Gadag Heritage

Directions

Gadag Heritage Exploring the History of Gadag

Gadag-born Gregory D’Monte delivered a match-winning performance in the 1978 M.A. Srinivasan Memorial Trophy final, taki...
28/10/2026

Gadag-born Gregory D’Monte delivered a match-winning performance in the 1978 M.A. Srinivasan Memorial Trophy final, taking 6 wickets for 43 runs against Bangalore City XI to help Dharwad Zone clinch the title.

His cricketing journey later took him to India Under-25 Team and Maharashtra in the Ranji Trophy, marking him as a trailblazer in Gadag and North Karnataka cricket.

📷 From the personal collection of Ashok Umachagi

Rare photographs of Gadag-born international cricketer Sunil Joshi from his early cricketing days, from the personal col...
22/10/2026

Rare photographs of Gadag-born international cricketer Sunil Joshi from his early cricketing days, from the personal collection of Ashok Umachagi

A glimpse into the early journey of one of India’s notable cricketing talents.

Do you recognise the other players in these photographs? Share their names and any memories in the comments

ಗದಗದ ಮರೆತುಹೋದ ಕ್ರಿಕೆಟ್ ಪ್ರತಿಭೆ: ಗ್ರೆಗೊರಿ ಡಿಮಾಂಟ್-ಮಂಜುನಾಥ ನರಗುಂದಇತ್ತೀಚೆಗೆ Going Places: India's Small Town Cricket Heroes...
20/10/2026

ಗದಗದ ಮರೆತುಹೋದ ಕ್ರಿಕೆಟ್ ಪ್ರತಿಭೆ: ಗ್ರೆಗೊರಿ ಡಿಮಾಂಟ್

-ಮಂಜುನಾಥ ನರಗುಂದ

ಇತ್ತೀಚೆಗೆ Going Places: India's Small Town Cricket Heroes ಎನ್ನುವ ಪುಸ್ತಕವನ್ನು ಓದುತ್ತಿದ್ದೆ. ಈ ಪುಸ್ತಕವು ಪ್ರಮುಖವಾಗಿ ಎಂ.ಎಸ್. ಧೋನಿ, ಮುನಾಫ್ ಪಟೇಲ್, ಎಸ್. ಶ್ರೀಶಾಂತ್, ಸುರೇಶ್ ರೈನಾ, ಅಶೋಕ್ ದಿಂಡಾ, ಪ್ರವೀಣ್ ಕುಮಾರ್ ಮತ್ತು ರವೀಂದ್ರ ಜಡೇಜಾ ಅವರಂತಹ ಸಣ್ಣ ನಗರಗಳಿಂದ ಬಂದ ಆಟಗಾರರ ಬಗ್ಗೆ ದಾಖಲಿಸುತ್ತದೆ. ಈ ಪುಸ್ತಕವನ್ನು ಓದುವಾಗ, ಒಂದು ಕಾಲದಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಬೇಕಾದರೆ ಮುಂಬೈ, ಕೊಲ್ಕತ್ತಾ, ಮದ್ರಾಸ್, ಬೆಂಗಳೂರು, ದೆಹಲಿ ಮತ್ತು ಹೈದರಾಬಾದ್‌ನಂತಹ ಮೆಟ್ರೋಪಾಲಿಟನ್ ನಗರಗಳಲ್ಲಿ ನೆಲೆಸಿರುವುದು ಎಷ್ಟು ಮುಖ್ಯವಾಗಿತ್ತು ಎಂಬುದು ತಿಳಿಯುತ್ತದೆ.

80–90ರ ದಶಕದಲ್ಲಿ ಮೆಟ್ರೋಪಾಲಿಟನ್ ನಗರವೂ ಅಲ್ಲದ, ಆಗ ಪ್ರತ್ಯೇಕ ಜಿಲ್ಲೆಯೂ ಆಗಿರದ ಗದಗದಂತಹ ಗ್ರಾಮೀಣ ಸೊಗಡಿನ ಪಟ್ಟಣದಿಂದ ಬಂದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಸುನಿಲ್ ಜೋಶಿ ಅವರ ಸಾಧನೆ ಸಣ್ಣದೇನಲ್ಲ.ಗದಗದಿಂದ ಅಂತರರಾಷ್ಟ್ರೀಯ ಮಟ್ಟದವರೆಗೆ ತಲುಪಿದ ಅವರ ಪಯಣ ಇಂದಿನ ಯುವ ಪೀಳಿಗೆಗೆ ಮತ್ತು ಉತ್ತರ ಕರ್ನಾಟಕದಿಂದ ಕ್ರಿಕೆಟ್ ಲೋಕಕ್ಕೆ ಕಾಲಿಡಬೇಕೆನ್ನುವ ಪ್ರತಿಯೊಬ್ಬ ಆಟಗಾರನಿಗೂ ಮಾದರಿ ಎಂದರೆ ಅತಿಶಯೋಕ್ತಿಯಾಗಲಾರದು.

ಸುನಿಲ್ ಜೋಶಿ ಅವರ ಕ್ರಿಕೆಟ್ ಸಾಧನೆಗೆ ಕೊನೆಗೂ ಒಂದು ಮಹತ್ವದ ಗೌರವ ಸಿಕ್ಕಿದ್ದು ಫೆಬ್ರುವರಿ 2026ರಲ್ಲಿ. ಹುಬ್ಬಳ್ಳಿಯ ರಾಜನಗರದಲ್ಲಿರುವ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಜಮ್ಮು-ಕಾಶ್ಮೀರ ಮತ್ತು ಕರ್ನಾಟಕದ ನಡುವೆ ನಡೆದ ರಣಜಿ ಟ್ರೋಫಿ ಫೈನಲ್ ಪಂದ್ಯದ ಸಂದರ್ಭದಲ್ಲಿ ಅವರ ಹೆಸರಿನಲ್ಲಿ ಪೆವಿಲಿಯನ್ ಉದ್ಘಾಟಿಸಲಾಯಿತು. ಉತ್ತರ ಕರ್ನಾಟಕದ ಗದುಗಿನ ಹೆಮ್ಮೆಯ ಪ್ರತಿಭೆ ಸುನಿಲ್ ಜೋಶಿ ಅವರಿಗೆ ಕೊಂಚ ತಡವಾಗಿಯಾದರೂ ಸಿಕ್ಕ ಈ ಗೌರವ, ಈ ಭಾಗದ ಕ್ರೀಡಾಭಿಮಾನಿಗಳೆಲ್ಲರಿಗೂ ಅಪಾರ ಸಮಾಧಾನ ಮತ್ತು ಹೆಮ್ಮೆಯನ್ನು ತಂದಿತು.

ಸುನಿಲ್ ಜೋಶಿ ಅವರ ಹೆಸರಿನ ಪೆವಿಲಿಯನ್ ಉದ್ಘಾಟನೆಯ ಸಂದರ್ಭದಲ್ಲಿ, ಗದುಗಿನ ಮತ್ತೊಬ್ಬ ಹಿರಿಯ ಕ್ರಿಕೆಟ್ ಪ್ರತಿಭೆ ಗ್ರೆಗೊರಿ ಡಿಮಾಂಟ್ ಅವರ ಕುರಿತು ಅಶೋಕ ಉಮಚಗಿ ಅವರು ಜೆ.ಟಿ. ಕಾಲೇಜಿನ ವಾರ್ಷಿಕ ಸಂಚಿಕೆ ಬೆಳ್ವೊಲ-300ರಲ್ಲಿ ಬರೆದಿದ್ದ ಹಳೆಯ ಲೇಖನ ನನ್ನ ಗಮನಕ್ಕೆ ಬಂತು. ಆ ಲೇಖನದ ಮೂಲಕ ಗ್ರೆಗ್ ಡಿಮಾಂಟ್ ಅವರು ಮೂಲತಃ ಗದಗದವರೇ ಎನ್ನುವ ಸಂಗತಿ ತಿಳಿಯಿತು. ಅವರ ಹೆಸರು ನೋಡಿದ ತಕ್ಷಣ, ಅವರು ಬಹುಶಃ ಆಂಗ್ಲೋ-ಇಂಡಿಯನ್ ಮೂಲದವರಿರಬಹುದೇ ಎಂಬ ಕುತೂಹಲ ನನ್ನಲ್ಲಿ ಮೂಡಿತು. ಹೀಗೆ ಗ್ರೆಗೊರಿ ಡಿಮಾಂಟ್ ಅವರ ಬಗೆಗಿನ ಪ್ರಾಥಮಿಕ ಮಾಹಿತಿ ನನಗೆ ದೊರೆಯಿತು. ಇದಾದ ನಂತರ, ಅವರ ಸಹೋದರ ರೋಡ್ನಿ ಡಿಮಾಂಟ್ ಅವರನ್ನು ಸಂಪರ್ಕಿಸಿ, ಗ್ರೆಗ್ ಅವರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡೆ.

ತದನಂತರ, “Hello Gregory sir, this is Manjunath Naragund from Gadag Heritage,” ಎಂದು ಅವರೊಂದಿಗೆ ನನ್ನ ಪರಿಚಯ ಮಾಡಿಕೊಂಡೆ. ಬಳಿಕ, “Sir, why have you been forgotten from the memory of Gadag people? You have given so much to cricket. You are really the pride of Gadag,” ಎಂದೆ.

ಅದಕ್ಕೆ ಅವರು ನಿಟ್ಟುಸಿರು ಬಿಡುತ್ತಾ, “We are now part of history, Manjunath,” ಎಂದರು.

ನಾನು ಅಷ್ಟಕ್ಕೇ ಸುಮ್ಮನಾಗದೆ, “Sir, it is unfortunate, but your history should be documented,” ಎನ್ನುವ ಮೂಲಕ ಅವರೊಂದಿಗಿನ ಮಾತುಕತೆಯನ್ನು ಮುಂದುವರಿಸಿದೆ. ಹೀಗೆ ಸುಮಾರು ಒಂದು ಗಂಟೆ ಕಾಲ ತಮ್ಮ ಕ್ರಿಕೆಟ್ ಪಯಣ ಆರಂಭವಾದದ್ದು ಹೇಗೆ ಎನ್ನುವುದನ್ನು ಅವರು ವಿವರಿಸುತ್ತಾ ಹೋದರು.

ಅವರ ಕುರಿತಾಗಿ ನಾನು ಲೇಖನ ಬರೆಯುತ್ತೇನೆ ಎಂದು ತಿಳಿಸಿದ್ದಕ್ಕೆ, “Will connect ASAP. Was planning a trip to GADAG. Would be the right place to take the foot prints,” ಎಂದರು. ಹೀಗೆ ತಮ್ಮ ಕ್ರಿಕೆಟ್ ಅನುಭವಗಳನ್ನು ಹಂಚಿಕೊಳ್ಳುತ್ತಾ ಹೋದರು. ಆಗ ಅವರ ಮಾತುಗಳನ್ನು ಕೇಳುತ್ತಿದ್ದಂತೆ, ಇಂತಹ ವ್ಯಕ್ತಿಯ ಇತಿಹಾಸವನ್ನು ನಾವು ದಾಖಲಿಸದೇ ಹೋಗಿದ್ದೇಕೆ ಎನ್ನುವ ಪ್ರಶ್ನೆ ನನ್ನನ್ನು ಕಾಡಿದ್ದು ನಿಜ.

ಅಕ್ಟೋಬರ್ 30, 1958ರಂದು ಗದಗದಲ್ಲಿ ಜನಿಸಿದ ಗ್ರೆಗೊರಿ ಡಿಮಾಂಟ್ ಅವರ ತಂದೆ ರೋನಾಲ್ಡ್ ಡಿಮಾಂಟ್ ರೈಲ್ವೆ ಇಲಾಖೆಯಲ್ಲಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಮಾರ್ಗರೇಟ್ ಡಿಮಾಂಟ್ ಗದಗಿನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಸುನಿಲ್ ಜೋಶಿ ಅವರಿಗೂ ಗ್ರೆಗ್ ಅವರ ತಾಯಿ ಶಿಕ್ಷಕಿಯಾಗಿ ಪಾಠ ಮಾಡಿದ್ದರು.

ಅದು 70ರ ದಶಕದ ಆರಂಭದ ಕಾಲ. ಆಗ ಗುಂಗುರು ಕೂದಲಿನ, ಸುಮಾರು 5 ಅಡಿ 11 ಇಂಚು ಎತ್ತರದ ಯುವಕನೊಬ್ಬ ಜೆ.ಟಿ. ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿಭಾಗಕ್ಕೆ ಸೇರಿಕೊಂಡಿದ್ದ. ಆದರೆ, ಪ್ರಯೋಗಾಲಯದಲ್ಲಿ ಕಪ್ಪೆಯನ್ನು ಕತ್ತರಿಸುವುದಕ್ಕೆ ಬೇಸತ್ತು, ಮುಂದೆ ಗದಗದ ಎ.ಎಸ್.ಎಸ್. ಕಾಲೇಜಿನಲ್ಲಿ 1975–78ರ ಅವಧಿಯಲ್ಲಿ ಬಿ.ಕಾಂ. ಪದವಿ ವ್ಯಾಸಂಗ ಮಾಡಿದರು.

ಗ್ರೆಗೊರಿ ಡಿಮಾಂಟ್ ಕೇವಲ ಕ್ರಿಕೆಟ್‌ನಲ್ಲಷ್ಟೇ ಅಲ್ಲದೆ, ಹಾಕಿ, ಕಬಡ್ಡಿ, ಖೋ-ಖೋ ಮತ್ತು ಅಥ್ಲೆಟಿಕ್ಸ್‌ನಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಇದೇ ಕಾರಣಕ್ಕೆ ಶಾಲಾ-ಕಾಲೇಜುಗಳಲ್ಲಿ ಹಾಜರಾತಿ ವಿಷಯದಲ್ಲಿ ವಿನಾಯಿತಿ ಸಿಗುತ್ತಿತ್ತು ಎಂದು ಗ್ರೆಗ್ ಹೇಳುತ್ತಾರೆ.

ಆಗ ಕ್ರಿಕೆಟ್ ಬಗ್ಗೆ ತಿಳಿದುಕೊಳ್ಳಬೇಕೆಂದರೆ ಈಗಿನಂತೆ ಟಿವಿ, ಮೊಬೈಲ್ ಸೌಲಭ್ಯಗಳಿರಲಿಲ್ಲ. ಅಂದಿನ ಕ್ರಿಕೆಟ್ ಆಟಗಾರರು ದಿಗ್ಗಜ ಆಟಗಾರರ ಬ್ಯಾಟಿಂಗ್ ಮತ್ತು ಬೌಲಿಂಗ್ ನೋಡಬೇಕೆಂದರೆ ಟಾಕೀಸ್‌ಗಳಲ್ಲಿ ಸಿನಿಮಾ ಆರಂಭವಾಗುವುದಕ್ಕೂ ಮುನ್ನ ಪ್ರಸಾರವಾಗುತ್ತಿದ್ದ ಕ್ರಿಕೆಟ್ ಹೈಲೈಟ್ಸ್‌ಗಳೇ ಪ್ರಮುಖ ಆಧಾರವಾಗಿದ್ದವು.

ಇದರ ಬಗ್ಗೆ ಗ್ರೆಗೊರಿ ಹೇಳುವುದು ಹೀಗೆ: “70ರ ದಶಕದಲ್ಲಿ ನಾವು ಸಿನಿಮಾ ಆರಂಭವಾಗುವುದಕ್ಕೂ ಮುನ್ನ ಪ್ರಸಾರವಾಗುತ್ತಿದ್ದ ಕ್ರಿಕೆಟ್ ಹೈಲೈಟ್ಸ್ ನೋಡಲೆಂದೇ ಗದಗದ ಡಬ್ಬಾ ಟಾಕೀಸ್‌ಗೆ ಹೋಗುತ್ತಿದ್ದೆವು. ಹೈಲೈಟ್ಸ್ ಮುಗಿದ ತಕ್ಷಣ ಹೊರಗೆ ಬರುತ್ತಿದ್ದೆವು. ವೆಸ್ಟ್ ಇಂಡೀಸ್‌ನ ದೈತ್ಯ ಬೌಲರ್‌ಗಳಾದ ಆಂಡಿ ರಾಬರ್ಟ್ಸ್ ಮತ್ತು ಮಾಲ್ಕಂ ಮಾರ್ಷಲ್ ಅವರ ಬೌಲಿಂಗ್ ಶೈಲಿಯನ್ನು ಅಲ್ಲಿ ನೋಡಿ, ಅದನ್ನು ಕ್ರಿಕೆಟ್ ಮೈದಾನದಲ್ಲಿ ಅನುಸರಿಸಲು ಪ್ರಯತ್ನಿಸುತ್ತಿದ್ದೆವು,” ಎಂದು ಗ್ರೆಗೊರಿ ಡಿಮಾಂಟ್ ನೆನಪಿಸಿಕೊಳ್ಳುತ್ತಾರೆ.

ಗ್ರೆಗೊರಿ ಡಿಮಾಂಟ್ ಅವರ ದಿನಚರಿ ಬೆಳಗಿನ 4 ಗಂಟೆಗೇ ಆರಂಭವಾಗುತ್ತಿತ್ತು. ರೈಲ್ವೆ ಮೈದಾನ ಮತ್ತು ವಕೀಲ ಚಾಳ್ ಸೇರಿದಂತೆ ವಿವಿಧೆಡೆ ಅಭ್ಯಾಸ ಮಾಡುತ್ತಿದ್ದ ಗ್ರೆಗ್, ಸಿನಿಮಾ ಟಾಕೀಸ್‌ನಲ್ಲಿ ನೋಡಿದ ದಿಗ್ಗಜ ಬೌಲರ್‌ಗಳ ಶೈಲಿಯನ್ನು ಮೈದಾನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಸುನಿಲ್ ಜೋಶಿ ಅವರ ಸಹೋದರ ಅಶೋಕ್ ಜೋಶಿ ಅವರೊಂದಿಗೆ ಆತ್ಮೀಯ ಗೆಳೆತನ ಹೊಂದಿದ್ದ ಅವರು, ಬೆಳಗಿನ ಜಾವ ಅವರೊಂದಿಗೆ ಜಾಗಿಂಗ್‌ಗೂ ಹೋಗುತ್ತಿದ್ದರು.

ಮುಂದೆ ಕ್ರಿಕೆಟ್‌ನಲ್ಲಿ ಎತ್ತರಕ್ಕೆ ಬೆಳೆಯುತ್ತಾ ಹೋದಂತೆ, ಬೆಳಗ್ಗೆ ಬಿಜಾಪುರದಿಂದ ಬರುತ್ತಿದ್ದ ಗೋಲ್ ಗುಂಬಜ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಹುಬ್ಬಳ್ಳಿಯ ನೆಹರು ಮೈದಾನಕ್ಕೆ ಅಭ್ಯಾಸ ಮಾಡಲು ತೆರಳಬೇಕಾಗಿತ್ತು. ಹೀಗೆ ಸುಮಾರು ಮೂರು ವರ್ಷಗಳ ಕಾಲ ಟಿಕೆಟ್ ಇಲ್ಲದೆ ಪ್ರಯಾಣಿಸಬೇಕಾಯಿತು.

“ನಮ್ಮನ್ನು ಎಲ್ಲಿ ಟಿ.ಸಿ. ಹಿಡಿದುಬಿಡುತ್ತಾನೋ ಎನ್ನುವ ಭಯದಿಂದ, ರೈಲ್ವೆ ನಿಲ್ದಾಣ ತಲುಪುವುದಕ್ಕೂ ಮೊದಲೇ ನಮ್ಮ ಕ್ರಿಕೆಟ್ ಕಿಟ್‌ಗಳನ್ನೆಲ್ಲ ಕೆಳಗೆ ಎಸೆದು, ರೈಲಿನಿಂದ ಇಳಿಯುತ್ತಿದ್ದೆವು. ಬಳಿಕ ಬೆಳಗ್ಗೆ ಸುಮಾರು 6 ಗಂಟೆಗೆ ನೆಹರು ಮೈದಾನದಲ್ಲಿ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದೆವು,” ಎಂದು ಗ್ರೆಗೊರಿ ಡಿಮಾಂಟ್ ತಮ್ಮ ಆರಂಭದ ದಿನಗಳನ್ನು ಮೆಲುಕು ಹಾಕುತ್ತಾರೆ.

‘ಸಂಜೆ ಅಭ್ಯಾಸವಿದ್ದ ದಿನಗಳಲ್ಲಿ, ಮಧ್ಯಾಹ್ನ 1.15ಕ್ಕೆ ಇಳಕಲ್–ಹುಬ್ಬಳ್ಳಿ ಬಸ್ ಹತ್ತಿ ಹುಬ್ಬಳ್ಳಿಗೆ ತೆರಳುತ್ತಿದ್ದೆವು. ಸುಮಾರು ಸಂಜೆ ಆರು ಗಂಟೆಯವರೆಗೆ ಮೈದಾನದಲ್ಲಿ ಅಭ್ಯಾಸ ಮಾಡಿ, 6.15ಕ್ಕೆ ಹುಬ್ಬಳ್ಳಿಯಿಂದ ಹೊರಡುತ್ತಿದ್ದ ಪ್ಯಾಸೆಂಜರ್ ರೈಲಿನಲ್ಲಿ ಗದಗಗೆ ವಾಪಸಾಗುತ್ತಿದ್ದೆವು’ ಎನ್ನುತ್ತಾರೆ.

ಎಕೆ ಎಕ್ಸ್‌ಪ್ರೆಸ್ ಎಂದೇ ಜನಪ್ರಿಯ

ತಮ್ಮ ವೇಗದ ಬೌಲಿಂಗ್‌ನಿಂದ ಗಮನ ಸೆಳೆದಿದ್ದ ಗ್ರೆಗ್, ಆಗಲೇ ಉತ್ತರ ಕರ್ನಾಟಕದ ಕ್ರಿಕೆಟ್ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಮುಂದೆ ಹುಬ್ಬಳ್ಳಿಯ Akay Industries ತಂಡವನ್ನು ಪ್ರತಿನಿಧಿಸುವ ಮೂಲಕ ‘ಎಕೆ ಎಕ್ಸ್‌ಪ್ರೆಸ್’ ಎಂದೇ ಜನಪ್ರಿಯರಾದರು.ಕೆಎಸ್ಸಿಎ ಧಾರವಾಡ ವಲಯದ ತಂಡವನ್ನು ಪ್ರತಿನಿಧಿಸಿದ ಗ್ರೆಗ್, 1978ರ ಸೆಪ್ಟೆಂಬರ್ 10ರಂದು ಕೆಎಸ್ಸಿಎ ಆಯೋಜಿಸಿದ್ದ ಪ್ರತಿಷ್ಠಿತ ಎಸ್.ಎ. ಶ್ರೀನಿವಾಸನ್ ಸ್ಮಾರಕ ಟ್ರೋಫಿಯಲ್ಲಿ ಬೆಂಗಳೂರು ಸಿಟಿ ಎಲೆವನ್ ತಂಡದ ವಿರುದ್ಧ 19.4 ಓವರ್‌ಗಳಲ್ಲಿ 43 ರನ್ ನೀಡಿ ಆರು ವಿಕೆಟ್ ಕಬಳಿಸಿದರು. ಈ ಮೂಲಕ ಬೆಂಗಳೂರು ತಂಡವನ್ನು ಕೇವಲ 168 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ತಮ್ಮ ತಂಡ ಟ್ರೋಫಿ ಗೆಲ್ಲಲು ಮಹತ್ವದ ಕೊಡುಗೆ ನೀಡಿದರು.

ಮಹಾರಾಷ್ಟ್ರ ರಣಜಿ ತಂಡಕ್ಕೆ ಸೇರ್ಪಡೆ

ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಅವರ ತಂದೆ 1979ರಲ್ಲಿ ಪುಣೆಗೆ ವರ್ಗಾವಣೆಯಾದ ಕಾರಣ, ಗ್ರೆಗ್ ಅವರು ಗದಗನ್ನು ತೊರೆಯಬೇಕಾಯಿತು. ಇದಾದ ನಂತರ, 1981–82ರಲ್ಲಿ ಮಹಾರಾಷ್ಟ್ರ ರಣಜಿ ತಂಡವನ್ನು ಪ್ರತಿನಿಧಿಸಲು ಆರಂಭಿಸಿದ ಗ್ರೆಗ್, ಗದಗದಿಂದ ರಣಜಿ ಕ್ರಿಕೆಟ್ ಆಡಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ, ಉತ್ತರ ಕರ್ನಾಟಕದಿಂದ ರಣಜಿ ಕ್ರಿಕೆಟ್‌ಗೆ ಪ್ರವೇಶಿಸಿದ ಆರಂಭಿಕ ತಲೆಮಾರಿನ ಆಟಗಾರರಲ್ಲಿ ಒಬ್ಬರಾಗಿದ್ದರು.

ಇದೇ ವೇಳೆ, ಚಂದು ಬೋರ್ಡೆ, ಸುನಿಲ್ ಗವಾಸ್ಕರ್, ಚೇತನ್ ಚೌಹಾಣ್, ಯಜುರ್ವೀಂದ್ರ ಸಿಂಗ್, ಹೇಮಂತ್ ಕಾನಿಟ್ಕರ್, ಮಿಲಿಂದ್ ಗುಂಜಾಲ್, ಶ್ರೀಕಾಂತ್ ಕಲ್ಯಾಣಿ ಮತ್ತು ಶುಭಾಂಗಿ ಕುಲಕರ್ಣಿ ಅವರಂತಹ ಆಟಗಾರರಿಗೆ ಕೋಚ್ ಆಗಿದ್ದ ಕಮಲ್ ಭಂಡಾರ್ಕರ್ ಅವರ ಬಳಿ ಡಿಮಾಂಟ್ ಕ್ರಿಕೆಟ್ ತರಬೇತಿಯನ್ನು ಪಡೆದರು. ಮುಂದೆ ಅವರು ಪಶ್ಚಿಮ ವಲಯದ ಭಾಗವಾಗಿ ದುಲಿಪ್ ಟ್ರೋಫಿ ಹಾಗೂ ದಿಯೋಧರ್ ಟ್ರೋಫಿಯಲ್ಲಿ ಕಾಣಿಸಿಕೊಂಡರು.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮಹಾರಾಷ್ಟ್ರ ತಂಡದ ಪರವಾಗಿ 16 ಪಂದ್ಯಗಳನ್ನಾಡಿದ ಅವರು ಒಟ್ಟು 42 ವಿಕೆಟ್‌ಗಳನ್ನು ಪಡೆದಿದ್ದರು. 1988–89ರ ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶದ ವಿರುದ್ಧ 60 ರನ್ ನೀಡಿ ಐದು ವಿಕೆಟ್ ಪಡೆದದ್ದು ಅವರ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿತ್ತು. ಅದೇ ಪಂದ್ಯದಲ್ಲಿ ಅವರು ಒಟ್ಟು ಒಂಬತ್ತು ವಿಕೆಟ್‌ಗಳನ್ನು ಕಬಳಿಸಿದ್ದರು.ವಿಶೇಷವೆಂದರೆ, 1989ರ ಜನವರಿಯಲ್ಲಿ ಔರಂಗಾಬಾದ್‌ನಲ್ಲಿ ನಡೆದ ಮಹಾರಾಷ್ಟ್ರ ಮತ್ತು ಬಾಂಬೆ ತಂಡಗಳ ನಡುವಿನ ರಣಜಿ ಪಂದ್ಯದಲ್ಲಿಯೂ ಅವರು ಆಡಿದ್ದರು. ಇದೇ ಪಂದ್ಯದಲ್ಲಿ ಆಗಿನ್ನೂ 15ರ ಹರೆಯದ ಬಾಲಕನಾಗಿದ್ದ ಸಚಿನ್ ತೆಂಡೂಲ್ಕರ್ ಬಾಂಬೆ ತಂಡವನ್ನು ಪ್ರತಿನಿಧಿಸಿದ್ದರು. ಆ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು.

ಯಂಗ್ ಇಂಡಿಯಾ ತಂಡದೊಂದಿಗೆ ಜಿಂಬಾಬ್ವೆ ಪ್ರವಾಸ

ಗ್ರೆಗೊರಿ ಡಿಮಾಂಟ್ ಅವರ ಕ್ರಿಕೆಟ್ ಪಯಣ ರಣಜಿ ಪಂದ್ಯಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. 1983–84ರಲ್ಲಿ ರವಿಶಾಸ್ತ್ರಿ ನಾಯಕತ್ವದ ಯಂಗ್ ಇಂಡಿಯಾ ತಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಾಗ, ಗ್ರೆಗ್ ಅವರಿಗೂ ತಂಡದಲ್ಲಿ ಸ್ಥಾನ ಸಿಕ್ಕಿತ್ತು.

ಈ ಪ್ರವಾಸದ ಸಂದರ್ಭದಲ್ಲಿ Sportstar ಮ್ಯಾಗಜಿನ್ ಗ್ರೆಗೊರಿ ಡಿಮಾಂಟ್ ಅವರ ಭಾವಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಿತ್ತು. ಅವರ ಬೌಲಿಂಗ್ ಶೈಲಿಯನ್ನು ಕುರಿತು “Knowing your limitations is half the battle as they say. And Gregory knows he’s no tearaway fast bowler; just a sensible, line and length medium pacer. His progress on Zimbabwe tour will be watched with more than passing interest,” ಎಂದು ಬರೆದಿತ್ತು.

ಆ ತಂಡದಲ್ಲಿ ಕೃಷ್ಣಮಾಚಾರಿ ಶ್ರೀಕಾಂತ್, ಲಾಲ್‌ಚಂದ್ ರಾಜಪೂತ್, ಮೊಹಮ್ಮದ್ ಅಜರುದ್ದೀನ್, ನವಜೋತ್ ಸಿಂಗ್ ಸಿಧು, ಮನೋಜ್ ಪ್ರಭಾಕರ್, ಲಕ್ಷ್ಮಣ್ ಶಿವರಾಮಕೃಷ್ಣನ್ ಮತ್ತು ಮನಿಂದರ್ ಸಿಂಗ್ ಅವರಂತಹ ಆಟಗಾರರೂ ಇದ್ದರು. ಮುಂದೆ ಭಾರತೀಯ ಕ್ರಿಕೆಟ್‌ನಲ್ಲಿ ಹೆಸರು ಮಾಡಿದ ಹಲವು ಆಟಗಾರರೊಂದಿಗೆ ಗದಗಿನ ಗ್ರೆಗೊರಿ ಡಿಮಾಂಟ್ ಕೂಡ ಭಾರತ ಅಂಡರ್-25 ತಂಡವನ್ನು ಪ್ರತಿನಿಧಿಸಿದ್ದು ಗಮನಾರ್ಹ.

ಜಿಂಬಾಬ್ವೆ ಪ್ರವಾಸದ ವೇಳೆ ಗ್ರೆಗ್ ಏಕದಿನ ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದರು. ಮಾರ್ಚ್ 11ರಂದು ಬುಲವಾಯೊದಲ್ಲಿ ನಡೆದ ಪಂದ್ಯದಲ್ಲಿ ಒಂದು ವಿಕೆಟ್ ಪಡೆದ ಅವರು, ಮಾರ್ಚ್ 21ರಂದು ಹರಾರೆಯಲ್ಲಿ ನಡೆದ ಪಂದ್ಯದಲ್ಲಿ 45 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು.

ನಾನು ಅವರ ಈ ಕ್ರಿಕೆಟ್ ಪಯಣವನ್ನು ಕೇಳುತ್ತಿದ್ದಾಗ, ಗ್ರೆಗ್ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಲು ಹೆಚ್ಚಿನ ಅವಕಾಶಗಳು ಏಕೆ ಸಿಗಲಿಲ್ಲ ಎನ್ನುವ ಪ್ರಶ್ನೆ ಎದುರಾಯಿತು. ಕ್ರಿಕೆಟ್‌ನಲ್ಲಿನ ರಾಜಕೀಯ ಅಥವಾ ಲಾಬಿ ಅವರ ಅವಕಾಶಗಳಿಗೆ ಅಡ್ಡಿಯಾಯಿತೇ ಎಂದು ಕೇಳಿದೆ.

ಅದಕ್ಕೆ ಗ್ರೆಗ್, “No, Manjunath, we should not blame anybody or the system. The problem was that, in those days, if you did not make it to the national team, it was very difficult to support a family. Family kaise sambhalenge, khana kaun dega? These were the questions that would come to our minds. That is why I left cricket, pursued my MBA from Symbiosis, Pune, and went on to work for Indian Oil Corporation.

Today, with the IPL, there are huge opportunities for cricketers. But in those days, we had to find an alternative to cricket to earn a living and support our families,” ಎಂದರು.

ಹೀಗೆ ಗ್ರೆಗ್ ತಮ್ಮ ಕ್ರಿಕೆಟ್ ಜೀವನದ ಬಗ್ಗೆ ನನ್ನೊಂದಿಗೆ ಮಾತನಾಡುತ್ತಿದ್ದಾಗ, ಅವರ ಸಾಧನೆಯನ್ನು ಕೇವಲ ಅಂಕಿಅಂಶಗಳ ಮೂಲಕ ನೋಡುವುದು ಸರಿಯಲ್ಲ ಎನಿಸಿತು. ಗದಗದಿಂದ ಕ್ರಿಕೆಟ್ ಆರಂಭಿಸಿ, ಮಹಾರಾಷ್ಟ್ರ ರಣಜಿ ತಂಡ ಮತ್ತು ಯಂಗ್ ಇಂಡಿಯಾ (ಟೀಮ್ ಇಂಡಿಯಾ ಅಂಡರ್-25) ತಂಡವನ್ನು ಪ್ರತಿನಿಧಿಸಿದ ಅವರ ಪಯಣ ಒಂದೆಡೆಯಾದರೆ, ವೃತ್ತಿಜೀವನಕ್ಕಾಗಿ ಕೊನೆಗೆ ಕ್ರಿಕೆಟ್‌ನಿಂದ ದೂರವಾದದ್ದು ಅವರ ಬದುಕಿನ ಮತ್ತೊಂದು ಮಹತ್ವದ ಅಧ್ಯಾಯ.ಇಷ್ಟೆಲ್ಲ ಸಾಧನೆ ಮಾಡಿದ ಆಟಗಾರನ ಹೆಸರು ಕಾಲಕ್ರಮೇಣ ಗದಗದ ಜನರ ನೆನಪಿನಿಂದ ಮರೆಯಾಗಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಹೇಳಬಹುದು.

Gadag-Betageri School for Non-Christian Children in 1911This historic school for non-Christian children was consecrated ...
18/10/2026

Gadag-Betageri School for Non-Christian Children in 1911

This historic school for non-Christian children was consecrated in January 1911, marking a significant chapter in the region’s educational history.

Captured amid lush monsoon greenery, this photograph offers a beautiful window into Gadag-Betgeri’s past and its enduring heritage.

Preserving old photographs, documenting local history, and keeping Gadag’s heritage alive.

Follow Gadag Heritage for more stories from our past.

Photo Courtesy: Personal collection from the CSI Basel Mission

Sharing a few old photographs of Gadag-born legendary international cricket player Sunil Joshi at Gadag’s Sports Academy...
17/10/2026

Sharing a few old photographs of Gadag-born legendary international cricket player Sunil Joshi at Gadag’s Sports Academy. These photographs are from the personal collection of Ashok Umachagi

Follow Gadag Heritage for rare photographs and stories from Gadag’s history.



An archival photograph of the Veeranarayana Temple in Gadag, dating to 1928, capturing the temple complex and visitors n...
17/10/2026

An archival photograph of the Veeranarayana Temple in Gadag, dating to 1928, capturing the temple complex and visitors nearly a century ago.

A rare glimpse into the architectural heritage and everyday life around one of Gadag’s most significant historic temples.

Preserving the past, one photograph at a time.

Follow Gadag Heritage to discover and preserve the history, culture and heritage of our region.

17/10/2026

Following our recent victory in protecting Neelagunda’s ancient rock paintings, we are turning our focus to other lesser-known historical sites across Gadag district that need our collective voice.

Every monument tells the story of our ancestors. Which heritage site or ancient temple near your village needs preservation attention? Let us know in the comments below! 🙏

14/10/2026

ಗದಗ ತಾಲೂಕಿನ ನೀಲಗುಂದದಲ್ಲಿರುವ ಅಪರೂಪದ ಬಂಡೆ ವರ್ಣಚಿತ್ರಗಳ ಬಳಿ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಬಂದ ದೂರಿಗೆ ಮುಖ್ಯಮಂತ್ರಿಗಳ ಸಚಿವಾಲಯ ತ್ವರಿತವಾಗಿ ಸ್ಪಂದಿಸಿದೆ. ಸ್ಥಳ ಪರಿಶೀಲನೆ ನಡೆಸಿದ ಪುರಾತತ್ವ ಇಲಾಖೆಯು ಬಂಡೆ ಒಡೆಯುವುದನ್ನು ತಡೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸೂಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಈ ಪಾರಂಪರಿಕ ತಾಣವನ್ನು ʻಸಂರಕ್ಷಿತ ಸ್ಮಾರಕ'ವೆಂದು ಘೋಷಿಸಲು ಕ್ರಮ ಕೈಗೊಂಡಿದೆ.

Our sincere thanks to the Hon’ble Chief Minister of Karnataka, DK Shivakumar, and their offices for hearing our appeal a...
14/10/2026

Our sincere thanks to the Hon’ble Chief Minister of Karnataka, DK Shivakumar, and their offices for hearing our appeal and responding to our concerns. It truly means a lot to see steps being taken to protect Neelagunda’s ancient rock paintings in Gadag district as a Protected Monument. 🙏❤️

ಗದಗ ತಾಲೂಕಿನ ನೀಲಗುಂದದಲ್ಲಿರುವ ಅಪರೂಪದ ಬಂಡೆ ವರ್ಣಚಿತ್ರಗಳ ಬಳಿ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಬಂದ ದೂರಿಗೆ ಮುಖ್ಯಮಂತ್ರಿಗಳ ಸಚಿವಾಲಯ ತ್ವರಿತವಾಗಿ ಸ್ಪಂದಿಸಿದೆ. ಸ್ಥಳ ಪರಿಶೀಲನೆ ನಡೆಸಿದ ಪುರಾತತ್ವ ಇಲಾಖೆಯು ಬಂಡೆ ಒಡೆಯುವುದನ್ನು ತಡೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸೂಚಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಈ ಪಾರಂಪರಿಕ ತಾಣವನ್ನು ʻಸಂರಕ್ಷಿತ ಸ್ಮಾರಕ'ವೆಂದು ಘೋಷಿಸಲು ಕ್ರಮ ಕೈಗೊಂಡಿದೆ.

A proud and emotional moment for Gadag Heritage. ❤️The Chief Minister of Karnataka’s office has responded to our appeal ...
14/10/2026

A proud and emotional moment for Gadag Heritage. ❤️

The Chief Minister of Karnataka’s office has responded to our appeal to protect Gadag’s ancient rock paintings. Seeing our efforts receive attention gives us hope that these precious traces of our past will be preserved for future generations.

Our heartfelt thanks to Dinesh Maneer of Project SKaAT,Smita Reddy Ma’am from the State archaeology Department, Bengaluru, and all media organisations that have highlighted this issue and raised concerns about quarrying and mining activities.

Every effort, every voice and every step matters when it comes to protecting our heritage. This is why we started Gadag Heritage — to document, preserve and bring attention to the history of our region.

A small effort, a meaningful response, and renewed hope for Gadag’s heritage. 🙏

Manjunath Naragund

Address

Gadag

Website

Alerts

Be the first to know and let us send you an email when Gadag Heritage posts news and promotions. Your email address will not be used for any other purpose, and you can unsubscribe at any time.

Shortcuts

Share


Other Landmarks in Gadag

Show All