೋಸ್ ಪ್ರಗತಿಯ ಬಗ್ಗೆ ಮಾಹಿತಿ ಪಡೆದು ನಿಗಧಿತ ಸಮಯದಲ್ಲಿ ಪ್ರಗತಿ ಸಾಧಿಸುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.

ದಿನಾಂಕ:19-09-2026 ರಂದು ಕೊರಟಗೆರೆ ತಾಲ್ಲೂಕಿನ ತೋವಿನಕೆರೆಯಲ್ಲಿ ನಡೆದ ಚೆನ್ನರಾಯನದುಗ೯ ಹೋಬಳಿ ಮಟ್ಟದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ...
21/09/2026

ದಿನಾಂಕ:19-09-2026 ರಂದು ಕೊರಟಗೆರೆ ತಾಲ್ಲೂಕಿನ ತೋವಿನಕೆರೆಯಲ್ಲಿ ನಡೆದ ಚೆನ್ನರಾಯನದುಗ೯ ಹೋಬಳಿ ಮಟ್ಟದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸಂಜೀವಿನಿ-ಎನ್.ಆರ್.ಎಲ್.ಎಂ ಯೋಜನೆಯಡಿಯ ಸ್ವ ಸಹಾಯ ಗುಂಪುಗಳ ಸದಸ್ಯರು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸ್ಟಾಲ್ ವ್ಯವಸ್ಥೆ ಮಾಡಲಾಯಿತು. ಈ ಸ್ಟಾಲ್ ಅನ್ನು ಮಾನ್ಯ ತಹಸೀಲ್ದಾರ್ ರವರು, ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉದ್ಘಾಟಿಸಿದರು.

ದಿನಾಂಕ: 17.09.2026 ರಂದು ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ಮಾನ್ಯ ಪ್ರಧಾನ ಮಂತ್ರಿ ಗಳ ಜನ್ಮದಿನದ ಅಂಗವಾಗಿ ನಡೆದ ಸೇವಾ ಸಂಕಲ್ಪ ಕಾರ್ಯಕ್...
18/09/2026

ದಿನಾಂಕ: 17.09.2026 ರಂದು ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ಮಾನ್ಯ ಪ್ರಧಾನ ಮಂತ್ರಿ ಗಳ ಜನ್ಮದಿನದ ಅಂಗವಾಗಿ ನಡೆದ ಸೇವಾ ಸಂಕಲ್ಪ ಕಾರ್ಯಕ್ರಮದಲ್ಲಿ ಸ್ವ ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸುವ ಉತ್ಪನ್ನಗಳ ಮಳಿಗೆಗಳನ್ನು ಹಾಕಲಾಯಿತು. ಈ ವೇಳೆ ಜಿಲ್ಲಾ ಪಂಚಾಯತ್ ನ ಮಾನ್ಯ ಯೋಜನಾ ನಿರ್ದೇಶಕರಾದ ಶ್ರೀಯುತ ನಾರಾಯಣ ಸ್ವಾಮಿ ರವರು ಇದ್ದರು.

ದಿನಾಂಕ:12-09-2026 ರಂದು ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ಮಟ್ಟದಲ್ಲಿ ಆಯೋಜಿಸಿದ್ದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸಂಜೀವಿನಿ- ಎನ...
18/09/2026

ದಿನಾಂಕ:12-09-2026 ರಂದು ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ಮಟ್ಟದಲ್ಲಿ ಆಯೋಜಿಸಿದ್ದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸಂಜೀವಿನಿ- ಎನ್.ಆರ್.ಎಲ್.ಎಂ ಯೋಜನೆಯಡಿಯ ಸ್ವ ಸಹಾಯ ಗುಂಪಿನ ಸದಸ್ಯರುಗಳು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸ್ಟಾಲ್ ವ್ಯವಸ್ಥೆ ಮಾಡಲಾಯಿತು. ಮಾನ್ಯ ಜಿಲ್ಲಾಧಿಕಾರಿಗಳು, ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಕಾಯ೯ನಿವಾ೯ಕ ಅಧಿಕಾರಿಗಳು ಸ್ಟಾಲ್ ಗೆ ಭೇಟಿ ನೀಡಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

ಇಂದು ಜಿಲ್ಲಾ ಪಂಚಾಯತ್ ನ ಸಾಂತ್ವನ ಕೇಂದ್ರದಲ್ಲಿ ಸಂಜೀವಿನಿ -ಎನ್.ಆರ್.ಎಲ್.ಎಂ ಯೋಜನೆ, FWWB, ನವ್ಯ ದಿಶಾ ಹಾಗೂ ಸ್ಕಿಲ್ ಗ್ರಿನ್ ಗ್ಲೋಬಲ್ ಸಂಸ...
10/09/2026

ಇಂದು ಜಿಲ್ಲಾ ಪಂಚಾಯತ್ ನ ಸಾಂತ್ವನ ಕೇಂದ್ರದಲ್ಲಿ ಸಂಜೀವಿನಿ -ಎನ್.ಆರ್.ಎಲ್.ಎಂ ಯೋಜನೆ, FWWB, ನವ್ಯ ದಿಶಾ ಹಾಗೂ ಸ್ಕಿಲ್ ಗ್ರಿನ್ ಗ್ಲೋಬಲ್ ಸಂಸ್ಥೆ ವತಿಯಿಂದ "ಮಹಿಳಾ ಉದ್ಯಮಶೀಲತಾ ಉದ್ಘಾಟನಾ ಸಮಾರಂಭ" ವನ್ನು ಆಯೋಜನೆ ಮಾಡಲಾಯಿತು. ಈ ವೇಳೆ ಮಾನ್ಯ ಯೋಜನಾ ನಿರ್ದೇಶಕರಾದ ಶ್ರೀ ನಾರಾಯಣ ಸ್ವಾಮಿ ಅವರು ಉದ್ಯಮ ಅಭಿವೃದ್ಧಿ, ಲೇಬಲ್, ಮಾರುಕಟ್ಟೆ ಹಾಗೂ -ಎನ್.ಆರ್.ಎಲ್.ಎಂ ಯೋಜನೆಯಡಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಇಂದು ಜಿಲ್ಲಾ ಪಂಚಾಯತ್ ನ ಸಾಂತ್ವನ ಕೇಂದ್ರದಲ್ಲಿ ಸಂಜೀವಿನಿ -ಎನ್.ಆರ್.ಎಲ್.ಎಂ ಯೋಜನೆ, ಎಪ್.ಡಬ್ಲ್ಯೂ.ಡಬ್ಲ್ಯೂ.ಬಿ, ನವ್ಯ ದಿಶಾ ಹಾಗೂ ಸ್ಕಿಲ್ ...
10/09/2026

ಇಂದು ಜಿಲ್ಲಾ ಪಂಚಾಯತ್ ನ ಸಾಂತ್ವನ ಕೇಂದ್ರದಲ್ಲಿ ಸಂಜೀವಿನಿ -ಎನ್.ಆರ್.ಎಲ್.ಎಂ ಯೋಜನೆ, ಎಪ್.ಡಬ್ಲ್ಯೂ.ಡಬ್ಲ್ಯೂ.ಬಿ, ನವ್ಯ ದಿಶಾ ಹಾಗೂ ಸ್ಕಿಲ್ ಗ್ರಿನ್ ಗ್ಲೋಬಲ್ ಸಂಸ್ಥೆ ವತಿಯಿಂದ "ಮಹಿಳಾ ಉದ್ಯಮಶೀಲತಾ ಉದ್ಘಾಟನಾ ಸಮಾರಂಭ" ವನ್ನು ಆಯೋಜನೆ ಮಾಡಲಾಯಿತು. ಈ ಸಮಾರಂಭವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಮತಿ ಕನ್ನಿಕಾ ಪರಮೇಶ್ವರಿ, ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ಶುಭಾ ಕಲ್ಯಾಣ್, ಮಾನ್ಯ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಅಶ್ವಿಜಾ ಹಾಗೂ ಎಪ್.ಡಬ್ಲ್ಯೂ.ಡಬ್ಲ್ಯೂ.ಬಿ ಸಂಸ್ಥೆಯ ನಿರ್ದೇಶಕರ ಮಂಡಳಿಯ ಸದಸ್ಯರಾದ ಶ್ರೀಮತಿ ಸ್ಮಿತಾ ವಿಜಯಕುಮಾರ್ ಅವರು ಉದ್ಘಾಟಿಸಿದರು. ಈ ವೇಳೆ ಮಾನ್ಯ ಯೋಜನಾ ನಿರ್ದೇಶಕರಾದ ಶ್ರೀ ನಾರಾಯಣ ಸ್ವಾಮಿ, ಮುಖ್ಯ ಲೆಕ್ಕಾಧಿಕಾರಿಯಾದ ಶ್ರೀ ನಾರಾಯಣ ಮೂರ್ತಿ, ಉಪ ಕಾರ್ಯದರ್ಶಿರಾದ ಶ್ರೀ ಸಂಜೀವಪ್ಪ ಹಾಗೂ ಈಶ್ವರಯ್ಯ, ಮುಖ್ಯ ಯೋಜನಾ ನಿರ್ದೇಶಕರಾದ ಶ್ರೀ ಸಣ್ಣ ಮಸಿಯಪ್ಪ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕದ ಸಿಬ್ಬಂದಿಗಳು ಮತ್ತು ಸ್ವ ಸಹಾಯ ಗುಂಪಿನ ಮಹಿಳಾ ಉದ್ಯಮಿಗಳು ಇದ್ದರು.

ದಿನಾಂಕ:05-09-2026 ರಂದು ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಮಟ್ಟದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸಂಜೀವಿನಿ-ಎನ್.ಆರ್.ಎಲ್ ಎ...
07/09/2026

ದಿನಾಂಕ:05-09-2026 ರಂದು ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಮಟ್ಟದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸಂಜೀವಿನಿ-ಎನ್.ಆರ್.ಎಲ್ ಎಂ ಯೋಜನೆಯಡಿಯ ಸ್ವ ಸಹಾಯ ಗುಂಪಿನ ಸದಸ್ಯರು ಉತ್ಪಾದಿಸುವ ಉತ್ಪನ್ನಗಳಿಗೆ ಸ್ಟಾಲ್ ವ್ಯವಸ್ಥೆ ಮಾಡಲಾಯಿತು. ಈ ಸ್ಟಾಲ್ ಗೆ ಮಾನ್ಯ ತಹಶೀಲ್ದಾರ್ ರವರು ಹಾಗೂ ಮಾನ್ಯ ಕಾಯ೯ನಿವಾ೯ಹಕ ಅಧಿಕಾರಿಗಳು ಉದ್ಘಾಟಿಸಿದರು.

NAR(National academy of RUDSETI) ಬೆಂಗಳೂರು- ಕುಂಬಳಗೋಡು ಸಂಸ್ಥೆಯ ವತಿಯಿಂದ ದಿನಾಂಕ:04.09.2026 ರಂದು ತುಮಕೂರು ತಾಲ್ಲೂಕಿನ ಊರುಕೆರೆ ಗ್...
05/09/2026

NAR(National academy of RUDSETI) ಬೆಂಗಳೂರು- ಕುಂಬಳಗೋಡು ಸಂಸ್ಥೆಯ ವತಿಯಿಂದ ದಿನಾಂಕ:04.09.2026 ರಂದು ತುಮಕೂರು ತಾಲ್ಲೂಕಿನ ಊರುಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಭ್ರಮ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಕ್ಕಮಹಾದೇವಿ ಸ್ವಸಹಾಯ ಗುಂಪಿನ ಸದಸ್ಯರೊಂದಿಗೆ ಗುಂಪು ಚಟುವಟಿಕೆ, ವೈಯಕ್ತಿಕ ಚಟುವಟಿಕೆ,ಉಳಿತಾಯ, ಲೆಕ್ಕ ಪುಸ್ತಕ ನಿರ್ವಹಣೆ, ದಶ ಸೂತ್ರ ಪಾಲನೆ, ಮಹಿಳೆಯರ ಸಬಲೀಕರಣ ಹೀಗೆ ಹಲವು ರೀತಿಯ ವಿಷಯಗಳೊಂದಿಗೆ ಭೇಟಿ ನೀಡಿ ಪರಸ್ಪರ ಚರ್ಚಿಸಿದರು. ಈ ವೇಳೆ ಎನ್.ಆರ್.ಎಲ್.ಎಂ ವಿಭಾಗದ ಸಿಬ್ಬಂದಿಗಳು, ಒಕ್ಕೂಟದ ಪದಾಧಿಕಾರಿಗಳು, ಸಿಬ್ಬಂದಿಗಳು ಇದ್ದರು.

ದಿನಾಂಕ:04.09.2026 ರಂದು ತುಮಕೂರು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಸಖಿ ಮತ್ತು ...
05/09/2026

ದಿನಾಂಕ:04.09.2026 ರಂದು ತುಮಕೂರು ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಸಖಿ ಮತ್ತು ಪಶುಸಖಿ ಯವರಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಈ ವೇಳೆ ಸಹಾಯಕ ನಿರ್ದೇಶಕರು(ಗ್ರಾಮೀಣ ಉದ್ಯೋಗ) ಹಾಗೂ NRLM ಸಿಬ್ಬಂದಿಗಳು, ಕೃಷಿ ಸಖಿ, ಪಶುಸಖಿಯವರು ಹಾಜರಿದ್ದರು.

Address

Tumkur
572 ###

Website

Alerts

Be the first to know and let us send you an email when SanjeeviniksrlpsTumakuru posts news and promotions. Your email address will not be used for any other purpose, and you can unsubscribe at any time.

Shortcuts

Share