15/10/2026
"ಇಂದು ಮಾನ್ಯರ ಮಸಲವಾಡ ಗ್ರಾಮ ಪಂಚಾಯತಿಯಲ್ಲಿ ಕೂಲಿಕಾರರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ" ಆಯೋಜನೆ
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಾನ್ಯರ ಮಸಲವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ 'ಮಾನ್ಯರ ಮಸಲವಾಡ ಗ್ರಾಮದ ಗೋಕಟ್ಟೆ ಪುನಶ್ಚೇತನ' ಕಾಮಗಾರಿಯಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕೂಲಿಕಾರರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ತಾಲೂಕು ಪಂಚಾಯತಿಯ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಪರಮೇಶ್ವರ ಜಿ. ಅವರು, ಜಿಲ್ಲಾ ಪಂಚಾಯತಿಯ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದ ಮೇರೆಗೆ ತಾಲೂಕಿನಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೂಲಿಕಾರರ ಹಿತದೃಷ್ಟಿಯಿಂದ ಈ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
"ಆರೋಗ್ಯವೇ ಮಹಾಭಾಗ್ಯ: ಪ್ರತಿಯೊಬ್ಬರೂ ತಮ್ಮ ದೈನಂದಿನ ಕೆಲಸದ ಜೊತೆಗೆ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಅತ್ಯಗತ್ಯ"
ಕಡ್ಡಾಯ ತಪಾಸಣೆ: ಕೆಲಸದ ಸ್ಥಳದಲ್ಲಿರುವ ಪ್ರತಿಯೊಬ್ಬ ಕೂಲಿಕಾರರು ಕಡ್ಡಾಯವಾಗಿ ರಕ್ತದೊತ್ತಡ (BP), ಮಧುಮೇಹ (Sugar) ಹಾಗೂ ಸಾಮಾನ್ಯ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.
ಮುನ್ನೆಚ್ಚರಿಕಾ ಕ್ರಮಗಳು: ಶ್ರಮದಾಯಕ ಕೆಲಸ ಮಾಡುವಾಗ ಕೂಲಿಕಾರರು ಸುರಕ್ಷತೆಗೆ ಆದ್ಯತೆ ನೀಡಿ, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು.
ಯೋಜನೆಯ ಸದುಪಯೋಗ: ಸರ್ಕಾರದ ಈ ಯೋಜನೆಯಡಿ ಹಮ್ಮಿಕೊಳ್ಳಲಾದ ಉಚಿತ ತಪಾಸಣೆಯ ಸೌಲಭ್ಯವನ್ನು ಪ್ರತಿಯೊಬ್ಬ ಕಾರ್ಮಿಕರೂ ಬಳಸಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು.ಎಂದು ಮಾನ್ಯ ಕಾರ್ಯನಿರ್ವಹಕ ಅಧಿಕಾರಿಗಳು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ವಿರಣ್ಣನಾಯ್ಕ ಡಿ. ಮಾನ್ಯ ಸಹಾಯಕ ನಿರ್ದೇಶಕರು (ಗ್ರಾ.ಉ) ರವರು ಮಾತನಾಡಿ ನಿಗದಿತ ಅಳತೆಗೆ ಸರಿಯಾಗಿ ಕೆಲಸ ಮಾಡಿ ದಿನಕ್ಕೆ ನಿಗದಿಯಾಗಿರುವ 382 ರೂ ಪಡೆಯಲು ಕೂಲಿಕಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಶೈಲಾ ಗೌಡ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು,ಪ್ರಕಾಶ ನಾಯ್ಕ ಆರ್.ತಾಲೂಕು ಐಇಸಿ ಸಂಯೋಜಕರು ರವಿಕುಮಾರ್ ಟಿ.ಎಂ. ತಾಂತ್ರಿಕ ಸಂಯೋಜಕರು, ಮಲ್ಲಪ್ಪ ತಾಂತ್ರಿಕ ಸಹಾಯಕರು,ಮಂಜುಳ GKM,ಕುಮಾರ ನಾಯ್ಕ,ಹಾಲೇಶ ನಾಯ್ಕ TRMs ಹಾಗೂ ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯ ಅಧಿಕಾರಿಗಳಾದ ಮಧು ಲಾಲ್ ಸಿಂಗ್ ನಾಯ್ಕ್ .ನವೀನ್ ಕುಮಾರ್ ಡಿ .ಯಂನೂರಪ್ಪ ಕೆ.ಅಕ್ಕಮ್ಮ ಎಂ.ಪ್ರಾಥಮಿಕ ಸುರಕ್ಷಣಾಧಿಕಾರಿಗಳಾದ .ಸಾವಿತ್ರಿಬಾ.ಲಕ್ಷ್ಮಿ .ಕೆ .ಯಮುನಮ್ಮ .ರೇಖಾ
ಅರೋಗ್ಯ ನಿರೀಕ್ಷಣಧಿಕಾರಿಗಳಾದ .ರಾಜಶೇಖರ್ ಆಚಾರ್ಯ. ಶಿವಕ್ಕ ಪಕೀರಮ್ಮ .ಮಂಗಳಮ್ಮ (ಆಶಾ ಕಾರ್ಯಕರ್ತೆ) ಕಾರ್ಯಕ್ರಮದಲ್ಲಿ ಹಾಜರಿದ್ದರು.
ಈ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾನ್ಯರ ಮಸಲವಾಡ ಗ್ರಾಮದ ಗೋಕಟ್ಟೆ ಪುನಶ್ಚೇತನ ಕಾಮಗಾರಿಯಲ್ಲಿದ್ದ ಅನೇಕ ಕೂಲಿಕಾರರು ಭಾಗವಹಿಸಿ, ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡು ಶಿಬಿರದ ಸದುಪಯೋಗ ಪಡೆದುಕೊಂಡರು.