12th BN KSRP Tumakuru

Call Directions Contact the organization

12th BN KSRP Tumakuru State Reserve Police tumkur tumakuru bn ksrp tumkuru tumbuganaha

ಪಡೆಯ ಎಲ್ಲ ಅಧಿಕಾರಿ/ಸಿಬ್ಬಂದಿಗಳ ವತಿಯಿಂದ ನಮ್ಮ ಹೆಮ್ಮೆಯ ಕಮಾಂಡೆಂಟ್ ಸರ್ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಸರ್ 🎂💐
25/09/2026

ಪಡೆಯ ಎಲ್ಲ ಅಧಿಕಾರಿ/ಸಿಬ್ಬಂದಿಗಳ ವತಿಯಿಂದ ನಮ್ಮ ಹೆಮ್ಮೆಯ ಕಮಾಂಡೆಂಟ್ ಸರ್ ರವರಿಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಸರ್ 🎂💐

12ನೇ ಪಡೆ, ಕೆ.ಎಸ್.ಆರ್.ಪಿ., ತುಮಕೂರು ಘಟಕಕ್ಕೆ ದಿ: 21.09.2026 ರಂದು ಶ್ರೀ ಆರ್. ಜನಾರ್ಧನ್, ಡಿಐಜಿಪಿ, ಕೆಎಸ್ಆರ್‌ಪಿ, ಮೈಸೂರು ವಲಯ ರವರು ...
22/09/2026

12ನೇ ಪಡೆ, ಕೆ.ಎಸ್.ಆರ್.ಪಿ., ತುಮಕೂರು ಘಟಕಕ್ಕೆ ದಿ: 21.09.2026 ರಂದು ಶ್ರೀ ಆರ್. ಜನಾರ್ಧನ್, ಡಿಐಜಿಪಿ, ಕೆಎಸ್ಆರ್‌ಪಿ, ಮೈಸೂರು ವಲಯ ರವರು ಭೇಟಿ ನೀಡಿ ಗೌರವ ವಂದನೆ ಸ್ವೀಕರಿಸಿ, ಸಸಿ ನೆಟ್ಟು, KSRP ಮಾಸಿಕ ವಾರ್ತಾಪತ್ರಿಕೆ ಹಾಗೂ ಪಿಪಿಟಿ ವೀಕ್ಷಿಸಿ, ಶಸ್ತ್ರಾಗಾರ, ಬ್ಯಾರೆಕ್ಸ್, ವಾಹನ ಸಾರಿಗೆ ವಿಭಾಗ, ಭೋಜನಾಲಯ, ಕಲ್ಯಾಣ ಕೇಂದ್ರ, ವಸತಿ ಗೃಹ ಹಾಗೂ ಪಡೆಯಲ್ಲಿ ASC North Centre ಬೆಂಗಳೂರಿನ ಅಗ್ನಿವೀರರ ತರಬೇತಿ ಪರಿವೀಕ್ಷಿಸಿದರು.
ನಂತರ ಉತ್ತಮ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರಗಳನ್ನು ನೀಡಿ ಗೌರವಿಸಿ, ಟೇಬಲ್ ಟೆನ್ನಿಸ್ ಕ್ರೀಡೆಯನ್ನು ಸ್ವತಃ ಆಡುವುದರ ಮುಖಾಂತರ ಉದ್ಘಾಟಿಸಿ, ಪಡೆಯ ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಪೊಲೀಸ್ ಮತ್ತು ರಾಷ್ಟ್ರೀಯ ಭದ್ರತಾ ಪಡೆ (NSG) ವತಿಯಿಂದ ಮಾಣಿಕ್ ಷಾ ಕವಾಯತು ಮೈದಾನ ಬೆಂಗಳೂರಿನಲ್ಲಿ ದಿ:28.08.2026 ರಂದು  ಆ...
29/08/2026

ಕರ್ನಾಟಕ ರಾಜ್ಯ ಪೊಲೀಸ್ ಮತ್ತು ರಾಷ್ಟ್ರೀಯ ಭದ್ರತಾ ಪಡೆ (NSG) ವತಿಯಿಂದ ಮಾಣಿಕ್ ಷಾ ಕವಾಯತು ಮೈದಾನ ಬೆಂಗಳೂರಿನಲ್ಲಿ ದಿ:28.08.2026 ರಂದು ಆಯೋಜಿಸಲಾಗಿದ್ದ ‘ಸಮಗ್ರ ಸಾಮರ್ಥ್ಯ ವೃದ್ಧಿ ತರಬೇತಿ ಮತ್ತು ಪ್ರಾತ್ಯಕ್ಷೀಕೆಯನ್ನು ಸನ್ಮಾನ್ಯ ಶ್ರೀ ಡಿ. ಕೆ. ಶಿವಕುಮಾರ, ಮಾನ್ಯ ಮುಖ್ಯಮಂತ್ರಿಗಳ ಮುಖ್ಯ ಅತಿಥ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ವಿವಿಧ ಹಂತಗಳನ್ನು ಅಚ್ಚುಕಟ್ಟಾಗಿ ಹಾಗೂ ಪರಿಣಾಮಕಾರಿಯಾಗಿ ನಿರೂಪಿಸುವ ಮೂಲಕ ಶ್ರೀ ಹಂಜಾ ಹುಸೇನ್, ಕಮಾಂಡೆಂಟ್, 12ನೇ ಪಡೆ ಕೆಎಸ್ಆರ್ ಪಿ, ತುಮಕೂರು ರವರು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಅವರ ಸ್ಪಷ್ಟವಾದ ನಿರೂಪಣೆ, ಆತ್ಮವಿಶ್ವಾಸಭರಿತ ಮಾತುಗಾರಿಕೆ ಹಾಗೂ ಕಾರ್ಯಕ್ರಮವನ್ನು ಕ್ರಮಬದ್ಧವಾಗಿ ಮುನ್ನಡೆಸಿದ ರೀತಿ ಎಲ್ಲರ ಗಮನ ಸೆಳೆಯಿತು.
ಪೊಲೀಸ್ ಸಿಬ್ಬಂದಿಯ ದೈಹಿಕ ಸಾಮರ್ಥ್ಯ, ವೃತ್ತಿಪರ ಕೌಶಲ್ಯ, ಮಾನಸಿಕ ದೃಢತೆ, ಶಿಸ್ತು ಹಾಗೂ ಕರ್ತವ್ಯನಿಷ್ಠೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ವೃದ್ಧಿಸುವ ಉದ್ದೇಶ ಹೊಂದಿರುವ ಈ ತರಬೇತಿ/ಪ್ರಾತ್ಯಕ್ಷೀಕೆ ಕಾರ್ಯಕ್ರಮವು ಪೊಲೀಸ್ ಪಡೆಯ ಸಾಮರ್ಥ್ಯ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಯಿತು.
ಇದೇ ಸಂದರ್ಭದಲ್ಲಿ, ಸೈಬರ್ ಕ್ರೈಂ ಪ್ರಕರಣದ ತನಿಖಾ ಕರ್ತವ್ಯಕ್ಕಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರಿನ ಆಗ್ನೇಯ ವಿಭಾಗದ CEN ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ ಕೆ.ಬಿ. ರವಿ ಅವರು ಭೀಕರ ಬಸ್ ಅಪಘಾತದಲ್ಲಿ ನಿಧನರಾದ ಹಿನ್ನೆಲೆಯಲ್ಲಿ, ಅವರ ಸೇವೆಯನ್ನು ಸ್ಮರಿಸಿ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು
ಸಮಗ್ರ ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಕ್ರಮವು ಪೊಲೀಸ್ ಸಿಬ್ಬಂದಿಯ ದೈಹಿಕ ಸಾಮರ್ಥ್ಯ, ವೃತ್ತಿಪರ ಕೌಶಲ್ಯ, ಮಾನಸಿಕ ದೃಢತೆ, ಶಿಸ್ತು ಮತ್ತು ಕರ್ತವ್ಯನಿಷ್ಠೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದೆ.
ಕರ್ತವ್ಯವೇ ಧರ್ಮ – ಸೇವೆಯೇ ಸಂಕಲ್ಪ
ಸಮರ್ಥ ಪೊಲೀಸ್ ಪಡೆ – ಸುರಕ್ಷಿತ ಸಮಾಜ

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದ ತುಕಡಿಯು ಮಹಾತ್ಮಾ ಗಾಂಧೀಜಿ  ಸ್ಟೇಡಿಯಂ ತುಮಕೂರಿನಲ್ಲಿ  ಆಯೋಜಿಸಲಾದ  80ನೇ ಸ್ವಾತಂತ್ರೋತ್ಸವ  ಕವಾಯ...
15/08/2026

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದ ತುಕಡಿಯು ಮಹಾತ್ಮಾ ಗಾಂಧೀಜಿ ಸ್ಟೇಡಿಯಂ ತುಮಕೂರಿನಲ್ಲಿ ಆಯೋಜಿಸಲಾದ 80ನೇ ಸ್ವಾತಂತ್ರೋತ್ಸವ ಕವಾಯತನಲ್ಲಿ ಭಾಗವಹಿಸಿ ಮೊದಲನೇ ಸ್ಥಾನ ಗಳಿಸಿಕೊಂಡು ಮಾನ್ಯ ಡಾ. ಜಿ. ಪರಮೇಶ್ವರ, ಉಪ ಮುಖ್ಯಮಂತ್ರಿಗಳಿಂದ ಪ್ರಶಸ್ತಿಯನ್ನು ಪಡೆದರು.

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದಲ್ಲಿ ದಿ:-15.08.2026 ರಂದು ಶ್ರೀ ಹಂಜಾ ಹುಸೇನ್ ಕಮಾಂಡೆಂಟ್ ರವರ ಅಧ್ಯಕ್ಷತೆಯಲ್ಲಿ 80ನೇ ಸ್ವಾತಂತ್ರ...
15/08/2026

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದಲ್ಲಿ ದಿ:-15.08.2026 ರಂದು ಶ್ರೀ ಹಂಜಾ ಹುಸೇನ್ ಕಮಾಂಡೆಂಟ್ ರವರ ಅಧ್ಯಕ್ಷತೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದಲ್ಲಿ ದಿ:18.07.2026 ರಂದು ಶ್ರೀ ಹಂಜಾ ಹುಸೇನ್, ಕಮಾಂಡೆಂಟ್ ರವರ ಮುಂದಾಳತ್ವದಲ್ಲಿ “ಆರೋಗ್ಯ ತಪಾಸಣಾ...
20/07/2026

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದಲ್ಲಿ ದಿ:18.07.2026 ರಂದು ಶ್ರೀ ಹಂಜಾ ಹುಸೇನ್, ಕಮಾಂಡೆಂಟ್ ರವರ ಮುಂದಾಳತ್ವದಲ್ಲಿ “ಆರೋಗ್ಯ ತಪಾಸಣಾ ಶಿಬಿರ” ವನ್ನು Shridevi Institute of Medical Sciences and Research Hospital ತುಮಕೂರು ಮತ್ತು ನಮ್ಮ ಆದ್ಯತೆ ಟ್ರಸ್ಟ್ ಬೆಂಗಳೂರು ರವರ ಸಹಯೋಗದಲ್ಲಿ ಅಧಿಕಾರಿ/ಸಿಬ್ಬಂದಿಗಳಿಗೆ ಮತ್ತು ಸುತ್ತಮುತ್ತಲಿನ ಗ್ರಾಮದ ಸಾರ್ವಜಿನಿಕರಿಗೂ ಆಯೋಜಿಸಲಾಯಿತು, ಮುಖ್ಯ ಅತಿಥಿಗಳು ಶ್ರೀ ಸ್ವಾಮಿ ಜಪಾನಂದಜೀ ಮಹಾರಾಜ್, ಶ್ರೀ ರಾಮಕೃಷ್ಣ ಸೇವಾಶ್ರಮ, ಪಾವಗಡ, ಅತಿಥಿಗಳು ಡಾ. ನದಿಮುಲ್ ಹೊಡಾ, (OMFS), Professor & HOD Dept of Oral Oncology, Kidwai Memorial Institute of Oncology, ಬೆಂಗಳೂರು, ಶ್ರೀ ಹೊನ್ನಪ್ಪ, ಹಿರಿಯ ವಕೀಲರು, ಉಚ್ಚ ನ್ಯಾಯಾಲಯ, ಬೆಂಗಳೂರು, ಶ್ರೀ ನಾರಾಯಣಸ್ವಾಮಿ ಕೆ.ಎನ್, ACP(Ŗ), ಡಾ. ಪೂಜಾ ಸಿ, BAMS, MD ಮನೋರೋಗ ತಜ್ಞರು, ಶ್ರೀಮತಿ ಜಾನ್ವಿ ಹೇಮಂತ್, MD, ನಮ್ಮ ಆಧ್ಯತೆ ಟ್ರಸ್ಟ್ ಹಾಗೂ ಶ್ರೀ ರಘುನಂದನ ಎಸ್, ಪರಿಸರ ತಜ್ಞರು ಉಪಸ್ಥಿತರಿದ್ದರು.

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದಲ್ಲಿ ದಿ:- 09/07/2026 ರಂದು ಶ್ರೀ ಹಂಜಾ ಹುಸೇನ್, ಕಮಾಂಡೆಂಟ್ ರವರ ಅಧ್ಯಕ್ಷತೆಯಲ್ಲಿ ಎಫ್-ದಳದ ಪುನರ...
10/07/2026

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದಲ್ಲಿ ದಿ:- 09/07/2026 ರಂದು ಶ್ರೀ ಹಂಜಾ ಹುಸೇನ್, ಕಮಾಂಡೆಂಟ್ ರವರ ಅಧ್ಯಕ್ಷತೆಯಲ್ಲಿ ಎಫ್-ದಳದ ಪುನರ್ ಮನನ ತರಬೇತಿ ಮುಕ್ತಾಯ ಸಮಾರಂಭ ಆಯೋಜಿಸಿ ಒಳಾಂಗಣ, ಹೊರಾಂಗಣ, ಸರ್ವೋತ್ತಮ ವಿಜೇತ ಸಿಬ್ಬಂದಿಗಳಿಗೆ ಬಹುಮಾನ ವಿತರಿಸಿದರು.

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದಲ್ಲಿ ದಿ:03/07/2026 ರಂದು  ಶುಕ್ರವಾರದ ಕವಾಯತನ್ನು  ಶ್ರೀ ಹಂಜಾ ಹುಸೇನ್ ಕಮಾಂಡೆಂಟ್ ರವರು ಪರಿವೀಕ್...
03/07/2026

12ನೇ ಪಡೆ ಕೆ.ಎಸ್.ಆರ್.ಪಿ ತುಮಕೂರು ಘಟಕದಲ್ಲಿ ದಿ:03/07/2026 ರಂದು ಶುಕ್ರವಾರದ ಕವಾಯತನ್ನು ಶ್ರೀ ಹಂಜಾ ಹುಸೇನ್ ಕಮಾಂಡೆಂಟ್ ರವರು ಪರಿವೀಕ್ಷಿಸಿ, Cop of the Month, DG & IGP disk ಗೆ ಆಯ್ಕೆಯಾದ ಸಿಬ್ಬಂದಿಗೆ ಸನ್ಮಾನಿಸಿದರು.

12ನೇ ಪಡೆ ಕೆ.ಎಸ್.ಆರ್.ಪಿ, ತುಮಕೂರು ಪಡೆಗೆ ದಿ:03.07.2026 ರಂದು ಶ್ರೀ ಅರುಣ್ ಚಕ್ರವರ್ತಿ, DGP, MD, KSPH & IDCL ರವರು ಭೇಟಿ ನೀಡಿ ಕಲ್ಯಾ...
03/07/2026

12ನೇ ಪಡೆ ಕೆ.ಎಸ್.ಆರ್.ಪಿ, ತುಮಕೂರು ಪಡೆಗೆ ದಿ:03.07.2026 ರಂದು ಶ್ರೀ ಅರುಣ್ ಚಕ್ರವರ್ತಿ, DGP, MD, KSPH & IDCL ರವರು ಭೇಟಿ ನೀಡಿ ಕಲ್ಯಾಣ ಕೇಂದ್ರ, ಶಸ್ತ್ರಾಗಾರ, ವಸತಿ ಗೃಹ, ಆಡಳಿತ ಕಛೇರಿ ಹಾಗೂ PPTಯನ್ನು ಯನ್ನು ಪರಿವೀಕ್ಷಿಸಿ, ಪಡೆಯ ಅಭಿವೃದ್ದಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Address

12th Bn KSRP Tumakuru
Tumkur
572129

Telephone

+919480801582

Website

Alerts

Be the first to know and let us send you an email when 12th BN KSRP Tumakuru posts news and promotions. Your email address will not be used for any other purpose, and you can unsubscribe at any time.

Contact The Organization

Send a message to 12th BN KSRP Tumakuru:

Shortcuts

Share