ಬಿರುವ ಜವನೆರ್ ಉಡುಪಿ

ಬಿರುವ ಜವನೆರ್ ಉಡುಪಿ

Share

"ಒಂದೇ ಜಾತೀ ಒಂದೇಮತ ಒಂದೇ ದೇವರು."
🙏🙏🙏💛💛💛🌹🌹🌹
ಜೈ ಬಿರುವೆ.🦁🦁🐯🐯🐯🦁

07/06/2026

ಮೊಕುಲು ವೀರೆರ್
ಮೊಕುಲು ಶೂರೆರ್
ನ್ಯಾಯ ಧರ್ಮೊಗು ಮೊಕುಲು ರಾಜೇರ್..!
..
..
#ತುಳುನಾಡ_ಬೊಳ್ಳಿಲು
ಅಮರ್ ಬೀರೆರ್ ಬಿರುವೆರೆ ಬಾಲೆಲು

Photos from ಬಿರುವ ಜವನೆರ್ ಉಡುಪಿ's post 07/06/2026

ಯುವವಾಹಿನಿ ಮಾಣಿ ಘಟಕದಿಂದ ಯುವ ವೃಕ್ಷೋತ್ಸವಕ್ಕೆ ಚಾಲನೆ..

ಮಾಣಿ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ “ಮರದ ನೆರಳು ಬದುಕಿಗೆ ನೆರಳು” ಎಂಬ ಧ್ಯೇಯದೊಂದಿಗೆ ಹಮ್ಮಿಕೊಂಡಿರುವ ಯುವ ವೃಕ್ಷೋತ್ಸವ ಕಾರ್ಯಕ್ರಮಕ್ಕೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸಭಾಭವನದ ವಠಾರದಲ್ಲಿ ಚಾಲನೆ ನೀಡಲಾಯಿತು.ಕಾರ್ಯಕ್ರಮವನ್ನು ನಾರಾಯಣ ಗುರು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ನಾರಾಯಣ ಸಾಲಿಯಾನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯುವವಾಹಿನಿ ಘಟಕದ ಅಧ್ಯಕ್ಷರಾದ ಗಣೇಶ್ ಸಾಯಿ ಕೊಡಾಜೆ, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಕಾರ್ಯದರ್ಶಿ ರಮೇಶ್ ಪೂಜಾರಿ ಮುಜಲ, ಸಿಇಒ ಪಲ್ಲವಿ ಲೋಕೇಶ್, ಪ್ರಚಾರ ನಿರ್ದೇಶಕ ಚರಣ್, ಗೀತಾ ಹಾಗೂ ಮ್ಯಾನೇಜರ್ ಜನಾರ್ಧನ ಪೂಜಾರಿ ಉಪಸ್ಥಿತರಿದ್ದರು.
ನಂತರ ಈ ಅಭಿಯಾನದ ಅಂಗವಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಬನ ಕಟ್ಟೆ ಹಾಗೂ ಗ್ರಾಮ ಪಂಚಾಯಿತಿ ಅನಂತಾಡಿಯಲ್ಲಿ ಯುವ ವೃಕ್ಷೋತ್ಸವವನ್ನು ಕೈಗೊಳ್ಳಲಾಯಿತು.ಇದೇ ರೀತಿ ಈ ವಿಭಿನ್ನ ವೃಕ್ಷೋತ್ಸವ ಅಭಿಯಾನವು ಸರಕಾರಿ ಶಾಲೆ, ಆಸ್ಪತ್ರೆ, ಗ್ರಾಮ ಪಂಚಾಯತ್ ಹಾಗೂ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಒಂದು ತಿಂಗಳ ಕಾಲ ನಿರಂತರವಾಗಿ ಮುಂದುವರಿಯಲಿದೆ ಎಂದು ಘಟಕದ ಅಧ್ಯಕ್ಷರಾದ ಶ್ರೀ ಗಣೇಶ್ ಸಾಯಿರವರು ತಿಳಿಸಿದರು.

07/06/2026

📢🚨ತುರ್ತು ಸಂದೇಶ📢🚨

ಆತ್ಮೀಯ ಸಮಾಜ ಬಾಂಧವರೇ..
ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅನಿತಾ ಕಾಸರಗೋಡು ಎನ್ನುವ ಹೆಂಗಸು ಬಿಲ್ಲವ ಸಮುದಾಯದ ಬಗ್ಗೆ ಕೆಟ್ಟದಾಗಿ ಅವ್ಯಾಚ ಶಬ್ದಗಳಿಂದ ನಿಂದಿಸಿರುವದನ್ನು ಖಂಡಿಸಿ ನಾಳೇ ಪೂರ್ವಾಹ್ನ ಗಂಟೆ 11.00ಕ್ಕೆ ಬಂಟ್ವಾಳ ತಹಶೀಲ್ದಾರ್ ಕಛೇರಿಗೆ ತೆರಳಿ ಖಂಡನಾ ನಿರ್ಣಯವನ್ನು ನೀಡುವುದರ ಜೊತೆಗೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲು ತಾಲೂಕು ಬಿಲ್ಲವ ಸಂಘದ ಮಾಸಿಕ ಸಭೆಯಲ್ಲಿ ತಿರ್ಮಾನಿಸಲಾಯಿತು. ಹಾಗಾಗೀ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು, ಹಾಗೂ ಪ್ರತೀ ಸಂಘದ ಅಧ್ಯಕ್ಷರು ,ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಈ ಮೂಲಕ ವಿನಂತಿ.

ಪ್ರಧಾನ ಕಾರ್ಯದರ್ಶಿ
ಶ್ರೀನಿವಾಸ ಪೂಜಾರಿ ಮೆಲ್ಕಾರ್
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ (ರಿ)
ಗಾಣದಪಡ್ಪು

07/06/2026

ಬೋಳ ರವಿ ಪೂಜಾರಿ ಅವರ ಮನದಾಳ ಮಾತು.🔥🔥🔥

Photos from ಬಿರುವ ಜವನೆರ್ ಉಡುಪಿ's post 07/06/2026

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಅನಂತಾಡಿ ಗ್ರಾಮ ಪಂಚಾಯತ್ ವತಿಯಿಂದ ಹಮ್ಮಿಕೊಳ್ಳಲಾದ “ಸ್ವಚ್ಛ ಗ್ರಾಮ – ಸುರಕ್ಷಿತ ಹವಾಮಾನ” ಅಭಿಯಾನದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷರಾದ ಶ್ರೀಯುತ ಗಣೇಶ್ ಸಾಯಿ ಕೊಡಾಜೆ ಅವರು ಭಾಗವಹಿಸಿದರು.

ಅಭಿಯಾನದ ಅಂಗವಾಗಿ ಪರಿಸರ ಸಂರಕ್ಷಣೆ ಮತ್ತು ಹಸಿರು ವಾತಾವರಣ ನಿರ್ಮಾಣದ ಉದ್ದೇಶದಿಂದ ಯುವವಾಹಿನಿಯ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ನಡೆಸಲಾಯಿತು. ಪರಿಸರದ ಮಹತ್ವವನ್ನು ತಿಳಿಸುವ ಮೂಲಕ ಗ್ರಾಮಸ್ಥರಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ನಡೆಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಗೋವಿಂದರಾಜು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ, ಕಾರ್ಯದರ್ಶಿ ನಾರಾಯಣ ನಾಯ್ಕ, ಆಶಾ ಕಾರ್ಯಕರ್ತೆಯರು, ಮಾಜಿ ಅಧ್ಯಕ್ಷರು, ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Photos from ಬಿರುವ ಜವನೆರ್ ಉಡುಪಿ's post 07/06/2026

ಬಾಳೆಕಲ್ಲು ಗರಡಿಯ ಮೊಕ್ತೇಸರರಾದ ಶ್ರೀ ಕೊರಗಪ್ಪ ಪೂಜಾರಿ ಬಾಳೆಕಲ್ಲುರವರನ್ನು ಭೇಟಿ ಮಾಡಿ ಸನ್ಮಾನ ಪತ್ರವನ್ನು ನೀಡಿ ಗೌರವಿಸಲಾಯಿತು.🙏💐

Photos from ಬಿರುವ ಜವನೆರ್ ಉಡುಪಿ's post 07/06/2026

ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ಪರಮ ಭಕ್ತರಾದ ಶ್ರೀಮತಿ ಮತ್ತು ಶ್ರೀ ಸತೀಶ್ ಕರ್ಕೇರ ತೆಲ್ಲಾರು,ಕಾರ್ಕಳ ಸಹ ಪರಿವಾರದೊಂದಿಗೆ ಶ್ರೀ ಕ್ಷೇತ್ರ ಗೆಜ್ಜೆ ಗಿರಿಗೆ ಇಂದುಆಗಮಿಸಿ ತಮ್ಮ ಪುತ್ರಿಯ ವಿದ್ಯಾಭ್ಯಾಸಕ್ಕೆ ಈ ಹಿಂದೆ ಕ್ಷೇತ್ರದ ಕಾರಣಿಕ ಶಕ್ತಿಗಳ ಆಶೀರ್ವಾದ ಯಾಚಿಸಿದ್ದರು,ಈಗ ಉನ್ನತ ಪದವಿಯನ್ನು ಪ್ರಾರಂಭಿಸುವ ಈ ಶುಭ ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಕ್ಷೇತ್ರದಲ್ಲಿ ನಡೆಯುವ ಅನ್ನದಾನ ಸೇವೆಗೆ ದೇಣಿಗೆಯನ್ನು ನೀಡಿ, ತಮ್ಮ ಹರಿಕೆಯಂತೆ ಸತ್ಯಧರ್ಮ ಚಾವಡಿಯಲ್ಲಿ ತಾಯಿ ದೇಯಿಮಾತೆಗೆ ಸೀರೆಯನ್ನ ಸಮರ್ಪಿಸಿ ಮುಂದಿನ ವ್ಯಾಸಂಗವನ್ನು ಯಶಸ್ವಿಯಾಗಿ ಪೂರೈಸುವಂತೆ ಕ್ಷೇತ್ರದ ಸರ್ವ ಶಕ್ತಿಗಳಿಗೆ ಪರವಾರ ಸಮೇತ ವಿಶೇಷ ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಬೇಡಿದರು .ಶ್ರೀ ಕ್ಷೇತ್ರದ ವತಿಯಿಂದ ಪ್ರೀತಿಪೂರ್ವಕ ಅಭಿನಂದನೆಗಳನ್ನ ಸಲ್ಲಿಸಲಾಯಿತು.ಶ್ರೀ ಕ್ಷೇತ್ರದ ಸರ್ವ ಶಕ್ತಿಗಳು ಅವರಿಗೂ ಹಾಗೂ ಅವರೆಲ್ಲರ ಕುಟುಂಬಕ್ಕೂ ಆಯುಷ್ಯ ಆರೋಗ್ಯ ಸುಖ ಸಂಪತ್ತನ್ನು ಕರುಣಿಸಲಿ ಹಾಗೂ ಸರ್ವ ಶಕ್ತಿಗಳ ಆಶೀರ್ವಾದ ಸದಾ ಇರಲಿ ಇನ್ನು ಮುಂದೆಯೂ ಶ್ರೀ ಕ್ಷೇತ್ರಕ್ಕೆ ಸರ್ವ ಸಹಕಾರ ಇರಲಿ ಎಂದು ಶುಭ ಹಾರೈಸುವ.🙏🙏🙏

ಅಧ್ಯಕ್ಷರು,ಹಾಗೂ ಸರ್ವ ಸದಸ್ಯರು ಶ್ರೀ ಕ್ಷೇತ್ರ ಆಡಳಿತ ಸಮಿತಿ ಶ್ರೀ ಕ್ಷೇತ್ರ ಗೆಜ್ಜೆ ಗಿರಿ
9148894088.

07/06/2026

ಸುಧೀರ್ ಸೋನು ಕಾಪು ಮಾತನಾಡಿದ ಮಾತನ್ನು ಕಿವಿ ಕೊಟ್ಟು ಎಲ್ಲರೂ ಕೇಳಿ..🔥🔥🔥

07/06/2026

ಹಲವು ಬಣ್ಣಗಳ ಭಾವಲೋಕ
ಅನಿತಾ ಪಿ.ತಾಕೊಡೆಯವರ "ಮೇಣಕ್ಕಂಟಿದ ಬತ್ತಿ."

ಕವಿತೆ,ಕತೆ,ಅಂಕಣ ಬರೆಹಗಳು,ತುಳು ಕವಿತೆಗಳು..ಹೀಗೆಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಬರೆಯುತ್ತಾ ಬಂದಿರುವ ಅನಿತಾ ತಾಕೊಡೆಯವರ ನಾಲ್ಕನೆಯ ಕವನ ಸಂಕಲನವಿದು

ಕವಿತೆ ಅನ್ನೋದು ಅಂತರಂಗದ ಅಭಿವ್ಯಕ್ತಿ.ಮಾತಿನ ಮೂಲಕ ಹೇಳಲಾಗದ್ದನ್ನು ರೂಪಕಗಳ ಮೂಲಕ ಹೇಳುವ ಪ್ರಯತ್ನ.ಕಾಣುವ ಲೋಕದ ಆಚೆಗಿನ ಕಾಣದ ಲೋಕವನ್ನು ಹಿಡಿದಿಡುವ ಯತ್ನ.ಅಂತರಂಗದ ಅಮೂರ್ತಭಾವ ಹಾಗೂ ಬಹಿರಂಗದ ವಿಚಾರಗಳನ್ನು ಒಟ್ಟಾಗಿ ಬೆಸೆದು ಮೂರ್ತವಾಗಿಸುವ ಯತ್ನ.ಅದು ಮೇಣ ಮತ್ತು ಬತ್ತಿಯ ಬೇರ್ಪಡಿಸಲಾಗದಂತಹ ಬಂಧದ ಮೂಲಕ ಅರಿವಿನ ಬೆಳಕನ್ನು ಪಸರಿಸುವ ಕಾಯಕ.

ಈ ನಿಟ್ಟಿನಲ್ಲಿ ಅನಿತಾ ಅವರು ಸಾಕಷ್ಟು ದೂರ ಸಾಗಿಬಂದಿದ್ದಾರೆ ಅನ್ನೋದಕ್ಕೆ ಈ ಸಂಕಲನದ ಅನೇಕ ಕವಿತೆಗಳೇ ಸಾಕ್ಷಿಗಳಾಗಿವೆ.ಇಲ್ಲಿನ ಕವಿತೆಗಳಲ್ಲಿ ಲಯ ವೈವಿಧ್ಯ ಇದೆ.ಭಾವ ವೈವಿಧ್ಯ ಇದೆ.ಅವಕ್ಕೆ ವೈಚಾರಿಕತೆಯ ಲೇಪವಿದೆ.ಸಾಮಾಜಿಕ ಕಾಳಜಿಯೂ ಇದೆ.ಹಲವು ಬಣ್ಣಗಳೂ ಇವೆ.

ಈ ದೃಷ್ಟಿಯಿಂದ ಇಲ್ಲಿನ ಮೇಣಕ್ಕಂಟಿದ ಬತ್ತಿ,ಅಡುಗೆ ಮನೆಯೂ ಬದಲಾಗಿದೆ,ಬುದ್ಧ, ಋಜುವಾತು,ನಿನ್ನ ಮುಖವೆಲ್ಲಿ?,ಕಾರಣಗಳು ತಿಳಿಯುವುದೇ ಇಲ್ಲ,ಮಣ್ಣುಟ್ಟ ಪುಟ್ಟ ಬೀಜ,ಬದುಕಿನ ಬಣ್ಣ,ಗಾಜಿನ ಲೋಟ,ಅಮ್ಮ ಇದನ್ನೇಕೆ ಕಲಿಸಲಿಲ್ಲ,ತಿರುಗಿ ಬಿಡು,ಇನ್ನು ಹೀಗಿರಲಾಗದು..ಮೊದಲಾದ ಕವಿತೆಗಳು ನನಗೆ ಇಷ್ಟವಾದವು.

ಅನಿತಾ ಅವರ ಮುಂದಿನ ಹೆಜ್ಜೆಗಳ ಬಗ್ಗೆ ಇನ್ನಷ್ಟು ಭರವಸೆಯನ್ನು ಇಟ್ಟುಕೊಳ್ಳಬಹುದು.

--ಸುಬ್ರಾಯ ಚೊಕ್ಕಾಡಿ.

07/06/2026

2026-27 ನೇ ಸಾಲಿನ,ಯುವವಾಹಿನಿ (ರಿ.) ಬೆಂಗಳೂರು ಘಟಕದ ನಿಯೋಜಿತ ಸಂಘಟನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿರುವ ಪ್ರೀತಿ ಕರ್ಕೇರ ಇವರಿಗೆ ಘಟಕದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.💐👏🌹

ಯುವವಾಹಿನಿ (ರಿ.) ಬೆಂಗಳೂರು ಘಟಕ.

Want your business to be the top-listed Government Service in Muscat?

Click here to claim your Sponsored Listing.

Location

Category

Telephone

Website

Address


Muscat